Skip to main content

ಶಿಕ್ಷಣ

ನಮ್ಮ ಶಾಲೆ

ಇಂದ prabhu
ಬರೆದಿದ್ದುJanuary 2, 2019
noಅನಿಸಿಕೆ

ನಮ್ಮ ಊರ ನಮ್ಮ ಶಾಲೆ
ನಮ್ಮದೆಂಬ ಹೆಮ್ಮೆ|
ನೋಡ ಬನ್ನಿ ಊರ ಹೊರಗೆ
ವಿದ್ಯಾ ಮಂದರನೊಮ್ಮೆ||೧||
ಒಂದರಿಂದ ಎಂಟನೆ ತರಗತಿ
ನಡೆವವಿಲ್ಲಿ ಪ್ರತಿದಿನ|
ಜ್ಞಾನ ವಿಜ್ಞಾನ ಜೊತೆಗೆ
ನಿತ್ಯ ಪಾಠ ಹೊಸತನ||೨||
ಬೆಳಗಿನಿಂದ ಉತ್ಸಾಹದಿ
ವಿಷಯಗಳ ಪಾಠ|
ಶಾಲೆ ಬಿಟ್ಟ ನಂತರ
ಮೈದಾನದಿ ಆಟ||೩||

ಆಟ

ಇಂದ prabhu
ಬರೆದಿದ್ದುJanuary 1, 2019
noಅನಿಸಿಕೆ

ಅಪ್ಪ ಅಪ್ಪ ನನ್ನ ನೀನು
ಕುಂಕಿ ಮರಿ ಮಾಡು|
ಬೆನ್ನ ಮೇಲೆ ಹತ್ತಿಸಿಕೊಂಡು
ವೇಗದಲ್ಲಿ ಓಡು||೧||
ಹೆಗಲ ಮೇಲೆ ಕೂರಿಸಿಕೊಂಡು
ಕೋತಿಮರಿ ಮಾಡಿಸು|
ಕಾಲ ಮೇಲೆ ಕೂಡಿಸಿಕೊಂಡು
ಆನೆ ಆಟ ಆಡಿಸು||೨||
ಹೊಟ್ಟೆ ಹಿಡಿದು ಮೇಲೆ ತೂರಿ
ಅವುಕ್ಕಲೇ ಕಳ್ಳ ಎನಿಸು|
ರಟ್ಟೆ ಹಿಡಿದು ಗಿರ ಗಿರ ತಿರುಗಿ

ಲಾಲಿಹಾಡು

ಇಂದ prabhu
ಬರೆದಿದ್ದುJanuary 1, 2019
noಅನಿಸಿಕೆ

ಟಿವ್ಹಿ ಮೋಬೈಲ್ ಏನೂ ಬೇಡ
ನೀನು ಬೇಕು ಅಮ್ಮ|
ನೀನು ಹೇಳೋ ಲಾಲಿ ಕೇಳೋ
ಆಶೆ ನನಗೆ ಅಮ್ಮ||೧||
ತೊಟ್ಟಿಲಲ್ಲಿ ತೂಗುವಾಗ
ಹಾಡುತಿದ್ದ ಲಾಲಿ|
ಮಡಿಲಲ್ಲಿ ಮಲಗಿಸಲು
ತಟ್ಟಿ ಹೇಳೋ ಲಾಲಿ||೨||
ರಾಜರಾಣಿ ದುಷ್ಟಮಂತ್ರಿ
ಕುತಂತ್ರ ಕಥೆಯು ಬೇಡ|
ರಾಜಕುಮಾರಿ ಹಲ್ಲಿ ಮಾಡಿದ

ಸನ್ಗೊಂದು ರಿಕ್ವೇಸ್ಟ್

ಇಂದ prabhu
ಬರೆದಿದ್ದುDecember 30, 2018
noಅನಿಸಿಕೆ

ಸಂಡೆ ಅಂತ ಗೊತ್ತಿದ್ರೂನೂ
ಹಿಂಗೇ ಬಂದ ಬಿಡೋದಾ|
ಇರೋ ಒಂದ್ ದಿನಾನಾದ್ರೂ
ಬಿಡದೆ ಕಾಟ ಕೊಡೋದಾ?||೧||
ಶಾಲೆಗೆ ಹೋಗೋದಿದೆಯಂತ
ದಿನವೂ ಬೇಗ ಏಳಬೇಕು|
ಅಪ್ಪನ ಗಾಡಿ ಒರೆಸಿಕೊಟ್ಟು
ಮನೆಯ ಕಸವ ಹೊಡೆಯಬೇಕು||೨||
ಅಮ್ಮ ತಿಂಡಿ ಮಾಡೋದ್ರಲ್ಲಿ
ಶಾಲೆಗೆ ತಯ್ಯಾರ್ ಆಗ್ಬೇಕು|

ಪರಿಸರ

ಇಂದ prabhu
ಬರೆದಿದ್ದುDecember 29, 2018
noಅನಿಸಿಕೆ

ಬನ್ನಿರಿ ಗೆಳೆಯರೆ ಸಸಿಯನ್ನು ನೆಟ್ಟು
ವನವನು ನಾವು ಬೆಳೆಸೋಣ |
ನಾಡಿನ ತುಂಬ ಗಿಡಮರ ಬೆಳೆಸಿ
ಪರಿಸರವನ್ನು ಉಳಿಸೋಣ||೧||
ಕಲ್ಲ ಮಲ್ಲ ಗುದ್ದಲಿ ತಂದರು
ತಗ್ಗನು ತೆಗೆದರು ಖುಷಿಯಿಂದ
ಮಾವು ಬೇವು ಹೊಂಗೆ ಹುಣಸೆ
ಸಸಿಗಳ ನೆಟ್ಟರು ಒಲವಿಂದ ||೨||
ಶಾಲೆ ರಸ್ತೆ ಬದಿಗಳಲೆಲ್ಲ

ಸೈಕಲ್ ಮಕ್ಕಳ ಕವಿತೆ

ಇಂದ prabhu
ಬರೆದಿದ್ದುDecember 28, 2018
noಅನಿಸಿಕೆ

ಶಾಲೆಗೆ ನಡೆದು ಹೋಗಲು ಆಗ್ದು
ನನಗೂ ಸೈಕಲ್ ಕೊಡಿಸಮ್ಮ |
ಅಕ್ಕನ ಜೊತೆಗೆ ಸರ ಸರ ಹೋಗಿ
ಬರ ಬರ ಬರುವೆ ನಾನಮ್ಮ ||೧||
ರಸ್ತೆಯ ಮಧ್ಯೆ ದನ ಕರು ನಾಯಿ
ಬಂದರೆ ಪಕ್ಕಕೆ ನಿಲ್ಲುವೆನು|
ಮೋಟರ್ ವಾಹನ ಎದುರಿಗೆ ಬಂದರೆ
ಮೆಲ್ಲಗೆ ಸೈಕಲ್ ನಡೆಸುವೆನು||೨||
ಮಕ್ಕಳು ಮಂದಿ ಬಹಳ ಇದ್ದರೆ

ದೇವರು

ಇಂದ prabhu
ಬರೆದಿದ್ದುDecember 28, 2018
noಅನಿಸಿಕೆ

ದೇವರ ಪಟಗಳ್ ಎಲ್ಲಡೆ ಮಾರುವ
ಜನಗಳ ನೋಡಮ್ಮ|
ಜಗವನೇ ಸೃ಼ಷ್ಟಿಸಿದಾತನ ಸ್ಥಿತಿಯು
ಹೀಗೇಕೆ ಅಮ್ಮ ||೧||
ಗುಡಿಗಳಲಿರುವ ಉದ್ದನೆ ಸಾಲು
ಬಡ ಭಕ್ತರಮ್ಮ |
ದುಡ್ಡನು ಹೆಚ್ಚಿಗೆ ಕೊಟ್ಟರೆ ಸಾಕು
ದೇವರ ಮುಂದೆಯಮ್ಮ ||೨||
ಕಾಸನು ತಟ್ಟೆಗೆ ಹಾಕಿದರೆ
ತೀರ್ಥ ಪ್ರಸಾದ ಕೊಡುವರು |

ಕನ್ನಡ

ಇಂದ prabhu
ಬರೆದಿದ್ದುDecember 26, 2018
noಅನಿಸಿಕೆ

ಕನ್ನಡ ಶಾಲೆ ಮಕ್ಕಳು ಅಂತ
ಅಯ್ಯೋ ಪಾಪ ಎನ್ಬೇಡಿ |
ಇಂಗ್ಲೀಷ್ ಸ್ಕೂಲ್ಗೆ ಹೋದವ್ರ ಮಾತ್ರ
ಶ್ಯಾಣೆರ್ಂತ್ ತಿಳಿಬೇಡಿ ||೧||
ಇಂಗ್ಲೀಷ್ ಹಿಂದಿ ನಮಗೂ ಬರುತ್ತೆ
ಹೇಳಾಕಿದ್ದಾರ ನಮ್ಮೇಷ್ಟ್ರು |
ಗಣಿತ ವಿಜ್ಞಾನ ಚಿತ್ರಕಲೇಲಿ
ಸಾಟಿ ಇಲ್ಲ ಇವರಷ್ಟು ||೨||
ಅಆಇಈ ಓದಿನೋಡಿ

ಗುಬ್ಬಚ್ಚಿ ಮಕ್ಕಳ ಕವನ

ಇಂದ prabhu
ಬರೆದಿದ್ದುDecember 25, 2018
noಅನಿಸಿಕೆ

ಗುಬ್ಬಿ ಗುಬ್ಬಿ ಗುಬ್ಬಚ್ಚಿ
ಚಿಂವ್ ಚಿಂವ್ ಅಂತ ಒದರುತ್ತಿ |
ಪುಟ್ಟಗೂಡು ಕಟ್ಟಿಕೊಂಡು
ಚೊಕ್ಕದಾಗಿ ಇರುತ್ತಿ ||೧||
ಅತ್ತ ಇತ್ತ ತಲೆಯ ತಿರುವಿ
ಸುತ್ತ ಮುತ್ತ ನೋಡುತ್ತಿ |
ಕಾಳು ಕಡಿಯ ಹುಡುಕುತ್ತ
ಚಿಂವ್ ಚಿಂವ್ ಅಲೆಯುತ್ತಿ ||೨||
ನಾಳೆ ನಾಡಿದ್ದ್ ಬೇಕೂಂತ
ಎಷ್ಟು ಆಶೆ ನಿನಗಿಲ್ಲ|

ತಮ್ಮ ಮಕ್ಕಳ ಕವಿತೆ

ಇಂದ prabhu
ಬರೆದಿದ್ದುDecember 25, 2018
noಅನಿಸಿಕೆ

ಅಮ್ಮ ಯಾಕೋ ತಮ್ಮ ನೋಡು
ಅಳುತಲಿರುವನು |
ಚಾಕಲೇಟು ಬಿಸ್ಕೀಟ್ ಬೇಕಾ
ಕೇಳಿ ಬಿಡಲೇನು? ||೧||

ಎತ್ತಿಕೊಂಡು ಸುತ್ತಿ ಸುಳಿದೆ
ತಕ್ಕಥೈ ಎಂದು ಕುಣಿದೆ |
ನಾಯಿ ಬೆಕ್ಕು ಆಡು ಹುಲಿಯು
ಎಲ್ಲ ಪ್ರಾಣಿ ಧ್ವನಿಯ ಗೈದೆ ||೨||