Skip to main content

ಹನಿಕವನ

ಹನಿಗವನ

ಬರೆದಿದ್ದುMay 20, 2016
noಅನಿಸಿಕೆ

ನಲ್ಲೆಯ ಅಂತರಂಗವನೊಕ್ಕ ಭಾವನೆಗಳು

ಝರಿಯಾಗಿ ಜಾರುತಿವೆ ನನ್ನೆದೆಯ ಅಂಗಳಕ್ಕೆ

ಕನಸುಗಳು ಕವಲೊಡೆದು ಅಸೆಗಳ ಅಲೆ ಎದ್ದು

ಒಲುವಿಯ ಸಾಕ್ಷತ್ಕಾರದ ಶಿಖರವನ್ನರೆರಿವೆ

 

ಮುಂಗಾರಿನ ಹನಿಹನಿಗೂ ಹಸುರಿನ ವಸಂತಾಗಮನ

ಚಿಗುರೆಲೆಯ ತುದಿಗಳಲ್ಲಿ ಮಂಜಿನನಿಗಳ ಆಗಮನ

ತೇಜಸ್ವಿಯ ಕಿರಣ ಲೀಲೆಗೆ ಕಾಮನಬಿಲ್ಲಿನ ಸಂಚಲನೆ

ತಪ್ಪು

ಇಂದ SANTOSH KHARVI
ಬರೆದಿದ್ದುApril 4, 2016
noಅನಿಸಿಕೆ

ಗೆಳೆಯಾ,

(ಅನು)ಮತಿ

ಯಿಲ್ಲದೆ

ನನ್ನನ್ನು ಪ್ರೀತಿಸಿದ್ದು

ನಿನ್ನ ತಪ್ಪೇ ಹೊರತು,

ನಾನಿನ್ನ ಪ್ರೀತಿಸದೇ

ಇರುವುದು ಖಂಡಿತ 

ನನ್ನ ತಪ್ಪಲ್ಲ...

          - ಸ.Kha.

ಗುರುದಕ್ಷಿಣೆ

ಇಂದ SANTOSH KHARVI
ಬರೆದಿದ್ದುApril 2, 2016
noಅನಿಸಿಕೆ

ನನ್ನದೊಂದು ಆಸೆಯಿದೆ
ಮತ್ತೆ ಹುಟ್ಟಿ ಬರಲೆಂದು
ಆ ಗುರು ದ್ರೋಣಾಚಾರ್ಯರು...
ರಾತ್ರಿಪೂರ್ತಿ ಮೊಬೈಲ್ ಕೀಪ್ಯಾಡ್
ಒತ್ತುವವರಿಗೆಲ್ಲ ಹೆಬ್ಬೆರಳ ಗುರುದಕ್ಷಿಣೆ
ಕೇಳುವ ಗುರುಗಳಾಗಿ...
           - ಸ.Kha.

ಬದುಕು

ಇಂದ SANTOSH KHARVI
ಬರೆದಿದ್ದುMarch 3, 2016
noಅನಿಸಿಕೆ

ಜನಿಸಿದ ತಪ್ಪಿಗೆ ಜೀವನ

ಜೀವನ ಮುಗಿದರೆ ಮರಣ...

ನಡುವೆ ಸಣ್ಣದೊಂದು ಚಾರಣ

ಮುಗಿಯೋವರೆಗೆ ಬಾಳ ಪಯಣ...

                   - ಸ.Kha.

ಗತಿ

ಇಂದ Geeta G Hegde
ಬರೆದಿದ್ದುDecember 14, 2015
noಅನಿಸಿಕೆ

ದಿನಕ್ಕೊಮ್ಮೆ

ನಿನ್ನ

ಮಾತಾಡಿಸದಿದ್ದರೆ.

ಹೃದಯ

ವಿಲ ವಿಲ

ಒದ್ದಾಡುತ್ತದೆ

ರಾತ್ರಿ

ನಿದ್ದೆಯೂ

ಇಲ್ಲದೆ!

   14-12-2015