Skip to main content

ಪಿಸುಮಾತು

ಇಂಥವರಿದ್ದಾರೆ ನಮ್ಮ ಮಧ್ಯೆ..ಜೋಪಾನ!

ಬರೆದಿದ್ದುAugust 27, 2015
2ಅನಿಸಿಕೆಗಳು

ನಿಮ್ಗೆಲ್ಲಾ ಒಂದು ಕಥೆ ಹೇಳುವ ಅನಿಸಿದೆ ಬಹಳ ದಿನಗಳ ಬಳಿಕ. ಈ ಕಥೆ ಯಾರಿಗಾದರೂ, ಯಾರ ಜೀವನಕ್ಕಾದರೂ, ಯಾವ ರೀತಿಯಲ್ಲೇ ಆದರೂ ಹೋಲಿಕೆಯಿದೆ ಅನಿಸಿದಲ್ಲಿ ಅದು ಸಹಜ. ನಮ್ಮ ನಿಮ್ಮ ನಡುವೆ ಇಂಥಹ ಜನಗಳೂ ಇರ್ತಾರೆ ಬಿಡಿ. ಕಥೇ ಶುರು ಮಾಡ್ಲಾ??

ಬಿಎಂಟಿಸಿ ಬಸ್ ಮೇಲಿನ ಜಾಹೀರಾತಲ್ಲಿ ಕನ್ನಡದ ಕಣ್ಣಿಗೆ ಸುಣ್ಣ ಯಾಕೆ

ಬರೆದಿದ್ದುAugust 8, 2015
noಅನಿಸಿಕೆ

ಬೆಂಗಳೂರನಲ್ಲಿ ನಾನು ಬೈಕಲ್ಲಿ ಓಡಾಡುವಾಗ ಟ್ರಾಫಿಕ್ ಅಲ್ಲಿ ಕಾಯುತ್ತಿರುವಾಗ ನನ್ನ ಗಮನ ಸೆಳೆಯುವದು ಈ ಕನ್ನಡಕ್ಕೆ ದ್ರೋಹ ಬಗೆಯುವ ಬಿ.ಎಂ.ಟಿ.ಸಿ ಬಸ್ಸಿನ ಹಿಂದೆ ಹಾಕಿರುವ ಜಾಹೀರಾತುಗಳು.

ಬಸ್ ಟಿಕೆಟ್ ಅಲ್ಲಿ ಕನ್ನಡ

ಬರೆದಿದ್ದುNovember 15, 2014
2ಅನಿಸಿಕೆಗಳು
ಇಂದು ಕನ್ನಡ ಹೊರಾಟಗರಿಗೆ ಹಲವು ರಂಗದಲ್ಲಿ ಕನ್ನಡಮ್ಮನ ಪರವಾಗಿ ಹೋರಾಡುವ ಅವಕಾಶಗಳಿವೆ. ಕನ್ನಡಮ್ಮನ ಕಣ್ಣೀರನ್ನು ಒರೆಸುವ ಪ್ರಯತ್ನ ಯಾಕೆ ಮಾಡುತ್ತಿಲ್ಲ?

ನಯನ ಮನೋಹರ ದೇವರಾಯನ ದುರ್ಗ

ಬರೆದಿದ್ದುOctober 19, 2014
1ಅನಿಸಿಕೆ

ಬೆಂಗಳೂರಿನಿಂದ ತುಮಕೂರು ಹೋಗುವ ರಸ್ತೆಯಲ್ಲಿ ದಾಬಸ್ ಪೇಟೆಯ ಬಳಿ ಬಲಕ್ಕೆ ತಿರುಗಿ ಸುಮಾರು ೨೦ಕೀಮಿ ಡ್ರೈವ್ ಮಾಡಿದರೆ ಸಿಗುವದು ದೇವರಾಯನ ದುರ್ಗ. ಬೆಂಗಳೂರಿನಿಂದ ಬೆಳಿಗ್ಗೆ ಹೋದರೆ ಸಂಜೆ ಬರಬಹುದಾದ ತಾಣ. ಅಲ್ಲೇ ಹತ್ತಿರ ಇನ್ನೂ ೨೭ ಕಿಮಿ ದೂರದಲ್ಲಿ ಗೊರವನಹೞಿ ಲಕ್ಷ್ಮಿ ದೇವಸ್ಠಾನಕ್ಕೆ ಸಹ ಹೋಗಿ ಬರಬಹುದು.

ಈ ತಂತ್ರಜ್ಞಾನ ಕನ್ನಡಿಗ ಇಂಗ್ಲೀಷ್ ಮಾತನ್ನು ಆಡುವದನ್ನು ಜಾಸ್ತಿ ಮಾಡಬಲ್ಲುದು!

ಬರೆದಿದ್ದುJune 27, 2013
noಅನಿಸಿಕೆ

ಈ ಲೇಖನದ ಹಿಂದಿನ ಭಾಗ ಅಮೇರಿಕ, ಆಸ್ಟ್ರೇಲಿಯಾದ ಮೂಲ ಭಾಷೆ ಇಂಗ್ಲೀಷ್ ಅಲ್ಲ!!

ಹಿಂದಿನ ಭಾಗದಲ್ಲಿ ವಸಾಹತುಶಾಹಿ ಆಡಳಿತ ಅಮೇರಿಕ, ಆಸ್ಟ್ರೇಲಿಯ, ಆಫ್ರಿಕಾ ಹಾಗೂ ಭಾರತ ಹೀಗೆ ಹಲವು ದೇಶಗಳಲ್ಲಿ ಇಂಗ್ಲೀಷ್ ಅಲ್ಲಿನ ಲೋಕಲ್ ಭಾಷೆ ಮೀರಿ ಬೆಳೆಯಿತು ಅನ್ನುವದನ್ನು ನೋಡಿದೆವು. ಯುರೋಪಿಯನ್ನರು ಅಮೇರಿಕ ಹಾಗೂ ಆಸ್ಟ್ರೇಲಿಯಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಹೆಚ್ಚಿನ ಜನ ಅನಾಗರಿಕರು, ಬುಡಕಟ್ಟು ಜನಾಂಗದವರು ಆಗಿದ್ದರು. ಸರಿಯಾದ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಅವರಿಗೆ ಬೇಗನೆ ಹತ್ತಿಕ್ಕಿ ಅವರ ಭಾಷೆಗಳನ್ನು ಕಿತ್ತು ಹಾಕುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದು ನಿಮ್ಮನ್ನು ನಾಗರೀಕರಾನ್ನಾಗಿ ಮಾಡುತ್ತೇವೆ ಎಂಬ ನೆಪದಲ್ಲಿ ಇಂಗ್ಲೀಷ್ ಬೆಳೆಸಲು ಸಾಧ್ಯವಾಯ್ತು.  ಆದರೆ ಬ್ರಿಟಿಷರು ಭಾರತಕ್ಕೆ ಬಂದಾಗ ಇಲ್ಲಿನ ಪರಿಸ್ಥಿತಿ ಬೇರೆ ಇತ್ತು. ಇಲ್ಲಿ ಗುರುಕುಲ, ಮದರಸಾ ಮೂಲಕ ರಾಜರು, ಮುಘಲರು ಶಿಕ್ಷಣ ವ್ಯವಸ್ಥೆಯನ್ನು ಹುಟ್ಟುಹಾಕಿದ್ದರು.

ಅಮೇರಿಕ, ಆಸ್ಟ್ರೇಲಿಯಾದ ಮೂಲ ಭಾಷೆ ಇಂಗ್ಲೀಷ್ ಅಲ್ಲ!!

ಬರೆದಿದ್ದುJune 18, 2013
2ಅನಿಸಿಕೆಗಳು

ಈ ಲೇಖನದ ಮೊದಲ ಭಾಗ ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲೇ ಇದೆ - ಭಾಗ ೧

ಅಮೇರಿಕದ ಮೂಲ ಭಾಷೆ ಯಾವುದು ಎಂದು ಕೇಳಿದರೆ ನೀವು ಏನು ಹೇಳುತ್ತೀರಾ? ಇನ್ನು ಆಸ್ಟ್ರೇಲಿಯಾದ್ದು? ಇಂಗ್ಲೀಷ್? ಖಂಡಿತ ಅಲ್ಲ!!

ಯುರೋಪಿಯನ್ನರ ವಸಾಹತುಶಾಹಿ ಆಡಳಿತಕ್ಕೆ ಒಳಪಡುವ ಮುನ್ನ ಅಮೇರಿಕದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುತ್ತಿದ್ದರು. ಉತ್ತರ ಅಮೇರಿಕ ಹಾಗೂ ದಕ್ಷಿಣ ಅಮೇರಿಕ ಸೇರಿ ಸಾವಿರಕ್ಕೂ ಹೆಚ್ಚು ಭಾಷೆ ಇತ್ತೆಂದು ಅಂದಾಜಿಸಲಾಗಿದೆ. ಈ ಕೆಳಗಿನ ಚಿತ್ರ ಒಮ್ಮೆ ನೋಡಿ (ಕೃಪೆ ವಿಕಿಪಿಡಿಯಾ). ಇಲ್ಲಿ ಉತ್ತರ ಅಮೇರಿಕದಲ್ಲಿದ್ದ ಭಾಷಾ ವೈವಿಧ್ಯತೆಯನ್ನು ಕಾಣಬಹುದು.

ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲೇ ಇದೆ - ಭಾಗ ೧

ಬರೆದಿದ್ದುJune 7, 2013
3ಅನಿಸಿಕೆಗಳು

ಸುಮಾರು ಇನ್ನೂರು ವರ್ಷಗಳ ಹಿಂದಿನ ಮಾತು ಭಾರತಾದ್ಯಂತ ಜನ ಹಳ್ಳಿ, ನಗರ ಬೇದ ಭಾವ ಇಲ್ಲದೇ ಎಲ್ಲ ಕಡೆ ಕಚ್ಚೆ ಪಂಚೆ ಉಟ್ಟುಕೊಂಡು ಬರಿ ಮೈಯಲ್ಲೋ ಅಥವಾ ಜುಬ್ಬಾ ಹಾಕಿಕೊಂಡು ಗಂಡಸರು ಓಡಾಡುತಿದ್ದರು ಎಂದರೆ ನಗರದಲ್ಲಿನ ಇಂದಿನ ಪೀಳಿಗೆ ನಂಬುತ್ತಾರೋ ಇಲ್ಲವೋ. ಆಗ ಆಂಗ್ಲರು ಹಾಗೂ ಅವರಿಗೆ ನಿಕಟವಾಗಿದ್ದ ಶ್ರೀಮಂತರು, ರಾಜರು ಅವರನ್ನು ಅನುಕರಿಸುತ್ತಿದ್ದರು. ಅವರು ಮಾತ್ರ ಶರ್ಟು ಪ್ಯಾಂಟು ಹಾಕುತ್ತಿದ್ದರು. ಇಂದು ಹಳ್ಳಿ-ನಗರ ಬೇದ ಭಾವ ಇಲ್ಲದೇ ಜನ ಅಂಗಿ-ಪ್ಯಾಂಟು ಹಾಕುತ್ತಾರೆ. ಹೞಿಗಳಲ್ಲಿ ಈಗಲೂ ಪಂಚೆ ಉಡುತ್ತಾರಾದರೂ ಆದರೆ ಹೊಸ ಪೀಳಿಗೆ ನಗರಗಳಿಗೆ ಭೇಟಿ ಕೊಟ್ಟಾಗ ಪ್ಯಾಂಟನ್ನು ಮಾತ್ರ ಬಳಸುತ್ತಾರೆ.

ವ್ಯಾಘ್ರ ಕಣಿವೆಯ ನಿಗೂಢ ರಹಸ್ಯ : ಪತ್ತೆದಾರಿ ಕಥೆ - ಭಾಗ ೧

ಬರೆದಿದ್ದುFebruary 28, 2013
1ಅನಿಸಿಕೆ

ಮುನ್ನುಡಿಃ ಈ ಕಥಾ ಸರಣಿಯನ್ನು ಬರೆಯಬೇಕು ಎನ್ನುವದು ಹಲವಾರು ತಿಂಗಳ ಹಿಂದೆಯೇ ನನ್ನ ಮನಸ್ಸಿನಲ್ಲಿತ್ತು. ಆದರೆ ವಿಸ್ಮಯ ನಗರಿಯ ಆಧುನೀಕರಣದ ಭರದಲ್ಲಿ ಸಮಯ ಸಿಗಲಿಲ್ಲ. ಅದಕ್ಕೆ ಈಗ ತಕ್ಕ ಸಮಯ ಬಂದಿದೆ.

ನನ್ನ ಹಿಂದಿನ ಕಥಾ ಸರಣಿ ಕಗ್ಗಂಟು ನೀವು ಓದಿರಬಹುದು. ಇಲ್ಲವಾದರೆ ಅದರ ಲಿಂಕುಗಳು ಕೆಳಗಿವೆ.

ಇದರ ಮೊದಲ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 1

ಇದರ ಎರಡನೇಯ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 2

ಇದರ ಮೂರನೆಯ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 3

ಇದರ ನಾಲ್ಕನೆಯ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 4

ಇದರ ಕೊನೆಯ ಭಾಗ ಕಗ್ಗಂಟು ಪತ್ತೆದಾರಿ ಕಥೆ - ಭಾಗ 5

ಬೆಂಗಳೂರಿನಲ್ಲಿ ಆರಂಭವಾಗಿ ಮಲೆನಾಡಿನ ಕಾಡಿನಲ್ಲಿ ಅಂತ್ಯವಾಗುವ ಈ ಪತ್ತೆದಾರಿ ಕಥೆ ನಿಮ್ಮನ್ನು ಮನೋರಂಜಿಸಬಹುದು ಅನ್ನುವದು ನನ್ನ ಆಶಯ.

ಸುಡು ಬಿಸಿಲಲ್ಲಿ ತೆಗೆದ ಫೋಟೋದಲ್ಲಿ ಮಳೆ ತರಿಸುವದು ಹೇಗೆ?

ಬರೆದಿದ್ದುJanuary 2, 2013
noಅನಿಸಿಕೆ

ಸುಡು ಬಿಸಿಲಲ್ಲಿ ತೆಗೆದ ಫೋಟೋದಲ್ಲಿ ಮಳೆ ತರಿಸುವದು ಹೇಗೆ? ಆಶ್ಚರ್ಯ ಆಯ್ತಾ? ಈಗ ನೀವು ಯಾವುದಾದರೂ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಅಲ್ಲಿ ಓದುತ್ತಿದ್ದರೆ ಅದರಲ್ಲಿ ಈ ಚಮತ್ಕಾರ ಸಾಧ್ಯವಿದೆ. ಇದನ್ನು ಪೇಂಟ್.ನೆಟ್ ಎಂಬ ಉಚಿತ ಸಾಫ್ಟವೇರ್ ಅನ್ನು ವಿಂಡೋಸ್ ಎಕ್ಸ್ಪಿ ಅಲ್ಲಿ ಮಾಡಲಾಗಿದೆ. ಫೋಟೋ ಶಾಪ್ ಅಲ್ಲೂ ಇದನ್ನು ಮಾಡಬಹುದು. ಪೇಂಟ್.ನೆಟ್ ಬಗ್ಗೆ ನನ್ನ ಹಿಂದಿನ ಲೇಖನ ಓದಿ.

ಮನಮೋಹಕ ತಾಣ ಸ್ವಿಟ್ಜರ್ ಲ್ಯಾಂಡ್ : ಯುರೋಪ್ ಪ್ರವಾಸ - ಭಾಗ 2

ಬರೆದಿದ್ದುSeptember 23, 2009
1ಅನಿಸಿಕೆ

ಮೌಂಟ್ ಟಿಟಲಿಸ್ ಯೂರೋಪಿನ ಸ್ವಿಟ್ಸರ್.ಲ್ಯಾಂಡ್ ದೇಶದ ಆಲ್ಪೈನ್ ಪರ್ವತ ಶ್ರೇಣಿಯ ಉನ್ನತ ಶಿಖರಗಳಲ್ಲಿ ಒಂದು. ಈ ಶಿಖರವು ಸ್ವಿಟ್ಸರ್.ಲ್ಯಾಂಡಿನ ಮಧ್ಯ ಭಾಗದಲ್ಲಿ ಇದೆ. ಇಲ್ಲಿ ವರ್ಷವಿಡೀ ಹಿಮವನ್ನು ನೋಡಬಹುದಾಗಿದೆ. ಪ್ರಪಂಚದ ಮೊಟ್ಟ ಮೊದಲ ತಿರುಗುವ ಸರಪಳಿ ಕಾರು ಇಲ್ಲಿನ ವೈಶಿಷ್ಟ್ಯ.