ಕಾರಣ
ಹೃದಯದ ಗಾಯಕ್ಕೆ
ಪ್ರೀತಿಯೇ
ಮಲಾಮು !
ಕೆಲವು ಸಲ
ಗಾಯವಾಗಲು
ಅದೇ
ಕಾರಣವು !!
- ಡಾ.ಪ್ರಭು.ಅ.ಗಂಜಿಹಾಳ್
ಗದಗ್
ಹೃದಯದ ಗಾಯಕ್ಕೆ
ಪ್ರೀತಿಯೇ
ಮಲಾಮು !
ಕೆಲವು ಸಲ
ಗಾಯವಾಗಲು
ಅದೇ
ಕಾರಣವು !!
- ಡಾ.ಪ್ರಭು.ಅ.ಗಂಜಿಹಾಳ್
ಗದಗ್
ಪ್ರೀತಿ
ಇದ್ದರೆ ಜೊತೆ
ಮಜಾ !
ಇಲ್ಲದಿದ್ದರೆ
ಜೀವನಪೂರ್ತಿ
ಸಜಾ !!
-ಪ್ರಭು.ಅ.ಗಂಜಿಹಾಳ್
ಗದಗ್
ಕರೆಂಟಿಲ್ಲದ ಬಡವನೆದೆಯ
ಗೂಡಲ್ಲಿ ಇದ್ದ ಹಣತೆಯ ಕದ್ದಿದ್ದರೂ,
ದೂರು ನೀಡಲು ಯೋಗ್ಯತೆಯಿಲ್ಲ...
ಏಕೆಂದರೆ ಹಣತೆಯೇ ನನ್ನದಲ್ಲ...
- ಸ.Kha.
ಎದೆಯ ಬಂಜರು ಭೂಮಿಯಲ್ಲಿ
ಕನಸ ಬೀಜ ಬಿತ್ತಿ
ಹೂವೊಂದ ಬೆಳೆಸಿದ್ದೆ.
ಯಾರೋ ಬಂದು ಹೂವ ಕಿತ್ತರು...
ಏಕೆಂದು ಕೇಳಿದರೆ
ದೇವರ ಮುಡಿಗೆಂದರು...
ಎದೆಯ ಭೂಮಿ ಮತ್ತೆ ಬಂಜರು...
- ಸ.Kha.
ದೇಹ
ಮಾರಿ
ಕೊಂಡ
ಆಕೆ
ವ್ಯಭಿಚಾರಿಣಿ...
ಮಾರಿದ
ದೇಹವ
ಕೊಂಡ
ಆತ...?
- ಸ.Kha.
ಕನಸುಗಳು.....
ಕೆಲವು ತುಂಬಾ ದೊಡ್ಡವು
ಮತ್ತೆ ಕಲವು ತುಂಬಾ ಚಿಕ್ಕವು
ಆಯ್ಕೆ ನಮ್ಮದೇ,
ಎಲ್ಲವೂ ನಮ್ಮದಾಗವು//
ಕನಸುಗಳು.....
ಕೆಲವು ನನಸಾದವು
ಮತ್ತೆ ಕೆಲವಿಂದ ಘನಘೋರ ಸೋಲು
ನೆನಪು ಮಾತ್ರ ಒಂದೇ,ಎರಡೋ
ಮಿಕ್ಕವೆಲ್ಲಾ ಮರೆತು ಮೂಲೆ ಸೇರಿದವು//
ಕಲ್ಬೆಂಚಿನ ಮೇಲೆ ತುಸು ಅಂತರದಿ ಕುಳಿತು
ಕಾಲ್ಬೆರಳಿಂದ ಬರೆದದ್ದು
ಈಗ ಬರಿಯ ನೆನಪು....,
ತುಂಬು ಬೆಳದಿಂಗಳು
ಸರಿರಾತ್ರಿಯ ಹೊತ್ತು
ಜೊತೆಗೂಡಿ ಇಟ್ಟ ಪ್ರತಿ ಹೆಜ್ಜೆಗಳಿಗೂ
ಚಂದ್ರನ ಸಾಕ್ಷಿಯುಂಟು...,
ಅದೊಂದು ದಿನ ;
ಬಿರಿ ಬಿಸಿಲು; ಬಾರದ ಉಸಿರು
ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ!
ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ!
ಕ್ಷಣವೂ ತಾಳಲಾರೆನು ಈ ವಿರಹ! ವಿರಹ...
ಮನದಲಿ ಮೂಡುತಿದೆ ಅರಿಯದ ವಿಮೋಹ,
ನೀ ಗಿಚಿದ ಆ.. ಒಲವಿನ ಬರಹ..,
ಶಾಶ್ವತ ಎನ ಮನದ ಒಳ, ಹೊರಹ...
ಎದೆಯಮೇಲೆ ನುಗ್ಗುತಿದೆ ಕಣ್ಣೀರ ಪ್ರವಾಹ,
** ಗೆಳತಿ **
ಫಲನೀಡದ ಈ ಬೋಳು ಮರವನ್ನು
ತಬ್ಬಿಕೊಂಡು ಹೂವು ಬಿಟ್ಟಿರುವ
ಮಿಂಚಿನ ಬಳ್ಳಿ...
- ಸ.Kha