Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಮಕ್ಕಳ ಆಟ

ಇಂದ prabhu
ಬರೆದಿದ್ದುFebruary 3, 2019
noಅನಿಸಿಕೆ

ಶೆಟ್ಟರು ಮನೆಯ ಕಟ್ಟಲು ಹಾಕಿದ
ಉಸುಕಿನ ಗುಂಪೆಯಲಿ|
ಸೇರಿತು ಗೆಳೆಯರ ಗುಂಪು
ವಾರದ ರಜೆಯಲ್ಲಿ||೧||
ಕಾಲನು ಇಟ್ಟು ಪಟ ಪಟ ಬಡಿದು
ಮನೆಯನು ಕಟ್ಟಿದರು|
ಹನುಮ ಶಾರಿ ಅಪ್ಪ ಅಮ್ಮರು ಆಗಿ
ಆಟವ ಆಡಿದರು||೨||
ಸಿದ್ದು ರೋಜಿ ಕಾಶಿ ಪಾತು
ನೆರೆಮನೆ ಕುಟುಂಬವು|
ಏನೇ ಅಡುಗೆ ಮಾಡಲಿ ಮನೆಯಲಿ

ರಜೆ

ಇಂದ prabhu
ಬರೆದಿದ್ದುFebruary 2, 2019
noಅನಿಸಿಕೆ

ಶಾಲೆಗೆ ನಾಳೆ ರಜೆ ಇದೆಯಮ್ಮ
ಅಲಾರಾಮ್ ಇಡಬೇಡ|
ಹುಂಜವು ಕೂಗದ ಹಾಗೆ ಹೇಳು
ಮಲಗುವೆ ಹೆಚ್ಚು ಹೊತ್ತಮ್ಮ||೧||
ವಾರದ ಆರು ದಿನಗಳು ನನಗೆ
ರೆಸ್ಟೇ ಇಲ್ಲ ಕಣಮ್ಮ|
ಶಾಲೆ ಓದು ಬರಹ ಇಷ್ಟೇ
ಪರೀಕ್ಷೆ ಬಂತು ನೋಡಮ್ಮ||೨||
ನೆಗಡಿ ಕೆಮ್ಮು ಜ್ವರಗಿರ ಬರದ
ಹಾಗೆ ಎಚ್ಚರ ಬೇಕಮ್ಮ|

ನೈವೇದ್ಯ

ಇಂದ prabhu
ಬರೆದಿದ್ದುFebruary 1, 2019
noಅನಿಸಿಕೆ

ಹಲ್ಲು ಬಿದ್ದರೆ ಏನಾಯ್ತಮ್ಮ
ನನಗೆ ಊಟಕೆ ಕೊಡಮ್ಮ|
ದೇವರ ಪೂಜೆ ಆಗೋವರೆಗೂ
ತಾಳೆನು ಹಸಿವು ನಾನಮ್ಮ||೧||
ಹಪ್ಪಳ ಸಂಡಿಗೆ ಉಪ್ಪಿನ ಕಾಯಿ
ಹುಗ್ಗಿ ಹೋಳಿಗೆ ಮಾಡುವೆ|
ಹಬ್ಬ ಹುಣ್ಣಿಮೆ ಅಮವಾಸ್ಯೆಯಲಿ
ನೈವೇದ್ಯ ದೇವರಿಗೆ ಕೊಡುವೆ||೨||
ಅಮ್ಮ ನನಗೆ ಕೊಡು ಎಂದರೆ
ಎಂಜಲು ಎಂದೆ ಹೇಳುವೆ|

ಸಿ.ಎಸ್.ಐ -ಪ್ರೇಮ ನಿಲಯದ ಮಕ್ಕಳಿಗೆ ಮ್ಯಾಟ್ ಗಳ ದೇಣಿಗೆ

ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ಕೆನರಾ ಬ್ಯಾಂಕ್ ಗದಗ-ಬೆಟಗೇರಿ ಶಾಖೆಯ ಸಿಬ್ಬಂದಿಗಳು ಗಣರಾಜ್ಯೋತ್ಸವದ ಅಂಗವಾಗಿ ಬೆಟಗೇರಿಯ ಸಿ.ಎಸ್.ಐ -ಪ್ರೇಮ ನಿಲಯದ ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲಿಕ್ಕೆ ಕಾಟನ್ ಮ್ಯಾಟ್ ಗಳನ್ನು ವಿತರಿಸಿದರು. ಬ್ಯಾಂಕ್ ಮ್ಯಾನೇಜರ್ ಶಬನಮ್ ಆದೋನಿರವರು ಸಿ.ಎಸ್.ಐ ಪ್ರೇಮ ನಿಲಯದ ಮುಖ್ಯಸ್ಥರ ಸಮ್ಮುಖದಲ್ಲಿ ನಿಲಯದ ಮಕ್ಕಳಿಗೆ ವಿತರಿಸಿದರು.

ಹೊಳೆಆಲೂರಲ್ಲಿ ಡಿಜಿಟಲ್ ಇಂಡಿಯಾ ಪರೀಕ್ಷೆ

ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಕವಿಪ್ರ ಸಮಿತಿಯ ಕಲಾ, ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ಹಾಗೂ ಭುವನೇಶ್ವರಿ ನೆಟ್ ಸೆಂಟರ್ ಬೆಟಗೇರಿ ಆಶ್ರಯದಲ್ಲಿ ಪ್ರಧಾನಮಂತ್ರಿ ಡಿಜಿಟಲ್ ಇಂಡಿಯಾ ಕುರಿತು ಮಾಹಿತಿ ಮತ್ತು ಆನ್ ಲೈನ್ ಪರೀಕ್ಷೆ ನಡೆಸಲಾಯಿತು.