Skip to main content

ಪ್ರಚಲಿತ

ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ

ಇಂದ prabhu
ಬರೆದಿದ್ದುFebruary 16, 2019
noಅನಿಸಿಕೆ

ಭಾರತ ಮಾತೆಯ ರಕ್ಷಣೆಗಾಗಿ ಭಾರತದ ಗಡಿಯನ್ನು ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರ ಮೇಲೆ ಪುಲ್ವಾಮದಲ್ಲಿ ನಡೆದ ಬಾಂಬ್ ದಾಳಿಯಿಂದ ಹುತಾತ್ಮರಾದ ವೀರ ಯೋಧರ ಘನೆಯನ್ನು ಖಂಡಿಸಿ ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್.ಬೇಲೇರಿ ಗ್ರಾಮದಲ್ಲಿ ದಿ.೧೫-೨-೨೦೧೯ ರ ಶುಕ್ರವಾರ ಸಂಜೆ ಮೊಂಬತ್ತಿ ಬೆಳಗಿಸುವ ಮೂಲಕ ಶ್ರದ್ಧಂಜಲಿಯನ್ನು ಅರ್ಪಿಸಲಾಯಿತು.

ಸಿ.ಎಸ್.ಐ -ಪ್ರೇಮ ನಿಲಯದ ಮಕ್ಕಳಿಗೆ ಮ್ಯಾಟ್ ಗಳ ದೇಣಿಗೆ

ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ಕೆನರಾ ಬ್ಯಾಂಕ್ ಗದಗ-ಬೆಟಗೇರಿ ಶಾಖೆಯ ಸಿಬ್ಬಂದಿಗಳು ಗಣರಾಜ್ಯೋತ್ಸವದ ಅಂಗವಾಗಿ ಬೆಟಗೇರಿಯ ಸಿ.ಎಸ್.ಐ -ಪ್ರೇಮ ನಿಲಯದ ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲಿಕ್ಕೆ ಕಾಟನ್ ಮ್ಯಾಟ್ ಗಳನ್ನು ವಿತರಿಸಿದರು. ಬ್ಯಾಂಕ್ ಮ್ಯಾನೇಜರ್ ಶಬನಮ್ ಆದೋನಿರವರು ಸಿ.ಎಸ್.ಐ ಪ್ರೇಮ ನಿಲಯದ ಮುಖ್ಯಸ್ಥರ ಸಮ್ಮುಖದಲ್ಲಿ ನಿಲಯದ ಮಕ್ಕಳಿಗೆ ವಿತರಿಸಿದರು.

ಹೊಳೆಹಡಗಲಿ ಗ್ರಾಮದಲ್ಲಿ ನಾಟಕ ಪ್ರದರ್ಶನ

ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರ ಸಮೀಪದ ಹೊಳೆಹಡಗಲಿ ಗ್ರಾಮದಲ್ಲಿ ಶ್ರೀ ಚಂದ್ರಮೌಳೀಶ್ವರ ಜಾತ್ರೆಯ ಅಂಗವಾಗಿ ಶ್ರೀ ಚಂದ್ರಮೌಳೀಶ್ವರ ಕ್ರೀಡಾ ನಾಟ್ಯ ಸಂಘದಿಂದ "ಭಂಡರಿಗೆ ಸಿಡಿದೆದ್ದ ಪುಂಡ ಹುಲಿ" ಅರ್ಥಾತ್ "ಧರ್ಮದ ದಾರಿಗೆ ದೇವರು ಯಾರು?" ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಾಯಿತು.

ದಿನದರ್ಶಿಕೆ ಬಿಡುಗಡೆ

ಇಂದ prabhu
ಬರೆದಿದ್ದುJanuary 2, 2019
noಅನಿಸಿಕೆ

ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜನನಾಡಿ ಪಾಕ್ಷಿಕದ ೨೦೧೯ರ ದಿನದರ್ಶಿಕೆಯನ್ನು ಶ್ರೀವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿಗಳಾದ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಬುಧವಾರ ಮಧ್ಯಾಹ್ನ ಬಿಡುಗಡೆ ಮಾಡಿದರು.

ನನ್ನ ತಂಗಿ ನಾಟಕ ಪ್ರದರ್ಶನ

ಇಂದ prabhu
ಬರೆದಿದ್ದುDecember 29, 2018
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಶ್ರೀ ಯಚ್ಚರೇಶ್ವರ ಜಾತ್ರೆಯ ನಿಮಿತ್ಯ ಸ್ಥಳೀಯ ಕಲಾವಿದರ ಕಲಾ ರಸಿಕ ಮಿತ್ರ ಮಂಡಳಿ ವತಿಯಿಂದ "ನನ್ನ ತಂಗಿ" ಅರ್ಥಾತ್ "ತಾಳಿ ಇಲ್ಲದ ತಾಯಿಯಾದೆ" ಎಂಬ್ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದರು. ಗದಗ ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾದ ಮಾಜಿ ಅಧ್ಯಕ್ಷ ಬಸವಂತಪ್ಪ ತಳವಾರ್ ರಿಬ್ಬನ್ ಕತ್ತರಿಸುವ ಮೂಲಕ ನಾಟಕವನ್ನು ಉದ್ಘಾಟಿಸಿದರು.

ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಧಿಕಾರದ ಸುವರ್ಣ ಸಂಭ್ರಮಾಚರಣೆ

ಇಂದ prabhu
ಬರೆದಿದ್ದುOctober 24, 2018
noಅನಿಸಿಕೆ

ಶ್ರೀಕ್ಷೇತ್ರ ಧರ್ಮಸ್ಠಳ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಧಿಕಾರದ ಸುವರ್ಣ ಸಂಭ್ರಮದ ನಿಮಿತ್ಯ ದಿ.೨೪ರಂದು ಇಲ್ಲಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದವಸಧಾನ್ಯ, ಬಟ್ಟೆ, ಸಿಹಿತಿಂಡಿ ವಿತರಣೆಯೊಂದಿಗೆ ವಿಶೇಷ ಆಚರಣೆಯನ್ನು ಮಾಡಲಾಯಿತು.

ಹೊಳೆಆಲೂರಲ್ಲಿ ವಿಶ್ವಕರ್ಮ ಜಯಂತಿ

ಇಂದ prabhu
ಬರೆದಿದ್ದುOctober 8, 2018
noಅನಿಸಿಕೆ

ಹೊಳೆಆಲೂರಿನ ಗಾಡಗೋಳಿ ರಸ್ತೆಯಲ್ಲಿರುವ್ ಶ್ರೀ ಯಚ್ಚರೇಶ್ವರ ಬಾಲವಿಕಾಸ್ ವಿದ್ಯಾಮಂದಿರದ ಆವರಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ವಿಶ್ವಕರ್ಮಾ ಯುವಕ ಸಂಘ ಹಾಗೂ ಗಾಯತ್ರಿ ಮಹಿಳಾ ಮಂಡಳ ವತಿಯಿಂದ ವಿಶ್ವಕರ್ಮ ಜಯಂತಿ, ಧಾರ್ಮಿಕ ಸಭೆ, ಸಮಾಜದ ಪ್ರತಿಭಾನ್ವಿತ ಶಿಲ್ಪಿಗಳಿಗೆ ಸನ್ಮಾನ ಸಮಾರಂಭ ಜರುಗಿತು.

ಕ.ವಿ.ವಿ.ಸಿಂಡಿಕೇಟ್ ಸದಸ್ಯರಾಗಿ ನೇಮಕ

ಇಂದ prabhu
ಬರೆದಿದ್ದುSeptember 4, 2018
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಹೊಳೆಆಲೂರಲ್ಲಿ ಶ್ರೀಕೃ಼ಷ್ಣ ಜನ್ಮಾಷ್ಟಮಿ

ಇಂದ prabhu
ಬರೆದಿದ್ದುSeptember 2, 2018
noಅನಿಸಿಕೆ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಶ್ರೀಕೃ಼ಷ್ಣ ಜನ್ಮಾಷ್ಟಮಿ ನಿಮಿತ್ಯ ಶ್ರೀ ಕಲ್ಮೇಶ್ವರ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರು ರಾಧಾ-ಕೃ಼ಷ್ಣರಾಗಿ ವೇಷ ಧರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಪರ್ವತಾರೋಹಣ ತರಬೇತಿಗೆ ಆಯ್ಕೆ

ಇಂದ prabhu
ಬರೆದಿದ್ದುJune 20, 2018
noಅನಿಸಿಕೆ

ಹೊಳೆಆಲೂರಿನ್ ಶ್ರಿ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ಬಿ.ಎ.೩ನೇ ಸೆಮಿಸ್ಟರ್ ಓದುತ್ತಿರುವ ಎನ್.ಎಸ್.ಎಸ್ ವಿದ್ಯಾರ್ಥಿ ಗಣೇಶ್ ನರೇಗಲ್ ತಳಮಟ್ಟದ ಪರ್ವತಾರೋಹಣ್ ತರಬೇತಿಗೆ ಆಯ್ಕೆ ಆಗಿದ್ದಾನೆ.