"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...
ನೀನೆಂದರೆ.....
ನೀನೆಂದರೆ ಬೆಳಕು...
ನೀನೆಂದರೆ ನನ್ನೊಲವಿನ ಭಾವ
ನೀನೆಂದರೆ ಕನಸು
ನೀನೆಂದರೆ ಬದುಕು
ನೀನೆಂದರೆ ನೆನಪು
ನೀನೆಂದರೆ ನಸುಕು
ನೀನೆಂದರೆ ಉಸಿರು
ನೀನೆಂದರೆ.....
ನೀನೆಂದರೆ.....
ನೀನೆಂದರೆ ಬೆಳಕು...
ನೀನೆಂದರೆ ನನ್ನೊಲವಿನ ಭಾವ
ನೀನೆಂದರೆ ಕನಸು
ನೀನೆಂದರೆ ಬದುಕು
ನೀನೆಂದರೆ ನೆನಪು
ನೀನೆಂದರೆ ನಸುಕು
ನೀನೆಂದರೆ ಉಸಿರು
ನೀನೆಂದರೆ.....
ನೆನಪು…
ಮುಂಗಾರಿನ ಹನಿಹನಿಗೂ ಹಸುರಿನ ವಸಂತಾಗಮನ
ಚಿಗುರೆಲೆಯ ತುದಿಗಳಲ್ಲಿ ಮಂಜಿನನಿಗಳ ಆಗಮನ
ತೇಜಸ್ವಿಯ ಕಿರಣ ಲೀಲೆಗೆ ಕಾಮನಬಿಲ್ಲಿನ ಸಂಚಲನೆ
ಹೃದಂತರಾಳದಲಿ ನಲ್ಲೆಯ ನೆನಪಿನ ಆಲಿಂಗನ..."
ಕಣ್ಣೀರ್...
ಹೃದಯವೆಂಬ
ಬಂಧಿಖಾನೆಯಲ್ಲಿ
ಬಂಧಿಯಾಗಿದ್ದ
ನೋವುಗಳು,
ಕಣ್ಣಕಿಂಡಿಯಿಂದ
ಪಾರಾಗಿವೆ
ಕಣ್ಣೀರಾಗಿ..."
ಕಪ್ಪನೆಯ ರೋಡ್ ಮೇಲೆ ಹತ್ತಿಯಂತೆ ಬಿದ್ದ ಮಂಜಿನ ರಾಶಿ….. "