ನೋವು
ಎಲ್ಲೋ ಒಂದು ಕಡೆ ಮನದ ಮೂಲೆಯಲಿ
ಅವಿತು ಕುಳಿತಿಹುದು ಹೃದಯದಾಳದಲಿ
ನೆತ್ತರೊಳು ಒಂದಾಗಿ ಹರಿಯುತಾ ದೇಹದಲಿ
ಏನೋ ಒಂದು ನೋವು ನೆಲೆಸಿಹುದು ನನ್ನಲಿ.
ಆ ನೋವ ಮೂಲವನು ನೆನೆಸಿದಾ ವೇಳೆಯಲಿ
ಯಾರದೋ ನೋವನು ಸಂತೈಸುವ ಕಾಲದಲಿ
ಅದನೆ ಹೋಲುವಾವಸ್ಥೆ ಮತ್ತೆ ಮರುಕಳಿಸಿದಲಿ
ಆ ನೋವು ನೀರಾಗಿ ಹರಿವುದು ಕಣ್ಣಂಚಿನಲಿ.
ದಿನ ದಿನವು ಹೆಚ್ಚುತಲಿಹುದು ನೋವಿನಾ ಬಿಂದು
ಈ ನೋವಿಗೆ ಕೊನೆಯಿಲ್ಲವೆ ಮುಂದೂ ಎಂದೆಂದೂ
ಶೃಷ್ಠಿಸಿದೆಯಾ ಜಗನ್ನಿಯಾಮಕನೇ ನೀನಿದನಂದು
ನಿಜವಾದ ನಲಿವಿನಾ ಮಹತ್ವವ ತಿಳಿಸಲೆಂದು
ಬೇಡಿಹುದು ನನ ಹೃದಯ ದುಖಃದಿಂದ ನೊಂದು
ಕನಿಕರಿಸಿ ಈ ನೋವಿಂದ ಮುಕ್ತಿಯಾ ನೀಡೆಂದು.
ಸಾಲುಗಳು
- Add new comment
- 619 views
ಅನಿಸಿಕೆಗಳು
ನಮಸ್ಕಾರ ಸರ್..... ತುಂಬಾ ಚೆನ್
ನಮಸ್ಕಾರ ಸರ್.....ತುಂಬಾ ಚೆನ್ನಾಗಿದೆ ನಿಮ್ಮ ಕವನದ ಸಾಲುಗಳುವಾಸ್ತವಕ್ಕೆ ಹತ್ತಿರವಾಗಿ ಬಲು ಸೊಗಸಾಗಿದೆ...ವಂದನೆಗಳು.......
ನಮಸ್ಕಾರಾ... ಮನಸ್ಸಿಗೆ
ನಮಸ್ಕಾರಾ... ಮನಸ್ಸಿಗೆ ಹಿಡಿಸಿದ್ದರೆ ನನ್ನ ಪ್ರಯತ್ನ ಸಾರ್ಥಕ ಎಂದುಕೊಳ್ಳುತ್ತೇನೆ, ಧನ್ಯವಾದಗಳು.