Skip to main content

ನಾ "ಅವಳ್" ಆದಾಗ...!!!

ಬರೆದಿದ್ದುMarch 13, 2009
6ಅನಿಸಿಕೆಗಳು

ಕಥೆ ನಮ್ಮ ಗುಂಡಣ್ಣನಿಂದ ಪ್ರಾರಂಭವಾಗುತ್ತದೆ. ಅವನಿಗೊ ತನ್ನ ಹೆಂಡತಿ ಗುಂಡಮ್ಮ ಸದಾ ಕಾಲ ಮನೆಯಲ್ಲಿದ್ದು ತಾನು ಮಾತ್ರ ಕತ್ತೆಯ ಹಾಗೆ ದುಡಿಯುವ ಪ್ರಾರಬ್ಧತೆಯ ಮನಗೊಂಡು, ಬಳಲಿ.., ಬೆಂಡಾಗಿ ( ಮನಸ್ಸಿನಲ್ಲಿ ದುಖಿಯಾಗಿಯೂ ಸಹಾ...! )
ತನ್ನ ಕಷ್ಟವೇನೆಂದು ತನ್ನ ಹೆಂಡತಿಗೆ ತಿಳಿಯಲಿ ಅಂತ ಒಂದು ದಿನ ದೇವರ ಸಾಕ್ಷಾತ್ಕಾರಕ್ಕಾಗಿ "ಬೇವಿನ ಮರದ" ಕೆಳಗೆ ತಪಸ್ಸನ್ನು ಆಚರಿಸುತ್ತಾನೆ ( ಬೇವಿನ ಮರ ಏಕಂದರೆ ಆದು ಅವನ ಪತ್ನಿ ನೆಟ್ಟಿದ್ದು, ಅದನ್ನು ನೋಡಿಯಾದರೂ ದೇವರು ಬೇಗ ವರ ಕೊಡಲಿ ಅಂತಾ...!)
............................
ದೇವರು ತನ್ನ ಭಕ್ತನ ಮನೋಭಿಲಾಶೆಯ ಪೂರೈಸಲೆಂದು ಧರೆಗೆ ಓಡೋಡಿ ಬಂದಿರಲು, ಗುಂಡನ ಎದುರು ಪ್ರತ್ಯಕ್ಷನಾದನು...
ಗುಂಡ: " ಓ ದೇವಾ, ಸದಾ ಕಾಲ ನಾನೇ ಕತ್ತೆಯ ಹಾಗೆ ದುಡಿಯುತ್ತಾ ನನ್ನ ಹೆಂಡತಿ ಮನೆಯಲ್ಲಿ ಸುಮ್ಮನೆ ಕುಳಿತಿರುವುದನ್ನು ನೋಡಲು ನನಗೆ ಸಾಧ್ಯವಿಲ್ಲ , ಅದಕ್ಕೆ ನಮ್ಮ ಇಬ್ಬರ ದೇಹವನ್ನು ಒಂದು ದಿನಕೋಸ್ಕರ ಅದಲು-ಬದಲು ಮಾಡಿಬಿಡು...!"
ದೇವನು ಗುಂಡನ ಈ ವಿಚಿತ್ರ ಕೋರಿಕೆಗೆ ನಕ್ಕು...
"ಹುಂ ... ತಥಾಸ್ತು" ಎಂದು ಅಂತರ್ಧಾನನಾದನು....!
ಮರುದಿನ............................
ಗುಂಡ ಗುಂಡಮ್ಮನಾಗಿದ್ದಳು....!
4ಕ್ಕೆ ಎದ್ದು, ತನ್ನ ಗಂಡ ( ಇಲ್ಲಿ ಗುಂಡಮ್ಮ!!) ನಿಗೆ ತಿಂಡಿ ತಯಾರಿಸಿ, ತನ್ನ ಮಕ್ಕಳನ್ನು ಎಬ್ಬಿಸಿ, ಶಾಲೆಗೆ ಕಳಿಸಲಿಗೋಸ್ಕರ ಅವರ ಬಟ್ಟೆ ಇಸ್ತ್ರಿ ಮಾಡಿ, ಡಬ್ಬಿ ತುಂಬಿಸಿ, ಪ್ಯಾಕ್ ಮಾಡಿ, ಶಾಲೆಗೆ ಬಿಟ್ಟು ಬಂದಳು.
ನಂತರ ಮನೆಗೆ ಬಂದು, ಕಸ ಗುಡಿಸಿ, ನೀರು/ ಫೆನಾಯಲ್ ಹಾಕಿ ಮನೆಯನ್ನು ಸಾರಿಸಿ, ತರಕಾರಿ ತರಲು ದೂರದ ಮಾರ್ಕೆಟ್ ಗೆ ಹೊರಟಳು, ಹಾಗೆ ದಾರೀಲಿ ತಿಂಗಳ ಸಾಲದ ಕಂತನು ಗಿರವಿ ಅಂಗಡಿಯಲ್ಲಿ ಕಟ್ಟಿ, ಮನೆಗೆ ಬಂದು ನಾಯಿ "ಟಾಮಿ" ಮತ್ತು ಬೆಕ್ಕು "ಕಿಟ್ಟಿ" ಅನ್ನು ಚೆನ್ನಾಗಿ ತೊಳೆದು ಹೊರಗೆ ಅವುಗಳನ್ನು ಒಣಗಲು ಬಿಟ್ಟಳು...,
ಗಡಿಯಾರ 2 ಗಂಟೆ ಹೊಡೆದ ಸದ್ದು....
ಮಕ್ಕಳು ಮಲಗಿ ಅಸ್ತವ್ಯೆಸ್ತ ಮಾಡಿದ್ದ ಬೆಡ್-ಶೀಟ್ಸ್ ನ ಸರಿಮಾಡಿ, ಅಡುಗೆ ಮನೆಯ ಅಷ್ಟು ಕೊಳಕನ್ನಾ ಸಾರಿಸಿ, ಚೊಕ್ಕಟ್ಟ ಮಾಡಿದಳು....
ಮಕ್ಕಳ ಶಾಲೆ ಬಿಡುವ ಸಮಯವಾಯ್ತೆಂದು ಶಾಲೆಯ ಹತ್ತಿರ ಓಡುತ್ತಾ ಅವರನ್ನು ಕರೆದುಕೊಂಡು ಮನೆಗೆ ಬಂದು, ಹೋಂವರ್ಕ್ ಮಾಡಿಸಿ ತಿಂಡಿ ಕೊಟ್ಟು ತನ್ನ ಪತಿ ( ಈಗ ಗುಂಡಮ್ಮ) ನ್ ಬಟ್ಟೆ ಇಸ್ತ್ರಿ ಮಾಡುತ್ತಿರಲು, ತನ್ನ ಪತಿರಾಯ ಆರಾಮಾಗಿ ಟಿವಿ ನೋಡುತ್ತಿದ್ದನು ... !
ಐದು ಗಂಟೆಗೆ.... ರಾತ್ರಿಯ ಊಟಕ್ಕೆ ತಯಾರಿ ಮಾಡಲು ಟೊಮಾಟೋ, ಇರುಳ್ಳಿ ಕತ್ತರಿಸಿ ಮಸಾಲೆ ಅರೆದು ಸಂಬಾರ್ ತಯಾರಿಸಿದಳು.. ಊಟ ಮುಗಿದ ನಂತರ ( ಪತಿರಾಯಾ ಅಗಲೇ ಶಯನಗ್ರಹ ಸೇರಿಯಾಗಿತ್ತು .... !) ಅಷ್ಟು ಮುಸರೆ ಪಾತ್ರೆ ತೊಳೆದು, ಮಕ್ಕಳನ್ನು ಮಲಗಿಸಿ ಇನ್ನೇನು ಬಂದು ಮಲಗಬೇಕೆಂದು ನಿರ್ಧರಿಸಿದಾಗ, ತನ್ನ ಗಂಡ 'ಕೀಟಲೆ'ಗಳನ್ನು ಸಹಿಸಬೇಕಾಯಿತು...! ಅಂತೂ ಆ ರಾತ್ರಿ ಕಳೆದು, ಗುಂಡ ದೇವರನ್ನು ಮತ್ತೆ ಬೇಡಿದನು.....
"ದೇವರೇ, ನಾ ತಿಳಿದಂತೆ ನಾ ಮಾಡಿದ ಅಷ್ಟು ಕೆಲಸವು ನನ್ನ ಹೆಂಡತಿಯ ಎದುರು ಒಂದು ಹಿಡಿಗೂ ಸಮಾನವಲ್ಲ... ಅವಳ ಬಗ್ಗೆ ನಾನು ಪಟ್ಟ ಅಷ್ಟು ಅಸೂಯೆ..., ಅವಳು ಸುಮ್ಮನೆ ಮನೆಯಲ್ಲಿ ಕುಳಿತಿರುತ್ತಾಳೆ ಅಂತಾ ನಾ ಕಂಡ ಕನಸು - ಎಲ್ಲಾ ಸರಿಯಾಗಿ ಅರ್ಥವಾಯಿತು.., ದಯವಿಟ್ಟು ಅದಷ್ಟು ಬೇಗ ನನ್ನ ಮೊದಲಿನ ದೇಹ ನನಗೆ ಕೊಟ್ಟು ಬಿಡು...!"
.....................
ದೇವರು ಮತ್ತೊಮೆ ನಕ್ಕು, ಗುಂಡನಿಗೆ ಹೇಳಿದ....
"ಮಗೂ, ನಿನಗೇನೋ ತಿಳಿಯಿತು ನಿನ್ನ ಹೆಂಡತಿ ನಿನಗೋಸ್ಕರ ಮತ್ತು ನಿನ್ನ ಕುಟುಂಬಕೋಸ್ಕರ ಎಷ್ಟು ದುಡಿಯುತ್ತಿದ್ದಾಳೆ ಅಂತಾ, ನಿನ್ನ ಕೆಲಸ ಅವಳ ಕೆಲಸದ ಮುಂದೆ ಎನೇನೂ ಇಲ್ಲ ಅಂತ ನನಗೆ ನಿನಗಿಂತ ಮುಂಚೆಯೇ ತಿಳಿದಿತ್ತು, ಅದರೆ ನೀ ಬಯಸಿದ ಅಸೆ ನೆರವೇರಿಸದೇ ಬಿಟ್ಟರೆ ನಾಳೆ ನೀನು ನನ್ನ ಹೆಸರನ್ನೇ "ಚೇಂಜ್" ಮಾಡುವ ಅಪಾಯದಿಂದ ನಾ ನಿನ್ನ ಕೋರಿಕೆ ಮನ್ನಿಸಿದೆ... ಅದರೆ...
ಗುಂಡ: "ಅದರೆ ಇನ್ನೇನು?" ಅಂದ....
ದೇವರು: ನಿನ್ನ ದೇಹ ಮತ್ತೆ ಮರಳಿ ಬೇಕೆಂದರೆ ಇನ್ನು ಒಂಬತ್ತು ತಿಂಗಳು ಕಾಯಬೇಕು ....!
ಗುಂಡ: "ಏಕೆ.... ಅಷ್ಟು ಸಮಯ ಯಾಕೆ...?"
ದೇವರು: "ನಿನಗೆ ಗೊತ್ತಿರಬೇಕಲ್ಲಾ, ನೆನ್ನೆ ರಾತ್ರಿ ಏನಾಯ್ತಂತಾ...? ನೀನೀಗಾ ಗರ್ಭಿಣಿ....!"
ಗುಂಡ: !!!????!!!!!?????......ಆಆಆಆಆಆಆಆಆಆಆಆಆಆಆಆಆಆಆ!!!!!
.................................................................................

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ಕಾವ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/19/2009 - 19:17

ಹ...ಹ....
ಮೊದಲು ಕಣ್ಣಿನಲ್ಲಿ ಕಂಬನಿಯ ಧಾರೆಯನ್ನು ಹರಿಸಿ
ಮನದಲ್ಲಿ ಪಾತರಗಿತ್ತಿಯನ್ನು ಹಾರಿಬಿಟ್ಟು
ನಂತರ ಹೀಗು ಒಂದು ಮಿಲನ ಇರುತ್ತೆ ಎಂದು ತೋರಿಸಿ ಮಗುವಾಗಿ ಒಂದು ರೂಪಾಯಿಯನ್ನು ಕೇಳಿ
ಮನಸಿನ ಹಾಳೆಯಲ್ಲಿ ಅಳಿಸದೆ ಮೂಡಿಸಿದ ಸ್ನೇಹಿತೆಯನ್ನು ಈಗ ನಾನ್ ಅವಳ್ ಆದಾಗ ಎಂದು ಹೇಳಿ ಮನಸಾರೆ ನಗಿಸಿದ್ದಕ್ಕೆ ಧನ್ಯವಾದಗಳು........

ವಿನಯ್_ಜಿ ಶುಕ್ರ, 03/20/2009 - 11:41

ಧನ್ಯವಾದಗಳು ಕಾವ್ಯ,
.... :)

ಆನುಪಮ ಕಾರಂತ್ ಶುಕ್ರ, 03/20/2009 - 15:10

ಇದೆಲ್ಲೋ ಓದಿದ ನೆನಪು. ಇಂಗ್ಲೀಶಿನ - Women's Favorite E-mail of the Year ಭಾಷಾಂತರವಿರಬೇಕಲ್ಲಾ? ಆದ್ರೂ, ಉತ್ತಮ ಕನ್ನಡಾನುವಾದಕ್ಕೆ ಧನ್ಯವಾದಗಳು.

ವಿನಯ್_ಜಿ ಶುಕ್ರ, 03/20/2009 - 15:38

ಪ್ರತಿಕ್ರಿಯೆಗೆ ಧನ್ಯವಾದಗಳು ಆನುಪಮ,

ಈ ಕಥೆಗೆ ಸ್ಪೊರ್ಥಿ ಒಂದು ಮಾತುಕತೆ.... ಹೇಗೆ ಒಬ್ಬ ಮಿತ್ರನ ಹತ್ತಿರ ಮಾತನಾಡುತ್ತಿದ್ದಾಗ ದೊರದ ದೇಶದಲ್ಲಿ ಒಬ್ಬ ಗಂಡಸು ಮಗು ಹಡೆದ ಮಾತು ಬಂತು. ಅ ಮಾತುಕತೆಯ ಏಳೆಯೇ ಈ ಕಥೆ.... ಹುಂ, ನನ್ನ ಕೆಲವು ಮಿತ್ರರು ಈ ಕಥೆ ಓದಿದಾಗ ಒಂದು english story ಯು ಇದೆ ರೀತಿ ಬರುತ್ತೆ ಅಂತ ಹೇಳಿದ್ದರು...

ನಿಮ್ಮ ಪ್ರೋತ್ಸಹ ಸದಾ ಹೇಗೆ ಇರಲಿ ಎಂದು ಅಶಿಸುವ... ವಿನಯ :)

anilmanju (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/27/2009 - 14:26

ಧನ್ಯವಾದಗಳು ಕಾವ್ಯ,
ಚನ್ನಗಿದದೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/28/2009 - 12:12

ಹುಂ...! ಇಂತಹ ಕುಲಗೆಟ್ಟ ಅತಿಗಬ್ಬು ಬರಹಗಳನ್ನು ವಿನಯ್ ನಲ್ಲದೆ ಬೇರೆಯವರು ಬರೆಯಲುಂಟೇ...!!! :O

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.