Skip to main content

ಕನ್ನಡ

ನನ್ನ ಜಾಲತಾಣವಾದ www.spn3187.blogspot.in ನೀವು ವಿಕ್ಷೀಸಿದ್ದಿರಾ ?

ವಿಸ್ಮಯ ಸಮೀಕ್ಷೆ

ಅನಿಸಿಕೆಗಳು

JAYARAM NAVAGRAMA ಗುರು, 04/16/2015 - 18:19

ಸೊಗಸಾದ ಲೇಖನ ಬರೆಯುತ್ತೀರಿ ಅಂದ ಹಾಗೆ ಈ ಬ್ಲಾಗ್ ಪ್ರೈವೇಟೋ ಅಥವಾ ಸಾರ್ವಜನಿಕವೋ ಗೊತ್ತಾಗ್ತಾ ಇಲ್ಲ ಇದರಲ್ಲಿ ನಾನು ಕೂಡಾ ಬರೆಯಬೇಕು ಅಭಿಪ್ರಾಯ ಹಂಚಿಕೊ ಬೇಕು ಆದರೆ ಇಮೇಲ್ ಮುಖಾಂತರ ಕಲಿಸುವುದಾದರೆ ಹೇಗೆ ಕಲಿಸಬೇಕು ಕೊಂಚ ತಿಳಿಸಿಕೊಡುವಿರಾ?

shivakumarPn ಮಂಗಳ, 06/30/2015 - 08:18

ನೀವು ಕೂಡ ಲೇಖನ ಬರೆಯಬಹುದು, ಆದರೆ ಅದಕ್ಕೆ ನನ್ನ ಮೇಲ್ ID ಗೆ ಕಳುಹಿಸಿ ನಂತರ  ಅದನ್ನು ನಾನು ನೋಡಿ ಅದನ್ನು ನನ್ನ ಕನ್ನಡದ ತಾಣದಲ್ಲಿ ನಿಗದಿತ ನಮಯದಂದು ಪ್ರಕಟಿಸುತ್ತೇನೆ, ಹಾಗೇ ನಿಮಗೂ ಆ ದಿನ ತಿಳಿಸುತ್ತೇನೆ. www.spn3187.blogspot.in (99% ಕನ್ನಡ, 1% ಇತರೆ) spn3187@gmail.com

ವಿಸ್ಮಯ ನಗರಿಯಲ್ಲಿ ಅನಾಮಿಕ ಅನಿಸಿಕೆ ನಿಲ್ಲಿಸಿರುವದಕ್ಕೆ ನಿಮ್ಮ ಪ್ರತಿಕ್ರಿಯೆ?

ವಿಸ್ಮಯ ಸಮೀಕ್ಷೆ

ಅನಿಸಿಕೆಗಳು

ಹೇಮಾವತಿ ಧ, 04/18/2012 - 12:09

  ಒಳ್ಳೆಯದೆನ್ನುವುದು ಎಲ್ಲಾ ಕಡೆಯಿಂದಲೂ ನಮಗೆ ಸಿಗುವಂತಾಗಲಿ ಅನ್ನೋ ಉದ್ದೇಶ ನನ್ನದು.

ಮೇಲಧಿಕಾರಿ ಧ, 04/18/2012 - 20:16

ಖಂಡಿತವಾಗಿ ಹೇಮಾವತಿ ಅವರೇ, ಇತ್ತೀಚೆಗೆ ಕೆಲವು ಸ್ಪ್ಯಾಮ್ ಗಳು ತೀರಾ ಹೆಚ್ಚಿದ್ದವು. ಅದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಬೇಕಾಗಿ ಬಂತು. ಸ್ಪ್ಯಾಮ್ ತಡೆಗೆ ಸೂಕ್ತ ಕ್ರಮ ಕೈಗೊಂಡ ಕ್ಷಣದಲ್ಲಿ ಈ ಸೌಲಭ್ಯ ಮತ್ತೆ ಬರುವದು.ಆದರೂ ಒಮ್ಮೆ ವಿಸ್ಮಯ ಓದುಗರ ಅನಿಸಿಕೆ ತಿಳಿಯೋಣ ಎಂಬ ಕುತೂಹಲದಿಂದ ಈ ಸಮೀಕ್ಷೆ ಹಾಕಿದ್ದೇನೆ. :)

venkatb83 ಸೋಮ, 04/23/2012 - 18:17

ಇತ್ತೀಚೆಗೆ ಕೆಲವು ಸ್ಪ್ಯಾಮ್ ಗಳು ತೀರಾ ಹೆಚ್ಚಿದ್ದವು. ಅದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಬೇಕಾಗಿ ಬಂತು. ಸ್ಪ್ಯಾಮ್ ತಡೆಗೆ ಸೂಕ್ತ ಕ್ರಮ ಕೈಗೊಂಡ ಕ್ಷಣದಲ್ಲಿ ಈ ಸೌಲಭ್ಯ ಮತ್ತೆ ಬರುವದು. =================================================================== ರಾಜೇಶ್ ಅವ್ರೆ- ಸಧ್ಯಕ್ಕಂತು ಇದು ಒಳ್ಳೆಯ ಕೆಲ್ಸ... ನಾ ಆದಾಗಲೇ ನಿಮಗೆ ಸುಮಾರು ಸಾರಿ ಹೇಳಿದ್ದೆ  ಇಲ್ಲಿ ಸ್ಪಾಮ್ ಜಾಸ್ತಿ ಅಂತ, ಅಲ್ಲದೇ ಅನಾಮಿಕ ಕಾಮೆಂಟ್ ಮಾಡುವವರು 'ಏನೆಲ್ಲಾ' ಕಾಮೆಂಟ್ ಮಾಡುವರು 'ಯಾಕೆ' ಮಾಡುವರು ಎಂದೆಲ್ಲ ನಿಮಗೆ ಗೊತ್ತು, ಈಗ ಸದಸ್ಯರಾದವರು  'ಮಾತ್ರ  ಕಾಮೆಂಟ್ ಮಾಡುವುದ್ದರಿಂದ 'ಏನೇನೋ'  ಬರೆಯಲು ಆಗೋಲ್ಲ.... ಒಳ್ಳೆಯ ಕೆಲ್ಸ-  ನನ್ನ ಬೆಂಬಲ ಇದೆ...
ವಿಸ್ಮಯನಗರಿ ಪರಿಪೂರ್ಣ  ಅನ್ನಿಸುವತ್ತ  ನಿಮ್ಮ ಶ್ರಮ ಅಭಿನಂದನೀಯ....
ಶುಭವಾಗಲಿ...

lokesh ಶನಿ, 04/21/2012 - 12:31

 ವಿಸ್ಮಯನಗರಿಯಲ್ಲಿ ಅನಾಮಿಕರ ಅನಿಸಿಕೆ ತಿಳಿಸಿ  ದಯಮಾಡಿ ಮತ್ತೆ ಆ ಸೌಲಭ್ಯ ನೀಡಿ ಮೇಲಧಿಕಾರಿಯವರೆ 

ತ್ರಿನೇತ್ರ ಸೋಮ, 04/23/2012 - 18:09

ಮೇಲಧಿಕಾರಿಯವರಿಗೆ ನಮಸ್ಕಾರಗಳು.
ಅನಾಮಿಕರಾಗಿ ಬರೆಯುವಾಗ ತಮಗನ್ನಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸಿ ಬರೆದಿದ್ದರೂ ಬಹುತೇಕ ಲೇಖನವನ್ನು / ಅದನ್ನು ಬರೆದ ಲೇಖಕರನ್ನು ತೆಗಳುವುದಕ್ಕಾಗಿ ಏನುಬೇಕಾದರೂ ಬರೆಯುವ ಸಾಧ್ಯತೆಯಿತ್ತು. ಆಗ ಮೇಲಧಿಕಾರಿಯವರಿಗೆ ಕೆಟ್ಟದನ್ನು ತೆಗೆದು ಒಳ್ಳೆಯದನ್ನು ಇರಿಸಿಕೊಳ್ಳುವ ಹೆಚ್ಚುವರಿ ಕೆಲಸ ನಿರ್ವಹಿಸಬೇಕಾಗಿತ್ತು. ಈಗ ಅಭಿಪ್ರಾಯ ಬರೆಯಬೇಕೆಂದರೆ ಇಲ್ಲಿನ ಪ್ರಜೆ ಆಗಿರಲೇಬೇಕು ಆದ್ದರಿಂದ ಎಲ್ಲಿ ನಮ್ಮ ಗುರುತು ಸಿಕ್ಕಿಬಿಡುವುದೋ ಎಂಬ ಅಳುಕಿನಿಂದಾಗಿ ಎಚ್ಚರ ವಹಿಸಿ ಬರೆಯುತ್ತಾರೆ ಆದ್ದರಿಂದ ನಿಮ್ಮ ಈ ನಿರ್ಧಾರ ಸ್ವಾಗತಾರ್ಹ ಎಂದು ನನ್ನ ಅನಿಸಿಕೆ.  

ವಿಸ್ಮಯ ನಗರಿಯಲ್ಲಿ ಇನ್ನೂ ಏನು ಇದ್ದರೆ ಚೆನ್ನ?

ವಿಸ್ಮಯ ಸಮೀಕ್ಷೆ

ಅನಿಸಿಕೆಗಳು

ಹೇಮಾವತಿ ಭಾನು, 03/18/2012 - 19:21

ತಂತ್ರಜ್ಞಾನದ ಬಗ್ಗೆ ಮಾಹಿತಿ ಅತ್ಯಲ್ಪವಾಗಿ ಪ್ರಕಟವಾಗುತ್ತಿವೆ. ಬರಿ ಬೇಸರ ಕಳಿಯೋಕೆ ಮತ್ತೆ ಭಾವನೆಗಳನ್ನು ಹಂಚಿಕೊಳ್ಳೋ ವೇದಿಕೆ ಮಾತ್ರವಲ್ಲ ನಮ್ಮನ್ನ ನಾವು ಈಗಿನ ಜನರೇಷನ್ ಗೆ ಅಪ್ ಡೇಟ್ ಮಾಡಿಕೊಳ್ಳಲಿಕ್ಕೆ ತಂತ್ರಜ್ಞಾನ ಮಾಹಿತಿ ಬೇಕೇ ಬೇಕು ದಯವಿಟ್ಟು ಇದರ ಕಡೆ ಹೆಚ್ಚು ಗಮನಹರಿಸಿ ಸಾರ್. ಬೇರೆ ವೆಬ್ ಸೈಟ್ ಗಳಲ್ಲಿ ಮಾಹಿತಿ ಸಿಗಬಹುದು ಆದರೆ ಕನ್ನಡದಲ್ಲಿ ನಮಗೆ ಅರ್ಥ ಆಗೋ ತರಹ ಮಾಹಿತಿ ಸಿಗಬೇಕು ಅದಕಾಗಿ ಹೆಚ್ಚು ಗಮನಹರಿಸಿ ಸಾರ್.

ಮೇಲಧಿಕಾರಿ ಸೋಮ, 03/26/2012 - 21:27

ನಮಸ್ಕಾರ ಹೇಮಾವತಿ ಅವರೇ,ಖಂಡಿತ ನಿಮ್ಮ ಸಲಹೆಯನ್ನು ಪರಿಗಣಿಸಲಾಗುವದು. :)

ತ್ರಿನೇತ್ರ ಮಂಗಳ, 03/20/2012 - 14:07

ಮಹನೀಯರೇ... ಈ ತಾಣದ ಅಭಿವೃದ್ಧಿ ಮತ್ತು ಉತ್ತಮ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವತ್ತ ನನಗನ್ನಿಸಿದ ಒಂದೆರಡು ಸಲಹೆಗಳನ್ನು ನೀಡಬಯಸುತ್ತೇನೆ.
೧) ಈ "ವಿಸ್ಮಯ ನಗರಿ" ಕನ್ನಡದ ಬೆಳವಣಿಗೆಗಾಗಿ ಕನ್ನಡದ ಉದಯೋನ್ಮುಕ ಬರಹಗಾರರ ಶೃಜನಶೀಲತೆಯನ್ನು ಹೊರತರುವ ಉದ್ದೇಶದಿಂದ ಹುಟ್ಟಿದ್ದು ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ನಿಜ. ಹೀಗಿರುವಾಗ ಅಲ್ಲೊಮ್ಮೆ ಇಲ್ಲೊಮ್ಮೆ ಹಾಯ್... ಹಲೋ... ಹೇಗಿದ್ದೀರಾ... ಚೆನ್ನಾಗಿದ್ದೀರಾ... ನಿಮ್ಮ ಮೊಬೈಲ್ ನಂಬರ್ ಕೊಡ್ತೀರಾಪ್ಲೀಸ್... ನಿಮ್ಮನ್ನು ನೋಡಬೇಕೂ... ಮಾತಾಡಬೇಕೂ ಅನ್ನಿಸ್ತಿದೆ... ಬಹಳ ದಿನಗಳಿಂದ ಕಾಣಲೇ ಇಲ್ಲಾ... ಊಟಾ ಆಯ್ತಾ... ಈ ಥರಾ ಎಲ್ಲಾ ಚಾಟಿಂಗ್ ಮಾಡುವ ರೀತಿ ಉಪಯೋಗಿಸಿಕೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಸೈಟಿನ ಮಹತ್ವವನ್ನು ಕಡಿಮೆ ಮಾಡುತ್ತಿದೆ ಎನ್ನಿಸುತ್ತಿದೆ. ಅಂತಹಾ ಓದುಗರನ್ನು ಅಥವಾ ಪ್ರಜೆಗಳನ್ನು ಖಡಾ ಕಂಡಿತವಾಗಿ ಎಚ್ಚರಿಕೆ ಕೊಟ್ಟು  ಆ ರೀತಿ ಮಾಡದಿರಲು ತಿಳಿಸಿಹೇಳಬೇಕು ಅದನ್ನು ಪಾಲಿಸದೇ ಮತ್ತೂ ಮುಂದುವರೆದಲ್ಲಿ ಅವರನ್ನು ವಿಸ್ಮಯನಗರಿ ಯಿಂದ ತೆಗೆದುಹಾಕಬೇಕು.
ಹಾಗೇನೂ ಮಾಡಲಾಗದಿದ್ದಲ್ಲಿ ಈ ಚಾಟಿಂಗ್ ಗಾಗಿಯೇ ಒಂದು ಅಂಕಣವನ್ನು ಮೀಸಲಿರಿಸಿ ಅದರಲ್ಲಿ ಭಾಗಿಯಾಗಿರುವವರಿಗೆ ಮಾತ್ರಾ ಪರಸ್ಪರರ ಸಂದೇಶಗಳು ಕಾಣುವಂತೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಲ್ಲಿ ಸಾಮಾನ್ಯ ಓದುಗರು ಮಕ್ಕಳು ಇವರಿಗೆ ಎಗ್ಗಾ ಮುಗ್ಗಾ ಹೊತ್ತೂ ಗೊತ್ತೊ ಇಲ್ಲದೇ ಬರೆದು ಪ್ರಕಟಿಸುವ "ಫ್ರೀ ಸಂದೇಶಗಳು" ಅಸಹ್ಯ ಎನ್ನಿಸಿ ನಿಮ್ಮ ವಿಸ್ಮಯ ನಗರಿಯನ್ನು ಬಿಟ್ಟು ಹೋಗಲು ಬಯಸಲೂ ಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕಳಕಳಿಯ ಕೋರಿಕೆ.
೨) ಈ ತಾಣ ಕನ್ನಡದ ಏಳಿಗೆ ಬೆಳವಣಿಗೆಗಾಗಿ ಶ್ರಮಿಸುತ್ತಿರುವಾಗ ಬಹಳಷ್ಟು ಅದರಲ್ಲೂ ಕಿರಿವಯಸ್ಸಿನ ಯುವ ಪ್ರಜೆಗಳು ಇಂಗ್ಲೀಷನ್ನು ತಮ್ಮ ಪ್ರಾಣಕ್ಕಿಂತಾ ಹೆಚ್ಚು ಎಂದು ಪ್ರೀತಿಸುತ್ತಾ ನಿರರ್ಗಳವಾಗಿ ತಮ್ಮ ಭಾಷಾ ಪ್ರಾವೀಣ್ಯತೆ ಮತ್ತು ಶಬ್ಧ ಭಾಂಡಾರದ ಪ್ರಧರ್ಶನ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಕಡೆ ಕನ್ನದದಲ್ಲಿ ಬರೆಯಲು ಸೌಲಭ್ಯ ಕಲ್ಪಿಸಿ ಅದನ್ನು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿ ಸುಲಭಗೊಳಿಸಿದ್ದರೂ ಈ ನವ ಯುವ ಪೀಳಿಗೆಗೆ ಮನವರಿಕೆಯಾಗದೇ ಓದು ಬರಹ ತಿಳಿದ ನಾಗರೀಕರಾಗಿದ್ದರೂ ಏನೂ ಅರಿಯದ ಅನಾಗರೀಕ ಅವಿಧ್ಯಾವಂತರಂತೆ ವರ್ತಿಸುತ್ತಾ ತಾವು ಮಾಡಿದ್ದೇ ಸರಿ ಎಂದು ವಾದಕ್ಕಿಳಿಯುವಷ್ಟರ ಮಟ್ಟಿಗೆ ಕೆಳಹಂತ ತಲುಪಿದ್ದಾರೆ. ಇಂತಹಾ ಪ್ರಜೆಗಳಿಗೆ ಇಲ್ಲಿ ಅವಕಾಶ ಇರಬೇಕೇ ಬೇಡವೇ ಎಂಬುದು ನಿಮಗೆ ಬಿಟ್ಟಿದ್ದು.
ಕನ್ನಡದ ಉಳಿವಿನ ಬಗ್ಗೆ ಮಾತನಾಡುವ ಯಾರಿಗೇ ಆದರೂ ಈ ರೀತಿ ಅನ್ನಿಸುವುದು ಸಹಜ ಹಾಗಾಗಿ ನನ್ನ ಮನದ ಅಳಲನ್ನು ನಿಮ್ಮ ಬಳಿ ತೋಡಿಕೊಂಡೆ ಅಷ್ಟೇ ಬೇರಾರನ್ನೂ ನಿಂದಿಸಲಾಗಲೀ ಅಥವಾ ನನ್ನ ಭಾಷಾ ಪ್ರೇಮದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದಕ್ಕಾಗಲೀ ಹೇಳಿಕೊಳ್ಳಲಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಕಲಿತು ಬೆಳೆದು ಈಗ ಇಂಗ್ಲೀಷ್ ಮತ್ತು ಹಿಂದೀ ಭಾಷೆಗಳನ್ನೂ ಜೀವನ ಮಾರ್ಗಕ್ಕಾಗಿ ಕಲಿತು ಮಾತಾಡುತ್ತಿದ್ದರೂ... ನನ್ನ ಭಾಷೆ ನನ್ನ ನಾಡಾದ ಕನ್ನಡಕ್ಕೆ ನನ್ನ ಪ್ರಥಮ ಆಧ್ಯತೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲಾ ಕನ್ನಡ ಬೆಳೆಸಲು ನಾನು ಮಾಡುತ್ತಿರುವ ಒಂದು ಸಣ್ಣ ಪ್ರಯತ್ನ ಅಷ್ಟೇ....! ದಯಮಾಡಿ ಇದನ್ನು ಯಾರೂ ಅನ್ಯಥಾ ಭಾವಿಸಬಾರದಾಗಿ ವಿನಂತಿ.
ತಮ್ಮ ವಿಶ್ವಾಸಿ -ತ್ರಿನೇತ್ರ.

ತ್ರಿನೇತ್ರ ಧ, 03/21/2012 - 11:57

ಎರಡನೇ ಪ್ಯಾರಾದಲ್ಲಿ ಒಂದು ವಾಕ್ಯ ತಪ್ಪಾಗಿದೆ ದಯಮಾಡಿ ಈ ರೀತಿ ಓದಿಕೊಳ್ಳಿ.
ಹಾಗೇನೂ ಮಾಡಲಾಗದಿದ್ದಲ್ಲಿ ಈ ಚಾಟಿಂಗ್ ಗಾಗಿಯೇ ಒಂದು ಅಂಕಣವನ್ನು ಮೀಸಲಿರಿಸಿ ಅದರಲ್ಲಿ ಭಾಗಿಯಾಗಿರುವವರಿಗೆ ಮಾತ್ರಾ ಪರಸ್ಪರರ ಸಂದೇಶಗಳು ಕಾಣುವಂತೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಹಳ ಉಪಕಾರವಾಗುತ್ತದೆ. ಇಲ್ಲವಾದರೆ  ಸಾಮಾನ್ಯ ಓದುಗರು ಮಕ್ಕಳು ಇವರಿಗೆ ಎಗ್ಗಾ ಮುಗ್ಗಾ ಹೊತ್ತೂ ಗೊತ್ತೂ ಇಲ್ಲದೇ ಮನಸ್ಸಿಗೆ ಬಂದದ್ದನ್ನು ಬರೆದು ಪ್ರಕಟಿಸುವ "ಫ್ರೀ ಸಂದೇಶಗಳು" ಅಸಹ್ಯ ಎನ್ನಿಸಿ ನಿಮ್ಮ ವಿಸ್ಮಯ ನಗರಿಯನ್ನು ಬಿಟ್ಟು ಹೋಗಲು ಬಯಸಲೂ ಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕಳಕಳಿಯ ಕೋರಿಕೆ. -ತ್ರಿನೇತ್ರ.
 

ಮೇಲಧಿಕಾರಿ ಸೋಮ, 03/26/2012 - 21:25

ನಿಮ್ಮ ಸಲಹೆಗಳಿಗೆ ಧನ್ಯವಾದಗಳು ತ್ರಿನೇತ್ರ ಅವರೇ, ವಿಸ್ಮಯ ನಗರಿ ತಾಣದಲ್ಲಿ ಹೊಸ ಲೇಖನ ಗುಣಮಟ್ಟ ನಿಯಮ ಹಾಗೂ ಅನಿಸಿಕೆಗಳ ಗುಣಮಟ್ಟ ನಿಯಮ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಇವು ಪ್ರಕಟವಾಗಿ ಅನುಷ್ಟಾನಕ್ಕೆ ಬರಲಿವೆ, ಇದರೊಂದಿಗೆ ವಿಸ್ಮಯ ನಗರಿ ಹೆಚ್ಚು ಒರಿಜಿನಲ್, ಉತ್ತಮ ಮಾಹಿತಿ, ಮನೋರಂಜನೆ ಅಥವಾ ಅನುಭವ ಭರಿತ ಹೆಚ್ಚು ತಪ್ಪುಗಳಿಲ್ಲದ ಲೇಖನಕ್ಕೆ ಆದ್ಯತೆ ನೀಡುತ್ತದೆ. ಅದೇ ಸಂದರ್ಭದಲ್ಲಿ ನೀವು ತಿಳಿಸಿದಂತಹ ಹೊಸ ಅಪ್ರಬುದ್ಧ ಅನಿಸಿಕೆಗಳು ಸಹ ಅಳಿಸಲ್ಪಡುವವು. ನೀವು ಹೇಳುತ್ತಿರುವ ಚ್ಯಾಟಿಂಗ್ ಅಥವಾ ವಿಸ್ಮಯ ಸಂದೇಶ ಸೌಲಭ್ಯ ವಿಸ್ಮಯ ನಗರಿಯಲ್ಲಿ ಮೊದಲೇ ಲಭ್ಯವಿದೆ. ನನ್ನ ವಿಸ್ಮಯ ವಿಭಾಗದಲ್ಲಿರುವ ವಿಸ್ಮಯ ಸಂದೇಶದ ಮೂಲಕ ಯಾರಿಗೇ ಬೇಕಾದರೂ ಸಂದೇಶ ಕಳುಹಿಸಬಹುದು. ಆಯಾ ವ್ಯಕ್ತಿಗೆ ಸಹ ಸಂದೇಶ ಅವರ ಪ್ರಾಫೈಲ್ ಅಲ್ಲಿ ಹಾಕಬಹುದು.ನಿಜ ಇವಕ್ಕೆ ಸರಿಯಾದ ಪ್ರಚಾರ ಅಥವಾ ಸಹಾಯ ನೀಡುವಲ್ಲಿ ನಾನು ಎಡವಿದ್ದೇನೆ ಎಂಬುದು ನನ್ನ ಭಾವನೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು.

ತ್ರಿನೇತ್ರ ಮಂಗಳ, 03/27/2012 - 09:38

ವಿಸ್ಮಯನಗರಿಯ ಮೇಲಧಿಕಾರಿಯವರೇ. ನನ್ನ ಸಣ್ಣ ಸಲಹೆಗಳನ್ನು ಪರಿಗಣಿಸುವಿರೆಂದು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ಈ ತಾಣ ಮತ್ತಷ್ಟೂ ಉತ್ತಮಗೊಂಡು ಪ್ರಜೆಗಳನ್ನು ರಂಜಿಸಲಿ ಎಂದು ಆಶಿಸುತ್ತಾ ಎದುರು ನೋಡುತ್ತಿದ್ದೇನೆ. -ತ್ರಿನೇತ್ರ.

ಮೇಲಧಿಕಾರಿ ಭಾನು, 04/01/2012 - 08:00

ನಮಸ್ಕಾರ, ಮೊದಲೇ ತಿಳಿಸಿದಂತೆ ವಿಸ್ಮಯ ನಗರಿಯ ಲೇಖನಗಳಿಗೆ ನಿಯಮವನ್ನು ರೂಪಿಸಿದ್ದೇನೆ. ಓದಿ ನಿಮ್ಮ ಸಲಹೆ ಇದ್ದರೆ ತಿಳಿಸಿ.http://www.vismayanagari.com/node/21872 

Jyothi Subrahmanya ಭಾನು, 04/01/2012 - 11:46

ಮೇಲಧಿಕಾರಿಗಳಲ್ಲಿ ನನ್ನದೊಂದು ಮನವಿ. ಮೇಲ್ಕಂಡ ನಿಯಮಗಳೆಲ್ಲವೂ ಚೆನ್ನಾಗಿವೆ.  ಹಾಗೆಯೇ, ನಾವೇ ಬರೆದು ಇಲ್ಲಿ ಪ್ರಕಟಿಸಿದಂತಹ ಲೇಖನಗಳಲ್ಲೇನಾದರೂ ತಪ್ಪುಗಳಿದ್ದಲ್ಲಿ, ಅವನ್ನು ತಿದ್ದಿಕೊಳ್ಳಲು ಅನುಕೂಲವಾಗುವಂತೆ "ಬದಲಿಸು" (edit) ಹಾಗೂ ನಮಗೆ ಮುಜುಗರ ತರುವಂತಹ ಅನಿಸಿಕೆಗಳನ್ನು ಯಾರಾದರೂ ನೀಡಿದ್ದಲ್ಲಿ, "ತೆಗೆದು ಹಾಕು"  (delete) ಈ ಎರಡು ಅನುಕೂಲಗಳನ್ನು ಮಾಡಿಕೊಡಬೇಕಾಗಿ ವಿನಂತಿ.  ಹಾಗೆಯೇ ಕೆಲವೊಮ್ಮೆ ಅಂತರ್ಜಾಲದ ತೊಂದರೆಯಿಂದಾಗಿ, ಒಂದೇ ಅನಿಸಿಕೆ, ಚಿತ್ರ, ವೀಡಿಯೋ ಇತ್ಯಾದಿಗಳನ್ನು ಎರಡೆರಡು ಬಾರಿ ಕಳುಹಿಸಲಾಗಿ ಅವು ಒಂದಕ್ಕಿಂತ ಹೆಚ್ಚು ಬಾರಿ ಪ್ರಕಟಗೊಂಡಿರುತ್ತವೆ.  ಅಂತಹ ಸಂದರ್ಭಗಳಲ್ಲಿ, ಅವನ್ನು ತೆಗೆದುಹಾಕುವ ಅನುಕೂಲತೆಯನ್ನೂ ಒದಗಿಸಿಕೊಡಬೇಕಾಗಿ ಮನವಿ. ಇವೆಲ್ಲದರ ಜೊತೆಗೆ, ಈ ಮೊದಲು ನಾನು ನಿಮ್ಮಲ್ಲಿ ಕೇಳಿಕೊಂಡಂತೆ, ವಿಸ್ಮಯದಿಂದ ನಮ್ಮ ಪ್ರೊಫೈಲ್ ನ್ನು ಶಾಶ್ವತವಾಗಿ ಮುಚ್ಚಿ ಹೊರಹೋಗುವ  ಅನುಕೂಲತೆಗಳನ್ನು ಮಾಡಿಕೊಟ್ಟರೂ ಒಳ್ಳೆಯದು. ಈ ಮೂಲಕ ಹೊರಹೋದ ಸದಸ್ಯರ ಲೇಖನಗಳು, ಅನಿಸಿಕೆಗಳ ಜಾಗದಲ್ಲಿ ಹೊಸ ಲೇಖಕರ, ಉದಯೋನ್ಮುಖ ಕವಿಗಳ ಕವಿತೆ, ಲೇಖನಗಳಿಗೆ ಸ್ಥಳ ಕಲ್ಪಿಸಿಕೊಡಲು ಅನುಕೂಲವಾಗುತ್ತದೆ.   ಈಗಾಗ್ಲೇ ಪ್ರಕಟಗೊಂಡ ಕೆಲ ಹಾಸ್ಯಗಳು, ಮೊಬೈಲ್ ನ ಕೆಲ ಹಾಸ್ಯ ಸಂದೇಶಗಳನ್ನು ಇಲ್ಲಿ ಹಾಕುವುದನ್ನು ನಿರ್ಬಂಧಿಸಿದಲ್ಲಿ, ಹೊಸತಾದ ಉತ್ತಮ  ಹಾಸ್ಯಗಳನ್ನು ಎದುರು ನೋಡಬಹುದೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ.     ಧನ್ಯವಾದಗಳೊಂದಿಗೆ,   ಜ್ಯೋತಿ ಸುಬ್ರಹ್ಮಣ್ಯ ಭಟ್.      

ತ್ರಿನೇತ್ರ ಸೋಮ, 04/09/2012 - 10:18

ಮೇಲಧಿಕಾರಿಯವರಿಗೆ ತುಂಬಾ ತುಂಬಾ ಧನ್ಯವಾದಗಳು. ತಮ್ಮ ವಿಸ್ಮಯನಗರಿಯಲ್ಲಿ ಬರೆಯುವವರಿಗಾಗಿ ಪ್ರಕಟಿಸಿರುವ ಪರಿಷ್ಕರಿಸಿದ ನಿಯಮಾವಳಿಗಳು ನಿಜವಾಗಿಯೂ ನಿಮ್ಮ ಸಾಧನೆಯ ಹಾದಿಯಲ್ಲಿ ಹೂವಾಗಿ ಅರಳುವುದು ಕಂಡಿತಾ. ಇದರಿಂದ ಕನ್ನಡದ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ ಎಂದು ನನ್ನ ಭಾವನೆ.  ಈ ನಿಟ್ಟಿನಲ್ಲಿ ತಾವು ಪಡುತ್ತಿರುವ ಶ್ರಮ ಸಾರ್ಥಕವಾಗಲೆಂದು ಹಾರೈಸುವ -ತ್ರಿನೇತ್ರ.

ರವಿಶಾಂತ್ ಗುರು, 07/19/2012 - 21:16

ಮೇಲಾಧಿಕಾರಿಗಳಿಗೆ  ಪ್ರಥಮವಾಗಿ ನನ್ನ ಚ್ಚೊಚ್ಚಲ ಪ್ರಣಾಮಗಳು.


ನಮ್ಮ ಕನ್ನಡಿಗರ ಈ ನಗರದಲ್ಲಿ "ಪದಬಂದ" ಎಂಬ ಪದಗಳ ಆಟ ಮತ್ತು "ಪದ ಕೋಶ" ಅಥವ "ಶಬ್ದ ಕೋಶ"ದ  (ಡಿಕ್ಷನರಿಯ) ಅವಶ್ಯಕತೆಯಿದೆ ದಯಮಾಡಿ ಕರುಣಿಸಿ.


 

ಮೇಲಧಿಕಾರಿ ಗುರು, 07/19/2012 - 22:23

ನಮಸ್ಕಾರ ರವಿಶಾಂತ್ ಅವರೇ,


ಪದಬಂದದ ಸಾಫ್ಟವೇರ್ ಒಂದನ್ನು ಮಾಡಬೇಕು ಎಂಬ ಯೋಜನೆ ಹಿಂದೊಮ್ಮೆ ಬಂದಿತ್ತು. ಆದರೆ ಅದನ್ನು ಡೆವೆಲಪ್ ಮಾಡಲು ಬೇಕಾದ ಶ್ರಮ ಹಾಗೂ ವೆಚ್ಚ ಮತ್ತು ಕನ್ನಡದಲ್ಲಿ ಕಡಿಮೆ ಜನ ಬಳಕೆಯ ಸಾಧ್ಯತೆ ಇವೆರಡೂ ಹಿಂಜರಿಯುವಂತೆ ಮಾಡಿತು. ಹೆಚ್ಚು ಜನ ಬಳಸಲು ಮುಂದೆ ಬಂದರೆ ಡೆವೆಲಪ್ ಮಾಡಬಹುದು. ಇದೊಂದು ರೀತಿಯಲ್ಲಿ ಬೇಡಿಕೆಯ ನಿಯಮಕ್ಕೆ ಅನುಗುಣವಾಗಿರುತ್ತದೆ.


ವಿಸ್ಮಯ ನಗರಿಯಲ್ಲಿ ಈಗಾಗಲೇ ಪದ ಭಂಡಾರಿ ಎಂಬ ಪದ ಕೋಶ ಲಭ್ಯವಿದೆ. ಆಸಕ್ತರು ಪದ ಸೇರಿಸಿ ಬೆಂಬಲಿಸಬಹುದು.

ರವಿಶಾಂತ್ ಶುಕ್ರ, 07/20/2012 - 11:16

ಮೇಲಾಧಿಕಾರಿಗಳಿಗೆ, ನನ್ನ ಹೃತ್ಪೂರ್ವಕ ನಮನಗಳು,


ಈ ಕಿರಿಯನ ಅನಿಸಿಕೆಗೆ  ಒಗೊಟ್ಟು, ಪ್ರತಿಕ್ರಿಯಿಸಿದಕ್ಕೆ,  ಮತ್ತೋಮ್ಮೆ ನಮನಗಳು,


ನೀವು ಹೇಳಿದಂತೆ (ಪದಬಂದದ ಸಾಫ್ಟವೇರ್ ಒಂದನ್ನು ಮಾಡಬೇಕು ಎಂಬ ಯೋಜನೆ ಹಿಂದೊಮ್ಮೆ ಬಂದಿತ್ತು. ಆದರೆ ಅದನ್ನು ಡೆವೆಲಪ್ ಮಾಡಲು ಬೇಕಾದ ಶ್ರಮ ಹಾಗೂ ವೆಚ್ಚ ಮತ್ತು ಕನ್ನಡದಲ್ಲಿ ಕಡಿಮೆ ಜನ ಬಳಕೆಯ ಸಾಧ್ಯತೆ ಇವೆರಡೂ ಹಿಂಜರಿಯುವಂತೆ ಮಾಡಿತು)ನಿಜ, ಇರಬಹುದು ಆದರೆ ಅದು ಆವಾಗ. ಇತ್ತೀಚಿನ ದಿನಗಳಲ್ಲಿ ನಮ್ಮ ವಿಸ್ಮಯ ನಗರಿ ಬೆಳೆದು ನಿಂತಿದೆ, ತುಂಬಾ ಜನ ಇದರ ಉಪಯೋಗ ಪಡೆದುಕೊಳ್ಳುತಿದ್ದಾರೆ.


ದಯಮಾಡಿ, ಪದಬಂಧ ತಂತ್ರಾಂಶವನ್ನು ಅಭಿವೃದ್ಧಿಗೋಳಿಸಿ ಎಂದು ತಮ್ಮಲ್ಲಿ ಮತ್ತೋಂಮ್ಮೆ ಈ ಮೂಲಕ ಕಳಕಲಿಯ ಮನವಿ


"ದಯಮಾಡಿ ತಾವುಗಳು ಆದಷ್ಟು ಕನ್ನಡದ ಪದಗಳನ್ನು ಉಪಯೋಗಿಸಿ ಎಂದು ಬೇಡಿ ಕೊಳ್ಳುತ್ತೇನೆ"


ಕಾರಣವಿಷ್ಟೆ, ತಾವುಗಳು ನನ್ನಗೆ ಕಳುಹಿಸಿದ ಉತ್ತರದಲ್ಲಿ ಆಂಗ್ಲಭಾಷೆಯ ಪದಗಳನ್ನು ಕನ್ನಡದಲ್ಲಿ ಬರೆದು ಉತ್ತರಿಸಿದ್ದೀರೀ.


(ಉದಾ ;-    ಸಾಫ್ಟವೇರ್,ಡೆವೆಲಪ್,)


ಇದನ್ನು ನೋಡಿದ ಹಲವರು "ಯಜಮಾನನೇ ಕೋಳಿ ಕದ್ದ"ದಂತೆ, ಎಂದು ಆಡಿಕೊಳ್ಳಲು ಅಣಿಯಾಗದಿರಿ ಎಂದು ಕೇಳಿಕೊಳ್ಳುತ್ತೇನೆ


ನನ್ನ ಅನಿಸಿಕೆ ತಪ್ಪಿದ್ದರೆ ದಯಮಾಡಿ ಕ್ಷಮಿಸಿ.


ಧನ್ಯವಾದಗಳು.

ಮೇಲಧಿಕಾರಿ ಶನಿ, 07/21/2012 - 06:41

ನಮಸ್ಕಾರ ರವಿಶಾಂತ್ ಅವರೇ,


ಸಾಫ್ಟವೇರ್ ಹಾಗೂ ಡೆವೆಲಪ್ ಮೆಂಟು ಇವೆಲ್ಲ ಕನ್ನಡದ್ದೇ ಪದಗಳೇನೋ ಎಂಬಂತೆ ರೂಡಿಗತವಾಗಿದೆ. ತಂತ್ರಾಂಶ, ಲಘುವರ, ಮೆದು ಮೇದಕ ಮೊದಲಾದ ಪದ ಕೆಲವು ಪಂಡಿತರು ಸೃಷ್ಟಿಸಿದ್ದರೂ ಅದನ್ನು ಯಾರೂ ಬಳಸುತ್ತಿಲ್ಲ. ಯಾರಿಗೂ ಅರ್ಥ ಆಗದ ಅಂತಹ ಪದ ಬಳಸುವದಕ್ಕಿಂತ ರೂಡಿಗತ ಆಗಿರುವ ಪದ ಬಳಸಿ ಅದನ್ನು ಕನ್ನಡಕ್ಕೆ ಸೇರಿಸಬೇಕು.


ಹಾಗೆ ನೋಡಿದರೆ ಕುರ್ಚಿ, ಮಂಚ,ಫೋನು, ಬಸ್ಸು, ಕಾರು, ಮೊಬೈಲು ಕನ್ನಡ ಪದಗಳೇ ಅಲ್ಲ. ಯಾವ ಪದ ರೂಡಿಗತವಾಗಿದೆಯೋ ಅಥವಾ ಕನ್ನಡದಲ್ಲಿ ಪರ್ಯಾಯ ಉತ್ತಮ ಪದ ಇಲ್ಲವೋ ಅದನ್ನು ಕನ್ನಡ ನಿಘಂಟಿಗೆ ಸೇರಿಸಬೇಕು. ಆಗ ಕನ್ನಡ ಬೆಳೆಯುತ್ತದೆ. ಇಂದು ತಂತ್ರಜ್ಞಾನದಲ್ಲಿ ಕನ್ನಡದಲ್ಲಿ ಹೆಚ್ಚು ಜ್ಞಾನ ಬರಬೇಕೆಂದರೆ ಇದು ಅನಿವಾರ್ಯ.


ಇಂಗ್ಲೀಷ್ ಬೆಳೆದಿರುವದು ಹಾಗೆಯೆ. ಫ್ರೆಂಚ್, ಜರ್ಮನ್ ಭಾಷೆಗಳೂ ಸಹ ಇದೇ ನೀತಿ ಅನುಸರಿಸುತ್ತಿವೆ.


ಕನ್ನಡ ನಿಂತ ನೀರಾಗಬಾರದು. ಅಲ್ವಾ?


ಇದು ನನ್ನ ಅನಿಸಿಕೆ.

ಪಿಸುಮಾತು ಶನಿ, 07/21/2012 - 11:48

ರಾಜೇಶ್ ಅವರೇ, ಅನೇಕ ಆಂಗ್ಲ ಪದಗಳು ಕನ್ನಡದ್ದೇ ಎನ್ನುವಂತೆ ಬಳಕೆಯಾಗುತ್ತಿರುವುದೇನೋ ನಿಜ. ಕೆಲವೊಂದು ಪದಗಳಿಗೆ ಕನ್ನಡದಲ್ಲಿ ಸೂಕ್ತ ಪದಗಳೂ ಇಲ್ಲ. ಆದರೂ "ಗಣಕ, ಜಾಲತಾಣ, ಜಾಲಿಗ, ಮಿನ್ನಂಚೆ, ತಂತ್ರಾಂಶ, ತಂತ್ರಾಂಶ ಅಭಿವೃದ್ಧಿ" ಎಂಬಂತಹ ಅನೇಕ ಕನ್ನಡ ಪದಗಳು ಯಥೇಚ್ಚವಾಗಿ ಬಳಕೆಯಲ್ಲಿದ್ದು ಅದು ಬಹುತೇಕ ಎಲ್ಲರಿಗೂ ಅರ್ಥವಾಗುತ್ತವೆ. ಆದುದರಿಂದ ಇಂತಹ ಪದಗಳನ್ನು ಬಳಕೆ ಮಾಡಿ ತಂತ್ರಾಂಶದ ವಿಷಯದಲ್ಲಿ ಕನ್ನಡವನ್ನು ಸಂಪೂರ್ಣ ಆಂಗ್ಲದ ಅವಲಂಭಿತ ಭಾಷೆಯಾಗುವುದರಿಂದ ತಪ್ಪಿಸಬಹುದು. ಅದರಲ್ಲೂ ನಿಮ್ಮಂತಹ ಜವಾಬ್ದಾರಿಯ ಸ್ಥಾನದಲ್ಲಿರುವವರು ಹೀಗೆ ಮಾಡುವುದರಿಂದ ಉಳಿದವರೂ ಅದನ್ನು ಅನುಸರಿಸಲು ಸಹಕಾರಿಯಾಗುತ್ತದೆ. 


***

ತಾಣಕ್ಕೆ ಹೆಚ್ಚು ಹೆಚ್ಚು ಜನರು ಬಂದಷ್ಟೂ ತಾಣದ ಮಹತ್ವ ಹೆಚ್ಚುತ್ತದೆ. ಪ್ರತಿ ಲೇಖನದ ಕೊನೆಗೆ ಫೇಸ್‌ಬುಕ್, ಗೂಗಲ್ + ಮುಂತಾದೆಡೆ ಕೊಂಡಿಯನ್ನು ವಿತರಿಸುವಂತೆ ಗುಂಡಿಗಳನ್ನು ನೀಡುವ ವ್ಯವಸ್ಥೆ ಮಾಡಿದರೆ ಉತ್ತಮ. ಇದರಿಂದಾಗಿ ಈ ತಾಣದ ಬಗ್ಗೆ ಮಾಹಿತಿ ಇಲ್ಲದವರಿಗೂ ಸರಳವಾಗಿ ಒಬ್ಬರಿಂದೊಬ್ಬರಿಗೆ ವಿಷಯ ಹರಡುತ್ತದೆ. ಇದನ್ನು ನಿಮಗೆ ಈ ಹಿಂದೆಯೇ ಒಮ್ಮೆ ಹೇಳಿದ್ದೆ. 

ರವಿಶಾಂತ್ ಶನಿ, 07/21/2012 - 11:52

ನಮನಕ್ಕೆ ನಮನ ನಲ್ಮೆಯ ಮೇಲಾಧಿಕಾರಿಗಳಿಗೆ,


ನೀವು ಹೇಳುವುದು ಸರಿಯೇ, ಆದರು ಸಾಫ್ಟವೇರ್ ಹಾಗೂ ಡೆವೆಲಪ್ ಮೆಂಟ್ ಪದಗಳಿಗಿಂತ ಉತ್ತಮ ಪದಗಳಾದ, ತಂತ್ರಾಂಶ & ಅಭಿವೃದ್ಧಿ ಪದಗಳಿರುವುದರಿಂದ ಅವುಗಳನ್ನೆ ಬಳಸುವುದು ಅತ್ತುತ್ತಮ ಎಂಬುದು ನನ್ನ ಅನಿಸಿಕೆ.


ನಿಮ್ಮ ಅನಿಸಿಕೆಯ ಪ್ರಕಾರ ಕುರ್ಚಿ, ಮಂಚ,ಫೋನು, ಬಸ್ಸು, ಕಾರು, ಮೊಬೈಲುಗಳೆಂಬ ಪದಗಳಿಗೆ ನಿಮ್ಮ ನಿಯಮ ಅಳವಡಿಸಬಹುದು. ನಿಜ ಈ ಪದಗಳಿಗೆ ಕನ್ನಡದಲ್ಲಿ ಉತ್ತಮ ಪದಗಳಿಲ್ಲ. ನಿಮ್ಮ ಅನಿಸಿಕೆಯು ಇಲ್ಲಿ ಪ್ರತಿಬಿಂಬಿಸುತ್ತದೆ.


ನನಗೆ ತಿಳಿದದ್ದನ್ನು ನಾನು ಹೇಳಿದೆ, ನನ್ನ ಅನಿಸಿಕೆಯನ್ನು ಅನ್ಯತ ಭಾವಿಸದಿರಿ,


ನನ್ನಿಂದ ತಪ್ಪಾಗಿದ್ದರೆ, ತಾವುಗಳು ದಯಮಾಡಿ ಈ ಕಿರಿಯನ್ನನ್ನು ಕ್ಷಮಿಸಬೇಕಾಗಿ ಈ ಮೂಲಕ ಮನವಿ.


 

ಪಿಸುಮಾತು ಶನಿ, 07/21/2012 - 16:25


ರವಿಶಾಂತ್ ಅವರು ಹೇಳಿರುವಂತೆ "ಪದಬಂಧ" ಎಂಬ ಒಂದು ವಿಭಾಗ ಇದ್ದರೆ ಚೆನ್ನ. ಆದರೆ ಅದನ್ನು ರೂಪಿಸುವುದು ತುಂಬಾ ಕಷ್ಟ ಎಂಬುದು ನನಗೂ ಗೊತ್ತು. ಆದರೂ ಪ್ರಯತ್ನಿಸಿರಿ. ಕನ್ನಡದಲ್ಲಿ ಯಾವುದೂ ಇಂತಹ ತಾಣಗಳಿಲ್ಲ. ನಾನೂ ಪ್ರಯತ್ನಿಸುತ್ತೇನೆ.


ಮತ್ತು ತ್ರಿನೇತ್ರ ಅವರು ಹೇಳಿರುವಂತೆ ಸಂಭಾಷಣೆಗಾಗಿಯೇ (ಚಾಟ್‌) ಒಂದು ಬಾಕ್ಸ್ ನೀಡಲು ಸಾಧ್ಯವೇ ಪ್ರಯತ್ನಿಸಿರಿ. ಇದನ್ನೂ ಸಹ ನಾನು ಈ ಹಿಂದೆಯೇ ನಿಮಗೆ ತಿಳಿಸಿದ್ದೆ.