Skip to main content

ಅಂದು ಇಂದು

ಬರೆದಿದ್ದುApril 8, 2015
3ಅನಿಸಿಕೆಗಳು

ಅಂದು  ಇಂದು

 

ಅಂದು ಹೇಳುತ್ತಿದ್ದರು ರಾಜಮಾತೆ ರಾಜನಿಗೆ

ಕೆರೆಯಂ ಕಟ್ಟಿಸು ಬಾವಿಯಂ ಸವೆಸು 

ದೇವಾಗಾರವಂ ಮಾಡಿಸು

ಇಂದು ಹೇಳುತ್ತಾರೆ ರಾಜಕಾರಣಿಯ ಹೆಂಡತಿ

ಮಾನವೀಯತೆ

ಇಂದ Praveen kumar
ಬರೆದಿದ್ದುApril 4, 2015
noಅನಿಸಿಕೆ

ಮಟ ಮಟ ಮಧ್ಯಾನ್ಹ ನಾನು ಕಾರಿನಲ್ಲಿ ನನ್ನ  ಊರಿಗೆ ಹೊಗುತ್ತಿದ್ದೆ... ಯಾವುದೊ ಒಂದು ಹಳ್ಳಿ ಬಂತು.. ರಸ್ತೆಲಿ ಹಂಪ್ ಇದ್ದದ್ದರಿಂದ ಕಾರಿನ ವೇಗವನ್ನು ನಿಧಾನ ಮಾಡಿದೆ.. ಆ ಹಳ್ಳಿಯ ರಸ್ತೆ ಬದಿಯಲ್ಲಿ ಒಂದಷ್ಟು ಜನ ಗುಂಪುಗೂಡಿದ್ದರು. ಯಾರೊ ಒಬ್ಬಾತ ರಸ್ತೆಯ ಮಗ್ಗುಲಲ್ಲಿ ಬಿದ್ದಿದ್ದ..

ಅಸಮಾನತೆ ನಿವಾರಣೆ

ಇಂದ Praveen kumar
ಬರೆದಿದ್ದುMarch 31, 2015
noಅನಿಸಿಕೆ

ವಿಸ್ಮಯನಗರಿಯ ಆತ್ಮೀಯ ಓದುಗರೆ.... ನಾನು ಈ ಪತ್ರವನ್ನು ಏಳೆಂಟು ತಿಂಗಳುಗಳ ಹಿಂದೆ ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಕಳಿಸಿರುತ್ತೇನೆ ...ಹೀಗೆಯೆ ಹಲವಾರು ಪತ್ರಗಳನ್ನು ನಮ್ಮ ಪ್ರಧಾನ ಮಂತ್ರಿಗಳಿಗೆ ಬರೆದಿದ್ದೇನೆ..  ಅದರಲ್ಲಿ ಕೆಲವು ಪತ್ರಗಳನ್ನು ಹಂತ ಹಂತವಾಗಿ ವಿಸ್ಮಯನಗರಿಯ ಓದುಗರ ಮುಂದೆ ಪ್ರಸ್ತುತಪಡಿಸಲಿದ್ದೇನೆ..

ಬೆಳಕು ಹರಿಸಿದ ರವಿಗೆ ಗ್ರಹಣ ಹಿಡಿಸಿದ ವ್ಯವಸ್ತೆ..!

ಇಂದ Praveen kumar
ಬರೆದಿದ್ದುMarch 18, 2015
noಅನಿಸಿಕೆ

ನಮ್ಮ ನಾಡಿನ ನೇರ, ನಿಷ್ಟುರ,ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ ಕೆ ರವಿಯವರ ಅಕಾಲಿಕ ನಿಧನ ಕರ್ನಾಟಕವನ್ನಷ್ಟೆ ಅಲ್ಲ ಇಡಿ ದೇಶವನ್ನೆ ಬೆಚ್ಚಿ ಬಿಳಿಸಿದೆ. ಸರ್ಕಾರದ ಲಜ್ಜೆಗೇಡಿ ವರ್ತನೆಯಿಂದ ಜನ ಸಮುದಾಯ ತೀವ್ರ ಆಕ್ರೋಶಗೊಂಡಿದೆ. ಅದು ಆತ್ಮಹತ್ಯೆಯೋ...ಕೊಲೆಯೋ ಅನ್ನೋದು ನಿಷ್ಪಕ್ಷಪಾತ ತನಿಖೆಯಿಂದಷ್ಟೆ ತಿಳಿಯಲು ಸಾಧ್ಯ..!

ಎಚ್ಚರ

ಇಂದ prabhu
ಬರೆದಿದ್ದುMarch 17, 2015
noಅನಿಸಿಕೆ

ಎಚ್ಚರ

ರತಿಯ ರೂಪದ

ಹುಡುಗಿಯರ ಕಂಡಾಗಲೆಲ್ಲ

ಹುಡುಗರ ಮನದೊಳಗೆ

ಮನ್ಮಥ

ಮನ ಮಥಿಸಿ

ತಲ್ಲಣಿಸಿ ಬಿಡುತ್ತಾನೆ

ಆ ಕ್ಷಣ..!

ಅರಿವು ತಪ್ಪಿದರೆ

ಬೂದಿಯೆ ಮರುಕ್ಷಣ !!

              -ಡಾ.ಪ್ರಭು.ಅ.ಗಂಜಿಹಾಳ್.ಹೊಳೆಆಲೂರ್

 

ಸ್ವಾರಸ್ಯ

ಇಂದ deepak m
ಬರೆದಿದ್ದುMarch 16, 2015
noಅನಿಸಿಕೆ

ಏನೆಂದು ಹೇಳಲಿ ಈ ಹುಚ್ಚು ಮನಸಿನ ಕಲ್ಪನೆಗೆ

ಹೇಗೆ ಪೀಠಿಕೆ ಬರೆಯಲಿ ನೂರಾರು ಕನಸುಗಳಿಗೆ

ಮೊದಲು ಕೊನೆಗಳೆರಡೂ ಅನಿರೀಕ್ಷಿತ

ಮಧ್ಯಂತರದ ತಿರುವುಗಳು ಅಗಣಿತ

ನನ್ನಿಂದಲೇ ನನ್ನನ್ನು ಕದಿಯುವ ಸಂಚು

ಆಗಾಗ ಎದೆಯಾಗಸದಿ ಆಸೆಯ ಮಿಂಚು

ತಿರಸ್ಕಾರ, ಪುರಸ್ಕಾರಗಳ ಮೋಡಗಳ ಪಂಚಾಯ್ತಿ

ಹೋಳಿ ಹಬ್ಬ

ಇಂದ deepak m
ಬರೆದಿದ್ದುMarch 11, 2015
noಅನಿಸಿಕೆ

ಹೋಳಿ ಹಬ್ಬ

ಹೋಳಿ ಹುಣ್ಣಿಮೆ ಬಂದರೆ ಊರಿಗೂರೇ ನಾದಮಯ

ದೊಡ್ಡ ಹಲಿಗೆ ಸಣ್ಣ ಹಲಿಗೆ ಬಾರಿಸುವುದೇ ವಿಸ್ಮಯ

ಮೂಲೆ ಮೂಲೆಯಲಿ ಕಾಮಣ್ಣನ ಗುಡಾರಗಳು

ಮನೆ ಮನೆಯಲಿ ಹೂರಣ ತುಂಬಿದ ಹೋಳಿಗೆಗಳು

ನೈವೇದ್ಯ ಹಿಡಿಯೋದು ಕಾಮಣ್ಣನ ಮೂರ್ತಿಗೆ

ಅದು ಸೇರೋದು ಗುಡಾರದೊಳಗಿನ ಪುಂಡರ ಹೊಟ್ಟೆಗೆ

ವ್ಯವಸ್ಥೆಯನ್ನು ಭಕ್ಷಿಸುವವರ ಕೈಗೆ ಸಿಕ್ಕ ನನ್ನ ಕರ್ನಾಟಕದ ಪಾಡೇನು?

ಇಂದ Prakash. P
ಬರೆದಿದ್ದುFebruary 25, 2015
noಅನಿಸಿಕೆ

ಪ್ರಾಮಾಣಿಕ ಶಾಸಕ ರಮೇಶ್ ಕುಮಾರ್, ಭೇಷ್! ಭೇಷ್!! ಭೇಷ್!!!
ಮಾಜಿ ಮುಖ್ಯ ಮಂತ್ರಿಯ ನಂತರ ಅದೇ ಸಾಲಿಗೆ ಬಂದ ಮತ್ತೊರ್ವ ಶಾಸಕ ರಮೇಶ್ ಕುಮಾರ್ ರವರಿಗೆ
"ತಪ್ಪನ್ನು ರಾಜಾರೋಷವಾಗಿ ಒಪ್ಪ್ಪಿಕೊಳ್ಳುವ  ರಾಜಕಾರಣಿಗಳ ಕ್ಲಬ್ಗೆ ಸ್ವಾಗತ"

ನಗದು ಹಣ ಮುದ್ರಣ ಸ್ಥಗಿತವಾಗಲಿ!

ಇಂದ Prakash. P
ಬರೆದಿದ್ದುFebruary 25, 2015
3ಅನಿಸಿಕೆಗಳು

ಪ್ರಾಚೀನ ಕಾಲದಲ್ಲಿ ಜನರು ಮಾಡುತ್ತಿದ್ದ ವಸ್ತು ವಿನಿಮಯ ವ್ಯವಹಾರದಲ್ಲಿ ಅನೇಕ ನ್ಯೂನ್ಯತೆಗಳನ್ನು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರವಾಗಿ "ನಾಣ್ಯ ಮತ್ತು ನೋಟುಗಳ" ಮುದ್ರಣವನ್ನು ಆರಂಭಿಸಿದರು. ಆದರೆ ಇದರ ಪ್ರತಿಫಲ ಏನಾಯಿತೆಂದರೆ ’ಕುದಿಯುವ ಬಾಣಲಿಯಿಂದ ತಪ್ಪಿಸಿಕೊಂಡು ಉರಿಯುವ ಬೆಂಕಿಗೆ ಬಿದ್ದಂತಾಯಿತು’ ಇವತ್ತಿನ ಆರ್ಥಿಕ ವ್ಯವಸ್ಥೆ.

ಕೋಗಿಲೆ ದನಿಯು ಕೇಳುತ್ತಿಲ್ಲವೆ

ಇಂದ vipinkumar
ಬರೆದಿದ್ದುFebruary 15, 2015
1ಅನಿಸಿಕೆಕೋಗಿಲೆ ದಿನಿಯು ಕೇಳುತ್ತಿಲ್ಲವೆ ಮಾನವ ನಿನಗೆ
ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ
ಕಾನನ ಕಾಣದಾಯಿತು ಕಾನನವು ನಗರವಾಯಿತು
ಮಳೆಯು ಮರೆಯಾಯಿತು ಬುವಿಯು ಬರುಡಾಯಿತು
ಸಾಗರದಾಲದಲಿ ಕ೦ಪಿಸಿತು ಸಾಗರವು ಉಕ್ಕಿ ಹರಿಯಿತು
ಹಿಮಾಲಯದ ಹಿಮವು ಕರಗಿತು ನದಿಯುಉಗ್ರವೆತ್ತಿ ಹರಿಯಿತು