Skip to main content

  ಪ್ರಿಯ ಸಹೃದಯರೇ ,
        ಅರೆ ಸರ್ಕಾರಿ ನೌರಕರರು ಇಂದು ಯಾವ ಸೆಕ್ಯೂರ್ ಇಲ್ಲದೇನೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಜಾಸ್ತಿ ದುಡಿಯೋ ಅವಧಿ ಜಾಸ್ತಿ ಆದರೆ ಸಂಬಳ ಕಡಿಮೆ ಮತ್ತು Life secur ಇಲ್ಲ ಯಾವ LIC ಆಗಲೀ PF ಆಗಲೀ ಕೊಡುತ್ತಿಲ್ಲ ಜೊತೆಗೆ ಒಂದು ಬಾಡಿ ನೇಮಿಸಿಕೊಂಡ ನೌಕರನನ್ನು ಇನ್ನೊಂದು ಬಾಡಿ ಕಿತ್ತಾಕಬೋದು ಅದೂ Aprovell ಆದಗ್ಯೂ ಇದಕ್ಕೆ ಪರಿಹಾರ ಗೊತ್ತಿದ್ರೆ ದಯವಿಟ್ಟು ತಿಳಿಸಿ. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

pavu ಗುರು, 02/09/2012 - 13:33

ಅರೆ ಸರ್ಕಾರಿ ನಾಕರರೆಲ್ಲಾರದೂ ಇದೇ ತೊದರೆ ಅವರ ಹಣೆಬರಹನೇ ಇಷ್ಟು ಹೇಮಾ ಅವರೇ ಆದರೂ ಸಭಾ ನಡವಳಿ ಆಗಿ 3 ತಿಂಗಳು ಕೆಲಸ ನಿರ್ವಹಿಸಿದ ಮೇಲೆ ಅವರನ್ನು ತೆಗೆಯಲು ಸಾಧ್ಯವಿಲ್ಲ,ಅರೆ ಸರ್ಕಾರಿ ನಾಕರರನ್ನು  ತೆಗೆಯುವುದು ಅವರು ಕೆಲಸ ಮಾಡಲು ಅನರ್ಹರು ಎಂದ ಮೇಲೆ ಮಾತ್ರ.
ನೀವು ಯಾವ ಸರ್ಕಾರಿ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತೀದ್ದೀರಾ ಹೇಳುತ್ತೀರಾ ನಿಮ್ಮ ಅಭ್ಯಂತರ ಇಲ್ಲದಿದ್ದಲ್ಲಿ.

ಹೇಮಾವತಿ ಶುಕ್ರ, 02/10/2012 - 10:35

 ನನ್ನ ಸಮಸ್ಯೆಗೆ ಸ್ಪಂದಿಸಿದ್ದಾಕ್ಕಾಗಿ ಧನ್ಯವಾದಗಳು ಪಾವು ಅವರೇ, ನಾನು ಗ್ರಾಮ ಪಂಚಾಯ್ತಿಯಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. Good workersಅಂತ ತಾಲ್ಲೂಕಲ್ಲೇ ಒಳ್ಳೆ ಹೆಸರಿದೆ. ಆದರೆ ಇತ್ತೀಚೆಗೆ ಬಂದ ಸದಸ್ಯರುಗಳುಗೂ ಅಧಿಕಾರಿಗಳಿಗೂ ಸಂಘರ್ಷ ನಡೆದು ಅದರಲ್ಲಿ ಆಡಳಿತ ವರ್ಗ ಮತ್ತು ಅಧಿಕಾರಿಗಳು ರಾಜಿ ಆದರು. ಆದರೆ ಕೆಲಸ ಮಾಡೋ 5 ಜನ ಸಿಬ್ಬಂದಿಗಳ ಮೇಲೆ ಇಲ್ಲದ ಗೂಬೆ ಕೂರಿಸುತ್ತೆದ್ದಾರೆ  ಇಬ್ಬರೂ ಸೇರಿ. ಎಲ್ಲ ಸಿಬ್ಬಂದಿಗಳು ಗ್ರಾ.ಪಂ ಗಾಗಿ ಹಗಲು ರಾತ್ರಿ ಎನ್ನದೇ ದುಡಿದಿರೋರೆ ಜೊತೆಗೆ 10,15 ವರ್ಷಗಳ ಸೇವೆ ಸಲ್ಲಿಸಿರುವವರೇ ಈಗ ಇಡೀ ಸಿಬ್ಬಂದಿನ್ನೇ ಒಬ್ಬೊಬ್ಬರನ್ನೇ ಒಂದೊಂದು ಕಾರಣ ಕೊಟ್ಟು ತೆಗೆದು ಹಾಕಬೇಕು ಅಂತ ಹೊರಟಿದಾರೆ ನಮಗಂತೂ ಏನೂ ಮಾಡೋಕೆ ತೋಚುತ್ತಿಲ್ಲ ಯಾವ ಅಧಿಕಾರಿಗಳ ಗಮನಕ್ಕೂ ತಂದಿಲ್ಲ  ಏನಕ್ಕೂ ದಿಕ್ಕೇ ತೋಚುತ್ತಿಲ್ಲ.

pavu ಶುಕ್ರ, 02/10/2012 - 10:43

ಹಾಯ್ ಹೇಮಾ ನಿಮ್ಮ ಜಿಲ್ಲೆ ಹಾಗೂ ನಿಮ್ಮ ತಾಲ್ಲೂಕು ಮತ್ತು ನೀವು ಕಾರ್ಯನಿರ್ವಹಿಸುತ್ತೀರುವ ಗ್ರಾಮ ಪಂಚಾಯಿತಿ ಹೆಸರನ್ನು ಹೇಳಿ...ನನಗೆ ಗೊತ್ತೀರುವ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ.

ಹೇಮಾವತಿ ಶುಕ್ರ, 02/10/2012 - 10:47

 ಬೇಡ ಪಾವು ಅವರೇ ಎಲ್ಲ ಗ್ರಾ.ಪಂ ಸಿಬ್ಬಂದಿಗಳ ಪರವಾಗಿ ಸಲಹೆ ನೀಡಿ ಪ್ಲೀಸ್ ತಪ್ಪು ತಿಳಿಬೇಡಿ.

pavu ಶುಕ್ರ, 02/10/2012 - 11:04

ಆಯಿತು ಬೇಜಾರಾಗಬೇಡಿ ನಾನು ಕೂ ಗ್ರಾಮ ಪಂಚಾಯಿತಿಯಲ್ಲೇ ಕೆಲಸ ಮಾಡತ್ತಾ ಇರೋದು.

ಹೇಮಾವತಿ ಶುಕ್ರ, 02/10/2012 - 11:25

 ನನಗಾಗಿ ನಿಮ್ಮ ಸಮಯ ಮೀಸಲಿಟ್ಟಿದ್ದಾಕ್ಕಾಗಿ ಧನ್ಯವಾದಗಳು ಪಾವು ಅವರೇ.

pavu ಶುಕ್ರ, 02/10/2012 - 11:53

ಪಂಚಾಯಿತಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬೇಕು ಅಂದರೆ 3 ನೋಟೀಸ್ ನೀಡಬೇಕು ಅದರಲ್ಲಿ ಕಾರಣ ಕೊಡಬೇಕು ಅವರು ಕೊಟ್ಟಿರುವ ಕಾರಣ ಸರಿಯಿದ್ದಲ್ಲಿ ಸಿಬ್ಬಂದಿಯನ್ನು ತೆಗೆಯಬಹುದು ಸಿಬ್ಬಂದಿಗಳು ಅವರು ಕೊಟ್ಟಿರುವ ಕಾರಣದ ತಪ್ಪನ್ನು ಮಾಡಿಲ್ಲವೆಂದರೆ ತೆಗೆಯಲು ಸಾಧ್ಯವಿಲ್ಲ.

ಮಧು ಟ.ಜೆ ಭಾನು, 02/12/2012 - 22:28

ನೋಡಿ ಸ್ನೇಹಿತರೇ ಈ ಅರೆ ಸರಕಾರಿ ಅನ್ನೋದು ನಮಗೆಲ್ಲಾ ಅಂಟಿಕೊಂಡಿರುವ ಬೇತಾಳ ಇದ್ದ ಹಾಗೆ ಅಲ್ಲವೇ ಇದು ಒಂದು ಸಮುದ್ರ ಇದ್ದ ಹಾಗೆ ನಾವೆಲ್ಲಾ ಇದರಲ್ಲಿ ಇರೋ ಸಣ್ಣ ಸಣ್ಣ ಮೀನುಗಳಷ್ಟೇ ಹೊರತು ತಿಮಿಂಗಳಗಳಾಗಲು ಸಾಧ್ಯವೇ ಹೇಳಿ ನಾವು ಹುಟ್ಟಿದ್ದೇ ತಪ್ಪು, ಯಾಕಾದ್ರೂ ಹುಟ್ಟಿದ್ರೂ, ಅದರಲ್ಲೂ ಈ ಗ್ರಾಮ ಪಂಚಾಯಿತಿ ಕೆಲಸಕ್ಕೆ ಸೇರಿಕೊಂಡ್ರೋ ಅನ್ನೋ ಮನಸ್ಸಿನ ಕಾಯಿಲೆಯನ್ನ ಬಿಡಿ ಯಾಕೆಂದರೆ ನಮ್ಮ ಮೇಲೆ ಇರೋ ಅಧಿಕಾರಿಗಳೆಂಬ ದೊಡ್ಡ ತಿಮಿಂಗಳಿಗೆಲ್ಲಾ ನಾವ್ಯಾಕ್ ಹೆದರಬೇಕು ಹೇಳಿ ಇವತ್ತು ಕಾಲ ಅವರದ್ದಾಗಿರಬಹುದು ಅಷ್ಟೇ ಆದರೇ ಮುಂದಿನ ದಿನ ಅಂತ ನಮಗೂ ಕಾದಿದೆ ಅಲ್ವೇ ದಯವಿಟ್ಟು ನಾನು ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಇತರೆ ಅರೆ ಸರಕಾರಿ ನೌಕರರಲ್ಲಿ ಕೇಳಿಕೊಳ್ಳುವುದಿಷ್ಟೇ ಯಾರು ಕೂಡ ಯಾರಿಗೂ ಕೂಡ ! ಯಾವುದೇ ಕಾರಣಕ್ಕೂ ಭಯ ಪಡಬೇಡಿ, ಮತ್ತೋಂದು ನೆನಪಿರಲಿ ನಾವುಗಳು ಯಾವುದೇ ಕಾರಣಕ್ಕೂ ಅವರ ಅಡಿಯಾಳುಗಳಲ್ಲ. ನೀವುಗಳು ಯಾರೇ ಆಗಿರಲೀ ನಿಮ್ಮ ಸಹಾಯಕ್ಕೆ ನಾವು ಯಾವತ್ತೂ ಸದಾ ಸಿದ್ದ ಆದಾಗ್ಯೂ ಯಾರಿಗೇ ಆಗಲಿ ಏನೆ ತೊಂದರೆ ಆದಲ್ಲಿ ವಿಸ್ಮಯನಗರಿಯಲ್ಲಿ ತಿಳಿಸಿ ಪ್ಲೀಸ್ ಯಾಕೆಂದರೆ ಯಾರೋ ಒಬ್ಬ ಪಿ.ಡಿ.ಓ ಗೆ ಹೊಡೆದಿದ್ದಕ್ಕೆ ಬರೀ ಜಿಲ್ಲೆ ಯಾಕೇ ಈಡೀ ಸರಕಾರನೇ ತಲೆ ಕೆಡಿಸಿಕೊಂಡು ಹೊದ್ದಾಡುವಂತೆ ಆಗೋಯಿತು ಆದರೇ ಒಬ್ಬ ನಮ್ಮ ಸಿಬ್ಬಂದಿಗೆ ಏನಾದರೂ ಆದರೆ ಯಾರೂ ತಲೆ ಕೆಡಿಸಿಕೊಳ್ಳೋದಿಲ್ಲ ಅದಕ್ಕೆ ನಮ್ಮಲ್ಲಿ ಪಾವು ಅವರು ಹೇಳಿದಾಗೆ ನಮ್ಮಲ್ಲಿ ಒಗ್ಗಟ್ಟಿದ್ದರೆ ಏನ್ ಬೇಕಾದ್ರು ಮಾಡಬಹುದು ಹೇಮಾವತಿಯವರೇ ನಿಮಗೂ ಕೂಡ ನೆನಪಿರಲಿ

Nanjunda Raju Raju ಶುಕ್ರ, 02/10/2012 - 14:53

ಶ್ರೀಮತಿ ಹೇಮಾವತಿಯವರೇ, ಇದು ಒಂದು ರೀತಿಯ ಬದುಕು ಸಾವಿನ ಪ್ರಶ್ನೆ. ಇದು ಸರಕಾರವೇ ಹುಟ್ಟು ಹಾಕಿದ ಸಮಸ್ಯೆ. ಈ ಮೊದಲು ಸ್ಟೈಫಂಡ್ ಕ್ಯಾಡಿಡೇಟ್ ಎಂದು ನಿರುದ್ಯೋಗಿ ಪದವಿದರರನ್ನು ತೆಗೆದುಕೊಂಡು ಕನಿಷ್ಟ ಸಂಭಾವನೆ ನೀಡುತ್ತಿದ್ದರೂ. ಕೆಲವರು ಕೆಲಸ ಬಿಟ್ಟರು. ಇನ್ನೂ ಕೆಲವರು ಸ್ವಸಾಮರ್ಥ್ಯದಿಂದ ಬೇರೆ ಕೆಲಸ ಹುಡುಕಿಕೊಂಡರು. ನಂತರ, ದಿನಗೂಲಿ ನೌಕರರೆಂದು ವಿವಿಧ ಹುದ್ದೆಗಳ್ಳಿಗೆ ತೆಗೆದುಕೊಂಡು, ೧೫ ವರುಷವಾದರೂ ಅವರುಗಳನ್ನು ನ್ಯಾಯಾಲಯದ ಆದೇಶವಿದ್ದರೂ ಸಹ ಖಾಯಂ ಮಾಡಿಲ್ಲ.
ನಂತರ ನಿಮ್ಮಂತಹವರನ್ನು ಜಿಲ್ಲಾ ಪಂಚಾಯತ್ ಬಂದ ಮೇಲೆ. ಶುರುವಾಯಿತು. ನಿಮ್ಮಲ್ಲೂ ಬುದ್ದಿವಂತರಿರುತ್ತಾರೆ. ಉದ್ಯೋಗಕ್ಕಿಂತಲೂ ಹೆಚ್ಚಿನ ವಿದ್ಯಾವಂತರಿರುತ್ತೀರಿ. ಆದರೂ ದೂರದ ಆಸೆಯಿಂದ ಈಗಲೋ, ನಾಳೆಯೋ ಖಾಯಂ ಮಾಡಬಹುದೆಂಬ ಆಸೆಯಿಂದ ಸೇವೆ ಸಲ್ಲಿಸುತ್ತಿದ್ದೀರಿ?  ಪ್ರಮಾಣಿಕ ಸೇವೆ ಸಲ್ಲಿಸುತ್ತಿದ್ದರೂ ಸಹ, ಜನನಾಯಕರ ಅಥವಾ ಅಧಿಕಾರಿಗಳಿಂದ ಕಿರುಕುಳ, ಮಾನಸಿಕ  ಹಿಂಸೆ ನೀಡುತ್ತಿದ್ದಾರೆ.  ನಿಮ್ಮ ಹಿತಕ್ಕಾಗಿ, ನಮ್ಮ ಜನ ನಾಯಕರು, ಅಧಿಕಾರಿಗಳು, ಸರಕಾರ ಮನಸ್ಸು ಮಾಡಬೇಕು. ನಿಮ್ಮ ಬೆಂಬಲಕ್ಕೆ ಸುದ್ದಿ ಮಾಧ್ಯಮ ಮತ್ತು ದೃಷ್ಯ ಮಾಧ್ಯಮಗಳು ಬೆಂಬಲ ಕೊಡಬೇಕು. ಮುಖ್ಯವಾಗಿ ಸರಕಾರಿ ನೌಕರರ  ಸಂಘಗಳು ಬೆಂಬಲ ಕೊಡಬೇಕು. ಇದಕ್ಕೆ ಗಮನ ಸೆಳೆಯಲು ನೀವೆಲ್ಲಾ ಒಗ್ಗೂಡಿ ಸಂಘ ಕಟ್ಟಿಕೊಂಡು, ಶಾಂತಿಯುತ ಹೊರಾಟ ಮಾಡಬೇಕು. ಅದಕ್ಕೆ ಪ್ರಮಾಣಿಕ ನಾಯಕತ್ವಬೇಕು. ಇದೇ ರೀತಿ ದಿನಗೂಲಿ ನೌಕರರು ಜಯ ಸಾಧಿಸಿದ್ದಾರೆ. 
ಈಗ ಮತ್ತೊಂದು ಪಿಡುಗು ಪ್ರಾರಂಭವಾಗಿದೆ, ಅಂದರೆ, ಹೊರಗುತ್ತಿಗೆಯಿಂದ ಜನರನ್ನು ಸರಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವುದು. ಇದು ಮತ್ತೊಂದು ರೀತಿಯ ಮೋಸ. ಹಾಗೂ ವಿದ್ಯಾವಂತ ನಿರುದ್ಯೋಗಿಗಳನ್ನು ಶೋಷಣೆ ಮಾಡಲು ದಾರಿಯಾಗಿದೆ.  ಒಬ್ಬ ನೌಕರನನ್ನು ಹೊರಗುತ್ತಿಗೆ ಏಜನ್ಸಿಯಿಂದ ನೇಮಿಸಿಕೊಂಡಾಗ, ಅವನ ವೇತನಕಾಗಿ ಪಡೆದ ಸಂಭಾವನೆ ಮೊತ್ತದಲ್ಲಿ ನೌಕರನಿಗೆ ಸಿಗುವುದು ಅರ್ದಕ್ಕಿಂತ ಕಡಿಮೆಯೇ? ಇಲ್ಲಿ ಮತ್ತೊಂದು ವಿಪರ್ಯಾಸವೆಂದರೆ, ಒಬ್ಬ ನಿರುದ್ಯೋಗಿಯು ವಿದೇಶಿ ಕಂಪನಿಗಳಿಗೆ ಹೋದರೆ, ೨೫ ಸಾವಿರದಿಂದ ಒಂದು ಲಕ್ಷದವರೆಗೆ ವೇತನ ಪಡೆಯುವ ಅರ್ಹತೆ ಇದ್ದರೂ, ತಾನು ಸೇವೆ ಸಲ್ಲಿಸುವ ಸರ್ಕಾರಿ ಕಛೇರಿಯ ಅಧಿಕಾರಿಗಿಂತಲೂ ಹೆಚ್ಚಿನ ಅರ್ಹತೆ ಇದ್ದರೂ, ಶೋಷಣೆಗೆ ಒಳಗಾಗುತ್ತಿದ್ದಾನೆ. ಇದಕ್ಕೆ ಅವನಿ/ಳಿಗೆ ಯಾವುದೇ  ಸೇವಾ ಭದ್ರತೆ ಇರುವುದಿಲ್ಲ.
ಆದುದರಿಂದಲೇ ಇತ್ತಿತ್ತಲಾಗಿ ಯವಕರು, ಯುವತಿಯರು ಅಪರಾಧಿಗಳಾಗುತ್ತಿದ್ದಾರೆ. ಅಲ್ಲವೇ?
ಏನಾದರೂ ಸರಕಾರ ಯೋಚಿಸಬೇಕು? ವಿದೇಶಿ ಕಂಪನಿಗಳಿಂದ ನಮ್ಮ ಸ್ಠಳೀಯ ಕೈಗಾರಿಕೆಗಳು, ಗಿರಣಿಗಳು ಮುಚ್ಚಿಕೊಂಡ ಕಾರಣ, ಈ ಸಮಸ್ಯೆ ಉದ್ಬವವಾಯಿತು. ವಂದನೆಗಳೊಡನೆ.

ಹೇಮಾವತಿ ಸೋಮ, 02/13/2012 - 10:55

  ಪ್ರತಿ ಸಮಸ್ಯೆಗೂ ಓಗೊಟ್ಟು ಸ್ಪಂದಿಸುತ್ತಿರುವ  ಮತ್ತು ನಿಮ್ಮ ಸಲಹೆಗಾಗಿ ಧನ್ಯವಾದಗಳು  ನಂಜುಂಡ ರಾಜುರವರೇ.

ಮುನೀರ್ ಅಹ್ಮದ್ … ಭಾನು, 02/12/2012 - 18:06

 ಅರೆ ಸರ್ಕಾರಿ  ನೌಕರರೊಂದಿಗೆ ಒಂದು .ತರಹದಲ್ಲಿ ಶೋಶಣೆಯಾಗಿದೆ. ಒಂದು  ಸರ್ಕಾರಿವೆವಸ್ಥೆಯಲ್ಲಿ ಕನೂನು ಯೆಲ್ಲಾರಿಗೂ ಒಂದೇಆಗಿರಬೇಕು, ಆಯಾ ಸರ್ಕಾರಗಳು  ತನ್ನ ಎಲ್ಲಾ ಪ್ರಜೆಗಳನ್ನು ಒಂದೇದೃಶ್ಟಿಯಿಓದ ಸಂರಕ್ಶಿಸಬೇಕ್ಕಾದದ್ದು  ಅದರ ಸಂವಿಧಾನಬದ್ಧ  ಕರ್ತ್ತ್ಯವ್ಯವಾಗಿದೆ.     ಹಾಗೆಯೇ     ತನ್ನ  ನೌಕರರ ಸಂಬಳ  ವ್ಯೆವಸ್ಥೆಯನ್ನು  ಸಮನಾಂತರ ರೀತಿಯಲ್ಲಿ ನೀಡಬೇಕು. ಈರೀತಿಯ  ತಾರತಮ್ಯ,ಹಾಗು ಖಾಯಿಂ, ತಾತ್ಕಾಲಿಕ, ಅರೆಸರ್ಕಾರಿ ಯೆಂದು ಭೇದ ಮಾಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಕಾನೂನನ್ನು ಮಾಡುವ ಹಾಗು ಪಲನೆಮಾಡುವ ಸರ್ಕಾರವೇ ಈ ರೀತಿಯಲ್ಲಿ ತನ್ನ ಪ್ರಜೆಗಳೊಂದಿಗೆ ಭೇದಮಾಡಿದರೆ , ಸಂರಕ್ಷಿಸುವವರಾರು?

ಹೇಮಾವತಿ ಸೋಮ, 02/13/2012 - 10:53

 ನನ್ನ ಸಮಸ್ಯೆಗಾಗಿ  ನಿಮ್ಮ ಸಮಯ ಮೀಸಲಿಟ್ಟಿದ್ದಕ್ಕಾಗಿ  ಧನ್ಯವಾದಗಳು  ಸಾರ್, 

ಹೆಚ್ ವಿರುಪಾಕ್ಷಪ್ಪ ಮಂಗಳ, 02/14/2012 - 12:43

ಅರೆ ಸರ್ಕಾರಿ ನೌಕರರು ಅಂದರೆ ಸರ್ಕಾರದ ಕಛೇರಿಗಳಲ್ಲಿ ಕಡಿಮೆ ಕೂಲಿಯಲ್ಲಿ ದುಡಿಯುವವರು ಮತ್ತು ಅವರಿಗೆ ಸರ್ಕಾರದ ಯಾವುದೇ ಸೌವಲತ್ತು ಜೀವನದ ಬದ್ರತೆ ಒದಗಿಸದೆ ಅವರಿಂದ ಎಲ್ಲಾ ಕೆಲಸ ಕಾರ್ಯಾಗಳನ್ನು ಮಾಡಿಸಿಕೊಂಡು ಮತ್ತೆ ಅವರ ಮೇಲೆ ದಬ್ಬಾಳಿಕೆ ಮಾಡುವ ದಿವಸಗಳು ಇಂದು ನಿರ್ಮಾಣಗೊಂಡಿವೆ. ದಿನನಿತ್ಯದ ಬದುಕು ಸಾಗಿಸುವಲ್ಲಿ ಬೆಲೆ ಏರಿಕೆಯ ಹಾವಳಿಯಲ್ಲಿ ಇಂದು ಅರೆ ಸರ್ಕಾರಿ ನೌಕರನು ಒಪ್ಪತ್ತಿನ ಕೂಳಿಗಾಗಿ ಕಷ್ಟಪಡುವಂತಾಗಿದೆ. ಈ ದಿಸೆಯಲ್ಲಿ ಸರ್ಕಾರದರು ಕಣ್ಣುತೆರೆದು ನೋಡದೆ ತಮ್ಮ ಸ್ವಾರ್ಥಕ್ಕಾಗಿ ಬೇಜವಬ್ಮಾರಿ ಆಡಳಿತವನ್ನು ನೆಡೆಸುತ್ತಿದ್ದಾರೆ. ಸರ್ಕಾರಿ ಕಛೇರಿಗಲ್ಲಿ ಎಲ್ಲರೂ ಸರ್ಕಾರಿ ನೌಕರರನ್ನಾಗಿ ಖಾಯಂ ಮಾಡಿಕೊಳ್ಳಬೇಕು. ಅವರಿಗೆ ಸೇವಾ ಬದ್ರತೆ ಸರ್ಕಾರಿ ಎಲ್ಲಾ ಸೌವಲತ್ತುಗಳನ್ನು ಕೊಡಬೇಕು. ೫,೧೦,೧೫ ವರ್ಷಗಳ ಕಾಲ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿದರೂ ಇಂದಿಗೂ ಕೂಡ ಖಾಯಂ ಗೊಳಿಸದ ಸರ್ಕಾರದ ನೀತಿಗಳು ಹೇಳತೀರದಾಗಿದೆ. ಮತ್ತೊಂದೆಡೆಯಲ್ಲಿ ಸರ್ಕಾರವು ಬಹು ದೊಡ್ಡ ತಪ್ಪಾನ್ನು ಮಾಡುತ್ತಿದೆ. ಅದು ಮಾನವನ ಬೆಳವಣಿಗೆಗೆ ತುಂಬಾ ಅಪಾಯಕಾರಿಯದ ವಿಷಯವಾಗಿದೆ. ಅದು ಏನೆಂದರೆ, ಖಾಸಗಿಕರಣ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುವ ಕೆಳ ಹಂತದ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುವುದು ಅಂದರೆ ಅರೆ ಸರ್ಕಾರಿ ನೌಕರರನ್ನು ಮಾರುವುದು. ಸರ್ಕಾರವು ಇಂದು ಕಂಪನಿಗಳ ಕೈಗಳಿಗೆ ಆಡಳಿತ ಕೊಟ್ಟ ಕುಳಿತುಕೊಂಡು ಆಡಳಿತ ವ್ಯವಸ್ಥಯನ್ನೆ ಬುಡಮೇಲು ಮಾಡುತ್ತಿದ್ದಾರೆ. ಇಲ್ಲಿ ನಾವೇಲ್ಲರೂ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸರ್ಕಾರಗಳು ಕಂಪನಿಯ ವ್ಯಕ್ತಿಗಳನ್ನು ಮಾತ್ರ ಶ್ರೀಮಂತಗೊಳಿಸಲು ಹೊರಟ್ಟಿದ್ದಾರೆ. ಕಂಪನಿಯ ಮೂಲಕ ಅರೆ ಸರ್ಕಾರಿ ನೌಕರನು ಸಂಬಳಕ್ಕೆ ಕೈ ಚಾಚುವಂತಾಗಿದೆ. ಹಾಗೆ ಅವರು ಕೊಟ್ಟ ಸಂಬಳ ಯಾತಕ್ಕು ಸಾಲುವುದಿಲ್ಲ. ಇಲ್ಲಿ ಮತ್ತೊಂದು ವಿಷಯ ನೆನಪಿಗೆ ಬರುತ್ತದೆ ನೌಕರನು ಇಲ್ಲಿ ಕಂಪನಿ ನೌಕರನಾಗಿ ದುಡಿಯುವ ಮನೋಭಾವನೆ ಬರುತ್ತದೆ. ತಾನು ಸರ್ಕಾರಕ್ಕಾಗಿ ಜನರಿಗಾಗಿ ನಿಷ್ಠಪಕ್ಷಪಾತವಾಗಿ ಕೆಲಸ ಮಾಡುವ ಮನೋಭಾವನೆಯನ್ನು ಕಳೆದುಕೊಳ್ಳುತ್ತಾನೆ. ಇನ್ನು ಮುಂದೆಯಾದರು ಸರ್ಕಾರಗಳು ಅರೆ ಸರ್ಕಾರಿ ನೌಕರರನ್ನು ಸರ್ಕಾರಿ ನೌಕರನ್ನೆಂದು ಪರಿಗಣಿಸಿ ಅವನಿಗೆ ಸೂಕ್ತ ಜೀವನದ ಬದ್ದತೆಯನ್ನು ಕೊಡಬೇಕು. ಸರ್ಕಾರಿ ಯಾವುದೇ ಕಛೇರಿಗಳಲ್ಲಿ ಹೆಚ್ಚು ಕಾಲ ದುಡಿಯುವ ಶ್ರಮ ಜೀವಿಗಳೆಂದರೆ ಅರೆ ಸರ್ಕಾರಿ ನೌಕರರು ಇವರಿಂದಲೆ ನಮ್ಮ ದೇಶದ ಪ್ರಗತಿ ಸಾದ್ಯ ಅಂದರೆ ತಪ್ಪಾಗಲಾರದು.                                                                                                                               - ಹೆಚ್.ವಿರುಪಾಕ್ಷಪ್ಪ. ತಾವರಗೊಮದಿ

ಹೇಮಾವತಿ ಮಂಗಳ, 02/14/2012 - 14:57

 ಅರೆ ಸರ್ಕಾರಿ ನೌಕರರ ಬಗ್ಗೆ ನಿಮಗಿರುವ ಕಾಳಜಿಗೆ ತುಂಬಾ ಧನ್ಯವಾದಗಳು ಹೆಚ್.ವಿರುಪಾಕ್ಷಪ್ಪ ರವರೇ,

ಮಧು ಟ.ಜೆ ಮಂಗಳ, 02/14/2012 - 20:16

ಹೆಚ್. ವಿರೂಪಾಕ್ಷಪ್ಪ ರವರೇ ತುಂಬಾ ತುಂಬಾ ಧನ್ಯಾವಾದ ನಿಮಗೆ ಅರೆ ಸರ್ಕಾರಿ ನೌಕರರ ಬಗ್ಗೆ ಇರುವಂತಹ ಕಾಳಜಿ ವೈಖರಿ ನನಗೆ ತುಂಬಾ ಇಷ್ಟವಾಯಿತು ಸರ್,  ಅರೆಸರ್ಕಾರಿ ನೌಕರರರು ದಿನೇ ದಿನೇ ಅಆಇಈ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುತ್ತಾ ದಿನಾ ಕಳಿಯುತ್ತಾ ನಮಗೆ ಇವತ್ತು ಖಾಯೋ ಸಿಗಬಹುದು ನಾಳೆ ಸಿಗಬಹುದು ಎಂಬ ದೂರಾಲೋಚನೆಯಿಂದ ಮಾನ ಹಿಂಸೆಯಿಂದ ಕೆಲಸ ಮಾಡುತ್ತೀದ್ದಾರೆ ಇದಕ್ಕೆ ಜರೂರಾಗಿ ಪರಿಹಾರವೇ ಇಲ್ಲವೇ ! ಎಂಬ ಪ್ರಶ್ನೆ ಎಷ್ಟೋ ನಮ್ಮಂತ ನೌಕರರಿಗೆ ಸಮಯ ಕಾಯುವಂತಾಗಿದೆ ದಯವಿಟ್ಟು ಇದಕ್ಕೆ ತಮ್ಮಲ್ಲಿ ಪರಿಹಾರಗಳೇನಾದರೂ ಇದ್ದಲ್ಲಿ ಪ್ಲೀಸ್ ತಿಳಿಸಿ ಸರ್ ಧನ್ಯವಾದಗಳು

  • 4137 views