Skip to main content

ಇರುವುದಿಲ್ಲ ಬಿಡದೆ

ಬರೆದಿದ್ದುJuly 18, 2016
noಅನಿಸಿಕೆ

ಇರುವುದೆಲ್ಲವ ಬಿಡದೆ

ಇರದುದರ ಕಡೆ ಹೋಗಲಾಗದೆ

ತ್ರಿಶಂಕುವಿನಂತೆ ಜೀಕಾಡಿ

ತೊಳಲಾಡಿದೆ ಮನವು

 

ಆಸೆಯನು ಬಿಡಲಾಗಿದೆ 

ದುರಾಸೆಯನು ಪಡದೆ

ನಿರಾಸೆಯಲಿ ನರಳಾಡಿ

ಅಶಕ್ತವಾಗುತಿದೆ ಬದುಕು

 

ಸತ್ಯವನು ನುಡಿಯದೆ

ಸುಳ್ಳನು ನುಡಿಯಲಾಗದೆ

ಅತಂತ್ರದ ಅಡಕೊತ್ತಲಿ ಸಿಕ್ಕು

ಗೊಂದಲದ ಗೂಡಲ್ಲಿ

ಬರೆದಿದ್ದುJuly 18, 2016
1ಅನಿಸಿಕೆ

ನೊಂದಿವೆ ಜೀವಗಳು 

ಬೆಂದಿವೆ ಭಾವಗಳು

ಈ ಗೊಂದಲದ ಗೂಡಲ್ಲಿ

ಗಲಿಬಿಲಿಗೊಂಡಿಹೆ ಮನದಲ್ಲಿ 

 

ಆರಕ್ಷಕರೇ ಆತ್ಮಹತ್ಯೆಗೆ

ಕೊರಳೊಡ್ಡುತಿರುವಾಗ

ಕಾಪಾಡುವ ಕೈಗಳೇ

ನಡುಗುತಲಿರುವಾಗ,,,,,?//ನೊಂದಿವೆ//

 

ದಕ್ಷತೆಗಿಲ್ಲಿ ಬೆಲೆಯೇ ಇಲ್ಲ 

ಪ್ರಾಮಾಣಿಕತೆಗೆ ಮನ್ನಣೆ ಇಲ್ಲ 

ಹಾಡು ಹಕ್ಕಿಯ ಕಾಡು ಭೇಟೆ

ಬರೆದಿದ್ದುJune 13, 2016
noಅನಿಸಿಕೆ

ಪ್ರಕೃತಿ ಎಂಬುದು ಮಾನವನ ನಿಲುಕಿಗೆ ಸಿಗದ ಒಂದು ಅಧ್ಬುತವೇ ಸರಿ, ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಬೆಳೆದರು ಅವನಿನ್ನೂ ತಿಳಿಯಬೇಕಾದ್ದಷ್ಟು ಬಹಳಷ್ಟಿದೆ ಎಂಬುದನ್ನು ಪ್ರಕೃತಿ ಆಗಾಗ ನೆನಪಿಸುತ್ತಲೇ ಸಾಗುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳ ಆಳದಲ್ಲಿ ನಮ್ಮ ಸುತ್ತಲಿನ ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ.

ಎಂಕನ ಜಾತ್ರೆ(ಕಥೆ)

ಇಂದ Geeta G Hegde
ಬರೆದಿದ್ದುApril 29, 2016
1ಅನಿಸಿಕೆ

ಅವ್ವೋ ಬಾಯಿಲ್ಲಿ." 

 

" ಏನ್ ಮಗ?"  

 

 "ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?"   

 

"ಹೂಂ ಹೇಳಿದ್ದೆ.  ಏನೀಗಾ?" 

 

ಋಣಭಾರ

ಬರೆದಿದ್ದುApril 24, 2016
noಅನಿಸಿಕೆ

ಋಣಭಾರ

 

ಬೆಟ್ಟ ಅಗೆದ ಬುಡದಲ್ಲಿ

ಉಳಿದಿದೆ ಕಾರ್ಮಿಕರ ಕಣ್ಣಿರು

ಗಣಿ ಧೂಳಿನಿಂದ ಮುಚಿದ ಬದುಕು

ಹೊಟ್ಟೆಗೆ ಬರಿ ತಣ್ಣೀರು

           ಗಣಿ ನಾಡಿಂದು ಮೌನದ ಕಣಿವೆ

           ಧಣಿವರಿಯದೇ ದುಡಿದಿವೆ

           ರಸ್ತೆಗಳು, ನೂರಾರು ವಾಹನಗಳು

ತಪ್ಪು

ಇಂದ SANTOSH KHARVI
ಬರೆದಿದ್ದುApril 4, 2016
noಅನಿಸಿಕೆ

ಗೆಳೆಯಾ,

(ಅನು)ಮತಿ

ಯಿಲ್ಲದೆ

ನನ್ನನ್ನು ಪ್ರೀತಿಸಿದ್ದು

ನಿನ್ನ ತಪ್ಪೇ ಹೊರತು,

ನಾನಿನ್ನ ಪ್ರೀತಿಸದೇ

ಇರುವುದು ಖಂಡಿತ 

ನನ್ನ ತಪ್ಪಲ್ಲ...

          - ಸ.Kha.

ಗುರುದಕ್ಷಿಣೆ

ಇಂದ SANTOSH KHARVI
ಬರೆದಿದ್ದುApril 2, 2016
noಅನಿಸಿಕೆ

ನನ್ನದೊಂದು ಆಸೆಯಿದೆ
ಮತ್ತೆ ಹುಟ್ಟಿ ಬರಲೆಂದು
ಆ ಗುರು ದ್ರೋಣಾಚಾರ್ಯರು...
ರಾತ್ರಿಪೂರ್ತಿ ಮೊಬೈಲ್ ಕೀಪ್ಯಾಡ್
ಒತ್ತುವವರಿಗೆಲ್ಲ ಹೆಬ್ಬೆರಳ ಗುರುದಕ್ಷಿಣೆ
ಕೇಳುವ ಗುರುಗಳಾಗಿ...
           - ಸ.Kha.