ವಿಸ್ಮಯ ಚಿನ್ನದಂತಾಮಾತು

ಸಿರಿರಮಣ's picture
ಸೂಕ್ತಿ

ಗುರು, 11/03/2010 - 13:30 - ಸಿರಿರಮಣ

ಬೊಕ್ಕುತಲೆಯವನೊಬ್ಬ ಬಿಸಿಲಿನಿಂ ಬೆಂಬಳಲಿ ನೆರಳನರಸುತ್ತ ಬಂದ ತಾಳೆಮರದಡಿಗೆ |


ದೊಡ್ಡತಾಳೆಯ ಕಾಯಿ ಕಳಚಿ ಮೇಲೆರಗಿತು ಒಡೆಯಿತವನ ತಲೆ ದಡ್ ಧಢಾರೆಂದು |


ಅದಕೆಂದೆ ಹೇಳುವುದು ದುರ್ದೈವಿ ಹೋದಲ್ಲಿಗೇ ಕಷ್ಟಗಳೂ ಬರುವುದು. ||

ಶಾಶ್ವತವಲ್ಲದ ಬದುಕಿನಲಿ ಸಾವಿರಾರು ಕನಸುಗಳು ನಾನು ನನ್ನದೆನ್ನುವ ಭಾವ ನೂರು
ಜೀವನದ ಯಾತ್ರೆ ಮುಗಿದೊಡನೆ ಬರುವುದಿಲ್ಲ ನಮ್ಮೊಂದಿಗೆ ಯಾರು ?!...

 ಒಬ್ಬ ವ್ಯಕ್ತಿಯು ನೋಡಲು ಚಿಕ್ಕವನಾಗಿದ್ದರೂ ಅವನ ಸಾಧನೆ ಮಾತ್ರ ದೊಡ್ಡದು ಇದೆ ಈ ನುಡಿಯ ಆರ್ಥ

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗ ವಿಲ್ಲ

munna's picture
ನಗು

ಸೋಮ, 08/03/2010 - 12:55 - munna

ಹುಸಿನಗುತ ಬಂದೇವ, ನಸುನಗುತ ಬಾಳೋಣ, ತುಸುನಗುತ ತೆರಳೋಣ,


ಬಡನೂರು ವರುಷನಾ ಹರುಷದಿ ಕಳೆಯೋಣ ಯಾಕಾರೆ ಕೆರಳೋಣ?

ಚಂದ್ರನ ಮೇಲಿರುವ ಮಚ್ಚೆ ಅದರ ಅಮೋಘ ಸೌಂದರ್ಯದ ಮುಂದೆ ಗೌಣವಾದಂತೆ, ಒಂದು ದೋಷ ಹಲವು ಒಳ್ಳೆಯ ಗುಣಗಳಿಂದ ಮುಚ್ಚಲ್ಪಡುತ್ತದೆ. (ಕುಮಾರಸಂಭವ)

ಕೊಟ್ಟವ ಕೋಡಂಗಿ ಈಸ್ಕೊಂಡವ ವೀರಭದ್ರ.

ನಾವಾಡುವ ಮಾತುಗಳು ನಮ್ಮ ನಡತೆಯನ್ನು ತೋರಿಸುತ್ತವೆ.

ದುರ್ಭಲವಾಗಿದ್ದರೂ ಜಾಸ್ತಿ ಸಂಖ್ಯೆಯಲ್ಲಿದ್ದರೆ ಶಕ್ತಿ ಬರುತ್ತದೆ.ಅನೇಕ ಹುಲ್ಲು ಕಡ್ಡಿಗಳಿಂದ ಮಾಡಲ್ಪಟ್ಟ ಹಗ್ಗ ಕೂಡಾ ಆನೆಯನ್ನು ಬಂಧಿಸಿ ಹಿಡಿದಿಡಬಲ್ಲುದು.

ಮನುಷ್ಯರು ಹೇಗೆ ಸತ್ತರೆಂಬುದಕ್ಕಿಂತಲೂ ಹೇಗೆ ಬದುಕಿದ್ದರೆಂಬುದು ಮುಖ್ಯ.



ಹೊಸ ಚಿನ್ನದಂತಾಮಾತು

571 ಚಿನ್ನದಂತಾ ಮಾತುಗಳು

ಸಿಂಡೀಕೇಟ್
Syndicate content