Skip to main content

ನನ್ನ ಲೇಖನಗಳು

ಹೊಸ ವಿಸ್ಮಯ ನಗರಿಗೆ ಸ್ವಾಗತಿಸುತ್ತಾ

ಮಸ್ಕಾರಗಳು ವಿಸ್ಮಯ ನಗರಿಯ ಪ್ರಜೆಗಳಿಗೆ ಹಾಗೂ ಅನಾಮಿಕ ಬಂಧುಗಳಿಗೆ. ಇಂದಿಗೆ ಈ ವೆಬ್ ಸೈಟ್ ಪ್ರಾರಂಭವಾಗಿ ಸರಿ ಸುಮಾರು ಹತ್ತು ವರ್ಷ ಏಳು ತಿಂಗಳು. ಹತ್ತನೇ ವರ್ಷದ ಸಂಭ್ರಮದಲ್ಲಿರುವ ವಿಸ್ಮಯ ತಾಣ ಬದಲಾಗಿದೆ.

ಬರೆದಿದ್ದುAugust 27, 2017
noಅನಿಸಿಕೆ

ಯೋಗರಾಜ ಭಟ್ಟರ ವಾಸ್ತುಪ್ರಕಾರ ಚಿತ್ರದ ಕಾಮಿಡಿ ಹಾಡು

ಯೋಗರಾಜ ಭಟ್ಟರು ತಮ್ಮ ವಾಸ್ತು ಪ್ರಕಾರ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ಅದು ಇಂಗ್ಲೀಷ್ ಕಾಮಿಡಿ ಹಾಡು. ಹೆಚ್ಚಿನ ಪದಗಳು ಇಂಗ್ಲೀಷ್ ಇರುವದರಿಂದ ಕನ್ನಡಕ್ಕಿಂತ ಇಂಗ್ಲೀಷ್ ಅನ್ನೇ ಹೆಚ್ಚು ದಿನ ಬಳಸುವ ಈಗಿನ ಯುವ ಪೀಳಿಗೆಗೆ ಇಷ್ಟ ಆಗಬಹುದಾ? ಕಾದು ನೋಡೋಣ.

ನಿಮಗೆ ಈ ಹಾಡು ಹೇಗನಿಸಿತು? ಕಮೆಂಟ್ ಹಾಕಿ ತಿಳಿಸಿ.

ಬರೆದಿದ್ದುFebruary 7, 2015
noಅನಿಸಿಕೆ

ಕನ್ನಡ ಸಾಹಿತಿಗಳು ಪ್ರಚಾರ ಪ್ರಿಯರೇ?

ಇತ್ತೀಚೆಗೆ ಹಿಂದೂ ದೇವರ ನಿಂದನಾ ಹೇಳಿಕೆ ನೀಡಿದ ಕಲಬುರ್ಗಿ, ಅನಂತಮೂರ್ತಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಇಂದು ಕನ್ನಡ ಸಾಹಿತ್ಯದಲ್ಲಿ ಹೊಸ ಕೃಷಿಗಿಂತ ಪ್ರಚಾರಕ್ಕಾಗಿ ವಿವಾದಾತ್ಮಕ ಹೇಳಿಕೆ ರೂಢಿಸಿಕೊಂಡಿದ್ದಾರೆಯೇ?  ನಿಮ್ಮ ಅನಿಸಿಕೆ ಏನು? ಇಂತಹ ಮೂರ್ಖ ಹೇಳಿಕೆಗಿಂತ ಒಂದು ಉತ್ತಮ ಸಾಹಿತ್ಯ ಬರೆಯುವದರಲ್ಲಿ ತೊಡಗಿಸಿ ಕೊಂಡಿದ್ದರೆ ಉತ್ತಮ ಅನ್ನುವದು ನನ್ನ ಅನಿಸಿಕೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಮಂಗಳ, 07/01/2014 - 19:22

ಮಾನ್ಯರೇ, ನಮ್ಮ ಕನ್ನಡ ಸಾಹಿತಿಗಳು ಯಾರಿಗೂ ಕಡಿಮೆ ಇಲ್ಲ. ಜ್ನಾನಪೀಠ ಪ್ರಶಸ್ತಿ ವಿಜೇತರು ಇದ್ದಾರೆ. ಮೊದಲಾದರೆ ನಮ್ಮ ಕನ್ನಡ ಜನರು ದಿನ ಪತ್ರಿಕೆಗಳನ್ನು ಬಿಟ್ಟರೆ ನಮ್ಮ ಎಲ್ಲಾ ಕನ್ನಡ ಕವಿಗಳ ಕಥೆ,ಕವನ ಓದುತ್ತಿದ್ದರು. ಮೆಚ್ಚುತ್ತಿದ್ದರು. ಈಗ ಟಿ.ವಿ. ಬಂದ ಮೇಲೆ ಮನೆಯವರೆಲ್ಲಾ ದಾರವಾಹಿಗಳ ಮೊರೆ ಹೋಗಿದ್ದಾರೆ. ಪುಸ್ತಕಗಳನ್ನು ಬಿಡುವಿದ್ದಾಗ ಓದುತ್ತಿದ್ದರು. ಅದೇ ಟಿ.ವಿ. ಬಂದ ಮೇಲೆ ಊಟ ಬಿಟ್ಟರೂ ಸರಿ ದೇವರ ಪೂಜೆ ನಿಲ್ಲಿಸಿದರೂ ಸರಿ, ದೇವಸ್ಠಾನಕ್ಕೆ ಹೋಗುವುದನ್ನು ತಪ್ಪಿಸಿದರೂ ಸರಿ ಅಡಿಗೆ ಕೆಟ್ಟರು ಸರಿ ಧಾರವಾಹಿಗಳಿಗೆ ಪ್ರಾಧಾನ್ಯತೆ ಕೊಡಲು ಶುರು ಮಾಡಿದ ನಂತರ ಕಥೆ ಪುಸ್ತಕಗಳು ಮೂಲೆಗುಂಪಾದವು. ಗ್ರಾಥಾಲಯಗಳು ಖಾಲಿ ಹೊಡೆಯುತ್ತಿವೆ. ಅಷ್ಟೇ ಏಕೆ ರಾಮಾಯಣ, ಮಹಾಭಾರತ, ಮುಂತಾದ ಧರ್ಮಗ್ರಂಥಗಳು ಮೂಲೆ ಸೇರಿದವು. ಅವುಗಳನ್ನು ಹಿರಿಯರೇನು ಮಕ್ಕಳು ತೆಗೆದು ನೋಡುತ್ತಿಲ್ಲಾ. ಇಂತಹ ಸಂದರ್ಭದಲ್ಲಿ ನಮ್ಮ ಕವಿಗಳನ್ನು ಯಾರು ಕೇಳುತ್ತಾರೆ. ಆವರು ಸದಾ ಸುದ್ದಿಯಲ್ಲಿರಬೇಕು. ಇಲ್ಲವಾದರೆ ಜನ ಮರೆತುಹೋಗುತ್ತಾರೆಂಬ ಭಾವನೆ ಅವರದು. ಆದುದರಿಂದ ಈ ರೀತಿಯ ಅಸಂಬದ್ದ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುತ್ತಾರೆ. ಇಂತಹ ಹೇಳಿಕೆ ನೀಡಿದಾಗ ಇಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಅದೇ ರೀತಿ ಎಲ್ಲ ದೃಶ್ಯ ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ. ಇದರಿಂದ ಆ ರೀತಿಯ ಹೇಳಿಕೆ ನೀಡುತ್ತಾರೆ.ಇದು ನಮ್ಮ ಕನ್ನಡಿಗರ ದುರಾದೃಷ್ಥ.

ನವೀನ್ ಚ೦ದ್ರ ಗುರು, 07/03/2014 - 21:32

ಮನುಷ್ಯನ ಸಹಜಗುಣ ಅಂದರೆ ಪ್ರಚಾರಪ್ರಿಯತೆ ಪಡೆಯುವುದು, ಬೇರೆಯವರು ನಮ್ಮನ್ನು ಗುರುತಿಸಲಿ ಎಂಬ ಮನೋಭಾವ ಆದರೆ

 ಇದು ಕೆಲವರಲ್ಲಿ ಇದು ಹೆಚ್ಹಾಗಿರುತ್ತದೆ ಮತ್ತೆ ಕೆಲವರಲ್ಲಿ ಅವರ ಪ್ರಚಾರಕಿಂತ ಕೆಲಸವಿರುತ್ತದೆ. ಆದರೆ ಇಂದು ಭಾರತದಲ್ಲಿ ಕೆಲಸಕ್ಕಿಂತ ಹೆಚ್ಹಾಗಿ 

ಪ್ರಚಾರ ಪಡೆಯುವುದೇ ಒಂದು ಗೀಳಾಗಿರುವುದು ನಿಜಕ್ಕು ನುಂಗಲಾರದ ತುತ್ತು...

shubha ಸೋಮ, 09/01/2014 - 14:40

ನಮ್ಮ ಸಾಹಿತಿಗಳು ಬಹಳ ಪ್ರತಿಭಾವಂತರೇ. ಅದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ನಮ್ಮ ಕನ್ನಡಕ್ಕೆ ಸಂದಿರುವ ಪ್ರಶಸ್ತಿಗಳೇ ಸಾಕ್ಷಿ. ಆದ್ರೂ ನಮ್ಮ ಕೆಲವು ಸಾಹಿತಿಗಳು ನಾನು ಹಿಡ್ದಿರೋ ಮೊಲಕ್ಕೆ ಮೂರೇ ಕಾಲು ಅನ್ನೋ ಹಾಗೆ ಆಡ್ತಾರೆ. ಆರೋಗ್ಯವಂತ ಸಮಾಜಕ್ಕೆ ಇದು ಉತ್ತಮ ಬೆಳವಣಿಗೆಯಲ್ಲ.

 

 

 

 

  • 1350 views

Comedy Nights With Kapil Fan App

This privacy policy applies to Comedy Nights With Kapil Fan App Windows 8.1 App.

Comedy Nights With Kapil Fan App does not collect any user data and transmit explicitly to server. But it uses roaming settings feature of Windows App store to store your setting or data.

Comedy Nights With Kapil Fan App requires internet connection to display Advertisements, social network updates and video.