ನೀನು ಏಕೆ ಸತ್ತೆ?
ಇಬ್ಬರು ಗೆಳೆಯರು ಸತ್ತು ಸ್ವರ್ಗದಲ್ಲಿ ಭೇಟಿಯಾದರು.
ಒಬ್ಬ ಕೇಳಿದ... "ನೀನು ಏಕೆ ಸತ್ತೆ?"
ಇನ್ನೊಬ್ಬ ಹೇಳೀದ... "ನನ್ನ ಹೆಂಡತಿ ಅಪೂರ್ವ ಸುಂದರಿ. ಅವಳು ಯಾರೊಂದಿಗೋ ಸಂಪರ್ಕ ಹೊಂದಿದ್ದಾಳೆ ಅನ್ನುವ ಅನುಮಾನ ನನ್ನನ್ನು ಕಾಡುತ್ತಿತ್ತು. ನಿನ್ನೆ ಏನು ಮಾಡಿದೆ ಅಂದರೆ ಅವಳನ್ನು ಪರೀಕ್ಷಿಸಿಯೇ ಬಿಡಬೇಕು ಎಂದುಕೊಂಡು ಕಚೇರಿಯಿಂದ ಬೇಗನೇ ಮನೆಗೆ ಹೋದೆ. ಬೆಲ್ ಮಾಡಿದಾಗ ಅವಳೇ ಬಂದು ಬಾಗಿಲು ತೆರೆದಳು. ಕೂಡಲೇ ಹೋಗಿ ಬೆಡ್ ರೂಂ ಎಲ್ಲಾ ಹುಡುಕಿದೆ. ಯಾರೂ ಕಾಣಿಸಲಿಲ್ಲ. ವಿನಾಕಾರಣ ಮುತ್ತಿನಂತಹ ಹೆಂಡತಿಯ ಮೇಲೆ ಅನುಮಾನ ಪಟ್ಟುದ್ದಕ್ಕಾಗಿ ಮನ ನೊಂದು ವಿಷ ಸೇವಿಸಿ ಸತ್ತೆ. ನೀನು?" ಎಂದು ಮೊದಲನೆಯವನನ್ನು ಕೇಳಿದ.
"ಛೆ, ಎಂಥಾ ಕೆಲಸ ಮಾಡಿದೆ? ಅಲ್ಲೇ ಇದ್ದ ಫ್ರಿಜ್ ತೆರೆದಿದ್ದರೆ ಇಬ್ಬರೂ ಬದುಕಿರುತ್ತಿದ್ದೆವು" ಎಂದನು ಅವನು.
ಸಾಲುಗಳು
- Add new comment
- 1115 views
ಅನಿಸಿಕೆಗಳು
SUPER
SUPER
Danyavada shashidhara ravare
Danyavada shashidhara ravare