Skip to main content

ಕನ್ನಡ ಉಳೀಸುವದು ಹೇಗೆ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

RAVI.S ಗುರು, 11/17/2011 - 20:12

೧.ಕನ್ನಡ ಮಾದ್ಯಮ ಶಾಲೆಳಿಗೆ ಹೆಚ್ಹು ಮಾನ್ಯತೆ,
೨.ಭಾಷಾಬಿಮಾನ ಹೊ೦ದುವುದು.(ಬೆರೆ ಭಾಷೆ ಯನ್ನು ಗೌರವಿಸಿ, ಕನ್ನಡವನ್ನು ಪ್ರೀತಿಸಿ)
೩.ಕನ್ನಡಿಗರಿಗೆ ಹೆಚ್ಹಿನ ಉದ್ಯೊಗ ಅವಕಾಶ ಕಲ್ಪಿಸುವುದು.
೪.ಎಲ್ಲಾತರಹದ ವ್ಯವಹಾರಗಳನ್ನು ಕನ್ನಡದಲ್ಲಿ ಕಡ್ಡಾಯ ಮಡುವುದರಿ೦ದ,
೫.ಆಗಾಗ ಕನ್ನಡ ದ ಬಗ್ಗೆ ಸಭೆ-ಸಮಾರ೦ಬ ಗಳಿಗೆ ಉತ್ತೆಜನ ಕೊಡುವುದು.
೬.ಕನ್ನಡ ಪರ ಸ೦ಘಟನೆಗಳಿಗೆ ಪ್ರೊತ್ಸಾಹ,

Nanjunda Raju Raju ಭಾನು, 11/20/2011 - 17:26

ಶ್ರೀ ನಂದಗೋಪಾಲ್ ರವರೇ, ಕನ್ನಡ ನಾವು ಉಳಿಸಬೇಕಾಗಿಲ್ಲ. ಬಳಸಬೇಕಷ್ಟೆ. ಅಂದರೆ, ಸಾಮಾನ್ಯವಾಗಿ, ನಮ್ಮ ಶಾಲೆಗಳಲ್ಲಿ ಮೊದಲು ನಮ್ಮ ತಾಯಿ ಭಾಷೆ ಕನ್ನಡ ಕಲಿಸಿದಲ್ಲಿ ನಮ್ಮ ಭಾಷೆ ಉಳಿಯುತ್ತದೆ ಬೆಳೆಯುತ್ತದೆ. ಎಲ್ಲಾ ರಂಗಗಳಲ್ಲೂ, ಕನ್ನಡ ಮಾತನಾಡಬೇಕು. ರಾಜ್ಯದ ಯಾವುದೇ ಇಲಾಖೆಯಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಕನ್ನಡ ಹೊರತು ಬೇರೆ ಭಾಷೆಯ ಅರ್ಜಿಗಳನ್ನು ಸ್ವೀಕರಿಸಬಾರದು. ವಿಧಾನ ಸಭೆಯಲ್ಲಿ ಯಾವಕಾರಣಕ್ಕೂ ಆಂಗ್ಲ ಬಳಕೆ ಸಲ್ಲದು. ಕನ್ನಡ ಮಾಧ್ಯಮದಲ್ಲಿ ಓದಿದವರನ್ನು ಮಾತ್ರ ಸರ್ಕಾರ ಮತ್ತು ಖಾಸಗಿ ಉದ್ಯಮಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ನೆರೆ ರಾಜ್ಯಗಳಲ್ಲಿ ಈ ಪದ್ದತಿ ಚಾಲ್ತಿಯಲ್ಲಿದೆ. ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದ ಚಿತ್ರಗಳನ್ನು ಮಾತ್ರ ಬಿಡುಗಡೆ ಮಾಡಬೇಕು. ಕರ್ನಾಟಕದ ಟಿ.ವಿ.ಗಳಲ್ಲಿ ಕನ್ನಡ ಛಾನಲ್ ಗಳು ಮಾತ್ರ ಪ್ರಸಾರವಾಗಬೇಕು. ನಂತರ ದೇಶ ಭಾಷೆ ಹಿಂದಿಯನ್ನು ಕಲಿಯಬೇಕು ಇಲ್ಲವಾದರೆ, ಅಕ್ಕಪಕ್ಕದವರ ರಾಜ್ಯಕ್ಕೆ ನಾವು ಹೋದರೆ ಮೂಗರಾಗುತ್ತೇವೆ. ಪರಸ್ಪರ ಜಗಳವನ್ನೂ ಆಡುತ್ತೇವೆ. ಅದೇ ರೀತಿ ಪ್ರಪಂಚದ ಸಂಪರ್ಕ ಮತ್ತು ಅರಿವಿನ ಭಾಷೆ ಇಂಗ್ಲೀಷನ್ನು ಕಲಿತರೆ ಅವನ ಜ್ನಾನ ಹೆಚ್ಚಾಗುತ್ತದೆ. ಎಲ್ಲಿ ಹೋದರು ಬದುಕುತ್ತೇನೆಂಬ ಛಲ ಬರುತ್ತದೆ. ಇಲ್ಲವಾದರೆ. ಕನ್ನಡಿಗರಾದ ನಾವು ಕೂಪ ಮಂಡೂಕಗಳಾಗುತ್ತೇವೆ. ನೋಡಿ ಪ್ರಪಂಚದಲ್ಲಿ ಹಿಂದಿ ಬರುವವನು, ಪಾಕಿಸ್ತಾನದಲ್ಲಿ ಇರಾನ್ ಇರಾಖ್, ಸೌಧಿ ಮುಂತಾದ ದೇಶಗಳಲ್ಲಿ ಬದುಕಬಹುದು. ಇಂಗ್ಲೀಷ್ ಬಂದರೆ ಪ್ರಪಂಚದ ಶ್ರೀಮಂತ ದೇಶಗಳಲ್ಲಿ ಬದುಕಬಹುದು. ಇಲ್ಲವಾದರೆ. ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ. ಇದು ನನ್ನ ಅನುಭವ ಸಹ. ಏನಂತಿರಿ?,

ತೇಜೇಶ್ವರ್ ಸೋಮ, 11/21/2011 - 14:38

ಕನ್ನಡ ಉಳಿಸುವುದು ಹೇಗೆ ಎಂಬುದರ ಬದಲಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿದ್ರೆ ಕನ್ನಡ ಉಳಿಯುತ್ತದೆ.

  • 559 views