ಹೂ ಗಿಡ
ದಿನವೂ ದೇವರ ಪೂಜೆಗೆಂದು ಮನೆಯ ಹಿಂದೆಯಿರುವ ಗಿಡದಲ್ಲಿ ಹೂ ಕೀಳುವುದು ನನ್ನ ಅಭ್ಯಾಸ. ಕಳೆದ ಕೆಲವು ವರ್ಷಗಳಿಂದಲೂ ಇದು ನನ್ನ ಪ್ರತಿ ದಿನದ ಬೆಳಗಿನ ಮತ್ತು ಇಷ್ಟವಾದ ಕೆಲಸ. ಇರುವುದು ಒಂದೇ ಗಿಡವಾದರೂ ಸಾಕಷ್ಟು ಹೂ ಬಿಡುತ್ತದೆ. ಕೆಲವೂಮ್ಮೆ ಮನೆಗೆ ಹೂ ಕೂಡುವವಳು "ಕೈ" ಕೂಟ್ಟಾಗಲಂತು ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ಅಂದ ಹಾಗೆ ಯಾವ ಹೂವಿನ ಗಿಡ ಎಂದು ಕೇಳಲು ಮರೆತಿದ್ದೆ...."ಕೆಂಪು ದಾಸವಾಳದ ಗಿಡ".
ಈ ಗಿಡದ ವಿಶೇಷವೆನಂದರೆ, ಇದಕ್ಕೆ ಕಾಲದ ಮಿತಿಯಿಲ್ಲ. ಕೆಲವೂಮ್ಮೆ ಸಂಖ್ಯೆಗಳು ಕಡಿಮೆಯಾಗಬಹುದು ಅಷ್ಟೆ, ಆದರೆ ಎಲ್ಲ ಕಾಲದಲ್ಲು ಹೂ ಬಿಟ್ಟು ಕಂಗೂಳಿಸುತ್ತದೆ. ಇತ್ತೀಚೆಗೆ ನಾನು ಗಮನಿಸಿದ ಅಂಶವೆನೇಂದರೆ, ಹೂ ಕೀಳಲು ಹೋಗುವ ಸಂಧರ್ಭದಲ್ಲಿ, ಕೆಂಪು ಹೂವಿನಿಂದ ಬೀಗುತ್ತ ಬಳಿಗೆ ಬಾ ಎಂದು ಕರೆಯುತ್ತಿದ್ದ "ಗಿಡ" ಹೂಗಳನ್ನು ಕಿತ್ತು ಹೋಗುವ ಸಂಧರ್ಭದಲ್ಲಿ ಏನೋ ಕಳೆದುಕೂಂಡಂತೆ ಬೇಸರವಾದಂತೆ ಭಾಸವಾಗಲಾರಂಭಿಸಿತು. ಎಷ್ಟೂ ಬಾರಿ ನಾನು ಅದರ ಕಡೆ ಮತ್ತೆ ತಿರುಗಿಯೂ ನೋಡದೆ, ಹಾಗೆಯೇ ಹೋದ ದಿನಗಳೆ ಹೆಚ್ಚು. ಅದರ ಕೆಲಸವೇ "ಹೂ" ಬಿಡುವುದು ನಾನು ಕೀಳಲೆಂದೇ ಎಂದು ಭಾವಿಸಿದ್ದೆ.
ಇತ್ತೀಚೆಗೆ ನನ್ನ ಆಲೋಚನೆಗಳು ಬದಲಾಗಲಾರಂಭಿಸಿದೆ. ಗಿಡದ ಹೂಗಳನ್ನು ಕಿತ್ತು ದೇವರಿಗೆ ಕೊಡುವುದು ಎಂತಹ ನ್ಯಾಯ! ಹೀಗೆ ಮಾಡಿದರು ದೇವರು ಮೆಚ್ಚಬೇಕಾದ್ದು ಗಿಡವನ್ನೆ ಅಲ್ಲವೆ? ನಾನು ಅದನ್ನು ಕಿತ್ತು ದೇವರ ಮುಂದೆ ಇಟ್ಟ ಮಾತ್ರಕ್ಕೆ ನಮಗೆ ಒಳ್ಳೆಯದು ಮಾಡು ಎಂದು ಕೇಳುವುದು ಎಷ್ಟು ಸರಿ? ಒಂದು ದಿನವಾದರು "ಗಿಡ" ದ ಪರವಾಗಿ ಪ್ರಾರ್ಥನೆ ಮಾಡಲಿಲ್ಲವಲ್ಲ ಎಂದು ಬೇಸರವಾದದ್ದು ಮಾತ್ರ ನಿಜ.
ಮತ್ತೋಂದು ಆಲೋಚನೆಯ ಪ್ರಕಾರ "ಹೂವಿನ" ಆಯಸ್ಸು ಕೇವಲ ಒಂದು ದಿನ ಮಾತ್ರ. ಆ ದಿನ ಹೆಣ್ಣಿನ ಮುಡಿ ಅಥವ ದೇವರ ಪಾದ ಸೇರಿದರಷ್ಟೆ ಅದು ಧನ್ಯ ಎಂದು ಹೇಳುವುದನ್ನು ಕೇಳಿದ್ದೇನೆ. ನಾವೀಗ ಯೋಚನೆ ಮಾಡಬೇಕಾಗಿರುವುದು "ಗಿಡ" ಗಳ ಬಗ್ಗೆಯೂ ಅಥವ ಅದರಲ್ಲಿ ಬೆಳೆದ "ಹೂ" ವಿನ ಬಗ್ಗೆಯೂ !! ಇದು ಒಂದು ಧರ್ಮ ಸಂಕಟವೆ ಸರಿ.
ಇಷ್ಟೆಲ್ಲ ಆದರು "ಹೂ" ಕೀಳುವುದನ್ನು ಮಾತ್ರ ಬಿಟ್ಟಿಲ್ಲ. ಗಿಡದ ಎಲ್ಲ ಹೂಗಳನ್ನು ಕೀಳದೆ, ಕೆಲವು ಹೂಗಳನ್ನು ಗಿಡದಲ್ಲಿಯೇ ಬಿಟ್ಟು, ಅದಕ್ಕೆ ಪೂಜೆ ಮಾಡಿದೆನೆಂದು ಭಾವಿಸಿ ನಿತ್ಯದ ಕೆಲಸದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೂಂಡಿದ್ದೇನೆ. ಮತ್ತೆ ತಿರುಗಿ ನೋಡಿ....ಅದಕ್ಕೆ ಬೇಸರವಾಗಿಲ್ಲ ಎಂದು ಖಾತ್ರಿ ಪಡಿಸಿಕೂಳ್ಳುತ್ತೆನೆ.
ಗಿಡ ಮರಗಳಿಗೆ ಜೀವವಿದೆ ಎಂದು ಪ್ರತಿಪಾದಿಸಿದ ವಿಜ್ಙಾನಿ ಹುಟ್ಟಿದ ದೇಶದಲ್ಲಿ ಹುಟ್ಟಿದ ನಾವುಗಳಾದರು ಇದನ್ನು ಪಾಲಿಸಬೇಕೆಂಬುದೆ ನನ್ನ ಬಯಕೆ.
ಸಾಲುಗಳು
- Add new comment
- 1294 views
ಅನಿಸಿಕೆಗಳು
A very good artcile. I
A very good artcile. I remember other 2 articles which talks about the similar topic- one written by Brazilian author Paulo Coelho and other written by Belagere Krishnashastry about Shree Mukundooru Swamiji. Paulo concludes that it all happens as per God's own plans and we are just pawns in his hand, quoting Bhagavadgita. Belagere Krishnashastry says Swamiji used to pluck only a few flowers and that too after a "request" with the tree.
ನಮಸ್ಕಾರ ಮಧುರೇಶ್ ಅವರೇ, ವಿಸ್ಮಯ
ನಮಸ್ಕಾರ ಮಧುರೇಶ್ ಅವರೇ,
ವಿಸ್ಮಯ ನಗರಿಗೆ ಹಾರ್ಧಿಕ ಸ್ವಾಗತ.
ದಯವಿಟ್ಟು ಕನ್ನಡದಲ್ಲಿ ಬರೆಯಿರಿ. ನಿಮ್ಮ ವಿಸ್ಮಯ ನಗರಿ ನೇರ ಕನ್ನಡ ಟೈಪಿಂಗ್ ವ್ಯವಸ್ಥೆ ಹೊಂದಿದೆ. ಅದನ್ನು ಬಳಸಿ. ಯಾವುದೇ ಸಾಫ್ಟವೇರ್ ಇನ್ಸ್ಟಾಲ್ ಮಾಡುವ ಅಗತ್ಯ ಇಲ್ಲ! ಇಲ್ಲಿ ವಿಸ್ಮಯ ಕೀಲಿಮಣೆ ವಿನ್ಯಾಸದ ಬಗ್ಗೆ ಓದಿರಿ.
ಕನ್ನಡ ತಾಣ ಒಂದರಲ್ಲಿ ಕನ್ನಡ ಲೇಖನ ಓದಿ ಕನ್ನಡದಲ್ಲಿ ಪ್ರತಿಕ್ರಿಯೆ ಮಾಡಿದರೆ ಎಷ್ಟು ಚೆನ್ನ ಅಲ್ವಾ?
ಬನ್ನಿ ಕನ್ನಡ ಬಳಸೋಣ. ಕನ್ನಡ ಬೆಳೆಸೋಣ. :)
ಉತ್ತಮ ಆಲೋಚನೆ ಹಾಗೂ ಲೇಖನಕ್ಕೆ
ಉತ್ತಮ ಆಲೋಚನೆ ಹಾಗೂ ಲೇಖನಕ್ಕೆ ಧನ್ಯವಾದಗಳು...... ಹೂ ತುಂಬಿನಿಂತ ಗಿಡ ನೋಡಲು ಕಣ್ಣಿಗೆ ಹಬ್ಬ, (ಇಷ್ಟೆಲ್ಲ ಆದರು "ಹೂ" ಕೀಳುವುದನ್ನು ಮಾತ್ರ ಬಿಟ್ಟಿಲ್ಲ. ಗಿಡದ ಎಲ್ಲ ಹೂಗಳನ್ನು ಕೀಳದೆ, ಕೆಲವು ಹೂಗಳನ್ನು ಗಿಡದಲ್ಲಿಯೇ ಬಿಟ್) ಕೆಲವು ಹೂಗಳನ್ನು ಬಿಡಿಸಿ ಹಲವನ್ನು ಅಲ್ಲಿಯೇ ಬಿಡಿ. ದೇವರು ಹೂ ಇಲ್ಲದೆ ನಮ್ಮ ಪ್ರಾರ್ಥನೆ ಆಲಿಸಬಲ್ಲ. ಅಲ್ಲವೇ ... ಹೂಗಳನ್ನು ಗಿಡದಿಂದ ಕೀಳಬೇಡಿ ಮೆಲ್ಲಗೆ ಬಿಡಿಸಿ.
ಉತ್ತಮವಾದ ಆಲೋಚನೆ. ದೇವರಿಗೆ ಹೂವು
ಉತ್ತಮವಾದ ಆಲೋಚನೆ. ದೇವರಿಗೆ ಹೂವು ಮುಡಿಸುವುದು ಕೂಡಾ (ದೇವರ ಕಿವಿ ಮೇಲೂ ಹೂವಿಡುತ್ತಾರೆ) ಲಂಚದ ಒಂದು ರೂಪ. ಎಲ್ಲರೂ ಲೇಖನವನ್ನು ಅರ್ಥ ಮಾಡಿಕೊಳ್ಳಬೇಕು.
ಹೂವಿನ ಗಿಡದಿಂದ ಹೂವು ಕಿತ್ತರೆ
ಹೂವಿನ ಗಿಡದಿಂದ ಹೂವು ಕಿತ್ತರೆ ಹೂವಿನ ಗಿಡಕ್ಕೆ ನೋವಾಗುತ್ತೆ ಎಂದು ಯೋಚಿಸುವ ನಿಮ್ಮದು ಹೂವಿನಂತಹ ಮನಸ್ಸೇ ಸರಿ. ಖಂಡಿತ ಹೂವುಗಳನ್ನು ಸ್ವಲ್ಪವಾದರೂ ಗಿಡದ ಮೇಲೆ ಬಿಟ್ಟರೆ ಸೌಂದರ್ಯ ಹೆಚ್ಚುವದು, :)
ಪ್ರೀತಿಯ ನರಸಿಂಹ ರಾವ್, ನಿಮ್ಮ
ಪ್ರೀತಿಯ ನರಸಿಂಹ ರಾವ್,
ನಿಮ್ಮ ಲೇಖನ ಓದುತ್ತಿದ್ದಂತೆ ನಮ್ಮ ಗುರುಗಳಾದ ಸುಬ್ಬನಂಜುಂಡ ಶಾಸ್ತ್ರಿಯವರು ಹೇಳಿದ ಮಾತೊಂದು ನೆನಪಿಗೆ ಬಂತು.
" ನಾವು ದುಡ್ಡು ಕೊಟ್ಟು ತೆಗೆದುಕೊಂಡು ಅಥವಾ ಗಿಡದಿಂಡ ಕಿತ್ತ ಹೂ ಅರ್ಪಿಸಿದರೇ ಅದು ಭಕ್ತಿ ಎಂದು ತಿಳಿಯುವುದು ನಮ್ಮ ಮೂರ್ಖತನ. ಭೂಮಿಯ ಎಲ್ಲಾ ಕಾಡಿನಲ್ಲಿರುವ ಎಲ್ಲಾ ಮರಗಿಡಗಳಲ್ಲಿ ಅರಳುವ ಹೂವು, ಗಾಳಿಗೆ ತುಯ್ಯುವ ಹೂವು ಮತ್ತು ನೆಲದ ಮೇಲೆ ಬೀಳುವ ಹೂವು ಭಗವಂತನಿಗೇ ಸಮರ್ಪಿತವಾಗುತ್ತದೆ"
ಈ ಮಾತು ಇಲ್ಲಿ ಪ್ರಸ್ತುತ ಎನ್ನಿಸಿತು. ಉತ್ತಮ ಲೇಖನ ಸರ್
ಸಸ್ನೇಹ
ಬಾಲ ಚಂದ್ರ