ವಿಸ್ಮಯ ಸಮಾಚಾರ

ಇತ್ತೀಚಿನ ಪ್ರಪಂಚಾದ್ಯಂತದ ಬ್ರೆಕಿಂಗ್ ನ್ಯೂಸ್, ಸಿನಿಮಾ ಸುದ್ಧಿ, ವಿಚಿತ್ರ ಸುದ್ದಿ, ರಾಜಕೀಯ, ಸುದ್ದಿ ಸಮಾಚಾರ. ನೀವು ಸಹ ಬರೆಯಬಹುದು.

ಕ್ಯಾನ್ಶೀ ರಾಂ ಅವರ 76ನೇ ಹುಟ್ಟು ಹಬ್ಬದ ಅಂಗವಾಗಿ ನಡೆದ ಬಿಎಸ್.ಪಿ ಕಾರ್ಯಕ್ರಮದಲ್ಲಿ ನಿನ್ನೆ ಮುಖ್ಯಮಂತ್ರಿ ಮಾಯಾವತಿ ಅವರಿಗೆ 1000 ರೂಪಾಯಿಯ ನೋಟಿನಿಂದ ಮಾಡಿದ ದೊಡ್ಡ ಹಾರವನ್ನು ಹಾಕಲಾಯ್ತು. ಇದನ್ನು ಕರ್ನಾಟಕದ ಬಿಎಸ್.ಪಿ ಯ ಕಾರ್ಯಕರ್ತರು ಹಾಕಿದ್ದು ಅನ್ನಲಾಗಿದೆ. ದೂರದಿಂದ ಈ ಕಾರ್ಯಕ್ರಮ ನೋಡಿದವರಿಗೆ ಇದು ನೋಟಿನ ಹಾರ ಎಂದು ಗೊತ್ತಾಗಲಿಲ್ಲ!!

ಮುಂದೆ ಓದು

ಪ್ರಾಕ್ಟರ್ ಎಂಡ್ ಗ್ಯಾಂಬಲ್ ಅವರ ಟೈಡ್ ಡಿಟರ್ಜಂಟ್ ಯಶಸ್ವಿಯಾಗಿ ಹಿಂದೂಸ್ಥಾನ್ ಲಿವರ್ ಅವರ ಡಿಟರ್ಜಂಟ್ ಮಾರುಕಟ್ಟೆಯಲ್ಲಿ ಪಾಲನ್ನು ಕಿತ್ತುಕೊಳ್ಳುತ್ತಿರುವದು ಎಚ್ ಎಲ್ ಎಲ್ ಅವರಿಗೆ ಚೆನ್ನಾಗಿ ಬಿಸಿ ಮುಟ್ಟಿದೆ ಅನ್ಸುತ್ತೆ. ಅದಕ್ಕೆ ನೇರವಾಗಿ ಟೈಡ್ ಗಿಂತ ರಿನ್ ಚೆನ್ನಾಗಿದೆ ಎಂದು ಟಿವಿಯಲ್ಲಿ ಬಾಯಿ ಬಡಕೊಳ್ತಾ ಇದೆ. ಇದಕ್ಕೆ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಏನು ಉತ್ತರ ಕೊಡುತ್ತೋ ನೋಡಬೇಕು. ಈ ಸ್ಪರ್ಧೆಯಿಂದ ಡಿಟರ್ಜೆಂಟ್ ಗಳ ಬೆಲೆ ಇಳಿದಿರುವದಂತೂ ನಿಜ.

ಮುಂದೆ ಓದು

20 ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳು..! ಲಕ್ಷಾಂತರ ಭಕ್ತರು..!! ಹೊಂದಿರುವ ಒಬ್ಬ ಪವರ್ ಪುಲ್ ಸ್ವಾಮಿಜಿ  ಕಾಮಕಾಂಡದಲ್ಲಿ ಸಿಕ್ಕಿಬಿದ್ದಿದ್ದಾರೆ.

ಮುಂದೆ ಓದು

"ಈ ಪ್ರಶಸ್ತಿಗೆ ನನಗಿಂತ ನನ್ನ ಶ್ರೀಮತಿಯವರು ಹೆಚ್ಚು ಅರ್ಹರು" ತನಗೆ ಡಾಕ್ಟರೇಟ್ ಗೌರವ ಸಿಕ್ಕಾಗ ಡಾ.ವಿಷ್ಣು ಇಂತಹದೊಂದು ಮಾತನ್ನು ಹೇಳಿದ್ದರು. ಡಾ.ವಿಷ್ಣು ಮಾತು ನಿಜವಾಗಿದೆ ಮೈಸೂರು ವಿಶ್ವವಿದ್ಯಾಲಯ ಶ್ರೀಮತಿ ಭಾರತಿಯವರಿಗೆ  ಈ ಸಾಲಿನ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದೆ.


ಚತುರ್ಭಾಷಾ ತಾರೆಯಾದ ಭಾರತಿಯವರು, ಈ ನಾಡು ಕಂಡ ಅಪರೂಪದ, ಸ್ನಿಗ್ಧ ಸೌಂದರ್ಯದ ನಟಿಯರಲ್ಲಿ ಒಬ್ಬರು. ಅವರಿಗೆ ಡಾಕ್ಟರೇಟ್ ಸಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಬಹುಶಃ ಆಕೆಗೆ ಕನಸುಗಳೇ ಇಲ್ಲವೇನೋ? ಅಥವಾ ಕನಸೆಂಬುದೇ ಆಕೆಗೆ ಕನಸಿರಬಹುದು. ಯಾರ ಪಾಪದ ಕೂಸೋ ಏನೋ, ಎಲ್ಲಾ ತಾಯಂದಿರಂತೆ ಚಂದ್ರನನ್ನು ತೋರಿಸುವುದು ಆಕೆಗೆ ಗೊತ್ತಿರಲಿಕ್ಕಿಲ್ಲ ಅಥವಾ ಮರೆತು ಹೋಗಿರಬಹುದು. ಆದರೆ ತಾನೇ ಆ ಮಗುವಿನ ತಾಯಿ ಮತ್ತು ಅದನ್ನು ಸಲಹಬೇಕಾದವಳು ನಾನೇ ಎಂಬುದರ ಅರಿವಿದೆ.ಮುಂದೆ ಓದು

ಹಣಕಾಸು ಮಂತ್ರಿಯಾದ ಪ್ರಣಬ್ ಮುಖರ್ಜಿ ಅವರು 2010 ರ ಬಜೆಟ್ ನಿನ್ನೆ ಮಂಡಿಸಿದರು.

ಮುಂದೆ ಓದು

ಆಪ್ತಮಿತ್ರ ಚಿತ್ರದ ಮುಂದಿನ ಭಾಗವಾದ ಆಪ್ತರಕ್ಷಕಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಡಾ॥ವಿಷ್ಣುವರ್ಧನ ಅವರ 200ನೇ ಹಾಗೂ ಕೊನೆಯ ಚಿತ್ರವಾಗಿರುವದು ದೌರ್ಭಾಗ್ಯ. ಇದರಲ್ಲಿನ ನಾಗವಲ್ಲಿ ಎಂಬ ಕಾಲ್ಪನಿಕ ಪಾತ್ರಕ್ಕೆ ಹೆದರಿ ರಜನಿಕಾಂತ್ ಈ ಚಿತ್ರದ ರಿಮೇಕ್ ಮಾಡಲು ಹಿಂಜರಿದಿದ್ದಾರೆ. ಆಪ್ತಮಿತ್ರ ಮುಗಿದಾಗ ಅದರ ನಾಯಕಿ ಸೌಂದರ್ಯ ಹಾಗೂ ಆಪ್ತರಕ್ಷಕ ಮುಗಿದಾಗ ಅದರ ನಾಯಕ ವಿಷ್ಣುವರ್ಧನ್ ವಿಧಿವಶರಾಗಿರುವದನ್ನು ಸ್ಮರಿಸಬಹುದು.

ಫೆಬ್ರವರಿ 12ರಂದು ರಮೇಶ್ ಅಭಿನಯದ ಕ್ರೇಜಿ ಕುಟುಂಬ ಬಿಡುಗಡೆ ಆಗಿದೆ.


ಕ್ರೇಜಿ ಕುಟುಂಬ ರಿಯಾಲಿಟಿ ಶೋದಲ್ಲಿ ಭಾಗವಹಿಸಲು ಬಿಜಾಪುರದಿಂದ ಬೆಂಗಳೂರಿಗೆ ಕುಟುಂಬವೊಂದು ಬರುವ ಹಾಸ್ಯ ಚಿತ್ರ. ರಮೇಶ್ ಅರವಿಂದ್, ಅನಂತನಾಗ್ ಮುಖ್ಯಪಾತ್ರದಲ್ಲಿದ್ದಾರೆ.

whopopular ತಾಣದವರು ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ಇಟ್ಟಿರುವ ಸ್ಪರ್ಧೆಯಲ್ಲಿ ನಮ್ಮ ಅಣ್ಣವರಾದ ಡಾ॥ರಾಜ್ ರವರ ಹೆಸರು ನಾಮಾಂಕಿತವಾಗಿದೆ. ಕೆಳಗೆ ಕೊಟ್ಟಿರುವ ಲಿಂಕಿಗೆ ಕ್ಲಿಕ್ ಮಾಡಿ ಮುಂದೆ ಓದು

ವಿತ್ತೀಯ ಕೊರತೆ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಬರುವ ಬಜೆಟ್ಟಿನಲ್ಲಿ ಸೇವಾ ತೆರಿಗೆಯನ್ನು ಶೇ ೧೨% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸರ್ಕಾರ ಸೇವಾ ತೆರಿಗೆದರವನ್ನು ಶೇ ೧೨ ರಿಂದ ಶೇ ೧೦%ಗೆ ಇಳಿಸಿತ್ತು. ಆರ್ಥಿಕ ಹಿಂಜರಿತವನ್ನು ಎದುರಿಸುವ ಸಲುವಾಗಿ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿತ್ತು. ಇದೀಗ ಮೂಲಮಟ್ಟವಾಗಿದ್ದ ಶೇ ೧೨ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.ಮುಂದೆ ಓದು



ಹೊಸ ಸಮಾಚಾರ

ಬ್ರೆಕಿಂಗ್ ನ್ಯೂಸ್, ವಿಚಿತ್ರ ಸುದ್ಧಿ ಇತ್ಯಾದಿಗಳನ್ನು ಪ್ರಪಂಚಾದ್ಯಂತ ಕನ್ನಡಿಗರಿಗೆ ತಿಳಿಸಲು ಹೊಸ ಸಮಾಚಾರ ಸೇರಿಸಿ.
229 ಸಮಾಚಾರಗಳು


ಸಿಂಡೀಕೇಟ್
Syndicate content