ಹಜಾರೆ ಅನಿರ್ದಿಷ್ಟ ನಿರಶನ: ದೆಹಲಿ ಪೊಲೀಸರ ನಕಾರ !!!
ನವದೆಹಲಿ (ಪಿಟಿಐ): ಗಾಂಧಿವಾದಿ ಅಣ್ಣಾ ಹಜಾರೆ ಹಾಗೂ ಅವರ ತಂಡವು ಭ್ರಷ್ಟಾಚಾರದ ವಿರುದ್ಧ ಇಲ್ಲಿನ ಜಯಪ್ರಕಾಶ ನಾರಾಯಣ ಉದ್ಯಾನದಲ್ಲಿ ಮಂಗಳವಾರದಿಂದ ಕೈಗೊಳ್ಳಲು ಉದ್ದೇಶಿಸಿದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ನೀಡಲು ದೆಹಲಿ ಪೊಲೀಸರು ಕಡೆಗೂ ನಿರಾಕರಿಸಿದ್ದಾರೆ.ಷರತ್ತಿನ ಮುಚ್ಚಳಿಕೆ ಬರೆದುಕೊಡಲು ಹಜಾರೆ ಅವರು ನಿರಾಕರಿಸಿರುವುದರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸ್ವಾತಂತ್ರ್ಯ ಉತ್ಸವ ಭಾಷಣದಲ್ಲಿ ಉಪವಾಸ ಮುಷ್ಕರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಬೆನ್ನಲ್ಲೇ ಪೊಲೀಸರು ಹಜಾರೆ ತಂಡಕ್ಕೆ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸುವ ನಿರ್ಧಾರ ಕೈಗೊಂಡಿದ್ದಾರೆ.ಗುರುವಾರದ ಒಳಗೆ ನಿರಶನ ಕೊನೆಗೊಳಿಸುತ್ತೇವೆ. ಮತ್ತು ಉಭಯ ಪಕ್ಷಗಳ ಬಲಪ್ರದರ್ಶನಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲು 5000ಕ್ಕಿಂತ ಕಡಿಮೆ ಜನರಿಗಷ್ಟೇ ಸೇರಲು ಅವಕಾಶ ಕಲ್ಪಿಸುತ್ತೇವೆ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಬೇಕು ಎಂಬುದಾಗಿ ಪೊಲೀಸರು ಅಣ್ಣಾ ಹಜಾರೆ ಮತ್ತು ತಂಡಕ್ಕೆ ಸೂಚಿಸಿದ್ದರು.
‘ಮಂಗಳವಾರ ರಾಜ್ಘಾಟ್ ನ ಮಹಾತ್ಮಾಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಬಳಿಕ ಫಿರೋಜ್ ಷಹಾ ಕೋಟ್ಲ ಮೈದಾನದ ಬಳಿಯ ಜಯಪ್ರಕಾಶ ನಾರಾಯಣ ಉದ್ಯಾನದಲ್ಲಿ ನ್ಯಾಯಾಲಯವು ಗಾಂಧಿವಾದಿ ಅಣ್ಣಾ ಹಜಾರೆ ಮತ್ತು ಅವರ ಅನುಯಾಯಿಗಳು ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಹಜಾರೆ ತಂಡದವರು ತಿಳಿಸಿದ್ದಾರೆ.
ಜಯಪ್ರಕಾಶ ನಾರಾಯಣ ಉದ್ಯಾನದಲ್ಲಿ ಅಣ್ಣಾ ಹಜಾರೆ ತಂಡ ಕೈಗೊಳ್ಳಲಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆಗೆ ದೆಹಲಿ ಪೊಲೀಸರು ವಿಧಿಸಿದ್ದ ಒಟ್ಟು 22 ಷರತ್ತುಗಳಲ್ಲಿ ಹಜಾರೆ ತಂಡವು 6 ಷರತ್ತುಗಳಿಗೆ ಬದ್ಧವಾಗಿ ಮುಚ್ಚಳಿಕೆಯನ್ನು ಬರೆದು ಕೊಟ್ಟು, ಪ್ರತಿಭಟನೆಗೆ ಪರವಾನಿಗೆಯನ್ನು ಕೇಳಿದೆ.ಆದರೆ, ಅವರ ಮನವಿಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ.
‘ಲೋಕಪಾಲ್ ಕಾಯ್ದೆಯ ಒತ್ತಾಯಕ್ಕಾಗಿ ಅಣ್ಣಾ ಹಜಾರೆ ತಂಡವು ಕೈಗೊಂಡಿರುವ ಉದ್ದೇಶಿತ ಪ್ರತಿಭಟನೆಯು ಅದು ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಾಗಬಾರದು’ ಎಂದು ಪ್ರಧಾನಮಂತ್ರಿ ಅವರು ಸ್ವಾತಂತ್ರೋತ್ಸವದ ಭಾಷಣದ ಸಂದರ್ಭದಲ್ಲಿ ಹೇಳಿರುವುದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
‘ಹಜಾರೆ ತಂಡವು ಪೊಲೀಸರು ವಿಧಿಸಿದ್ದ ಒಟ್ಟು 22 ಷರತ್ತುಗಳ ಪೈಕಿ 6 ಷರತ್ತುಗಳನ್ನು ಹೊರತು ಪಡಿಸಿ 16 ಷರತ್ತುಗಳನ್ನು ಒಪ್ಪಿ ಮುಚ್ಚಳಿಕೆ ನೀಡಿದರು. ಹಜಾರೆ ತಂಡವು ಇದನ್ನು ನೀಡಿದ ತತ್ ಕ್ಷಣವೇ ಪೊಲೀಸರು ಅನುಮತಿ ನಿರಾಕರಿಸಲು ತೀರ್ಮಾನಿಸಿದರು ಎಂದು ಪೊಲೀಸ್ ಮೂಲಗಳು ಹೇಳಿವೆ. `22 ಷರತ್ತುಗಳಲ್ಲಿ ಒಟ್ಟು 16 ಷರತ್ತುಗಳಿಗೆ ಮುಚ್ಚಳಿಕೆ ನೀಡಲು ಒಪ್ಪಿದೆ. ಆದರೆ, ಇನ್ನುಳಿದ 6 ಷರತ್ತುಗಳು ಅಸಂವಿಧಾನಾತ್ಮಕವಾಗಿದ್ದು, ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಹಜಾರೆ ತಂಡದ ವಕ್ತಾರರು ತಿಳಿಸಿದರು. ಪ್ರಜಾಪ್ರಭುತ್ವ ವಿರೋಧಿ- ಸಿಪಿಐ (ಎಂ): `ಅಣ್ಣ ಹಜಾರೆ ಅವರ ಉಪವಾಸ ಸತ್ಯಾಗ್ರಹ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ತಿರಸ್ಕರಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಯಾವುದೇ ಒಂದು ಕಾಯ್ದೆಯು ಸಂಸತ್ತಿನಲ್ಲಿ ಮಂಡನೆಯಾದಲ್ಲಿ ಅದರ ವಿರುದ್ಧ ಪ್ರತಿಭಟನೆಯನ್ನು ನಡೆಸಬಾರದು ಎಂದು ಹೇಳುವುದು ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರುದ್ಧ` ಎಂದು ಸಿಪಿಐ (ಎಂ) ಖಾರ ಪ್ರತಿಕ್ರಿಯೆ ನೀಡಿದೆ.`ಹಜಾರೆ ಅವರ ಕೆಲವು ನಿರ್ಧಾರಗಳು ಹಾಗೂ ಕೇಂದ್ರದ ದುರ್ಬಲ ಸರ್ಕಾರದ ಲೋಕಪಾಲ ಕಾಯ್ದೆಯ ಕೆಲವು ನಿರ್ಣಯಗಳ ಬಗ್ಗೆ ನಮ್ಮ ಪಕ್ಷಕ್ಕೆ ಭಿನ್ನಾಭಿಪ್ರಾಯಗಳಿವೆ. ಸರ್ಕಾರದ ಕಾಯ್ದೆಯು ಸಮಂಜಸವಾಗದಿದಲ್ಲಿ ಅದರ ವಿರುದ್ಧ ಪ್ರತಿಭಟಿಸುವ ನಾಗರಿಕರ ಹಕ್ಕನ್ನು ಯಾರು ಪ್ರಶ್ನಿಸುವಂತಿಲ್ಲ` ಎಂದು ಸಿಪಿಐ (ಎಂ)ನ ಹಿರಿಯ ನಾಯಕಿ ಬೃಂದಾ ಕಾರಟ್ ಹೇಳಿದರು.
ಸಾಲುಗಳು
- 365 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ