Skip to main content

ನನ್ನ ಪ್ರೀತಿಗೆ ಸಾವಿಲ್ಲ ಅಂತ ನಾನು ನಂಬಿದ್ದೀನಿ

ಇಂದ lokesh
ಬರೆದಿದ್ದುFebruary 23, 2012
5ಅನಿಸಿಕೆಗಳು

ನನ್ ಬಗ್ಗೆ ಏನ್ ಹೇಳೋದು..?
ಯಾಕಂದ್ರೆ ೨೫ ವರ್ಷಗಳು ಆಗಿದ್ರೂ ನಾನು ಯಾರು..? ಏನು ಮಾಡಿದ್ದೀನಿ ಅನ್ನೋದು ನನಗೂ ಗೊತ್ತಿರದ ವಿಷಯ..
ಕೆಲವೊಂದು ಸರಿ ಪ್ರಪಂಚದಲ್ಲಿ ನನ್ನಷ್ಟು ಸುಖ ಜೀವಿ ಯಾರು ಇಲ್ಲ, ಎಲ್ಲಾ ಸಂತೋಷಗಳೂ ನನಗೇ ಸಿಕ್ಕಿದೆ ಅನ್ಸುತ್ತೆ, ಆದ್ರೆ ಇದ್ದಕ್ಕಿದ್ದ ಹಾಗೆ ನನ್ ಮನಸ್ಸು ನನ್ನ ಎಚ್ಚರಿಸುತ್ತೆ, ಕಲ್ಪನೆಗಳಿಗೂ ಒಂದು ಮಿತಿ ಇರ್ಬೇಕು ಇನ್ನು ನಿಲ್ಸು ಅಂತ.. ಒಂದೊಂದ್ಸರಿ ಕಲ್ಪನೆಗೂ ವಾಸ್ತವಕ್ಕೂ ವ್ಯತ್ಯಾಸನೇ ಗೊತ್ತಾಗಲ್ಲ..ಕನಸು ಕಾಣೋದು ಜಾಸ್ತಿ, ಆದ್ರೆ ಕನಸುಗಳಿಗೂ ಅರ್ಥ ಇರೋದಿಲ್ಲ. ಏನ್ ಕನಸು ಕಂಡೆ. ಯಾಕ್ ಕಂಡೆ. ಅನ್ನೋದೂ ಗೊತ್ತಾಗಲ್ಲ.. ಇದ್ದಕ್ಕಿದ್ದ ಹಾಗೆ ಕನಸುಗಳೆಲ್ಲಾ  ಖಾಲಿ ಅನ್ಸುತ್ತೆ ಯಾಕೆ ಹೀಗಾಗೋದೆ. ನನಗೂ ಗೊತ್ತಿಲ್ಲ.. ಮೊದಲಿಂದಲೂ ಹೀಗೆ ಇದ್ದ್ನಾ. ಇಲ್ಲ್ವಲ್ಲಾ.. ಅಂದ್ರೂ ಈಗ ಯಾಕ್ ಹೀಗೆ.  ನಾ ಬಯಸೋದೆಲ್ಲಾ ಸಿಗ್ಲೇ ಬೇಕು ಅನ್ನೋ ಹಠ ಏನಿಲ್ಲ, ಆದ್ರೆ ನಾ ಬಯಸೋ ಪುಟ್ಟ ಪುಟ್ಟ ಆಸೆಗಳೂ ಕೈಗೂಡೋದಿಲ್ಲ್ವಲ್ಲ ಅನ್ನೋ ಕೋಪ, ನಿರಾಸೆ ಮಾತ್ರ ಬಿಡದೇ ಕಾಡುತ್ತೆ  ಇದೆಲ್ಲಾ ಯಾಕ್ ಹೀಗೆ  ಬಹುಷಃ ನಾನಿನ್ನೂ ಚಿಕ್ಕ ಹುಡುಗನೇ ಆಗಿದ್ದಿದ್ರೆ ಹೀಗೆಲ್ಲಾ ಆಗ್ತಿರ್ಲಿಲ್ಲ್ವೇನೋ. ಈಗಲೂ ನೆನಪಾಗುತ್ತೆ, ಬಾಲ್ಯದಲ್ಲಿ ಯಾವ ಚಿಂತೆಗಳೂ ಇಲ್ಲದೆ ಎಷ್ಟು ಸುಖವಾಗಿದ್ದೆ.. ಪ್ರೀತಿ ಅ೦ದರೆ ಏನು ಅಂತ ಗೊತ್ತೇ ಇರ್ಲಿಲ್ಲ.. ಬೇಸರ ಅನ್ನೋ ಪದದ ಅರ್ಥವೂ ಗೊತ್ತಿರ್ಲಿಲ್ಲ. ಸಂತೋಷವಾಗಿ ಹಕ್ಕಿಯಂತೆ ಹಾರಾಡ್ತಾ ಇದ್ದ ದಿನಗಳು ಮರೆಯಾಗಿರುವ ಬಾಲ್ಯ ಮರಳಿ ಬರೋದಿಲ್ಲ ಅನ್ನೋ ಸತ್ಯ ಗೊತ್ತಿದ್ರೂ ಮನಸ್ಸು ಮಾತ್ರ ಮತ್ತೆ ಮತ್ತೆ ಅದನ್ನೇ ಬಯಸಿ ನೆನೆಸಿಕೊಳ್ಳುತ್ತೆ.. ನೆನಪುಗಳು ಇಳಿ ಸಂಜೆಯಲಿ ಸುಳಿಯೋ ತಂಗಾಳಿಯಂತೆ, ಮುಂಜಾನೆಯಲಿ ಹೊಳೆವ ಮಂಜಿನ ಹನಿಯಂತೆ, ಎಷ್ಟೋ ವರ್ಷಗಳ ನಂತರ ಕೇಳಿದ ಮೆಚ್ಚಿನ ಹಾಡೊಂದರಂತೆ, ಮನಸ್ಸಿಗೆ ಮುದ ನೀಡುತ್ತೆ, ಒಮ್ಮೊಮ್ಮೆ ಅದೇ ಮನಸನ್ನ ಕಾಡುತ್ತೆ.. ಕಳೆದು ಹೋಗಿರೋದ್ರ ಬಗ್ಗೆ ಚಿಂತಿಸೋದು ಸರಿ ಅಲ್ಲ, ಎಲ್ಲವನ್ನು ಮರೆತು ನೆನಪುಗಳನ್ನೆಲ್ಲಾ ಮೂಟೆ ಕಟ್ಟಿ ಮುಂದಿನ ಬಗ್ಗೆ ಯೋಚಿಸೋಣ ಅನ್ಸುತ್ತೆ, ಆದ್ರೆ ನನ್ ಮನಸ್ಸು ಕೂಡಾ ನನ್ ಥರಾನೇ, ಈಗಿದ್ದ ಹಾಗೆಇನ್ನೊಂದ್ ಕ್ಷಣ ಇರೋದಿಲ್ಲ  ಇಂಥಾ ಯಡವಟ್ಟು ಮನಸ್ಸು ಇಟ್ಕೊಂಡು ನಾ ಮಾಡೋದಾದ್ರು ಏನು. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ನನ್ನ ಜೀವನ ಉತ್ತರವಿರದ ಪ್ರಶ್ನೆಗಳ ಸಂತೆ ನನ್ನ ಜೀವನದಲ್ಲಿ ಹಿಂದೆ ಏನಾಗಿತ್ತು, ಈಗ ಏನಾಗಿದೆ, ಮುಂದೆ ಏನಾಗುತ್ತೆ.  ಅಂತ ಹುಡುಕೋಕೆ ಹೋದ್ರೆ ಕಾಣೋದು ಬರೀ ಪ್ರಶ್ನಾರ್ಥಕ ಚಿಹ್ನೆಗಳೇ ಮನಸ್ಸು ತುಂಬ ದೊಡ್ಡದು ಏಕೆಂದರೆ ಅದು ಎಲ್ಲರಿಗು ಜಾಗ ಕೊಡುತ್ತದೆ ಆದರೆ ಹೃದಯ ತುಂಬ ಚಿಕ್ಕದು ಏಕೆಂದರೆ ಅದು ಒಬ್ಬರಿಗೆ ಮಾತ್ರ ಮೀಸಲಿಡುತ್ತದೆ ನಾನು ಒಳ್ಳೆಯವನೆ ಆದ್ರೂ ಸ್ವಲ್ಪಾ ತರ್ಲೆ ಹುಡುಗ .ಪ್ರೀತಿಗಾಗಿ ಪ್ರಾಣ ಕೊಡೊದಕ್ಕು ಸಿದ್ದ .ಪ್ರೀತಿ ಮಾತ್ರ ಬಿಡೊದಿಲ್ಲ. ನಾನು ಪ್ರೀತಿಗೆ ಚಿನ್ನ ಸ್ನೇಹಕ್ಕೆ ಸಿಪಾಯಿ ಸುಮ್ನಿದ್ರೆ ನಿಮ್ಮ ಪ್ರೀತಿಯ ರಾಮಾಚಾರಿ ತಿರುಗಿಬಿದ್ದ್ರೆ ರಣಧೀರ ನಿಮ್ಮೆಲ್ಲರ ನೆಚ್ಚಿನ ಪುಟ್ನಂಜ ಅಭಿಮಾನಿಗಳ ಹೃದಯವನ್ನಾಳೋ ಕನಸುಗಾರ  ಮಹಾತ್ಮ ಕಟ್ಟಿದ್ ದೇಶನ ರವಿಚಂದ್ರನ್ ಕಟ್ಟಿದ್ ಪ್ರೇಮಲೋಕ ಲೋಕೇಶ ಕಟ್ಟೋದ್ ಪ್ರೀತಿನ ಎಲ್ಲಿ ಕಾನೂನುಗಳಿರುತ್ತದೆಯೋ ಅಲ್ಲಿ ಪ್ರೀತಿಗೆ ಬೆಲೆ ಇರಲ್ಲ ಪ್ರೀತಿಯ ಉಸಿರಿನಲ್ಲಿ ನೀನು ಬಾಳುವುದಾದರೆ ಅಲ್ಲಿ ಕಾನೂನು ತಾನಾಗಿ ಸಾಯುತ್ತೇ  ನಿನ್ನ ಬಿಟ್ಟರೆ ನನಗೆ ಬೇರೆ ಏನೂ ತಿಳಿದಿರಲಿಲ್ಲ. ಖುಷಿಯಾದರೆ ಮೊದಲು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ, ದುಃಖವಾದರೆ ನಿನ್ನ ಮಡಿಲಲ್ಲಿ ಮಲಗಿ ಅಳುತ್ತಿದ್ದೆ. ನೀನು ಬಳಿಯಿದ್ದರೆ ನನ್ನ ಎಲ್ಲ ನೋವುಗಳನ್ನು ಮರೆಯುತ್ತಿದ್ದೆ. ಏನೇ ಆದರೂ ನೀನೊಬ್ಬಳಾದರೂ ನನ್ನೊಂದಿಗೆ ಯಾವಾಗಲೂ ಇರುತ್ತೀಯ ಎಂದು ನಂಬಿದ್ದೆ  ಆ ನಂಬಿಕೆಯೇ ಜೀವಿಸುವ ಉತ್ಸಾಹ ತಂದುಕೊಟ್ಟಿದ್ದು. ನೀನು ಬಳಿಯಿದ್ದರೆ ನನಗೆ ಈ ಪ್ರಪಂಚ ಎಷ್ಟು ಚಂದವೆನಿಸುತ್ತಿತ್ತು ಗೊತ್ತೇ  ನಿನಗೆ ಗೊತ್ತು ನಾನು ನಿನ್ನ ಪ್ರೀತಿಗಾಗಿ ಸತ್ತು ಬದುಕಿರುವೆನೆಂದು ನಿನ್ನೊಳಗೆ ನನ್ನ ಯಾವ ಅವಶೇಷವೂ ಉಳಿದಿಲ್ಲ ಅಂತ ಗೊತ್ತು ,ಆದರೂ ನಿನ್ನ ಪ್ರೀತಿಯ ನೆನಪುಗಳು ನನ್ನ ಬಿಡದೆ ಕಾಡಿಸಿ ಪೀಡಿಸಿ ಸಾಯಿಸುತ್ತಿವೆ  ನಾ ಮಾಡಿದ ಪಾಪವಾದರೂ ಏನೂ  ಎರಡು ವರ್ಷಗಳಿ0ದ ನಿನ್ನನ್ನು  ಪ್ರೀತಿಸಿದೆನಲ್ಲ ಅದಕ್ಕೆ ನೀನು ಕೊಟ್ಟ ಬೆಲೆ ಇಷ್ಟೇನಾ. ಇನ್ನೊಂದು ಜನ್ಮಾಂತ ಇದ್ದರೆ ನನ್ನವಳಾಗಿ ಹುಟ್ಟಿ ಬಾ ಅಂತ ಕರೆಯಲ್ಲ  ಯಾಕಂದ್ರೆ ಶಾಸ್ತ್ರದಲ್ಲಿರುವುದು ಈ ಜನ್ಮದಲ್ಲಿ ಮದುವೆಯಾದವನೇ ಇನ್ನೊಂದು ಜನ್ಮದಲ್ಲೂ ಗಂಡನಾಗಿ ಸಿಗಬೇಕೆಂದು ಆದ್ದರಿಂದ ನಾನು ಆ ರೀತಿ ಬೇಡಿಕೊಳ್ಳುವುದು ಮೂರ್ಖತನ  ನನ್ನ ಬದುಕಲ್ಲಿ ಮತ್ತೊಂದು ಹುಡುಗಿ ಬಂದರೂ ನಿನ್ನ ಮೇಲಿಟ್ಟುಕೊಂಡ ಪ್ರೀತಿನಾ ಅವಳ ಜೊತೆ ಹಂಚಿಕೊಳ್ಳಲು ಆಗಲ್ಲ ನಿನ್ನ ಸಂತೋಷಕ್ಕಿಂತ ಮಿಗಿಲಾದದ್ದು ಬೇರೆ ಯಾವುದು ಇಲ್ಲ ಚೆನ್ನಾಗಿರು ಎಲ್ಲರೂ ಕೊನೆಗೊಂದು ದಿನ ಈ ಜೀವನಕ್ಕೆ ಮುಕ್ತಾಯ ಹಾಡಲೇ ಬೇಕು ನಾನು ಈ ಲೋಕವನ್ನು ತ್ಯಜಿಸಿದಾಗ ನೀನು ಗೊಳೋ ಎಂದು ಅಳದಿದ್ದರೂ ನಿನ್ನ ಕಣ್ಣಂಚಲ್ಲಿ ಒಂದು ಹನಿ ಕಣ್ಣಿರು ಇಣುಕಿದರೆ ಸಾಕು ನನ್ನ ಪ್ರೀತಿಗೆ ಸಾರ್ಥಕ  ನಿಜವಾದ ಪ್ರೀತಿ ಅಂದ್ರೆ ಇಬ್ಬರು ಪರಸ್ಪರ ಅವರ ಆತ್ಮವನ್ನು ಪ್ರೀತಿಸುವುದು.ಆತ್ಮಕ್ಕೆ ಸಾವಿಲ್ಲ ಅನ್ನೋ ಸತ್ಯನ ಎಲ್ಲರೂ ನಂಬಿರೋ ಹಾಗೆ ನನ್ನ ಪ್ರೀತಿಗೆ ಸಾವಿಲ್ಲ ಅಂತ ನಾನು ನಂಬಿದ್ದೀನಿ ನನ್ನ ಹುಡುಗಿಯನ್ನ ನಾ ಸತ್ತ ಮೇಲೂ ಪ್ರೀತಿಸುತ್ತಿನಿ    ಪ್ರೀತಿಸಿದ ನನಗೆ ಕತ್ತಲೆ ಕೋಣೆಯಲ್ಲಿ ಹಣತೆ ಹಚ್ಚಿದ ಅನುಭವ,,, ಅ ಹುಡುಗಿ ನನ್ನ ಜೀವನವೆ೦ಬ ಹೈವೇಯಲ್ಲಿ ವೋಲ್ವೋ ಬಸ್ಸು ಹೋದ೦ಗಿತ್ತು ಪ್ರೀತಿ ನನಗಲ್ಲ ಎ೦ದುಕೊ೦ಡು ಜೀವನ ರೂಪಿಸಿಕೊಳ್ಳಲು ಆರ೦ಬಿಸಿದೆ. ಪ್ರೀತಿಯಿಲ್ಲದ ಜೀವನ , ಉಪ್ಪಿನಾಕಯಿಯಿಲ್ಲದ ಊಟದ೦ತಾಗಿತ್ತು ಇಲ್ಲಿ ಹಲವಾರು ಪ್ರೀತಿ ಹುಟ್ಟುತ್ತೆ ಪ್ರೇಮದ ರೆಕ್ಕೆ ಕಟ್ಟುತ್ತೆ,ಹಾಗೆ ಹಾರಾಡ್ತಾ ಹಾರಾಡ್ತಾ ಕಳಚಿ ಬಿದ್ದ ರೆಕ್ಕೆ ಅವರನ್ನ ಮತ್ತದೆ ಜಾಗದಲ್ಲಿ ಕೂರುವಂತೆ ಮಾಡುತ್ತೆ. ಇಷ್ಟ ಪಡುವ ಮೊದಲು ಅರ್ಹತೆ ಇರಬೇಕೆನಿಸಲಿಲ್ಲ ಪ್ರೀತಿ ಹುಟ್ಟುವ ಹೊತ್ತು ಅನುಮತಿ ಕೇಳಲಾಗಲಿಲ್ಲ ಜೊತೆ-ಜೊತೆಯಲಿ ಬದುಕು ಕಟ್ಟುವ ಕನಸುಗಳು ನಾ ಮಲಗುವವರೆಗು ಕಾಯಲಿಲ್ಲ  ಕವಿತೆಯ ಒಳ ನಡೆದವಳು  ಪದಗಳ ಎದೆ ಬಡಿದವಳು ಬರೆವ ಕೈ ಹಿಡಿಯಲಿಲ್ಲ ಅಲ್ಪತೃಪ್ತನೀ ಹುಡುಗ ನಾನು ಕನಸು ಕಾಣುವುದ ಬಿಡಲಿಲ್ಲ  ನೀನು ಬಿಟ್ಟು ಹೋದಾಗಿನಿಂದ ನಿನ್ನ ಪ್ರತಿ ಕ್ಷಣ ನೆನಪಾಗುತ್ತೆ. ನೀನಂದು ನನ್ನ ಹೃದಯಕ್ಕೆ ಮಾಡಿದ ಗಾಯ ಇನ್ನೂ ನೋಯ್ತಾನೇ ಇದೆ ವಸ್ತು ಕಳೆದು ಹೋದಮೇಲೇನೇ ಅದರ ಬೆಲೆ ಗೊತ್ತಾಗೋದು ಹಾಗೇನೇ ಹುಡುಗಿ ಕೈ ಕೊಟ್ಟ ಮೇಲೇನೇ ಎಣ್ಲೆಯ ರುಚಿ ಹತ್ತೋದು  ಪ್ರಪಂಚದಲ್ಲಿ ಯಾರು ಯಾರನ ಬೇಕಾದರು ಪ್ರೀತಿಸಬಹುದು, ಆದ್ರೆ ಪ್ರೀತಿಯ ಅರ್ತ ತಿಳ್ಕೊಂಡು ಪ್ರೀತಿಸಿದರೆ ಪ್ರೀತಿಗೂ ಬೇಲೆ ,ಪ್ರೀತ್ಸೋರ್ಗು ಬೇಲೆ.
 
 
 
ಇಂತಿ ನಿಮ್ಮ ಪ್ರೀತಿಯ
ಲೋಕೇಶ ನ್ನೂ
ಪ್ರೀತ್ರೊ ಹೃದಯ ಇರುತ್ತಾ
 
 

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

ನಾ ವಿಸ್ಮಯ ಪ್ರಜೆ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/25/2012 - 12:38

ಇಲ್ಲ ಲೋಕೇಶ ನ್ನೂ ಪ್ರೀತಿಸೋ ಹೃದಯಾ ನಾ ಆ ಬ್ರಹ್ಮ ಈಗ ತಯಾರು ಮಾಡುತ್ತೀದ್ದಾನಂತೆ.

lokesh ಧ, 03/28/2012 - 17:33

ಕಣ್ ರೆಪ್ಪೆ ಮುಚ್ಚಿ ನಿನ್ನನ್ನು ನೆನೆದ ಹೃದಯಾ. ಕಣ್ ಬಿಟ್ಟು ನೋಡಿ ನೀಕಾಣದಾಗ ... ನಿನ್ನ ಹುಡುಕಾಡಿ ನಾ ಸೋತಿರುವೆ, ಸಿಗಬಾರದೇನು ಒಮ್ಮೆ... ಕಣ್ ರೆಪ್ಪೆ ಮುಚ್ಚಿ ... ನನಗಿಂತ ಪ್ರೀತಿಸೋ ನನ್ನವಳೇ ನೀನು,

sapna ಶನಿ, 11/05/2016 - 17:03

Ready agide

mahalakshmi ಗುರು, 07/12/2012 - 14:00

ಬಿಟೋದ್ ಆ ನಿನ್ನ ಹ್ರುದಯ ಮತ್ತೇ ನಿನ್ನತ್ರ ಬಂದೆಬರುತ್ತೇ ಫ್ರೇಂಡ್

sapna ಶನಿ, 11/05/2016 - 17:05

howdu mahalakshmi

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.