Skip to main content

ಭಕ್ತಿ

ನೂತನ ಪದಾಧಿಕಾರಿಗಳ ಪ್ರಮಾಣ ವಚನ

ಇಂದ prabhu
ಬರೆದಿದ್ದುApril 23, 2019
noಅನಿಸಿಕೆ

ಗದಗ ನಗರದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ೨೪೨೯ ಶಿವಾನುಭವ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ವಾರ್ಷಿಕೋತ್ಸವ ಮತ್ತು ಸೇವಾ ಹಸ್ತಾಂತರ ಸಮಾರಂಭ ೨೦೧೯-೨೦ರ ಕಾರ್ಯಕ್ರಮ ದಿ.೨೨ ರಂದು ತ್ರಿವಿಧ ದಾಸೋಹಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವೇದಿಕೆಯಲ್ಲಿ ಜರುಗಿತು.

ಭಾಗ೯ವನಿಗೆ ನಮನ

ಇಂದ Geeta G Hegde
ಬರೆದಿದ್ದುDecember 31, 2015
noಅನಿಸಿಕೆ

 

ಉದಯಿಸುವ ಸೂಯ೯

ಹೊಂಗಿರಣ ಬೀರಿ

ಕತ್ತಲೆಯ ಕೋಟೆಯ

ಬೆಳಕಾಗಿಸುತಿಹನು‌.

 

ಶುಭೋದಯದ ಗಾನ

ನನ್ನಿಂದ ಹಾಡಿಸಿ

ದಿನದ ಗಳಿಗೆಗಳೆಲ್ಲ

ಸರ್ವರಿಗೂ ಶುಭವಾಗಲೆಂದು.

 

ಹಚ್ಚು ನೀ ಜ್ಯೋತಿಯನು

ನಿಸ್ವಾಥ೯ದಿಂದ

ಬತ್ತಲಾರದು ಬದುಕು,

ದೈವವ ನೋಡುವಾಸೆ

ಇಂದ Spurthikashyap
ಬರೆದಿದ್ದುFebruary 15, 2013
noಅನಿಸಿಕೆ

ಮನಸ್ಸಿಗೆ

ನಿನ್ನೊಮ್ಮೆ ನೋಡುವಾಸೆ

ನಿನ್ಹೆಸರ ಜಪಿಸುವಾಸೆ

ನಿನ್ನ ಧ್ಯಾನದಲ್ಲಿ ತಲ್ಲೀನಳಾಗುವಾಸೆ

ನಿನ್ನ ಪಾದವ ಸ್ಪರ್ಶಿಸುವಾಸೆ

ಎಲ್ಲಿರುವೆ ನನ್ನಾತ್ಮವೆ,ಪರಮಾತ್ಮವೆ

ನಿನ್ನೊಮ್ಮೆ ನೋಡುವಾಸೆ...

ಆತ್ಮ ಮತ್ತು ಮನಸ್ಸಿಗೆ ಆನಂದ ತರುವುದೆ ಆಧ್ಯಾತ್ಮ

ಇಂದ K.M.Vishwanath
ಬರೆದಿದ್ದುFebruary 10, 2013
2ಅನಿಸಿಕೆಗಳು

ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ. ಸಂಸಾರದ ಈ ಸಾಗರದಲ್ಲಿ ತಾಪತ್ರಯಗಳು ವೇದನೆ ನೋವು,ಜಿಗುಪ್ಸೆ, ಹತಾಷೆ, ಸಂತೋಷ,ಇವೆಲ್ಲ ತಪ್ಪಿದಲ್ಲಾ, ಎಲ್ಲವು ನಮ್ಮನ್ನು ತಿಂದು ಹಾಕುವುದು ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹಚ್ಚುವುದು. ನಿಂತಲ್ಲಿ ನಿಲ್ಲದೆ. ಕೂತಲ್ಲಿ ಕೂಡದೆ ಹೋಗುವುದು ಅತ್ತಿಂದ ಈತ್ತ ಮಂಗದಂತೆ ಜಿಗಿದಾಡುವದು ನಾವು ವಿನಾಕಾರಣ ಕೋಪಗೊಳ್ಳುವುದು ಮತ್ತೊಬ್ಬರ ಮೇಲೆ ಹಾಯಿಹರಿಯುವದು ಸುಮ್ಮನೆ ಜಗಳ ಮಾಡುವದು ಹೀಗೆ ಅನೇಕ ರೀತಿಯ ವಿಚಿತ್ರ ರೋಗಗಳಿಗೆ ತುತ್ತಾಗುತ್ತೇವೆ ಈಗ ಸದ್ಯದಲ್ಲಂತು ವಿಚಿತ್ರ ರೋಗಗಳು ಬರುತ್ತಿದ್ದು ಅದರ ನೆಲೆಯು ಯಾರಿಗೂ ತಿಳಿಯದಾಗಿದೆ ಒಂದೊಂದು ಸಲ ವೈದ್ಯರು ಕೂಡಾ ಕೈಚೆಲ್ಲಿ ಕುಳಿತುಕೊಳ್ಳುವ ಮಟ್ಟಕ್ಕೆ ಈ ಕಲಿಯುಗದ ಪರಿ ಬಂದು ನಿಂತಿದೆ.