Skip to main content

ಶೆಟ್ಟರ್‌ಗೆ ಬೇಸರ: ಪ್ರಮಾಣವಚನಕ್ಕೆ ಗೈರು?

ಬರೆದಿದ್ದುAugust 4, 2011
1ಅನಿಸಿಕೆ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಯಡಿಯೂರಪ್ಪ ಬಣದ ಡಿ.ವಿ.ಸದಾನಂದಗೌಡ ಅವರ ಆಯ್ಕೆ ಬುಧವಾರ ಪ್ರಕಟವಾಗುತ್ತಿದ್ದಂತೆಯೇ ಜಗದೀಶ ಶೆಟ್ಟರ್ ಬಣದಲ್ಲಿ ಅಸಮಾಧಾನ ಹೊಗೆಯಾಡಿದೆ. ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತಿವೆ.

ಕ್ಯಾಪಿಟಲ್ ಹೋಟೆಲ್‌ನ ಸಭೆ ನಂತರ ಶೆಟ್ಟರ್ ಬಣದ ಎಲ್ಲ ಶಾಸಕರು ಅಶೋಕ ಹೋಟೆಲ್‌ಗೆ ಮರಳಿ ತುರ್ತು ಸಭೆ ನಡೆಸಿದರು. 

ಈ ಸಭೆಯಲ್ಲಿ ಶೆಟ್ಟರ್ ಅಲ್ಲದೆ, ಅನಂತಕುಮಾರ್ ಮತ್ತು ಆರ್.ಅಶೋಕ ಭಾಗವಹಿಸಿದ್ದರು.
ತಮ್ಮ ಪರ ಇರುವ ಕೆಲ ಶಾಸಕರಿಗೆ ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶೆಟ್ಟರ್ ತಿಳಿಸಿದರು. 

ಅನಾರೋಗ್ಯದಿಂದ ಬಳಲುತ್ತಿರುವ ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ್ ಅವರು ಶಾಸಕಾಂಗ ಪಕ್ಷದ ಸಭೆಗೆ ಗಾಲಿ ಕುರ್ಚಿಯಲ್ಲೇ ಬಂದು, ಮತದಾನದಲ್ಲಿ ಭಾಗವಹಿಸಿದ್ದರು. ಮತದಾನ ಮುಗಿದ ನಂತರ ಅವರಿಗೆ ಯೂಡಿಯುರಪ್ಪ ಅವರು `ನೀನು ಯಾರಿಗೆ ಓಟ್ ಹಾಕಿದ್ದೀಯಾ ಎನ್ನುವುದು ಗೊತ್ತು. ನಿನಗೆ ನೋಡಿಕೊಳ್ಳುತ್ತೇನೆ` ಎನ್ನುವ ಬೆದರಿಕೆ ಹಾಕಿದ್ದಾರೆ. ಇದೇ ರೀತಿ ಇನ್ನೂ ಅನೇಕ ಶಾಸಕರಿಗೆ ಬೆದರಿಕೆ ಹಾಕಿದ್ದು, ಈ ಸಲುವಾಗಿಯೇ ಬೇಸರ ಆಗಿದೆ ಎಂದು ಶೆಟ್ಟರ್ ಹೇಳಿದರು.

`ಹೊಸ ನಾಯಕನ ಆಯ್ಕೆ ನಂತರ ಅನುಸರಿಸಿಕೊಂಡು ಹೋಗಲು ತೀರ್ಮಾನಿಸಿ, ಸಭೆಯಿಂದ ಹೊರಬಂದೆ. ಆದರೆ, ಅಲ್ಲಿಂದ ಬರುವ ವೇಳೆಗೆ ಅನೇಕ ಶಾಸಕರು ದೂರವಾಣಿ ಕರೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದರು. ಇದರಿಂದ ನನಗೂ ಬೇಸರ ಆಯಿತು. ಹೀಗಾಗಿ ಯಾವ ಸಭೆಗೂ ಹೋಗುವುದು ಬೇಡ ಎಂದು ತೀರ್ಮಾನಿಸಿದ್ದೇನೆ` ಎಂದರು.

ಈ ಕಾರಣಕ್ಕೆ ನಮ್ಮ ಮನೆಯಲ್ಲಿ ಗುರುವಾರ ಬೆಳಿಗ್ಗೆ ಉಪಾಹಾರಕ್ಕೆ ಎಲ್ಲ 55 ಶಾಸಕರನ್ನೂ ಕರೆದಿದ್ದು, ಅಲ್ಲಿ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಪಡೆಯಲು ಇದು ಒತ್ತಡ ತಂತ್ರ ಇರಬಹುದೆಂದೂ ವಿಶ್ಲೇಷಿಸಲಾಗುತ್ತಿದೆ. ಅನರ್ಹತೆ ರದ್ದಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಶಾಸಕರು ಕೂಡ ಗುರುವಾರ ಸಭೆ ಸೇರಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಗೊತ್ತಾಗಿದೆ. 

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

lovlybaby ಮಂಗಳ, 09/27/2011 - 13:20

Hello My Dear
 My name is Faith Amah, it give me a great pleasure with due respect to communication with you and i will like to know more about you,
i will be very happy if you can write me AT (faithamah78@yahoo.com) so that we can know each other better.
i am waiting to hear from you as soon as possible .
have a blessed day.
Faith

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.