Skip to main content

ಧಾರ್ಮಿಕ

ವರ್ಣನೆ

ಧಾರ್ಮಿಕ ವಿಷಯದ ಬಗ್ಗೆ ಇಲ್ಲಿ ಚರ್ಚೆ ನಡೆಸಿ.

ಕಾಣಿಕೆ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನನ್ನೊಳಗೆ ಕೆಲವೊಂದು ಪ್ರಶ್ನೆಗಳು ಕಾಡುತ್ತಿವೆ.  ತಮ್ಮಿಂದ  ಸರಿಯಾದ ಉತ್ತರ,ತಿಳುವಳಿಕೆ ಸಿಗಬಹುದೆಂಬ ನಿರೀಕ್ಷೆ.

1. ಎಲ್ಲೆಂದರಲ್ಲಿ ಹೊಸ ಹೊಸ ದೇವಸ್ಥಾನಗಳು   ಹುಟ್ಟಿಕೊಳ್ಳುತ್ತಿವೆಯಲ್ಲ,ಇದು ಸರಿಯಾ?  

2. ಎಲ್ಲರ ಹಣೆಬರಹ ಆ ಬ್ರಹ್ಮನೇ ಬರೆದಿರುತ್ತಾನೆ ಅಂತ ಹೇಳುವವರೇ ಜಾತಕ ತೆಗೆದುಕೊಂಡು ಜ್ಯೋತಿಷಿಗಳಲ್ಲಿ ವಿಚಾರಿಸಿ ದುಡ್ಡು ಸುರಿಯುತ್ತಿರುವರಲ್ಲ, ಇದು ಸರಿಯಾ?

3. ದೇವಸ್ಥಾನದ ಹುಂಡಿಗೆ  ಹಾಕಿದ ಹಣ ಸಮಾಜ ಸೇವೆಗೆ ವಿನಿಯೋಗ ಆಗುವುದು ಸರಿಯಲ್ಲವೆ?  ಆಗುತ್ತಿದೆಯೆ?

 

ವರನ ಪಾದಪೂಜೆಯ ಬಗ್ಗೆ ಮಾಹಿತಿ

ಮಾನ್ಯರೇ, ಸಾಮಾನ್ಯವಾಗಿ ಹಿಂದೂ ಸಂಪ್ರಾದಾಯಿಕ ಮದುವೆಗಳಲ್ಲಿ ವಧುವಿನ ತಂದೆ ತಾಯಿಗಳು ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಸಹ ವರನ ಪಾದಪೂಜೆ ಮಾಡುತ್ತಾರೆ. ಏಕೆ? ತಿಳಿದವರು ಈ ಬಗ್ಗೆ ದಯವಿಟ್ಟು ತಿಳಿಸುವಿರಾ? 


 

ಧರ್ಮ ಅಂದರೆ ಏನು?

 ಧರ್ಮ ಅಂದರೆ ಏನು?

   ಸ್ನೇಹಿತರೇ ಧರ್ಮದ ಬಗ್ಗೆ ಪ್ರತಿಯೊಬ್ಬರಲ್ಲೂ ಒಂದೊಂದು ಭಾವನೆಗಳಿರುತ್ತವೆ. ಈ ಬಗ್ಗೆ ನಮ್ಮನ್ನ ನಾವು ಸ್ವ ವಿಮರ್ಶೆ ಮಾಡಿಕೊಳ್ಳೋಣವೇ?

 

ಧರ್ಮ ಸಂಕಟ

Submitted by sathya on ಭಾನು, 11/21/2010 - 12:12

 ಕೃಷ್ಣ ಒಂದು ಹೇಳ್ತಾನೇ " ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ, ಪ್ರಿಯಂಚ ನನ್ರುಥಮ್ ಬ್ರೂಯಾತ್ ಏಶ ಧರ್ಮ ಸನಾತನ" " ಸತ್ಯವನ್ನೇ ಹೇಳು ಪ್ರಿಯವಾದುದನ್ನೇ ಹೇಳು, ಅಪ್ರಿಯವಾದ ಸತ್ಯವನ್ನೆಂದೂ ಹೇಳಬೇಡ, . ಅಪ್ರಿಯವಾದ ಸುಳ್ಳನ್ನೂ ಹೇಳಬೇಡ ಇದು ಸನಾತನ ಧರ್ಮ ಬೋದಿಸಿದ ಮಂತ್ರ" ಹಾಗಾದರೆ ಯಾವುದು ಸತ್ಯ?ಸತ್ಯ ಅಂದರೆ ನಾವು ತಿಳಿದುಕೊಂಡಾಗೇ ಇದ್ದದ್ದನ್ನು ಇದ್ದ ಹಾಗೆ ಹೇಳೋದು ಸತ್ಯ'ಆದರೆ ಕೃಷ್ಣ ಹೇಳುವ ಅಥವಾ ಸನಾತನ ಧರ್ಮ ಹೇಳುವ ರೀತಿ ನೋಡಿದರೆ ಗೊಂದಲ ವಾಗುತ್ತೆಯಾಕೆಂದರೆ ಅದು ಸತ್ಯವನ್ನೇ ಹೇಳು ಅಂತದೆ  ಪ್ರಿಯವಾದುದನ್ನೇ ಹೇಳು ಅನ್ನುತದೆ.

ಶಿವನ ತಪಸ್ಸು

Submitted by Vinaya.g on ಸೋಮ, 06/28/2010 - 13:56

ಮಾನವರು ಮತ್ತು ದಾನವರು ಬ್ರಹ್ಮ ವಿಷ್ಣು ಶಿವರನ್ನು ಕುರಿತು ತಪಸ್ಸು ಮಾಡುತ್ತಾರೆ ಸರಿ..... ಆದರೆ  ಶಿವನು ಯಾರನ್ನು ಕುರಿತು ತಪಸ್ಸು ಮಾಡುತ್ತಾನೆ ಎನ್ನುವುದೇ ನನ್ನ ಸಂಶಯ?..

ಗುರುರಾಜರ ಈ ಕೃತಿಯ ಸಾಲಿನ ಅರ್ಥವೇನೆಂದು ಹೇಳಬಲ್ಲಿರಾ?

ನಮಗೆಲ್ಲರಿಗೂ ಗೊತ್ತಿರುವಂತೆ ಗುರುರಾಜ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಏನಗೆ ಗೋವಿಂದ.." ಕನ್ನಡದಲ್ಲಿ ಅವರು ಬರೆದ ಅಪರೂಪದ ಕೃತಿಗಳಲ್ಲಿ ಒಂದು.ಇದರಲ್ಲಿ ಬರುವ ಒಂದು ಸಾಲುಃ

"ಧಾರುಣಿಯೊಳು ಭೂಭಾರಜೀವ ನನಾಗಿ, ದಾರಿತಪ್ಪಿ ನೆಡೆದೆ ಸೇರಿದೆ ಕುಜನರ"

ಆಧ್ಯಾತ್ಮದಿಂದ ಇಂದಿನ ಜನಾಂಗ ದೂರ ಸರಿಯುತ್ತಿರುವುದು ಸರಿಯೆ??

ನಮ್ಮ ದೇಶ ಆಧ್ಯಾತ್ಮದ ತಳಹದಿಯಲ್ಲಿ ನಿಂತಿದೆ. ಅನಾದಿ ಕಾಲದಿಂದಲೂ ಭಾರತ ಆಧ್ಯಾತ್ಮಿಕತೆಯಲ್ಲಿ ಉನ್ನತ ಮಟ್ಟದಲ್ಲಿದೆ. ಆದರೆ ಇಂದು ಆಧ್ಯಾತ್ಮಿಕತೆಯು ಕೇವಲ ವಯಸ್ಸಾದವರಿಗೆ ಮಾತ್ರ ಎಂಬ ಭಾವನೆ ಎಲ್ಲರಲ್ಲೂ ಬೇರೂರಿಬಿಟ್ಟಿದೆ. ಹೀಗಿರುವಾಗ ಆಧ್ಯಾತ್ಮದಿಂದ ಇಂದಿನ ಜನಾಂಗ ದೂರ ಸರಿಯುತ್ತಿರುವುದು ಸರಿಯೆ??

ವೇದಾಭ್ಯಾಸ

Submitted by _V_K_ on ಸೋಮ, 11/02/2009 - 14:43

ವೇದಾಭ್ಯಾಸ ಕೇವಲ ಹುಟ್ಟಿನಿಂದ ಬ್ರಾಹ್ಮಣರಾಗಿರುವವರಿಗೆ ಮೀಸಲು ಎಂಬುದು ಈಗಿನ ಶಾಸ್ತ್ರ ಪಟುಗಳು ಪಾಲಿಸಿಕೊಂಡು ಬರುತ್ತಿರುವ ಧರ್ಮ(?). ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಅದು ನಿಜಕ್ಕೂ ಶಾಸ್ತ್ರಗಳಲ್ಲಿ ಹೇಳಲ್ಪಟ್ಟದ್ದೇ?
-ಈ ವಿಷಯ ಯಾವುದಾದರೂ ರಾಜಕೀಯಕ್ಕೊಳಗಾಗಿದೆಯೇ?
-ಈ ಮನಸ್ಥಿತಿಯ ಅನಿವಾರ್ಯತೆ ಈಗ ಇದೆಯೇ?