ಶಾಲೆಗೆ ಕಳಿಸು
ಶಾಲೆಯು ಸುರುವಾಯಿತು ಮತ್ತೆ
ಪಾಟಿ ಚೀಲವ ತೆಗೆಯಮ್ಮ|
ಮೇಲಿನ ಧೂಳನು ಕೊಡವಿ ಹಾಕಿ
ಹೊಸ ಪುಸ್ತಕ ಹಾಕಮ್ಮ ||೧||
ಚಿಣ್ಣಿದಾಂಡು ಬ್ಯಾಟು ಬಾಲ್
ಗೋಲಿ ಗಜ್ಜುಗ ಅಟ್ಟದಿ ಹಾಕು |
ಶಾಲೆಯ ರಜೆಯ ವೇಳೆಯಲಿ
ಆಡಲು ನನಗೆ ಮತ್ತೆ ಬೇಕು ||೨||
ಬಟ್ಟೆಗಳೆಲ್ಲವ ಇಸ್ತ್ರೀ ಹಾಕಿ
ಸಾಕ್ಸು ಬೂಟು ಜೋಡಿಸಿಡು|