Skip to main content

ಕಾರಿನ ಸನ್ ಫಿಲ್ಮಂ ಬ್ಯಾನ್ : ಒಂದು ಅವಿವೇಕದ ನಿರ್ಧಾರ?

ಬರೆದಿದ್ದುJune 6, 2012
18ಅನಿಸಿಕೆಗಳು

ನೆಗಡಿ ಆಯ್ತು ಅಂತಾ ಮೂಗನ್ನೇ ಕೊಯ್ಕೊಂಡ್ರೆ ಹೇಗಿರುತ್ತೇ? ಇದೇ ರೀತಿಯ ಇನ್ನೊಂದು ಉದಾಹರಣೆ ಸುಪ್ರೀಂಕೋರ್ಟನ ಕೂಲಿಂಗ್ ಗ್ಲಾಸ್ ನಿಷೇಧ ಕೂಡಾ.

ಇಂದಿನಿಂದ ಕಾರಲ್ಲಿ ಅಥವಾ ಯಾವುದೇ ವಾಹನದಲ್ಲಿ ಕಿಟಕಿ ಗ್ಲಾಸಿಗೆ ಕೂಲಿಂಗ್ ಪರದೆಯನ್ನು ಬಳಸುವದು ಅಪರಾಧ. ಕಾರಣ ವಾಹನಗಳಲ್ಲಿ ಅನೈತಿಕ ಚಟುವಟಿಕೆಗಳು (ಕಿಡ್ನ್ಯಾಪ್, ಅತ್ಯಾಚಾರ ಇತ್ಯಾದಿ) ನಡೆಯಬಾರದು ಅದಕ್ಕೆ. ಆದರೆ ಇದು ನಮ್ಮ ದೇಶದ ವಾತಾವರಣಕ್ಕೆ ಎಷ್ಟು ಅನುಕೂಲ? ಭಾರತ ದೇಶ ಉಷ್ಣ ಹವೆಯ ಪ್ರದೇಶ. ಇಲ್ಲಿ ಹೆಚ್ಚಿನ ಜಾಗದಲ್ಲಿ ಬಿಸಿಲು ತಡೆಯಲಾಗದಷ್ಟು ಇರುತ್ತದೆ, ಕೂಲಿಂಗ್ ಗ್ಲಾಸ್ ತೆಗೆದರೆ ಕಾರ್ ಒಳಗೆ ಬೇಸಿಗೆ ಕಾಲದಲ್ಲಿ ಒಳಗೆ ಕೂರುವದು ಅಸಾಧ್ಯ.

ಅಷ್ಟೇ ಅಲ್ಲ ಅಪ್ಪಿ ತಪ್ಪಿ ಕಾರಿನ ಒಳಗೆ ನೀವೂ ಮರೆತು ಬಂದ ಮೊಬೈಲನ್ನೋ, ವಾಚನ್ನೋ ಅಥವಾ ಲ್ಯಾಪ್ ಟಾಪ್ ಅನ್ನೋ ಬಿಟ್ಟರೋ ದೇವರೇ ಕಾಪಾಡಬೇಕು. ನಿಮ್ಮ ಕಾರಿನಲ್ಲಿಟ್ಟ ಸಾಮಾನು ಕಳ್ಳರ ದೃಷ್ಟಿಗೆ ಬಿದ್ದಿರುತ್ತದೆ! ಇದೊಂದು ರೀತಿಯಲ್ಲಿ ಕಾರಿನಲ್ಲಿರುವವರ ಸುರಕ್ಷತೆಯ ಪ್ರಶ್ನೆ.

ಏಕಾಏಕಿ ಈ ನಿಯಮವನ್ನು ದೇಶಾದ್ಯಂತ ಜಾರಿಗೆ ತರುವದರ ಬದಲು ಒಂದೆರಡು ಕಡೆ ಜಾರಿಗೆ ತಂದು ಪರಿಣಾಮ ಅಧ್ಯಯನ ಮಾಡಿ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದಿತ್ತಾ?

ಏನೇ ಇರಲಿ ನಿಯಮ ಜಾರಿಗೆ ಆಗಿದೆ. ೩೦೦೦ ರೂ ಖರ್ಚು ಮಾಡಿ ಹಾಕಿಸಿದ ಸನ್ ಫಿಲಂ ಅನ್ನು ಮುನ್ನೂರು ರುಪಾಯಿ ಕೊಟ್ಟು ವಾಹನ ಮಾಲೀಕರು ತೆಗೆಸಲೇ ಬೇಕು. ಇಲ್ಲಾಂದ್ರೆ ಮೊದಲ ಬಾರಿಗೆ ಪೋಲಿಸರು ೧೦೦ ರೂ, ಎರಡನೆಯ ಬಾರಿಗೆ ೩೦೦ ಹಾಗೂ ಮೂರನೆಯ ಬಾರಿಗೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸೆಲ್ ಆಗುವ ಸಾಧ್ಯತೆ ಇರುತ್ತದೆ. ನೀವು ನಿಮ್ಮ ಕಾರಿನ ಸನ್ ಫಿಲಂ ತೆಗೆಸಿದ್ದೀರಾ?

ಈ ರೂಲ್ಸ್ ಅವಿವೇಕದ ನಿರ್ಧಾರ ಎನ್ನುತ್ತೀರಾ? ಅಥವಾ ಒಳ್ಳೆಯದು ಅನ್ನುತ್ತೀರಾ? ನಿಮ್ಮ ಅನಿಸಿಕೆ ತಿಳಿಸಿ.

ಕೊನೆಯ ಮಾತುಃ ಇನ್ನು ಸೆಕೆಯಾದ್ರೆ ಕಾರಿಗೆ ತಮಾಶೆಯಾಗಿ ಹೇಳೋದಾದ್ರೆ ಕರ್ಟನ್ ಹಾಕಬಹುದು, ಇಲ್ಲಾಂದ್ರೆ ಕುಳಿತವರೆಲ್ಲಾ ರಟ್ಟನ್ನು ಬಿಸಿಲಿಗೆ ಅಡ್ಡವಾಗಿ ಇಟ್ಟುಕೊಳ್ಳಬಹುದು. ಏನಂತೀರಾ?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ತ್ರಿನೇತ್ರ ಧ, 06/06/2012 - 09:51

ಹೌದು ನೀವು ತಿಳಿಸಿರುವುದು ಅಕ್ಷರಷಃ ಸಥ್ಯ....! ನಮ್ಮ ದೇಶದ ಟ್ರಾಫಿಕ್ ಪೋಲೀಸ್ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲಾ ಎಂದು ಆ ಜವಾಬ್ಧಾರಿಯನ್ನು ಪ್ರಜೆಗಳಾದ ನಮ್ಮ ಹೆಗಲಮೇಲೇರಿ ಯಾವುದೋ ಅನುಕೂಲದ ಹೆಸರಿನಲ್ಲಿ ಮತ್ತಷ್ಟು ಅನಾನುಕೂಲಗಳಿಗೀಡುಮಾಡುವುದೇ ಈ ನಿಯಮಗಳನ್ನು ಜಾರಿತರುವ ಮಹಾಶಯರ ಕೆಲಸ.


ಇದೇ ರೀತಿಯ ನಿಯಮಗಳನ್ನು ಇಲ್ಲಿ ಅಂದರೆ ದೆಹಲಿ ಹರ್ಯಾಣಾ ಮತ್ತು ನೋಯ್ಡಾ ಗಳಲ್ಲಿ ಈ ಹಿಂದೆ ಅಂದರೆ ೨೦೦೮ ರಲ್ಲಿ ಜಾರಿಗೆ ತಂದು ದೊಡ್ಡದೊಡ್ಡ ಡಿಲಕ್ಸ್ ಕಾರುಗಳಲ್ಲೂ ಸಾವಿರಾರು ರೂ ಖರ್ಚು ಮಾಡಿ ಹಾಕಿಸಿದ್ದ ಕೂಲಿಂಗ್ ಫಿಲ್ಮ್ ತೆಗೆಸಿಬಿಟ್ಟರು. ಆದರೆ ಕಂಪನಿ ಜೋಡಿಸಿರುವ ಗಾಜುಗಳ ಪಾರಧರ್ಶಕತೆ ಮುಂದಿನ ಹಾಗೂ ಹಿಂದಿನ ಗಾಜುಗಳು ಶೇಖಡಾ ೬೦ ಕ್ಕಿಂತಾ ಹೆಚ್ಚು ಇರಬೇಕು ಹಾಗೂ ಅಕ್ಕ ಪಕ್ಕದ ಕಿಟಕಿ ಗಾಜುಗಳ ಪಾರದರ್ಶಕತೆ ಸುಮಾರು ೫೦ ಕ್ಕಿಂತಾಹೆಚ್ಚು ಇರಬಹುದು ಎಂಬ ನಿಯಮವಿದೆ. ಅದೇ ರೀತಿ ಸನ್ ಫಿಲ್ಮ್ ಪಾರಧರ್ಶಕತೆಗೂ ನಿಯಮಗಳಿವೆ, ಆದರೆ ಅದನ್ನು ಪ್ರತಿಪಾದಿಸಲು ನಮ್ಮ ಬಳಿ ಯಾವುದೇ ಪುರಾವೆ ಇರುವುದಿಲ್ಲ ಅಥವಾ ಅದನ್ನು ಪರೀಕ್ಷಿಸಲು ಟ್ರಾಫಿಕ್ ಪೋಲೀಸರ ಬಳಿ ಯಾವುದೇ ಮಾನಕ ಅಥವಾ ಸಾಧನಗಳಿರುವುದಿಲ್ಲ. ಹಾಗಾಗಿ ಕೂಲಿಂಗ್ ಫಿಲ್ಮ್ ಹಾಕಿದ್ದರೆ ಸಾಕು ಹಿಡಿದು ಜುರ್ಮಾನೆ ಹಾಕುವುದಲ್ಲದೇ ಅದನ್ನು ತೆಗೆಸುವ ಜವಾಬ್ಧಾರಿ ಕೂಡಾ ಕಾರುಗಳ ಮಾಲೀಕರ ಮೇಲೆ ಹೇರುತ್ತಾರೆ. ಮತ್ತೊಂದು ಕಡೆ ಯಾವುದಾದರೂ ವೀ ಐ ಪೀ ಕಾರುಗಳಾಗಿದ್ದು ಅಥವಾ ಯಾವುದೇ ರಾಜಕೀಯ ಪಕ್ಷಗಳ ನಾಯಕರೋ ಅಥವಾ ಅವರ ಹೆಸರಿನಲ್ಲಿ ಓಡಾಡುವ ಪುಡಾರಿಗಳಿಗೋ ಇದು ಅನ್ವಯಿಸುವುದಿಲ್ಲ....! ಮಜಾ ಮಾಡುಬವವರು ಮಾಡುತ್ತಲೇ ಇರುತ್ತಾರೆ ಸಜಾ ಅನುಭವಿಸುವವರು ಅನುಭವಿಸುತ್ತಲೇ ಇರುತ್ತಾರೆ ಇದೊಂದು ವಿಪರ್ಯಾಸ ಅಲ್ಲವೇ....?


ಹೊಸದಾಗಿ ನಿಯಮಗಳು ಬಜಾರಿಗೆ ಬಂದಾಗ ತಕ್ಷಣ ಎಲ್ಲರಿಗೂ ಅನಾನುಕೂಲ ಆಗುವುದು ಮತ್ತು ಚೆಕ್ ಮಾಡುವುದು, ನಿಯಮ ಉಲ್ಲಂಘಿಸಿ ನಡೆದವರಿಗೆ ಫೈನ್ ಹಾಕುವುದು ಇದೆಲ್ಲಾ ಸಾಮಾನ್ಯ, ಆದರೆ ದಿನಕಳೆದಂತೆ ನಿಧಾನವಾಗಿ ಅದನ್ನು ಪರೀಕ್ಷಿಸುವವರು ತಿಳಿದೂ ತಿಳಿಯದಂತೆ ಸುಮ್ಮನಿದ್ದು ಸಾಮಾನ್ಯ ಜನರಿಗೆ ಅಯ್ಯೋ ಇನ್ನು ಯಾರೂ ಚೆಕ್ ಮಾಡೋದಿಲ್ಲ ಎಂದರಿತು ಕ್ರಮೇಣವಾಗಿ ಯಥಾಪ್ರಕಾರ ಬಳಸಲು ಶುರುಮಾಡಿದಾಗ ನಿದ್ರೆಯಿಂದ ಎಚ್ಚರಗೊಂಡವರಂತೆ ಎದ್ದು ಮತ್ತೆ ಏಕಾಏಕಿ ಕಾರ್ಯಾಚರಣೆ ಶುರುಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ. ಈ  ರೀತಿ ಸುಲಿಗೆ ನಿರಂತರವಾಗಿ ನಡೆದಿವೆ ನಡೆಯುತ್ತಿವೆ ಮುಂದೆ ನಡೆಯುತ್ತವೆ ಕೂಡಾ. ಇಲ್ಲಿ ಅಂದರೆ ದೆಹಲಿ ಸುತ್ತಮುತ್ತಲ ಎನ್ ಸೀ ಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್)  ಗಳಲ್ಲಿ ಇಂದಿಗೂ ಆ ನಿಯಮವಿದ್ದು ಇಲ್ಲಿನ ೪೭-೪೮ ಡಿಗ್ರೀ ವರೆಗೂ ಹೆಚ್ಚುವ ಸುಡುಬಿಸಿಲಿನ ತಾಪವನ್ನು ತಾಳಲಾರದೇ ಫೈನ್ ಕೊಟ್ಟರೂ ಸರೀ ಎಂದು ಉದಾಸೀನತೋರಿ ಶೇಖಡಾ ೬೦ ಕ್ಕಿಂತಾ ಹೆಚ್ಚು ಗಕಾರುಗಳಲ್ಲಿ ಜನಗಳು ನಿರಂತರವಾಗಿ ಉಪಯೋಗಿಸುತ್ತಿದ್ದಾರೆ...! ಹಿಡಿದಾಗ ಅವರ ಕೈ ಬಿಸಿ ಮಾಡಿ ಜಾರಿಕೊಳ್ಳುತ್ತಾರೆ


ಇಂತಹಾ ನಿಯಮಗಳನ್ನು ಜಾರಿಗೆ ತರುವ ಮೊದಲು ಸಾಮಾನ್ಯ ಜನರಿಗಾಗುವ ಅನುಕೂಲ ಅನಾನುಕೂಲಗಳ ಬಗ್ಗೆ ಸರ್ವೇ ಮಾಡಿ ಜನಾಭಿಪ್ರಾಯ ಸಂಗ್ರಹಿಸಿ ತಿಳಿಯಬೇಕು ಮತ್ತು ಪರೀಕ್ಷಣೆಯ ಸಾಧನ ಸಲಕರಣೆಗಳನ್ನು ಟ್ರಾಫಿಕ್ ಪೋಲೀಸ್ ಇಲಾಖೆ ಹೊಂದಿರಬೇಕು ಎಂಬುದನ್ನು ಖಾತ್ರಿ ಮಾಡಿಕೊಂಡು ನಂತರ ಲಾಗೂ ಮಾಡಿದಲ್ಲಿ ಒಮ್ಮೆಲೇ ಜನಸಾಮಾನ್ಯರಿಗೆ ಅನಾನುಕೂಲವಾಗುವುದು ತಪ್ಪಿದಂತಾಗುತ್ತದೆ.

venkatb83 ಗುರು, 06/07/2012 - 16:56

 

 

ತ್ರಿನೇತ್ರ ಅವ್ರೆ- ವಿಸ್ತೃತವಾಗಿ ಬರೆದಿರುವಿರಿ...

ಹಿಂದೆಯೂ ಈ ಕಾನೂನು ಜಾರಿಯಲ್ಲಿತ್ತು- ಈಗಲೂ ಹಲವು ಕಡೆ ಇದೆ-

ಫೈನ್ಕಟ್ಟಿದರೂ ಪರವಾಗಿಲ್ಲ ಅಂತ  ಗ್ಲಾಸ್ ಹಾಗೆ ಉಳಿಸಿಕೊಂಡಿರುವರು ಅಂತೆಲ್ಲಾ ಸೋಜಿಗದ ವಿಚಾರಗಳು ಗೊತ್ತಾಯ್ತು...  

 

ಜನತೆಯನ್ನು ಸುಳಿಯಾಲು ಒಳ್ಳೊಳ್ಲೆ ಕಾನೂನು ಜಾರಿ ಮಾಡುತ್ತಿರುವರು...!!

ಆದರೆ ಇದು ಬರೀ ಸಾಮಾನ್ಯ ಜನತೆಗೆ ಅಸ್ಟೆ- ಪುಡಾರೀಗಳಿಗೆ-ಅವರ ಹಿಂಬಾಲಕರಿಗೆ ಅಲ್ಲ..:((

ಅದನ್ನು ಕಂಡು ಸುಮ್ಮನಿರುವ ನಾವ್...:((

ಅದಕ್ಕೆ ನನಗೆ ಕೆಲವೊಮ್ಮೆ ನಗು ಬರುತ್ತೆ-ವ್ಯಥೆ ಆಗುತ್ತೆ...??

-------------------------------------------

ಕಾನೂನು ಎಲ್ಲರಿಗೂ ಒಂದೇ ಅನ್ನುವರಲ್ಲ-ಅದಕ್ಕೆ...!!

-------------------------------------------

ನಿಮ್ಮ ಪ್ರತಿಕ್ರಿಯೆ ನನಗೆ ಬಹು ಹಿಡಿಸಿತು...

ನಾವ್ ಅರಿಯದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ  ನನ್ನಿ

ಶುಭವಾಗಲಿ..


\|/

ತ್ರಿನೇತ್ರ ಶುಕ್ರ, 06/08/2012 - 14:43

ನಮಸ್ತೇ ವೆಂಕಟ್ ಅವರಿಗೆ, ತುಂಬಾ ಧನ್ಯವಾದಗಳು ನಾನು ತಿಳಿಸಿದ ಕೆಲವು ವಿಚಾರಗಳು ತಮಗೆ ಹೊಸದಾಗಿದ್ದವು ಹಾಗೂ ತಿಳುವಳಿಕೆ ಮೂಡಿಸಿದವು ಎಂದು ತಿಳಿದು ಸಂತಸವಾಗುತ್ತಿದೆ. ನಾನಂತೂ ನನ್ನ ಕಾರಿನ ಗಾಜುಗಳಿಗೆ ಹಾಕಿಸಿದ್ದ ಅರೆ ಪಾರಧರ್ಶಕ ಫಿಲಮ್ ಅನ್ನೂ ಅಂದೇ ತೆಗೆದು ಹಾಕಿಸಿದೆ, ಇಲ್ಲಿನ ಸುಡು ಬೇಸಿಗೆಯ ಬಿಸಿ ಟ್ರಾಫಿಕ್ ಪೋಲೀಸರ ದೌರ್ಜನ್ಯದ ಬಿಸಿಯ ಮುಂದೆ ಏನೇನೂ ಅಲ್ಲ. ಅವರು ಮನಸ್ಸು ಮಾಡಿದರೆ ಕೆಲಸ ಬಿಟ್ಟು ಕಾರೂ ಇಲ್ಲದೇ ವಾರಗಟ್ಟಲೆ ಕೋರ್ಟು ಕಛೇರಿ ಸುತ್ತಬೇಕಾದ ಅನಿವಾರ್ಯ ಸಂಧರ್ಭ ತಪ್ಪಿದ್ದಲ್ಲ. ಆ ರೀತಿ ತಲೆನೋವು ತಂದುಕೊಳ್ಳುವ ಬದಲು ನಿಯಮ ಪಾಲನೆಯಲ್ಲೇ ಒಳ್ಳೇದಿದೆ ಎಂದತರಿತು ಇಂದಿಗೂ ಯಾವ ತೊಂದರೆಯಿಲ್ಲದೇ ನಡೆಸುತ್ತಿದ್ದೇನೆ. -ತ್ರಿನೇತ್ರ.

ರಾಜೇಶ ಹೆಗಡೆ ಭಾನು, 06/10/2012 - 07:37

ನಮಸ್ಕಾರ ತ್ರಿನೇತ್ರ ಅವರೇ,

ಪ್ರತಿಕ್ರಿಯೆಗೆ ಧನ್ಯವಾದಗಳು :) ವೆಂಕಟ್ ಅವರು ಹೇಳಿದಂತೆ ಅನೇಕ ಹೊಸ ವಿಷಯಗಳು ತಿಳಿದವು.

ನಾನೂ ಸಹ ನನ್ನ ಕಾರಿನ ಸನ್ ಫಿಲಂ ತೆಗೆಸಿದ್ದೇನೆ. :)

ಇದು ಏಕಾಏಕೀ ತೆಗೆದುಕೊಂಡ ಆತುರದ ನಿರ್ಧಾರ ಅಂತ ನನಗೇನು ಅನ್ನಿಸುತ್ತಿಲ್ಲ.   ಸನ್ ಕಂಟ್ರೋಲ್ಡ್ ಫಿಲ್ಮ್ ನ್ನು ತೆಗೆಯುವುದು ನನ್ನ ಪ್ರಕಾರ ಅಷ್ಟೊಂದು ಸಮಂಜಸವೆನಿಸುತ್ತಿಲ್ಲವಾದರೂ, ಇದರಿಂದಾಗಿ ಆಗುತ್ತಿದ್ದ ಅನಾಹುತಗಳು ಕಮ್ಮಿಯಾದರೆ ಸಂತೋಷಕ್ಕೊಂದು ದಾರಿ ಸಿಕ್ಕಂತೆಯೇ ಸರಿ.. ಆದ್ರೆ  ಚಾಪೆ ಬಿಟ್ಟು ರಂಗೋಲಿ ಕೆಳಗೆ ನುಸುಳುಕೋಕೆ ಶುರುಮಾಡಿ ನಾವುಗಳು ಯಾವು ಕಾಲವಾಯಿತೋ..!???  ನಮ್ಮಂತಹವರಿಂದ ಅಥವಾ ನಮ್ಮಂತಹವರೇ ಇರುವ ಈ ದೇಶದ ಜನರಿಂದ  ಜಸ್ಟ್ ಸನ್ ಕಂಟ್ರೋಲ್ ಫಿಲ್ಮ್ ನ್ನು ತೆಗೆಯುವುದರಿಂದ ಅಪರಾಧ ತಡೆಯಬಹುದು ಎಂದು ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಅಂದಾಜಿಸಿರುವುದು ಸೋಜಿಗವೇ ಸರಿ.. ಆದ್ರೂ ಎಲ್ಲಾ ಅನಾನುಕೂಲಗಳ ನಡುವೆಯೂ , ಅನಾಹುತಗಳ ತಡೆಯಬಹುದೆನ್ನುವುದಾದರೆ,  ಕೈ ಜೋಡಿಸೋಣ.  

ರಾಜೇಶ ಹೆಗಡೆ ಭಾನು, 06/10/2012 - 07:34

ನಮಸ್ಕಾರ ಶ್ರೀನಿವಾಸ್ ಅವರೇ,

ಪ್ರತಿಕ್ರಿಯೆಗೆ ಧನ್ಯವಾದಗಳು :)

ಖಂಡಿತ ಅಪರಾಧ ಕಡಿಮೆ ಆಗುವದಾದರೆ ಇದಕ್ಕೆ ನನ್ನ ಬೆಂಬಲ ಇದ್ದೇ ಇದೆ.

ಕೆಎಲ್ಕೆ ಗುರು, 06/07/2012 - 14:32

ದೆಲ್ಲಿಯ ಹೈ ಕೋರ್ಟ್, ಅಲ್ಲಿಯ ಲೋಕಲ್ ಕೇಸೊಂದರ ತೀರ್ಪು ನೀಡುತ್ತ, ಸನ್-ಫಿಲ್ಮ ತೆಗೆಯುವ ನಿಯಮವನ್ನು ಭಾರತದ ಇತರ ರಾಜ್ಯಗಳಲ್ಲೂ ಜಾರಿಗೆ ತಂದರೆ ಒಳ್ಳೆಯದು ಎಂದು ಹೇಳಿದ ಒಂದೇ ಒಂದು ಸಾಲಿನ ನೆಪ ಮಾಡಿಕೊಂಡು; ನಮ್ಮವರೂ ಅದನ್ನು ಜಾರಿಗೆ ತಂದಿರುವುದು.....ತಮ್ಮ ಸ್ವಂತ ಹಿತಾಸಕ್ತಿಯೇ ವಿನಹ ಮತ್ತೇನಿಲ್ಲ.


 

ರಾಜೇಶ ಹೆಗಡೆ ಭಾನು, 06/10/2012 - 07:33

ನಮಸ್ಕಾರ ಕೆಲ್ಕೆ ಅವರೇ,

ಪ್ರತಿಕ್ರಿಯೆಗೆ ಧನ್ಯವಾದಗಳು :)

ಪಿಸುಮಾತು ಗುರು, 06/07/2012 - 15:19

ಅವಿವೇಕದ ನಿರ್ಧಾರ ಎಂದು ಹೇಳಲಾಗದು. ಸನ್‌ಫಿಲ್ಮ ಅನ್ನು ಸಂಪೂರ್ಣ ಹಾಕಬಾರದು ಎಂದು ನ್ಯಾಯಾಲಯ ಹೇಳಿಲ್ಲ. ಅದರ ಪಾರದರ್ಶಕತೆ ತ್ರಿನೇತ್ರ ಅವರು ಹೇಳಿರುವಂತೆ ಇರಬಹುದು. ಆದರೆ ಕಡುಗಪ್ಪು ಗಾಜು ಇರುವುದು ಉತ್ತಮವಲ್ಲ. ಇದರಿಂದ ಅನೇಕ ಕೃತ್ಯಗಳು ನಡೆದಿರುವುದು ನಿಜ. 

ರಾಜೇಶ ಹೆಗಡೆ ಭಾನು, 06/10/2012 - 07:32

ನಮಸ್ಕಾರ ಶ್ರೀಪತಿ ಅವರೇ,

ಧನ್ಯವಾದಗಳು ಪ್ರತಿಕ್ರಿಯೆಗೆ.

ಯಾವ ಫಿಲಂ ಕಡುಗಪ್ಪು ಯಾವುದು ಅಲ್ಲ ಎಂಬುದನ್ನು ಪರಿಶೀಲಿಸಿ ತೆಗೆಸಿದ್ದರೆ ಇನ್ನೂ ಉತ್ತಮವಾಗಿರುತಿತ್ತು. 

ಇನ್ನು ಸ್ವಲ್ಪ ದಿನ ಕಾದು ನೀಡಿ ಫಿಲಂ ಕಂಪನಿಗಳು ೫೦% ಪಾರದರ್ಶಕತೆ ಇರುವ ಪ್ರಮಾಣೀಕರಿಸಿದ ಫಿಲಂ ಗಳನ್ನು ಮಾರಲಾರಂಭಿಸಿದರೂ ಅದರಲ್ಲಿ ಆಶ್ಚರ್ಯ ವಿಲ್ಲ.

venkatb83 ಗುರು, 06/07/2012 - 16:47

 

 ಕಾರಣ ವಾಹನಗಳಲ್ಲಿ ಅನೈತಿಕ ಚಟುವಟಿಕೆಗಳು (ಕಿಡ್ನ್ಯಾಪ್, ಅತ್ಯಾಚಾರ ಇತ್ಯಾದಿ) ನಡೆಯಬಾರದು ಅದಕ್ಕೆ. ..

ಃ((( 

 

ಹಾಗಾದರೆ ಪಾರದರ್ಶಕ ಗಾಜಿನ ಕಾರು ವಾಹನದಲ್ಲಿ  ಅಪಹರಣ ಆ...ರ ನಡೆದರೆ ಪೊಲೀಸರಾಗಲಿ-ಜನರಾಗಲಿ ಕಾಪಾಡುವರೆ?....


ಅಥವಾ ಪಾರದರ್ಶಕ ಗಾಜು ಇದ್ದರೆ ಅದ್ಯಾವುದೂ ಆಗೋಲ್ಲವೇ...!! ದೇಶದ  ರಾಜಧಾನಿಯಲ್ಲಿ ಹಗಲು ಇರುಳಲ್ಲಿ ಕಣ್ಣೆದುರಿಗೆ ಅಪಹರಣ-.ಆ...ರ ನಡೆಯುತ್ತಿದ್ದರೂ ಕೈಲಾಗದೆ ಇರೋ ಪೊಲೀಸರು-...ಕೋರ್ಟು ತೀರ್ಪು ಅಂತ್ ಇದನ್ನು ಜಾರಿ ಮಾಡುವುದು ಹಾಸ್ಯಾಸ್ಪದ..
!

 

 

ಆದರೆ ಇದು ನಮ್ಮ ದೇಶದ ವಾತಾವರಣಕ್ಕೆ ಎಷ್ಟು ಅನುಕೂಲ? ಭಾರತ ದೇಶ ಉಷ್ಣ ಹವೆಯ ಪ್ರದೇಶ. ಇಲ್ಲಿ ಹೆಚ್ಚಿನ ಜಾಗದಲ್ಲಿ ಬಿಸಿಲು ತಡೆಯಲಾಗದಷ್ಟು ಇರುತ್ತದೆ, ಕೂಲಿಂಗ್ ಗ್ಲಾಸ್ ತೆಗೆದರೆ ಕಾರ್ ಒಳಗೆ ಬೇಸಿಗೆ ಕಾಲದಲ್ಲಿ ಒಳಗೆ ಕೂರುವದು ಅಸಾಧ್ಯ.

 

>>>ರಾಜೇಶ್ ಅವರು ಹೇಳಿದ ಹಾಗೆ ಈ ಬಿಸಿಲು ನಾಡಿಗೆ ಕಾಲದಲ್ಲಿ ಆ ತೀರ್ಪು ಕೊಡುವವರು ಪಾರದರ್ಸ್ಕ ಕಾರಿನಲ್ಲಿ ಒಳಗಡೆ ಹತ್ತು ನಿಮಿಷ ಕುಳಿತುಕೊಂಡು ತೀರ್ಪು ಕೊಟ್ಟಿದ್ದಾರೆ ಚೆನ್ನಿತ್ತು....!

 

ಅಷ್ಟೇ ಅಲ್ಲ ಅಪ್ಪಿ ತಪ್ಪಿ ಕಾರಿನ ಒಳಗೆ ನೀವೂ ಮರೆತು ಬಂದ ಮೊಬೈಲನ್ನೋ, ವಾಚನ್ನೋ ಅಥವಾ ಲ್ಯಾಪ್ ಟಾಪ್ ಅನ್ನೋ ಬಿಟ್ಟರೋ ದೇವರೇ ಕಾಪಾಡಬೇಕು. ನಿಮ್ಮ ಕಾರಿನಲ್ಲಿಟ್ಟ ಸಾಮಾನು ಕಳ್ಳರ ದೃಷ್ಟಿಗೆ ಬಿದ್ದಿರುತ್ತದೆ! ಇದೊಂದು ರೀತಿಯಲ್ಲಿ ಕಾರಿನಲ್ಲಿರುವವರ ಸುರಕ್ಷತೆಯ ಪ್ರಶ್ನೆ.

 

>>>ಇದರಿಂದ ಆಗುವ ಒಂದೇ ಉಪಯೋಗ ಅಂದ್ರೆ ನಾವ್-

ವಿಶ್ವನಾಥ್ ಆನಂದ್,

ತೆಂಡೂಲ್ಕರ್,

ಉಪೇಂದ್ರ-

ಐಶ್ವರ್ಯ ತರಹದ ಸೆಲೆಬ್ರಿಟಿಗಳನ್ನು ಪಾರದರ್ಶಕ ಗಾಜಿನ ಕಿಟಕಿಯ ಕಾರಿನ ಮೂಲಕ ಟ್ರಾಫಿಕ್ ಸಿಗ್ನಲ್ಲಲ್ಲಿ ನೋಡಬಹುದು...:())

 

ಕಳ್ಳರಿಗೆ- ಶೂಟರ್ ಗಳಿಗೆ ಒಳ್ಳೇ ಚಾನ್ಸ್...!!

 

ನಮ್ಮ ದೇಶದ ಕೆಲವು ಹಳೆಯ-ಹೊಸ ರೂಲ್ಸ್ ಗಳು ನೆನೇದರೆ '.....ದೇ ಇರದು...

ಕೆಲವರಾದರೂ ಈ ತೀರ್ಪು ವಿರುದ್ಧ ಅಪೀಲು ಮಾಡಬಹುದಿತ್ತಲ್ಲ///

 

ರಾಜೇಶ್ ಅವ್ರೆ ಸಕಾಲಿಕ ಲೇಖನ...

ಕೆಲವೇ ಸಾಲುಗಳಲ್ಲಿ ಸಖತ್ ಆಗಿ ಬರೆದಿರುವಿರಿ...

 

ಶುಭವಾಗಲಿ..

 

ನನ್ನಿ

 

 

\|/

Ravindranath.T.V. ಶುಕ್ರ, 06/08/2012 - 13:55

ರಾಜೇಶ್,


ಸನ್ ಫಿಲಂ ಬಗ್ಗೆ ನಿಮಗೆ ತುಂಬಾ ತಪ್ಪು ತಿಳುವಳಿಕೆಯಿದೆ. ಭಾರತದ ಸುಪ್ರಿಂ ಕೋರ್ಟು ನ್ಯಾಯಾಧೀಶರು  ವಿಚಾರಿಸದೇ, ವಿವೇಕವಿಲ್ಲದೇ ಸುಮ್ಮಸುಮ್ಮನೆ ಸಹಿ ಮಾಡುವವರಲ್ಲ,


ಹತ್ತಾರು ಬಾರಿ ಯೋಚಿಸಿ ಯೋಚಿಸಿ, ಸಹೋದ್ಯೋಗಿಗಳೊಡನೆ ಧೀರ್ಘ ಸಮಾಲೋಚನೆ ಮಾಡಿದ ನಂತರವೇ ತೀರ್ಮಾನಕ್ಕೆ ಬಂದು ಕಡತಕ್ಕೆ ಸಹಿ ಹಾಕಿರುತ್ತಾರೆ, ಭಾರತದ ಕಾನೂನು


ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಹೇಳಿದ್ದಾರೆ, ಕೆಲವು ಕಡೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ನಿಜವಾದರೂ ನಾವು


ದೇಶದ ಸುಪ್ರಿಂ ಕೋರ್ಟು ನ್ಯಾಯಾಧೀಶರು ನೀಡಿರುವ ಆದೇಶವನ್ನು ಗೌರವಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಹಾಗೂ ಜವಾಬ್ದಾರಿ. ಈ ಕಾನೂನು ಕೇವಲ


ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ಇಡೀ ಭಾರತಕ್ಕೆ ಅನ್ವಯಿಸುವುದರಿಂದ ಯಾರು ಏನು ಮಾಡಲಾಗದು.


                         ದಯವಿಟ್ಟು ಅರ್ಥಮಾಡಿಕೊಂಡು ಲೇಖನಗಳನ್ನು ಬರೆಯಿರಿ, ನಿಮ್ಮ ಮನಸ್ಸಿಗೆ ತೋಚಿದ್ದನ್ನು ಬರೆದು ಬೇರೆಯವರು ಕಾನೂನಿನ ಬಗ್ಗೆ ಅಪಹಾಸ್ಯ ಮಾಡದಂತೆ ಮುಂದೆ


ನೋಡಿಕೊಳ್ಳಿ. ವೆಂಕಟ್ ಬಿ೮೩ ಹೇಳಿರುವಂತೆ ಭಾರತ ಉಷ್ಣವಲಯವಲ್ಲ, ಸಮಶೀತೋಷ್ಣವಲಯ. ಬಹುಶಃ ಕೆಲವರಿಗೆ ಭಾರತದ ಭೌಗೋಳಿಕದ ಅರಿವಿಲ್ಲವೆಂದರೆ ತಪ್ಪಲ್ಲ.


                 ಯಾವುದೇ ವಾಹನಗಳಲ್ಲಿ ತುಂಬಾ ಬೆಲೆ ಬಾಳುವ ವಸ್ತುಗಳನ್ನಿಡುವ ಅಥವಾ ಹೆಚ್ಚು ನಗದು ಹಣವನ್ನಿಡುವುದು ತಪ್ಪು ಮಾಡಬೇಡಿ.ಇತರರಿಗೂ ತಿಳಿಸಿ.


ಉಪಸಂಹಾರಃ ೧)ಒಂದು ಕಾರನ್ನು ಮಾರಿ ಅಥವಾ ದಂಡ ಕಟ್ಟಿ. ೨) ಬುದ್ದಿವಂತರಾಗಿ ಕಾನೂನನ್ನು ಪಾಲಿಸಿ.


                    ಇದರ ಬಗ್ಗೆ ನೇರ ವಾದಕ್ಕೆ ನೇರವಾದ ಆಹ್ವಾನವಿದೆ.


                                              ರವೀಂದ್ರನಾಥ್.ಟಿ.ವಿ. ( ರವಿಚಂದ್ರವಂಶ್) ೯೮೪೫೦ ೦೭೦೬೦

ರಾಜೇಶ ಹೆಗಡೆ ಭಾನು, 06/10/2012 - 07:26

ನಮಸ್ಕಾರ ರವೀಂದ್ರನಾಥ್,

 

ನಾನು ಲೇಖನದಲ್ಲಿ ಈ ಸನ್ ಫಿಲಂ ಅನ್ನು ತೆಗೆಸುವದರಿಂದ ಜನಸಾಮಾನ್ಯರಿಗೆ ಆಗುವ ಅನಾನುಕೂಲಗಳ ಬಗ್ಗೆ ಅನಿಸಿಕೆಗಳನ್ನು ಹೇಳಿದ್ದೇನೆ ಹೊರತು ಕಾನೂನಿನ ಅಪಹಾಸ್ಯ ಮಾಡಿಲ್ಲ.

ಕಾರಿನಲ್ಲಿ ಅನೇಕ ಬಾರಿ ಜನ ನಾನು ಹೇಳಿದ ವಸ್ತುಗಳನ್ನು ಮರೆಯುತ್ತಾರೆ. ಮರೆವಿಗೆ ಮದ್ದಿಲ್ಲ ಬಿಡಿ. ಇನ್ನೂ ಅನೇಕ ಬಾರಿ ಬೆಲೆ ಬಾಳುವ ಅಲ್ಲದಿದ್ದರೂ ಕೆಲವು ವಸ್ತುಗಳನ್ನು ನಾವು ಇಡಲೇ ಬೇಕಾಗುತ್ತದೆ ಎಂಬುದನ್ನು ಕಾರಿನ ಮಾಲಿಕನಾಗಿ ನಾನು ಬಲ್ಲೆ. ಉದಾಹರಣೆಗೆ ಎಲ್ಲಾದರೂ ಕಾರಲ್ಲಿ ಟೂರಿಗೆ ಹೋದಾಗ ಕಾರಲ್ಲಿ ಹತ್ತು ಚೀಲ ಇಟ್ಟು ಕೊಂಡು ಹೋಗಿರುತ್ತೀರಾ ಎಂದು ಭಾವಿಸಿ. ಆಗ ಇಳಿದ ಎಲ್ಲ ಕಡೆ ಅಷ್ಟೂ ಚೀಲ ಕಾರಿನಿಂದ ಇಳಿಸಿ ಹೊತ್ತು ಕೊಂಡು ತಿರುಗುತ್ತೀರಾ? ಅಥವಾ ಬಿಸಿಲು ತುಂಬಾ ಇದ್ದಾಗ ಕಾರನ್ನು ನೆರಳಲ್ಲಿ ನಿಲ್ಲಿಸಿಕೊಂಡು ಬಿಸಿಲು ಕಡಿಮೆ ಆಗಲಿ ಎಂದು ಕಾಯುತ್ತಿರುತ್ತೀರಾ?

ಸನ್ ಫಿಲಂ ತೆಗೆಸಿದ ಕಾರನ್ನು ೪೦-೪೫ ಡಿಗ್ರಿ ತಾಪಮಾನ ಮುಟ್ಟುವ ಉತ್ತರ ಕರ್ನಾಟಕ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಳಸುವದು ಒಳ್ಳೆಯ ಅನುಭವ ಖಂಡಿತ ಅಲ್ಲ.

ಖಂಡಿತ ಈ ಕಾನೂನನ್ನು ಈಗಾಗಲೇ ಪಾಲಿಸಿದ್ದೇನೆ. ನನ್ನ ವ್ಯಾಗನ್ ಆರ್ ಕಾರಿನ ಸನ್ ಫಿಲಂ ಅನ್ನು ತೆಗೆಸಿದ್ದೇನೆ. :) ಇದು ಅಪರಾದ ತಡೆಯಲು ಸಾಧ್ಯವಾಗುವದಾದರೆ ನನ್ನ ಬೆಂಬಲ ಇದ್ದೇ ಇದೆ.

ಮನಸ್ಸಿಗೆ ತೋಚುವದನ್ನು ಬರೆದು ಯಾರಿಗೂ ಅಪಹಾಸ್ಯ ಮಾಡುವ ಉದ್ದೇಶ ನನ್ನದಿಲ್ಲ. ಪ್ರಚಲಿತ ವಿಧ್ಯಮಾನದ ಬಗ್ಗೆ ಒಂದಿಷ್ಟು ಕನ್ನಡದಲ್ಲಿ ಬರೆದು ಕನ್ನಡದಲ್ಲಿ ಚರ್ಚೆ ಮಾಡುವಂತೆ ಮಾಡುವದೇ ನನ್ನ ಉದ್ದೇಶ. ಇದು ಕನ್ನಡದ ಬೆಳವಣಿಗೆಗೆ ಸಹಕಾರಿ. ಇದೇ ವಿಷಯದ ಬಗ್ಗೆ ಇಂಗ್ಲೀಷ್ ನಲ್ಲಿ ಲಕ್ಷಾಂತರ ಜನ (ಕನ್ನಡಿಗರೂ ಸೇರಿ) ಚರ್ಚಿಸಿದ್ದಾರೆ. ದಯವಿಟ್ಟು ತಪ್ಪು ತಿಳಿಯಬೇಡಿ. :)

Ravindranath.T.V. ಸೋಮ, 06/11/2012 - 09:47

ರಾಜೇಶ್,


             ನಿಮ್ಮ ಕಾರಿನ ಸನ್ ಫಿಲಂ ತೆಗೆದದ್ದು ಒಳ್ಳೆಯ ಬೆಳವಣಿಗೆ. ಮೊದಲು ನೀವು ಬದಲಾಗಿ ನಂತರ ಬೇರೆಯವರನ್ನು ಬದಲಾಯಿಸಿ, ನಿಮ್ಮ ಬರಹಗಳಿಂದ ಬೇರೆಯವರು ಕಾನೂನಿನ ಬಗ್ಗೆ ಅಪಹಾಸ್ಯ ಮಾಡಬಾರದು ಎಂದು ಹೇಳಿದೆನೆ ಹೊರತು ನೀವು ಅಪಹಾಸ್ಯ ಮಾಡಿದ್ದಿರಿ ಎಂದು ನಾನು ಹೇಳಿಲ್ಲ. ದಯವಿಟ್ಟು ನಾನು ಬರೆದುದನ್ನು ಮತ್ತೊಮ್ಮೆ ಒದಿ. ಭಾರತ ಎಂದಿಗೂ


ಸಮಶೀತೋಷ್ಣ ವಲಯವೇ ಹೌದು. ಎಲ್ಲೋ ಕೆಲವು ಭಾಗಗಳಲ್ಲಿ ಸೆಖೆ ಇರಬಹುದು.ಕೆಲವು ದಿನ ಅಥವಾ ತಿಂಗಳು ಮಾತ್ರ. ಬೇರೆಯವರ ಬಗ್ಗೆ ಅತಿಯಾದ ಕಾಳಜಿ ನಿಮಗೆ ಬೇಡ. ಲಕ್ಷಾಂತರ ಜನ ಆಹಾರವಿಲ್ಲದೇ, ಶುದ್ಧವಾದ ಕುಡಿಯುವ ನೀರಿಲ್ಲದೇ, ವೈದ್ಯಕೀಯ ಸವಲತ್ತುಗಳಿಲ್ಲದ ಲಕ್ಷ ಲಕ್ಷ ಕುಗ್ರಾಮಗಳಿವೆ ಬೇಕಿದ್ದರೆ ಅವುಗಳ ಬಗ್ಗೆ ಯೋಚಿಸಿ, ಭ್ರಷ್ಟಾಚಾರ ನಿಷೇಧದತ್ತ ಗಮನ ಹರಿಸಿ. ದೇಶದಲ್ಲಿ ಕೋಟಿ ಕೋಟಿ ಸಾಮಾನ್ಯ ಜನರು ಪಡಬಾರದ ಪಾಡುಗಳನ್ನು ಅನುಭವಿಸುತ್ತಿದ್ದಾರೆ ಅವುಗಳ ಬಗ್ಗೆ ಒಳ್ಳೆಯ ಲೇಖನಗಳನ್ನು ಬರೆಯಿರಿ. ಅನಾವಶ್ಯಕ ವಿಷಯಗಳ ಬಗ್ಗೆ ಹೆಚ್ಚು ಹಾಗೂ ಅತಿಯಾದ ಗಮನ ಬೇಡ. ನನಗೂ ದೇಶದ ವಾಸ್ತವ ಸ್ಥಿತಿ ಗತಿಗಳ ಬಗ್ಗೆ ಅಪಾರ ಕಾಳಜಿ ಇದೆ. ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದೇನೆ. ಪತ್ರಿಕೆಗಳಲ್ಲಿ ಕೆಲವು ಬರಹಗಳು ಮುದ್ರಿತವಾಗಿವೆ. ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.ಹಾಗೆಂದು ನಾನೇನು ಪಂಡಿತನಲ್ಲ. ನಿಮಗೆ ಅನುಭವದ ಕೊರತೆ ಬಹಳವಾಗಿದೆ. ಮೊದಲಿಗೆ ಒಳ್ಳೆಯ ಮಾರ್ಗದರ್ಶಕರ ಸಹಾಯ ಅವಶ್ಯವಿದೆ.  


                          ರವೀಂದ್ರನಾಥ್.ಟಿ.ವಿ. (ರವಿಚಂದ್ರವಂಶ್ )  

ರಾಜೇಶ ಹೆಗಡೆ ಭಾನು, 06/10/2012 - 07:28

ಧನ್ಯವಾದಗಳು ವೆಂಕಟ ಅವರೇ,  ನಿಮ್ಮ ಪ್ರತಿಕ್ರಿಯೆಗೆ :)

Suresh, Kuwait (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/11/2012 - 13:10

ರಾಜೇಶ್ ರವರ ಬಿಸಿಲಿನ ಕಳಕಳಿ ಅರ್ಥವಾಗುತ್ತದೆ. ಆದರೆ "ನೆಗಡಿ ಆಯ್ತು ಅಂತಾ ಮೂಗನ್ನೇ ಕೊಯ್ಕೊಂಡ್ರೆ ಹೇಗಿರುತ್ತೇ?" ಎಂಬುವ ಉದಾಹರಣೆಯ ಅರ್ಥ ಸರಿಹೋಗಲಿಲ್ಲ ಎನಿಸುತ್ತಿದೆ. ಇಲ್ಲಿ ಸುಪ್ರೀಂ ಕೋರ್ಟ್ "ಕಾರು ವಾಹನಗಳನ್ನೇ ಬಹಿಷ್ಕರಿಸಿಲ್ಲ" ಇಲ್ಲಿ ನೆಗಡಿ ಬರದಂತೆ ಮುಂಜಾಗ್ರತೆವಹಿಸಲು ಸೂಚಿಸಿದೆಯಷ್ಟೇ. ಸುಪ್ರೀಂ ಕೋರ್ಟ್ ನ  ಈ ತೀರ್ಪು ಶ್ಲಾಘನೀಯವೇ. ಏಕೆಂದರೆ ಇದರಿಂದ ಸ್ವಲ್ಪ ಮಟ್ಟಿಗಾದರೂ ಅಪರಾಧಗಳು ಕಡಿಮೆಯಾಗಬಹುದು. ಇಲ್ಲಿ ಸ್ವಲ್ಪ ಪ್ರತಿಕ್ರಿಯೆಗಳು "ಕಾರು ಪಾರದರ್ಶಕವಾದರೆ ಪೊಲೀಸರು ಎಲ್ಲ ಅಪರಾಧಗಳನ್ನೂ ತಡೆಗಟ್ಟುತ್ತಾರೆಯೇ" ಎಂದಿದೆ. ಇದು ಒಂದು ಮುನ್ನೆಚ್ಚರಿಕೆ ಹಾಗು ದುಷ್ಕರ್ಮಿಗಳ ಹಾವಳಿಗೆ ಹಿನ್ನಡೆಯಷ್ಟೇ . ಕೆಲವರು ಅಪರಾಧ ಮಾಡಲೇ ಹಿಂಜರಿಯಬಹುದು, ಹಲವರು ಬೇರೆಯವರ ಗಮನ ಸೆಳೆದು ಸಿಕ್ಕಿ ಬೀಳಬಹುದು (ಪೋಲೀಸರಷ್ಟೇ ಇದಕ್ಕೆ ಹೊಣೆಗಾರರಲ್ಲ. ಪ್ರತಿಯೊಬ್ಬ ನಾಗರೀಕನ ಹೊಣೆಗಾರಿಕೆ ಇದರಲ್ಲಿದೆ), ಮತ್ತೆ ಕೆಲವರು ತಪ್ಪಿಸಿಯೂಕೊಳ್ಳಬಹುದು. ಆದರೆ ಫಲಿತಾಂಶವಂತೂ ಗಣನೀಯ. ಈ ತೀರ್ಪಿನಿಂದ ೧ ರಿಂದ ೧೦ ಪ್ರತಿಶತ ಹೆಣ್ಣು ಮಕ್ಕಳು ಇಂತಹ ಅಪರಾಧಗಳಿಗೆ ಬಲಿಯಾಗದಿದ್ದರಷ್ಟೇ ಸಾಕು!  ಇದರ ಮುಂದೆ ಸಣ್ಣ ಪುಟ್ಟ ಕಳ್ಳತನ, ಮರೆಗುಳಿ ದುರಭ್ಯಾಸ ಮತ್ತು ಬಿಸಿಲಿನ ಸಮಸ್ಯೆಗಳೆಲ್ಲಾ ಗೌಣ.

ಕಡೆಯ ಮಾತು: ನಾನು ಕುವೈತ್ನಲ್ಲಿ ಇರುವುದು. ಇಲ್ಲಿ ಕೂಡ sunfilm not  allowed ಹಾಗೂ ಇಲ್ಲಿ ನಾವು ಅನುಭವಿಸುವುದು ಬೇಸಿಗೆಯಲ್ಲ... ರಣ ಬೇಸಿಗೆ!

Suresh, Kuwait (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/12/2012 - 11:01

ರಾಜೇಶ್ ರವರ ಬಿಸಿಲಿನ ಕಳಕಳಿ ಅರ್ಥವಾಗುತ್ತದೆ. ಆದರೆ "ನೆಗಡಿ ಆಯ್ತು ಅಂತಾ ಮೂಗನ್ನೇ
ಕೊಯ್ಕೊಂಡ್ರೆ ಹೇಗಿರುತ್ತೇ?" ಎಂಬುವ ಉದಾಹರಣೆಯ ಅರ್ಥ ಸರಿಹೋಗಲಿಲ್ಲ ಎನಿಸುತ್ತಿದೆ.
ಇಲ್ಲಿ ಸುಪ್ರೀಂ ಕೋರ್ಟ್ "ಕಾರು ವಾಹನಗಳನ್ನೇ ಬಹಿಷ್ಕರಿಸಿಲ್ಲ" ಇಲ್ಲಿ ನೆಗಡಿ ಬರದಂತೆ
ಮುಂಜಾಗ್ರತೆವಹಿಸಲು ಸೂಚಿಸಿದೆಯಷ್ಟೇ. ಸುಪ್ರೀಂ ಕೋರ್ಟ್ ನ  ಈ ತೀರ್ಪು ಶ್ಲಾಘನೀಯವೇ.
ಏಕೆಂದರೆ ಇದರಿಂದ ಸ್ವಲ್ಪ ಮಟ್ಟಿಗಾದರೂ ಅಪರಾಧಗಳು ಕಡಿಮೆಯಾಗಬಹುದು. ಇಲ್ಲಿ ಸ್ವಲ್ಪ
ಪ್ರತಿಕ್ರಿಯೆಗಳು "ಕಾರು ಪಾರದರ್ಶಕವಾದರೆ ಪೊಲೀಸರು ಎಲ್ಲ ಅಪರಾಧಗಳನ್ನೂ
ತಡೆಗಟ್ಟುತ್ತಾರೆಯೇ" ಎಂದಿದೆ. ಇದು ಒಂದು ಮುನ್ನೆಚ್ಚರಿಕೆ ಹಾಗು ದುಷ್ಕರ್ಮಿಗಳ
ಹಾವಳಿಗೆ ಹಿನ್ನಡೆಯಷ್ಟೇ . ಕೆಲವರು ಅಪರಾಧ ಮಾಡಲೇ ಹಿಂಜರಿಯಬಹುದು, ಹಲವರು ಬೇರೆಯವರ
ಗಮನ ಸೆಳೆದು ಸಿಕ್ಕಿ ಬೀಳಬಹುದು (ಪೋಲೀಸರಷ್ಟೇ ಇದಕ್ಕೆ ಹೊಣೆಗಾರರಲ್ಲ. ಪ್ರತಿಯೊಬ್ಬ
ನಾಗರೀಕನ ಹೊಣೆಗಾರಿಕೆ ಇದರಲ್ಲಿದೆ), ಮತ್ತೆ ಕೆಲವರು ತಪ್ಪಿಸಿಯೂಕೊಳ್ಳಬಹುದು. ಆದರೆ
ಫಲಿತಾಂಶವಂತೂ ಗಣನೀಯ. ಈ ತೀರ್ಪಿನಿಂದ ೧ ರಿಂದ ೧೦ ಪ್ರತಿಶತ ಹೆಣ್ಣು ಮಕ್ಕಳು ಇಂತಹ
ಅಪರಾಧಗಳಿಗೆ ಬಲಿಯಾಗದಿದ್ದರಷ್ಟೇ ಸಾಕು!  ಇದರ ಮುಂದೆ ಸಣ್ಣ ಪುಟ್ಟ ಕಳ್ಳತನ, ಮರೆಗುಳಿ
ದುರಭ್ಯಾಸ ಮತ್ತು ಬಿಸಿಲಿನ ಸಮಸ್ಯೆಗಳೆಲ್ಲಾ ಗೌಣ.

ಕಡೆಯ ಮಾತು: ನಾನು ಕುವೈತ್ನಲ್ಲಿ ಇರುವುದು. ಇಲ್ಲಿ ಕೂಡ sunfilm not  allowed ಹಾಗೂ ಇಲ್ಲಿ ನಾವು ಅನುಭವಿಸುವುದು ಬೇಸಿಗೆಯಲ್ಲ... ರಣ ಬೇಸಿಗೆ!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/12/2012 - 22:22

ಸನ್ ಪಿಲ್ಮ್ ತೆಗೆಯುವ ಕಾನೂನು ಸಂಪೂರ್ಣ ಜಾರಿಯಾಗಲಿ,ಕಾಲವೆ ಅದಕ್ಕೆ ತಕ್ಕ ಉತ್ತರ ಹೇಳುತ್ತದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.