Skip to main content

ಅನುಭವ

ವರ್ಣನೆ

ನಿಮ್ಮ ಅನುಭವಗಳನ್ನು ಹಳೆಯ ನೆನಪುಗಳನ್ನು ಇಲ್ಲಿ ಧಾಖಲಿಸಬಹುದು.

ಕಣ್ಣಿದ್ದೂ ಕುರುಡರು... ಕಿವಿಯಿದ್ದೂ ಕಿವುಡರು... ಆಗಿರಬೇಕೇ...?

ಪ್ರಿಯ ಮಿತ್ರರೇ... ನಾನಿಲ್ಲಿ ಇಂದು ನಿಮ್ಮ ಮುಂದೆ ಪ್ರಸ್ತಾಪಿಸುತ್ತಿರುವ ವಿಷಯ ದಿನ ಬೆಳಗಾದರೆ ದೈನಂದಿನ ಜೀವನದಲ್ಲಿ ನಾವು ಕಣ್ಣಾರೆ ಕಾಣುತ್ತಿರುವ ಕಿವಿಯಾರೆ ಕೇಳುತ್ತಿರುವ ಒಂದು ಪಿಡುಗಿನ ಬಗ್ಗೆಃ
ಅದೇನೂ ಅಂತೀರಾ...?
ಕಿವಿಯಿದ್ದೂ ಕಿವುಡರಂತೆ ಕಣ್ಣಿದ್ದೂ ಕುರುಡರಂತೆ ಯಾರಿಗೆ ಏನಾದರೆ ನಮಗೇನಂತೆ ಎಂದು ಸುಮ್ಮನಿದ್ದುಬಿಡುವ ನಮ್ಮ ಜನ ಸಾಮಾನ್ಯರ ಬಗ್ಗೆ.

ಒಳಿತು ಕೆಡಕು ಸಮಾನವಲ್ಲ

   ಸಂದೇಶವಾಹಕರೇ,  ಒಳಿತು ಮತ್ತು ಕೆಡಕು ಸರಿಸಮಾನವಲ್ಲ, ನೀವು  ಕೆಡಕನ್ನು ಅತ್ಯುತ್ತಮ ಒಳಿತಿನ  ಮೋಲಕ ದೂರೀಕರಿಸಿರಿ.ನಿಮೊಂದಿಗೆ ಹಗೆತನ  ಕಟ್ಟಿಕೊಂಡವನು ನಿಮ್ಮ ಆಪ್ತ ಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.  ಈಗುಣವಿಶೇಷೇವೂ ಸಹನಶೀಲರಿಗಲ್ಲದೆ ಇನ್ನಾರಿಗೂ ಲಭ್ಯವಾಗುವುದಿಲ್ಲ. ಈಸ್ಥಾನವು ಮಹಾ ಅದ್ರುಷ್ಟಶಾಲಿಗಳ ಹೊರತು ಮತ್ತಾರಿಗೂ  ಪ್ರಾಪ್ತವಾಗುವುದಿಲ್ಲ.  (ಪವಿತ್ರ ಕುರ್ ಆನ್)

ವಿಸ್ಮಯ ನಗರಿ ತಾಣದಲ್ಲಿರುವ ಸೌಲಭ್ಯ ಬೇರೆ ಯಾವ ತಾಣದಲ್ಲಿದೆ.

ಮಾನ್ಯರೇ, ವಿಸ್ಮಯ ನಗರಿ ತಾಣದಲ್ಲಿರುವಂತೆ, ನಮ್ಮ ಸಮಸ್ಯೆಗಳನ್ನು ಹೇಳಿ. ಓದುಗರಿಂದ ಅಥವಾ ಮೇಲಧಿಕಾರಿಗಳಿಂದ ಉತ್ತರ ಪಡೆಯುವ. ಪರಸ್ಪರ ವಿಷಯ ಹಂಚಿಕೊಳ್ಳುವ ನೋವು ನಲಿವುಗಳಿಗೆ ಸ್ಪಂದಿಸುವ ತಾಣ ಬೇರೊಂದು ಇದೆಯೇ? ವಿಸ್ಮಯ ನಗರಿ ಇನ್ನೂ ಹೆಚ್ಚು ಬೆಳೆಯಲು, ಪ್ರಪಂಚಾದ್ಯಂತ ಬೆಳೆಯಲು ಏನು ಮಾಡಬೇಕು ತಿಳಿದವರು ತಿಳಿಸುವಿರಾ?

ನಮ್ಮ ದೇಶದಲ್ಲಿ ಉಪಯೋಗಿಸುತ್ತಿರುವ ದಿನಧರ್ಶಿ ಅಥವಾ ಕ್ಯಾಲೆಂಡರ್ ಸರಿಯೇ.?

ಮಾನ್ಯರೇ, ನಮ್ಮ ದೇಶದಲ್ಲಿ ಉಪಯೋಗಿಸುತ್ತಿರುವ ದಿನಧರ್ಶಿ ಅಥವಾ ಕ್ಯಾಲೆಂಡರ್ ಸರಿಯೇ. ಹಿಂದೂಗಳು ಕ್ರಿಸ್ತ ವರ್ಷಾರಂಭವನ್ನೇ ಹೊಸ ವರ್ಷವೆಂದು ಈಗಿನ ಯುವಕರು ಆಚರಿಸುತ್ತಾರೆ. ಅದೇ ನಮ್ಮ ವರ್ಷಾರಂಭ ಅವರಿಗೆ ತಿಳಿದಿಲ್ಲ. ಏಕೆ ನಮ್ಮ ಹಿಂದೂ ಪಂಚಾಂಗವನ್ನು ಜಾರಿಗೆ ತರಬಾರದು. ಇದರಿಂದ ಅನಾನುಕೂಲವೇನು? ತಿಳಿದವರು ತಿಳಿಸುವಿರಾ?

ರಾಜ್ಯದಲ್ಲಿ ವಾಹನ ಕಳ್ಳತನ ತಡೆಯುವುದು ಹೇಗೆ?

ಮಾನ್ಯರೇ, ರಾಜ್ಯದಲ್ಲಿ ಸಾರ್ವಜನಿಕರ ಅಮೂಲ್ಯ ಆಸ್ತಿಗಳಾದ, ದ್ವಿಚಕ್ರ,ತ್ರಿಚಕ್ರ,ನಾಲ್ಕು ಚಕ್ರಗಳ ವಾಹನಗಳ ಕಳ್ಳತನವನ್ನು ತಡೆಯುವುದು ಹೇಗೆ? ಅದಕ್ಕೆ ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು? ಪರಿಹಾರ ಹೇಗೆ? ಇದರಲ್ಲಿ ಸಾರ್ವಜನಿಕರ ಪಾತ್ರ ಮತ್ತು ಪೊಲೀಸರ ಪಾತ್ರವೇನು? ಸರ್ಕಾರ ಏನು ಕ್ರಮ ತೆಗೆದುಕೊಳ್ಳಬಹುದು? ತಿಳಿಸುವಿರಾ?

ನೈಟಿ ಸಂಸ್ಕ್ರುತಿ ಹೆಚ್ಚಾಗುತ್ತಿರುವ ಬಗ್ಗೆ.

Submitted by shreeveda on ಮಂಗಳ, 12/06/2011 - 19:28

ಮಾನ್ಯರೇ ಮತ್ತು ಮಹಿಳೆಯರೇ, ಇತ್ತಿತ್ತಲಾಗಿ, ಮೊಬೈಲ್ ಯುಗ ಬೆಳೆಯುತ್ತದೆ. ಅದಕ್ಕೆ ಸಮನಾಂತರವಾಗಿ ನೈಟಿ ಯುಗ ಕೂಡ ಬೆಳೆಯುತ್ತಿದೆ. ಅದನ್ನು ಎಲ್ಲಿ ಧರಿಸಬೇಕು ಎಲ್ಲಿ ಧರಿಸಬಾರದು ಎಂಬ ನೀತಿ ನಿಯಮ ಇಲ್ಲದಿರುವ ಕಾರಣ ಇಡೀ ಹಗಲು ವಯಸ್ಸಿನ ಅಂತರವಿಲ್ಲದೇ ಧರಿಸಿರುತ್ತಾರೆ. ನೋಡಲು ಮುಜುಗರವಾಗುತ್ತದೆ. ಯಾರಾದರು ಸ್ನೇಹಿತರ ಮನೆಗೋ, ಅಥವಾ ಸಂಬಂಧಿಗಳ  ಮನೆಗೆ ಹೋದರೆ, ಗೃಹಿಣಿಯಿಂದ ಹಿಡಿದು ಯುವತಿಯರು ಸ್ವಾಗತಿಸುವುದು ನೈಟಿ ಅಥವಾ ರಾತ್ರಿ ಉಡುಪಿನಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಬರುವ ತಾಯಂದಿರು ಹೊರಗೆ ಬರುವುದು ರಾತ್ರಿ ಉಡುಪಿನಲ್ಲಿ ಇದು ಎಷ್ಟು ಸರಿ? ದೇವಸ್ಥಾನಕ್ಕೂ ಅದೇ ಉಡುಪಿನಲ್ಲಿ ಬರುವುದರಿಂದ, ಕೆಲವು ದೇವಸ್ಥಾನಗಳಲ್ಲಿ ಬೋರ್ಡ್ ಹಾಕಿರುತ್ತಾರೆ. ಈ ಬೆಳವಣಿಗೆ ಒಳ್ಳೆಯದಲ್ಲ ಅಲ್ಲವೆ?

ಒಬ್ಬ ಮಂದಾಕಿನಿಯ ಪ್ರಶ್ನೆ

  ಪ್ರಿಯ ಮಿತ್ರರೇ,
          ಸರ್ಕಾರಿ ನೌಕರಿಯಲ್ಲಿ ನೌಕರರು ಮೇಲಿನಾಧಿಕಾರಿಗಳ ಮಾತಂತೆ ಕೆಲಸ ಮಾಡಬೇಕೇ?  ಚುನಾಯಿತಿ ಪ್ರತಿನಿಧಿಗಳ ಪರ ಕೆಲಸ  
         ಮಾಡಬೇಕೇ ಅಥವಾ ಕಾನೂನಿನ  ಪ್ರಕಾರ ಕೆಲಸ ಮಾಡಬೇಕೇ? ಅಥವಾ ವ್ಯವಸ್ಥೆಗೆ ಅಡಿಯಾಳಾಗಬೇಕೇ?
 

ಬಡವರ ಬದುಕಿಗೆ ‘ಅರ್ಥ’ವೇ ಇಲ್ವಾ?

Submitted by Lavanya Naga on ಶುಕ್ರ, 10/07/2011 - 13:20

ದಿನಕ್ಕೆ ಒಬ್ಬ ವ್ಯಕ್ತಿ ಕೇವಲ ೨೫ ರೂಪಾಯಿಗಳನ್ನು ಗಳಿಸಿದರೆ ಸಾಕಂತೆ, ಇದಕ್ಕಿಂತ ಹೆಚ್ಚಿಗೆ ಖರ್ಚು ಮಾಡುವವರು ಬಡವರಲ್ಲವಂತೆ. ಈ ರೀತಿ ಮೂರ್ಖತನದ ಹೇಳಿಕೆ ದಾಖಲು ಮಾಡಿರುವುದು ಯೋಜನಾ ಆಯೋಗ. ಒಬ್ಬ ವ್ಯಕ್ತಿಯ ದೀನದ ಖರ್ಚು ೨೫ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅವರು ಸರಕಾರದಿಂದ ಯಾವುದೇ ವಿಶೇಷ ಅನುದಾನ ಪಡೆಯಲು ಅರ್ಹರಲ್ಲ.

ಚರ್ಚಾಕೂಟ, ಸರಕಾರಿ ಅರೆಕಾಲಿಕ ನೌಕರರ ಖಾಯಂಗೆ ಮೊದಲ ಆದ್ಯತೆ

Submitted by suresha on ಭಾನು, 09/25/2011 - 18:39

ಸರಕಾರಿ ಕಚೇರಿಯಲ್ಲಿ ಎಷ್ಟೋ ವರ್ಷಗಳಿಂದ ಅರೆಕಾಲಿಕ / ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಅವರು ಅನುಭವ ಪ್ರಾವಿಣ್ಯರೂ ಆಗಿರುತ್ತಾರೆ ಆದರೂ ಅವರ ಸೇವೆ ಖಾಯಂ ಆಗಿರುವುದಿಲ್ಲ.ಸರಕಾರವು ಅಂಥಹವರಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಲಿಖಿತ ಪರೀಕ್ಷೆ ನಡೆಸೆ, ಉತ್ತೀರ್ಣರಾದವರಿಗೆ ಮೊದಲ ಆದ್ಯತೆ ನೀಡಿ ಖಾಯಂ ಗೊಳಿಸಿದರೆ ತಪ್ಪಾಗುವುದೆ?ಸರಕಾರಿ ಇಲಾಖೆಗಳಲ್ಲಿ ಅನೇಕ ವಿಭಾಗಗಳಲ್ಲಿ ವಿವಿಧ ಅರೆಕಾಲಿಕವಾಗಿ ಸೇವೆ ಸಲ್ಲಿಸುತ್ತಿರುತ್ತಾರೆ ಹಾಗೂ ಅವರು  ಹುದ್ದೆಗೆ ಅರ್ಹತೆಯ ವಿದ್ಯಾಭ್ಯಾಸವೂ ಹೊಂದಿರುತ್ತಾರೆ.