Skip to main content
Forums

ಇವತ್ತು ಭಾರತದ ಜನರ ಕೋರ್ಟ್ " ಕಸಬ್ ನಿಗೆ ಗಲ್ಲಾಗಲಿ...ಗಲ್ಲಾಗಲಿ..." ಅಂತಾ ಎಲ್ಲೆಡೆ ತೀರ್ಪು ನೀಡುತ್ತಿದೆ!  ಆತನಿಗೆ ಗಲ್ಲು ಶಿಕ್ಷೆ ಆಗಿ, ಆತ ಗಲ್ಲಿಗೆರಿದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಅನ್ನೋದು ನನ್ನ ಅಂಬೋಣ.
ಆತ ಇಲ್ಲಿ ಬಂದದ್ದೇ ವೀರ(?) ಮರಣ ಹೊಂದಲೆಂದು. ಆತನ ಸಹಚರರೆಲ್ಲ ಸತ್ತು ಸ್ವರ್ಗ(!)ಸೇರಿದರು. ಈತನೋಬ್ಬನೆ ಉಳಿದುಕೊಂಡ ಪಾಪಿ. ಈತನನ್ನು ಗಲ್ಲಿಗೇರಿಸಿದರೆ ಅದಕ್ಕಿಂತ ದೊಡ್ಡ ವರ ಆತನಿಗೆ ಇನ್ನೇನು ಬೇಕು? (ಆತ ತನ್ನನು ಆದಷ್ಟು ಬೇಗ ಸಾಯಿಸಿ ಅಲ್ಲಾಹುವಿನ ಪಾದ ಸೇರುವಂತೆ ಮಾಡಲಿ ಎಂದು ಇನ್ನೆಷ್ಟು ಬೇಡಿಕೊಳ್ಳುತ್ತಿದ್ದಾನೋ ಏನೋ??) ಆತನಿಗೆ ಜೀವಾವಧಿ ಆಗಬೇಕು...ಅದನ್ನು ಹೈಕೋರ್ಟ್ ಎತ್ತಿ ಹಿಡಿಯಬೇಕು ....ನಂತರ ಸುಪ್ರಿಂ....ಹೀಗೆ ಆತ ಇನ್ನು ಹದಿನೈದು ವರ್ಷ ಭಾರತದ ಜೈಲುಗಳಲ್ಲಿ ಕೊಳೆಯಬೇಕು.....ನಂತರ ಹದಿನಾರು ವರ್ಷಗಳ ಜೀವಾವಧಿ !!! ಈ ಭಾರತವೆಂಬ ಕಾಫೀರರ ನಾಡಿನಲ್ಲಿ ಅವನ ಜಿಹಾದಿ ಆತ್ಮ ಬದುಕಬೇಕು....ಬದುಕಬೇಕು, ಬದುಕಿ ಬದುಕಿ ಸಾಯಬೆಕು.....
ನೀವೇನಂತೀರಿ??

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

PANDURANGA ACHARYA ಗುರು, 05/06/2010 - 10:26

ಕಸಬ್‍ನಿಗೆ ಇದುವರೆವಿಗೂ ಸರ್ಕಾರ ವ್ಯಯಿಸಿದ ಹಣ ಮೂವತ್ತೆರೆಡು ಕೋಟಿ. ಗಲ್ಲಿಗೆರಿಸಿದರೆ ಹಣ ಪೋಲಾಗುವುದು ತಪ್ಪುತ್ತದೆ. ಆತನಿಗೆ ಜೀವಾವಧಿ ಆದರೆ ಅವನನ್ನು ಸಾಕುವ ಖರ್ಚು ನಮ್ಮ ತಲೆಗೇ ಹೊರೆಯಾಗುತ್ತದೆ ಅಲ್ಲದೆ ಪಾಕಿಸ್ತಾನದ ಉಗ್ರಗಾಮಿಗಳು ಎಂದಾದರೂ ವಿಮಾನ ಯಾ ಹಡಗನ್ನು ಅಪಹರಿಸಿ ನಮ್ಮ ಜನರನ್ನು ಒತ್ತೆಯಾಗಿತಟ್ಟುಕ್ಕೊಂಡು ಕಸಬ್‍ನನ್ನು ಬಿಡಿಸಿಕೊಂಡು ಹೋಗುವ ಅಪಾಯ ಇದ್ದದ್ದೇ. ಆದುದರಿಂದ ಕಸಬ್‍ನನ್ನು ಗಲ್ಲಿಗೇರಿಸುವುದೇ ಉತ್ತಮ ಶಿಕ್ಷೆ.
ಅಲ್ಲವೇ...........

ಕೆಎಲ್ಕೆ ಗುರು, 05/06/2010 - 10:58

ಪ್ರಿಯ ಪಾಂಡುರಂಗ, 'ಪಾಕಿಸ್ತಾನದ ಉಗ್ರಗಾಮಿಗಳು ಎಂದಾದರೂ ವಿಮಾನ ಯಾ ಹಡಗನ್ನು ಅಪಹರಿಸಿ ನಮ್ಮ ಜನರನ್ನು ಒತ್ತೆಯಾಗಿತಟ್ಟುಕ್ಕೊಂಡು ಕಸಬ್‍ನನ್ನು ಬಿಡಿಸಿಕೊಂಡು ಹೋಗುವ ಅಪಾಯ ಇದ್ದದ್ದೇ' ಎನ್ನುವ ನಿಮ್ಮ ಮಾತು
ತಳ್ಳಿ ಹಾಕುವಂತಿಲ್ಲ. ಆದರೆ ಅದು ಆಗದಂತೆ ತಡೆಯುವದು ನಮ್ಮ ಸರಕಾರದ ಕರ್ತವ್ಯ. ಇಂತ ಅಪಹರಣಗಳು ಕಸಬ್ ಸತ್ತರೂ ಆಗಬಹುದಲ್ಲವೇ?
ಅಂದಹಾಗೆ, "ಗಲ್ಲು" ಅತಿ ದೊಡ್ಡ ಶಿಕ್ಷೆ ಎಂಬುದು ನಿಜವಾಗಿದ್ದರೆ; ಆತನ ಅಪರಾಧಕ್ಕೆ ಗಲ್ಲಿಗಿಂತ ಬೇರೆ ಶಿಕ್ಷೆ ಇಲ್ಲ ನಿಜ. ಆದರೆ 'ಗಲ್ಲು ಶಿಕ್ಷೆ' ಎಂಬುದರ ನನ್ನ ವರ್ಶನ್ ಬೇರೆ...ನಾನು ತಿಮ್ಮೇಶರಿಗೆ ಕೊಟ್ಟ ಉತ್ತರ ಓದಿ.

ತಿಮ್ಮೆಶ್ ಗುರು, 05/06/2010 - 10:28

ನಿಮ್ಮ ಅಭಿಪ್ರಾಯ ಸರಿ ಅನಿಸುತ್ತಿಲ್ಲ. ಹಾಗೆ ಮಾಡಿದರೆ, ಉಳಿದ ಭಯೋತ್ಪಾದಕರಿಗೆ ನಾವು ಏನು ಸಂದೇಶ ಕೊಟ್ಟಂತಾಗುತ್ತದೆ? ಏನೇ ಮಾಡಿದರೂ ಭಾರತ ನಮ್ಮನ್ನು ೩೦ ವರ್ಷ ಸಾಕುತ್ತದೆ ಎಂತಲ್ಲವೆ? ಹಾಗಾಗಬಾರದು. ನಮ್ಮ ಶಕ್ತಿಯನ್ನು. ನ್ಯಾಯಾಂಗ ಸಾಮಾರ್ಥ್ಯವನ್ನು ತೋರಿಸಬೇಕು. ಇದರಿಂದ ಮೊದಲೇ ಆ ಉಗ್ರನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕಿತ್ತು.

ಕೆಎಲ್ಕೆ ಗುರು, 05/06/2010 - 10:50

ಪ್ರಿಯ ತಿಮ್ಮೇಶ್, "ಭಾರತ ೩೦ ವರ್ಷ ನಮ್ಮನ್ನು ಸಾಕುತ್ತದೆ" ಎನ್ನುವುದು "ಭಾರತ ನಮ್ಮನ್ನು ಕೂಡಲೇ ಗಲ್ಲಿಗೇರಿಸುತ್ತದೆ" ಎಂಬ
ಸಂದೇಶಕ್ಕಿಂತ ಅಪಾಯಕಾರಿ ಎನ್ನುವುದು ನನ್ನ ಅಭಿಪ್ರಾಯ. ಯಾವುದೇ ಭಯೋತ್ಪಾದಕ ಸಾವಿಗೆ ಅಂಜುವುದಿಲ್ಲ. ಸಾವು ಆತನಿಗೆ ಶಿಕ್ಷೆಯಲ್ಲ. ಅದು ಆತನಿಗೆ ಪುಣ್ಯ ತಂದು ಕೊಡುವ ದಾರಿ. ಅಂದಹಾಗೆ, ಭಾರತದ ನ್ಯಾಯಾಂಗ ಶಕ್ತಿ ತೋರಿಸಲು ಕಸಬ್ ಯಾಕೆ ಬೇಕು? ಅದು ಕಸಬ್ ಅಥವಾ ಉಳಿದೆಲ್ಲ ಮುಸ್ಲಿಂ ಉಗ್ರರನ್ನೂ ಮೀರಿ ನಿಂತಿದ್ದು. (ಕಸಬ್ ನಿಗೆ ಗಲ್ಲು ನೀಡುವ ಬದಲು ಸಂಜಯ್ ದತ್ ನಿಗೆ ಗಲ್ಲು ಹಾಕಿದ್ದರೆ ನಮ್ಮ ನ್ಯಾಯಾಂಗದ ಶಕ್ತಿ ತೋರಿಸಿದಂತೆ ಆಗುತ್ತಿತ್ತು). ಆತ ಸತ್ತರೆ ಎಲ್ಲ ಭಯೋತ್ಪಾದಕರೂ, ಪಾಕಿಗಳೂ ನಿರಾಳ...!!

PANDURANGA ACHARYA ಗುರು, 05/06/2010 - 11:54

ಪ್ರಿಯ ಕೆಎಲ್ಕೆ ಯವರೆ,
ಇತ್ತೀಚೆಗೆ ತಮಿಳುನಾಡು ವೆಲ್ಲೂರು ಜೈಲಿನಲ್ಲಿರುವ ನಳಿನಿಯಿಂದ ಮೊಬೈಲನ್ನು ವಶಪಡಿಸಿಕೊಲಳಲಾಯಿತು. ನಳಿನಿ ಅಜೀವ ಜೈಲು ಶಿಕ್ಷೆ ಅನುಭವಿಸುತ್ತಿರುವ ಖೈದಿ ಅವಳಿಗೆ ಮೊಬೈಲ್ ಹೇಗೆ ದೊರೆಯಿತು? ಮುಂದೆ ಕಸಬ್ ನಿಗೂ ಇಂತಹ ಅನುಕೂಲಗಳು ದೊರೆಯಬಹುದು. ನಮ್ಮ ವ್ಯವಸ್ಥೆ ಜಾಳು ಜಾಳಾಗಿದೆ, ಬದ್ದತೆ ಮಾಯವಾಗಿದೆ, ನೈತಿಕತೆ ಅಧಃಪತನಗೊಂದಡಿದೆ. ಕಸಬ್ ನಂತಹ ಉಗ್ರರಿಗೆ ಧಾಳಿಗೆ ಸಹಕರಿಸಿದವರು ಮುಂದೆ ಅವನೊಂದಿಗೆ ಪುನಃ ಕೈಜೋಡಿಸದೇ ಇರುವರೇ? ಮರಣದಂಡನೆಯಂತಹ ಶಿಕ್ಷೆ ಉಗ್ರರಲ್ಲಿ ಭಯಮೂಡಿಸುವುದಿಲ್ಲ ನಿಜ ಆದರೆ ಅವರಿಗೆ ಭಾರತದ ಕಾನೂನಿನಲ್ಲಿ ಯಾವುದೇ ಅನುಕಂಪ ದೊರೆಯುವುದಿಲ್ಲ ಎಂದು ತಿಳುವಳಿಕೆಯನ್ನು ಮೂಡಿಸುತ್ತದೆ. ತಾರ್ಕಿಕವಾಗಿ ಉಗ್ರ ಹಾಗೂ ಧರ್ಮಾಂಧ ಮನೋಭಾವಹೊಂದಿದರಿಗೆ ಅಂತ್ಯಹಾಡುವುದೇ ಉತ್ತಮ ನಿರ್ಣಯ. ಹಾಗಾಗಿ ನಾನು ಕಸಬ್ ನ ಮರಣದಂಡನೆ ಪರವಾಗಿದ್ದೇನೆ ಅಲ್ಲದೇ ಇದು ಕಸಬ್ನಿಂದ ಹತ್ಯೆಯಾದವರ ಸಂಭಂಧಿಗಳ ಅಭಿಲಾಶೆಯೂ ಆಗಿದೆ.

ಉಮಾಶಂಕರ ಬಿ.ಎಸ್ ಗುರು, 05/06/2010 - 13:02

ಕೆ ಎಲ್ಕೆ ಯವರೆ,
ನಿಮಗೆ ಕಂದಹಾರ್ ವಿಮಾನ ಅಪಹರಣದ ಹಿನ್ನೆಲೆ ಜ್ಞಾಪಕವಿದೆಯೆಂದುಕೊೞುತ್ತೇನೆ, ಅದನ್ನು ಹೇಗೆ ಪರಿಹರಿಸಲಾಯ್ತು ಎಂದು ಸಹ ನಿಮಗೆ ತಿಳಿದ ವಿಚಾರ. ಇದನ್ನಗಲೆ ತಿಮ್ಮೇಶ್ ರವರು ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಅಫ್ಜಲ್ ಗುರು ಪ್ರಕರಣ ನಿಮಗೆ ಗೊತ್ತೇ ಇದೆ, ಜೊತೆಗೆ ಈಗ ಬದುಕುಳಿದಿರು ಉಗ್ರರಿಂದ ಮತ್ತಷ್ಟು ಉಗ್ರ ಚಟುವಟಿಕೆಗಳು ಹೆಚ್ಚುತ್ತಿವೇ ವಿನಃ ಕಡಿಮೆಯಾಗಿಲ್ಲ. ಅಲ್ಲದೆ ನಮ್ಮಲ್ಲಿ ರಾಜಕೀಯ ಕೈದಿಗಳಿಗೆ ಭಯೋತ್ಪಾದಕ ಕೈದಿಗಳಿಗೆ ಬೇರೆ ಬೇರೆ ರೀತಿಯ ಉಪಚಾರಗಳಿರುತ್ತವೆ, ಇವೆಲ್ಲದರಿಂದ ಕಸಬ್ ನಂತಹ ಅರ್ಬುಧ ರೋಗಗಳು ಹೆಚ್ಚುತ್ತವೇ ಹೊರತು ಕಡಿಮೆಯಾಗುವುದಿಲ್ಲ ಅಲ್ಲವೇ? ಅರ್ಬುದ ರೋಗಕ್ಕೆ ಇರುವ ಮದ್ದೆಂದರೆ ಅದನ್ನು ಕತ್ತರಿಸಿ ಸುಡುವುದು, ಹಾಗಾಗಿ ಅವನಿಗೆ ಗಲ್ಲಿ ಶಿಕ್ಷೆ ಆಗಲೇಬೇಕಲ್ಲವೇ?

ಕೆಎಲ್ಕೆ ಗುರು, 05/06/2010 - 14:09

ಪ್ರಿಯ ಉಮಾಶಂಕರ್ ಹಾಗೂ ಪಾಂಡುರಂಗಃ  ನಮ್ಮ ಜೈಲು ಪಧ್ಧತಿಯ ಲೋಪ ದೋಶಗಳು, ಜೈಲಲ್ಲಾಗಲಿ ಮತ್ತೆ ಎಲ್ಲೇ ಆಗಲಿ ಆತ ಬದುಕಿದ್ದರೆ ಭಯೋತ್ಪಾದನೆ ಇನ್ನೂ ಹೆಚ್ಚೇ, ಜೊತೆಯಲ್ಲಿ ಖರ್ಚು ಎಂಬುದನ್ನೆಲ್ಲ ಗಣನೆಗೆ ತೆಗೆದುಕೊೞುವುದಾದರೆ ಆತನಿಗೆ ಗಲ್ಲೇ ಉತ್ತಮ. ಜೊತೆಗೆ ಅವನಿಗೆ ಇಶ್ಟು ಬೇಗ 'ಮುಕ್ತಿ' ನೀಡಿದ ಅಸಮಾಧಾನವನ್ನು ನಾವು ಹೊಟ್ಟೆಗೆ ಹಾಕಿ ಕೊಳಬೇಕಾಗುತ್ತದೆ. ಕಸಬ್ ಮಟ್ಟಿಗೆ ಹೆಳುವುದಾದರೆ 'ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ....!!!'

ತಿಮ್ಮೆಶ್ ಗುರು, 05/06/2010 - 15:08

ಮಿತ್ರರೆ, 
ಇದೀಗ ಕೋರ್ಟ್ ತೀರ್ಮಾನ ಬಂದಿದೆ. ಪಾಪಿಗೆ ಗಲ್ಲು ಶಿಕ್ಷೆ ಅಗಿದೆ. ನಮ್ಮ ರಾಜಕಾರಣಿಗಲು ಇದನ್ನು ಜಾರಿ ಮಾಡಿದರೆ ಮುಂಬೈ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಅತ್ಮಕ್ಕೆ ಶಾಂತಿ ಮತ್ತು ಭಾರತೀಯರ ಒತ್ತಾಯ ಕೈಗೂಡಿದಂತಾಗಿದೆ

  • 1498 views