Skip to main content

ಥಾಂಕ್ಸ್, ಸಾರಿ ಮತ್ತು ಐ ಲವ್ ಯೂ ಅಪ್ಪ.

ಬರೆದಿದ್ದುJune 18, 2011
19ಅನಿಸಿಕೆಗಳು

[img_assist|nid=9214|title=i love you dad|desc=|link=node|align=left|width=130|height=101]ಅಪ್ಪ,ಮೊದಲೇ ಹೇಳಿಬಿಡ್ತೀನಿ.ಈ ಥಾಂಕ್ಸ್, ಸಾರಿ ಮತ್ತು ಐ ಲವ್ ಯೂ ಗಳನ್ನು ಫಾರ್ಮಾಲಿಟಿಯಿಂದ ತಗೋಬೇಡಿ. ಯಾಕೇಂದ್ರೆ, ಇದನ್ನು ನಾನು ಮನದಾಳದಿಂದ ಹೇಳ್ತಾ ಇದ್ದೀನಿ.
ಮೊದಲು, ಥ್ಯಾಂಕ್ ಯು ಸೋ ಮಚ್ ಅಪ್ಪಾ,ಚಿಕ್ಕಂದಿನಿಂದಲೂ ನಿನ್ನ ಕಂಡ್ರೆ ನನಗೊಂಥರಾ ಭಯಮಿಶ್ರಿತ ಪ್ರೀತಿ, ಗೌರವ ಮಿಶ್ರಿತ ಮಮತೆ. ಅಮ್ಮ ಒಂಥರಾ ಹುಚ್ಚು ಪ್ರೀತಿಯ ಹೊಳೆಯಾದರೆ, ನೀನೊಂಥರಾ ರುದ್ರ ಗಂಭೀರ ಕಡಲು. ಆವಾಗೆಲ್ಲಾ ನಮ್ಮ ಕೋರಿಕೆ ಅರ್ಜಿಗಳು ಅಮ್ಮನ ಮುಖಾಂತರವೇ ನಿನಗೆ ಸಲ್ಲುತ್ತಿತ್ತು. ನಿನ್ನ ಹತ್ತಿರ ಲೆಕ್ಕ, ಮಗ್ಗಿ ಹೇಳಿಸಿಕೊಳ್ಳಬೇಕಾದರೆ ತಿಂದ ಏಟುಗಳನ್ನು ಈಗಲೂ ನೆನಸಿಕೊಂಡರೆ ಕೆನ್ನೆ ಚುರ್ರ್ ಅನ್ನುತ್ತೆ. ಆದರೆ ನನಗೆ ಗೊತ್ತು. ಆ ಬುನಾದಿಯಿಂದಲೇ ಅಲ್ವೇ ಇವತ್ತು ನನ್ನ ಬದುಕಿನ ಸೌಧ ನಿರ್ಮಾಣವಾಗಿರೋದು. ನಿನ್ನ ಬಗ್ಗೆ ಎಷ್ಟೇ ಭಯ ಇದ್ರೂ,ರಾತ್ರಿ ಮಲಗಬೇಕಾದರೆ ನಿನ್ನ ಪಕ್ಕಾನೇ ಅಂತ ನಾನು ಅಣ್ಣ ಹಠ ಹಿಡಿತಾ ಇದ್ವಿ. ಯಾಕೆ ಗೊತ್ತಾ? ನೀನು ಜೊತೆ ಇರಬೇಕಾದರೆ ಏನೋ ಒಂಥರಾ ಸೆಕ್ಯುರಿಟಿ ಫೀಲಿಂಗ್.   ನನಗೆ ಕಾಗದ ದೋಣಿ ಮಾಡೋದು, ಗಾಳಿಪಟ ಮಾಡೋದು, ಈಜೋದು,ಸೈಕಲ್ ಹೊಡೆಯೋದು, ಎಲ್ಲಾ ನೀನೇ ಕಲಿಸಿದ್ದು. ಆಫ್ ಕೋರ್ಸ್ ಬದುಕೋದು ಕೂಡ ಆಮೇಲೆ,ನಿನ್ನ ಕಾಲದಲ್ಲಿ ಕಾಲ್ಕುಲೇಟರ್ ಕಂಡಿದ್ಯೋ, ಇಲ್ಲವೋ? ಆದರೆ ಮಗನಿಗೆ ಕಂಪ್ಯೂಟರ್ ಕೊಡಿಸೋ ಹಂಬಲ ನಿಂದು. ಆಟೋದಲ್ಲಿ ಹೋಗೋದಿಕ್ಕೆ ತುಂಬಾ ಹತ್ತಿರ ಆಯ್ತು ಅಂತ ನೆಪ ಹೇಳಿ ಅದೆಷ್ಟು ಸಾವಿರ ಕಿಲೋ ಮೀಟರ್ ನಡೆದಿದ್ಯೋ ಏನೋ? ನಾನು ಬೈಕ್ ತೊಗೊಂಡಾಗ ಮಾತ್ರ ಎಲ್ಲಾರ್ಗೂ ಸ್ವೀಟು ಹಂಚಿದ್ದು ನೀನೇ.  ನಮ್ಮ ಕಾಲದಲ್ಲಿ ನನ್ನ ಡಿಗ್ರೀ ಫೀಸು ಬರೇ ೨೫ ರೂ ಅಂತ ಹೇಳ್ತಾನೇ ನಮ್ಮನ್ನು ಸಾವಿರಾರು ರೂಪಾಯಿ ಡೊನೇಷನ್ ತೆತ್ತು ದುಬಾರಿ ಸ್ಕೂಲುಗಳಿಗೆ ಸೇರಿಸಿದೆ.  ನಾನು ಗಿಟಾರ್ ಕ್ಲಾಸಿಗೆ ಹೋಗಬೇಕೆಂದಾಗ ಅಮ್ಮನ ಜೊತೆ ಜಗಳ ಆಡಿ ಸೇರಿಸಿ ಬಂದಿದ್ದು ನೆನಪಿದೆ. ಒಟ್ಟಾರೆ ಹೇಳಬೇಕೆಂದರೆ, ನನ್ನ ಮಗನ ಬಾಲ್ಯ ಮತ್ತು ಯೌವನ ನನ್ನದಕ್ಕಿಂತ ಚೆನ್ನಾಗಿರಬೇಕು ಅನ್ನೋ ನಿನ್ನ ಹಾರೈಕೆ ಎದ್ದು ಕಾಣ್ತಾ ಇತ್ತು. ನಿನ್ನ ಆ ತ್ಯಾಗಕ್ಕೊಂದು ನಮಸ್ಕಾರ. ಥ್ಯಾಂಕ್ಸ್ ಅಪ್ಪ ಮತ್ತೆ,ನಿನ್ನ ಹಿತಶತ್ರು  ಯಾರೋ ಬಂದು, ನನ್ನ ಬಗ್ಗೆ ನಿನ್ನ ಹತ್ತಿರ ಚಾಡಿ  ಹೇಳಿದಾಗ, ನೀನಂದ ಮಾತು." ಅವನು ನನ್ನ ಮಗ ಕಣ್ರೀ, ಹಾಗೆಲ್ಲ ತಪ್ಪು ಮಾಡೋದಿಲ್ಲ".   ನಿಜವಾಗಲೂ ಅಪ್ಪ. ಇವತ್ತು ನನ್ನಲ್ಲಿ ಯಾರಾದರೂ ಹೊಗಳೊ ಅಂಥಾ ನಾಲ್ಕು ಗುಣ ಇದೇ ಅಂದ್ರೇ, ಅದು, ನಿನ್ನನ್ನು ನೋಡಿಯೇ ಕಲಿತದ್ದು ಅಥವಾ ನೀನೇ ಕಲಿಸಿ ಕೊಟ್ಟದ್ದು. ಯಾರಾದ್ರೂ ನನ್ನನ್ನು ಅಮ್ಮನ ಮಗ ಅಂದ್ರೆ   ನಾಚಿಕೆ ಆಗುತ್ತೆ, ಸಿಟ್ಟು ಬರುತ್ತೆ. ಆದರೆ ಅಪ್ಪನ ಥರಾ ಅಂದ್ರೆ ಅದೊಂದು ಕಾಂಪ್ಲಿಮೆಂಟು. ಉದಾರತೆ, ಸಹಿಷ್ಣುತೆ, ಸಾಹಸಿತನ, ಛಲ, ಮುಂಗೋಪ, ಪುಸ್ತಕ ಪ್ರೀತಿ, ಎಲ್ಲಾ ನಿಂದೇ ಬಳುವಳಿ.  ನಿಂಗೊತ್ತಾ ಅಪ್ಪ,ಆಗಿನ ಕಾಲದಲ್ಲೇ , ನೀನಾಡಿದ ಆಟ, ನಿನ್ನ ಧಿಮಾಕು, ತಲೆಬುಡ ಗೊತ್ತಿಲ್ಲದ ವ್ಯವಹಾರಕ್ಕೆ ಕೈ ಹಾಕಿ ಮಾಡಿಕೊಂಡ ಲಾಸು ಎಲ್ಲವನ್ನೂ ನನ್ನ ಫ್ರೆಂಡ್ಸಿಗೆ ದೊಡ್ಡ ಅಡ್ವೆಂಚರ್ ಅನ್ನೋ ಥರಾ ವರ್ಣಿಸ್ತೀನಿ. ಅವರೆಲ್ಲಾ ಅಸೂಯೆಯಿಂದ ಕಣ್ಣರಳಿಸುತ್ತಾ ಹೌದಾ? ಅಂತ ಆಶ್ಚರ್ಯ ಪಡ್ತಾರೆ.  ಅದೇನೆ ಇರಲಿ,ಇವತ್ತು ನನ್ನ ವ್ಯಕ್ತಿತ್ವ ರೂಪುಗೊಳ್ಳುವ ಹಿಂದೆ ನಿನ್ನ ಅಪಾರ ಪರಿಶ್ರಮ ಇದೆ. ಒಂದೋ ನಾನು ನಿನ್ನನ್ನು ಅನುಕರಿಸುತ್ತಿದ್ದೇನೆ. ಇಲ್ಲವೇ ನೀನೇ ನನ್ನನ್ನು ತಿದ್ದಿರುತ್ತೀ.  ಸೋ ಒನ್ಸ್ ಅಗೇನ್ ಥ್ಯಾಂಕ್ಯು. (ಮೊನ್ನೆ ನನ್ನ ಇಪ್ಪತ್ತೈದನೇ ವರ್ಷದ ಬರ್ತ್ ಡೇ ದಿನ ತೆಗೆಸಿಕೊಂಡ ಫೋಟೋ ಮತ್ತು ನಿನ್ನ ಇಪ್ಪತ್ತೈದನೇ ಹುಟ್ಟಿದ ಹಬ್ಬದ ದಿನ ತೆಗೆಸಿಕೊಂಡ ಫೋಟೋ ಎರಡೂ ಹೋಲಿಸಿ ನೋಡಿದೆ. ಹೂಬೇ ಹೂಬು, ನಿಂತಿರೋ ಭಂಗಿ, ನಗು, ನನ್ನ ಬಿಟ್ರಿಲ್ಲಾ ಅನ್ನೋ ಧಿಮಾಕು ಎಲ್ಲಾ ಒಂದೇ ಥರಾ ಎನ್ನಿಸಿ ಹೆಮ್ಮೆ ಪಟ್ಟುಕೊಂಡೆ. ಆದ್ರೆ ಅಮ್ಮ ಮಾತ್ರ ನಿಂಗಿಂತಾ ಅವರೇ  ಚೆನ್ನಾಗಿದ್ರು ಅಂತಾ  ಹೇಳಿ ಹೊಟ್ಟೆ ಉರುಸ್ತಾರೆ) ಮತ್ತೆ ಏನು ಗೊತ್ತಾ, ನಿನ್ನ ಹತ್ತಿರ ಸಾರಿ ಕೇಳಬೇಕಾಗಿತ್ತು. ಪ್ಲೀಸ್, ನಗಬೇಡ.ಎಷ್ಟೋ ಸಾರಿ ನಿನ್ನ ಓಲ್ಡ್ ಮಾಡೆಲ್ ಅಂತ ಹಂಗಿಸಿ ಮಾತಾಡಿದ್ದೀನಿ. ಅಪ್ಪ ತುಂಬಾನೇ ಔಟ್ ಡೇಟೆಡ್ ಅಂತ ಅನ್ನಿಸಿದ್ದಿದೆ. ಸಾಕಷ್ಟು ಸಾರಿ ತಿರುಗಿ ಬಿದ್ದು ಎದುರು ಮಾತು ಕೂಡ ಆಡಿರಬಹುದು, ಆದ್ರೆ ಪ್ಲೀಸ್ ಅದನ್ನೆಲ್ಲಾ ಮನಸಿಗೆ ಹಚ್ಕೊಬೇಡ. ಐ ಆಂ ಸಾರಿ. ನನಗೆ ಚಿಕನ್ ಪಾಕ್ಸ್ ಆಗಿದ್ದಾಗ ನೀನು ನನ್ನನ್ನು ಎತ್ತಿಕೊಂಡು ಹೋಗಿ ಟ್ರೀಟ್ ಮಾಡಿಸಿದ್ದು ನೆನಪಿದೆ. ಆದರೆ ನಾನು ಮಾತ್ರ ನೀನು ತರಲು ಹೇಳಿದ ಮಾತ್ರೆ ಮರೆತು ಬಂದಿರ್ತೀನಿ. ಮಳೆ ಬರೋ ದಿನಾ ನೀನು ಸ್ಕೂಲ್ ಹತ್ತಿರ ಛತ್ರಿ ತಗೊಂಡು ಬಂದಿದ್ದು ನೆನಪಿದೆ. ಆದ್ರೆ ಯಾವತ್ತೋ ಒಂದು ದಿನ ನೀನು ಡ್ರಾಪ್ ಕೇಳಿದಾಗ ," ನಂಗೆ ಅದಕ್ಕೆಲ್ಲಾ ಟೈಮಿಲ್ಲ, ಬೇಕಾದ್ರೆ ಆಟೋದಲ್ಲಿ ಹೋಗಿ" ಅಂತ ಎದ್ದು ಬಂದಿರ್ತೀನಿ. ಇದೆಲ್ಲಾ ಸಣ್ಣ ಪುಟ್ಟಾ ವಿಷಯಗಳಾದರೂ ನನ್ನ ಸಣ್ಣತನ ಮುಚ್ಚಿಟ್ಟುಕೊಳ್ಳಲು ಆಗೋದೇ ಇಲ್ಲ. ಐ ಆಂ ಸಾರಿ  ನನ್ನ ಬರ್ತ್ ಡೇ ದಿನಾ ನಾನು ಫ್ರೆಂಡ್ಸ್ ಜೊತೆ ಪಾರ್ಟಿ ಮಾಡ್ತಾ ಇದ್ದರೆ, ನೀನು ಮಾತ್ರ ದೇವಸ್ಥಾನದಲ್ಲಿ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿಸ್ತಾ ಇರ್ತೀಯಾ. ನಾನು ಮಾತ್ರ ನಿನ್ನ ಬರ್ತಡೇ ದಿನಾ ವಿಷ್ ಮಾಡುವುದನ್ನು ಕೂಡ ಮರೆತಿರುತ್ತೀನಿ. ನಾನು ಚಿಕ್ಕಂದಿನಲ್ಲಿದ್ದಾಗ ಅದೆಷ್ಟು ನನ್ನ ಅಸಾಧ್ಯ ತುಂಟಾಟಗಳನ್ನು ಸಹಿಸಿಕೊಂಡಿದ್ದಿಯೋ? ಇವತ್ತಿಗೂ ಅದನ್ನೆಲ್ಲಾ ಹೇಳಿಕೊಂಡು ನಗ್ತಾ ಇರ್ತೀಯಾ. ನಾನು ಮಾತ್ರ ನಿನಗೆ ಸ್ವಲ್ಪ ಕಿವಿ ಮಂದವಾಗಿ ನಾನು ಹೇಳಿದ್ದು ಎರಡು ಸಾರಿ ಕೇಳಿಸದೇ ಇದ್ದರೆ, ನನ್ನ ಸಹನೆ ಹಾರಿ ಹೋಗಿ ಕೂಗಾಡ್ತಾ ಇರ್ತೀನಿ. ನನ್ನದು ಏರು ಯೌವನ, ಆದರೆ ನಿನ್ನದು ಇಳಿ ವಯಸ್ಸು. ನನ್ನ ಪ್ರತಾಪವನ್ನು ಭರಿಸಿಕೊಳ್ಳುವ ಶಕ್ತಿ ನಿನಗೀಗ ಇಲ್ಲವೆಂದು ನನಗೆ ಅರ್ಥವಾಗುವುದೇ ಇಲ್ಲ . ಸೋ ಐ ಆಂ  ವೆರಿ ಸಾರಿ ಅಪ್ಪ, ಎಷ್ಟಾದ್ರೂ ನಿನ್ನ ಮಗ ತಾನೆ ಅಂದು ಕೊಂಡು ಕ್ಷಮಿಸಿ ಬಿಡು. ಅದನ್ನೆಲ್ಲಾ ಮನಸ್ಸಿಗೆ ಹಚ್ಚಿಕೋ ಬೇಡಿ ಪ್ಲೀಸ್. ಮೊನ್ನೆ ನನ್ನ ಮದುವೆ ವಿಷಯ ಬಂದಾಗ ನೀನು ನನ್ನನ್ನು ಪ್ರತ್ಯೇಕವಾಗಿ ಕರೆದು ಹೇಳಿದ ಮಾತು " ಮಗನೇ, ನಮ್ಮದಂತೂ ಇನ್ನು ಆಗಿ ಹೋಯ್ತು, ಬಾಳಿ ಬದುಕಬೇಕಾದವರು ನೀವು. ನೀನು ಯಾರನ್ನಾದ್ರೂ ಪ್ರೀತಿಸಿದ್ರೆ, ಇಷ್ಟ ಪಟ್ಟಿದ್ರೆ ಧೈರ್ಯವಾಗಿ ಹೇಳು. ಜಾತಿ ಗೀತಿ ಅಂತೆಲ್ಲಾ ತಲೆ ಕೆಡಿಸ್ಕೋ ಬೇಡ ನೀವು ಸುಖವಾಗಿರೋದಷ್ಟೇ ಮುಖ್ಯ. ನಿಮ್ಮಮ್ಮ ಕೂಡ ಎರಡು ದಿನ ಕೊರಗಿ ಆಮೇಲೆ ಸುಮ್ಮನಾಗ್ತಾಳೆ." ನೋಡು ನೋಡು, ನನ್ನ ಲೈಫ್ ಗೆ ಕಂಫರ್ಟ್ ಒದಗಿಸೊದಕ್ಕೆ ನೀನು ಏನು ಬೇಕಾದ್ರೂ ಮಾಡೋದಿಕ್ಕೆ ರೆಡೀ. ಆದರೆ ನಾನು ಮಾತ್ರ ನಿನ್ನ ಕಂಫರ್ಟ್ ಬಗ್ಗೆ ಯೋಚನೇನೇ ಮಾಡಿಲ್ಲ. ಎಷ್ಟು ಸಣ್ಣವನಲ್ವಾ ನಾನು. ಐ ಆಂ ಸಾರಿ ಅಪ್ಪಾ.ಪುತ್ರೋ ಮಿತ್ರೋ ಭವಿಷ್ಯತಿ ಅನ್ನೋದನ್ನಾ ಎಷ್ಟು ಸರಳವಾಗಿ ನೀನು ಜಾರಿಗೆ ತರ್ತೀಯಾ. ನನ್ನ ಕಣ್ಣಿಗೆ ಮಾತ್ರ ನಿನ್ನನ್ನು ಫ್ರೆಂಡ್ ಥರ ನೋಡೋಕೆ ಕಷ್ಟ. ಯಾಕೇಂದ್ರೆ ನನ್ನ ಕಣ್ಣಲ್ಲಿ ನೀನು ಯಾವಾಗಲೂ ಎವರ್ ಗ್ರೀನ್ ಹೀರೋ ಬಾಸ್. ಮತ್ತೆ ಕೊನೆಯದಾಗಿ ಒಂದ್ಮಾತು,
ನಮ್ಮ ಮಧ್ಯ ಎಷ್ಟೇ ಪ್ರೀತಿ ಇದ್ರೂ ಇದುವರೆಗೂ ಒಂದು ಸಾರಿನೂ ಅದನ್ನು ಬಾಯಿ ಬಿಟ್ಟು ಹೇಳಿ ಕೊಂಡಿಲ್ಲ. ಮತ್ತು  ಒಬ್ಬರೊನ್ನೊಬ್ಬರು ತಬ್ಬಿ ಕೊಂಡಿಲ್ಲ. ಯಾಕೆಂದರೆ ನಿನಗೆ ನಿನ್ನ ದೊಡ್ಡತನ ಅಡ್ಡ ಬಂದರೆ ನನಗೆ ಬಿಗುಮಾನ ಅಡ್ಡ ಬರುತ್ತೆ.  ನಾಳೆ ಅದೆಂತದೋ ವಿಶ್ವ ತಂದೆಯರ ದಿನಾಚರಣೆ ಅಂತೆ (ಫಾದರ್ಸ್ ಡೇ) ಇದೇ ನೆಪದಲ್ಲಿ ನಿನಗೆ ಈ ಪತ್ರ ಮತ್ತು ಒಂದು ಗಿಫ್ಟ್ ಕೊಟ್ಟು ತಬ್ಬಿಕೊಳ್ತೀನಿ. ಮತ್ತು ನನ್ನೆಲ್ಲಾ ಬಿಗುಮಾನ ಬಿಟ್ಟು ಹ್ಯಾಪಿ ಫಾದರ್ಸ್ ಡೇ ಹೇಳ್ತೀನಿ. ಪ್ಲೀಸ್ ಏನೂ ಅಂದ್ಕೋ ಬೇಡ.ಯಾಕೇಂದ್ರೆ. ನಿಜವಾಗಲೂ ಐ ಲವ್ ಯೂ ಅಪ್ಪಾ. ನಿನ್ನ ಮಗ ಅಂತ ನನ್ನ ನಾಲ್ಕು ಜನ ಗುರುತಿಸೋದ್ರಲ್ಲೇ ನನಗೆ ಹೆಮ್ಮೆ ಇದೆ i love you 
ಇಂತಿ ನಿನ್ನ ಪ್ರೀತಿಯ ಮಗ, ( ಇಲ್ಲಿ ಓದುಗರು ತಂತಮ್ಮ ಹೆಸರು ಗಳನ್ನು ಹಾಕಿಕೊಳ್ಳಬಹುದು)

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಮೈಲಾರಪ್ಪ. ಎನ್ … (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 06/18/2011 - 14:58

ನಿಮ್ಮ ಲೇಖನ ನೋಡಿ ಒಮ್ಮೆಲೇ ನನ್ನ ಕಣ್ಣಲ್ಲಿ ತೇವವಾದ ಅನುಭವ ಆಯ್ತು, ಅದು ಏಕೆ ಅಂತ ಬಿಡಿಸಿ ಹೇಳಬೇಕಾಗಿಲ್ಲ,ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರೂ  ತಾಯಿಯ ಬಗ್ಗೆ ಕವನ, ಲೇಖನ ಬರೆಯುತ್ತಾರೆ,ಆದರೆ ನೀವು ತಂದೆಯ ಬಗ್ಗೆ ಬರೆದಿರುವ ಈ ಲೇಖನ ವೈಶಿಷ್ಟ್ಯತೆಯಿಂದ ಕೂಡಿದ್ದು,ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ನೈಜ ಸಂಗತಿಯನ್ನೊಳಗೊಂಡಿದೆ,ಮತ್ತು ತುಂಬಾ ಅದ್ಬುತವಾಗಿದೆ,ಇದನ್ನು ನಿಮ್ಮ ಲೇಖನದ ವಿಮರ್ಶೆ ಅಂದುಕೊಂಡರೆ ತಪ್ಪಾದೀತು, ಏಕೆ ಗೊತ್ತಾ????? ಈ ಲೇಖನವನ್ನು ವಿಮರ್ಶೆ ಮಾಡುವಷ್ಟು ಅರ್ಹನಲ್ಲ ನಾ....

ವಿನಯ್_ಜಿ ಸೋಮ, 06/20/2011 - 14:27

ಬಾಲಚಂದ್ರ ರವರೆ,
ನಿಮ್ಮ ತಂದೆಯವರಿಗೆ ಈ ಲೇಖನ ತೋರಿಸಿದರೇನು..? ಇಲ್ಲವೆಂದರೆ ಈಗಲೇ ಪ್ರಿಂಟ್ ಔಟ್ ತಗೆದು ಅವರ ಟೇಬಲ್ ಮೇಲೆ ಇಟ್ಟುಬಿಡಿ. ಇದಕ್ಕಿಂತ ಉತ್ತಮ ಉಡುಗೊರೆ ಅವರಿಗೆ ಮತ್ತೊಂದಿಲ್ಲ... in short, a really good remembrence of a person who melted his "life"s candle for our "growth and prosperity" Light
-- ವಿನಯ್

ಗುರು ಪ್ರಸಾದು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/22/2011 - 15:45

ಸೂಪರ್!!

ಪ್ರತಿಯೊಬ್ಬ ಮಕ್ಕಳಿಗೂ ಅವರ ಅಪ್ಪ ಹೇಗಿದ್ದರೂ ಅವನೇ HEMAN, SUPERMAN ಎಲ್ಲವೂ. ಅದಕ್ಕೆ ನಾನೂ ಹೊರತಲ್ಲ.ಅಪ್ಪಂದಿಂರ ದಿನಕ್ಕೆ ಸೊಗಸಾದ ಲೇಖನ. ನನ್ನ ಬಾಲ್ಯ ನೆನಪಿಸಿದ್ದು ಸುಳ್ಳಲ್ಲಬಾಲಣ್ಣ ಸಕ್ಕತ್ತಾಗಿದೆನಿಮ್ಮಉಮಾಶಂಕರ

kmurthys ಶುಕ್ರ, 06/24/2011 - 11:59

ನಿಮ್ಮದು ಹೃದಯಾಳದಿಂದ ಬಂದ ಮಾತು ಎನ್ನುವುದು ತಿಳಿಯುತ್ತದೆ. ನಿಮ್ಮ ತಂದೆಯವರು ಅದೃಷ್ಟವಂತರು. ಇದನ್ನು ಅವರಿಗೆ ಓದಲು ಖಂಡಿತ ಕೊಡಿ.

Nalini ಶುಕ್ರ, 06/24/2011 - 14:36

ಬಾಲ ಚಂದ್ರರವರೆ ನಿಮ್ಮ ಬರಹ ಚೆನ್ನಾಗಿದೆ. ಗಂಡ ಹೆಂಡತಿಯತ್ತಿರ ಅಥವಾ ಹೆಂಡತಿ ಗಂಡನತ್ತಿರ ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ . ಅಪ್ಪ ಅಮ್ಮನತ್ತಿರ ನಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಎನೊ ಒಂಥರ ಸಂಕೋಚ. ಇ ಲೇಖನದ ಮೂಲಕ ವ್ಯಕ್ತಪಡಿಸಿದ್ದಿರಾ ಒಳ್ಳೆಯದಾಗಲಿ.

ಕೆಎಲ್ಕೆ ಶನಿ, 06/25/2011 - 23:17

ಬಾಲ ಚಂದ್ರ, ಬಲು ಆಪ್ತ ಎನ್ನಿಸುವ ಲೇಖನ ಇದು. ಅಪ್ಪನನ್ನು ಹೆಚ್ಚಾಗಿ ಏಕವಚನದಲ್ಲಿ, ಕೆಲವೊಮ್ಮೆ ಬಹುವಚನದಲ್ಲಿ ಸಂಭೋಧಿಸಿದ ಮರ್ಮ ತಿಳಿಯಲಿಲ್ಲ.

Goutam ಭಾನು, 06/26/2011 - 23:11

really heart touching         my story also similar to you..........dear friend 

ಶಾಲಿನಿ ಎಂ ಜೆ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/28/2011 - 15:52

ಬಾಲಚಂದ್ರ ಅವರೆ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಮನಸ್ಸಿನ ಭಾವನೆಗಳಿಗೆ ಸರಿಯಾದ ಅಕ್ಶರ ರೂಪ ಕೊಡುವಲ್ಲಿ ನೀವು ಒಳ್ಳೆಯ ಪ್ರಯತ್ನ ಮಾಡಿದ್ದೀರ.

ವಿ.ಎಂ.ಶ್ರೀನಿವಾಸ ಮಂಗಳ, 06/28/2011 - 19:38

ತುಂಬಾ ಚೆನ್ನಾಗಿದೆ ಬಾಲು.

lokesh ಧ, 06/29/2011 - 17:44

ತುಂಬಾ ಚೆನ್ನಾಗಿದೆ ಬಾಲು 

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/02/2011 - 15:10

great pa

shreyas (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/08/2011 - 13:20

ಅತ್ಯುತ್ತಮವಾಗಿದೆ.keep it up Ballanna

bhumika ಸೋಮ, 08/01/2011 - 16:29

ನಿಜವಗಾಲೂ ಇದು ಎಲ್ಲರ ಬಾಳಿನಳಲ್ಲಿ ನಡೆಯುವ ಘಟನೆ ಅದನ್ನುಚೆನ್ನಾಗಿ ನಿಮ್ಮ ಭಾವನೆ ಮೊಲಕ ವಿವರಿಸಿದ್ದಿರಾ......  

ಅರುಣ ಮಂಗಳ, 08/23/2011 - 12:05

 ಪ್ರಿಯ ಬಾಲು ರವರೆ, ಇದನ್ನು ನೋಡಿದರೆ ಇದು ನಿಮ್ಮ ಮನದಾಳದ ಮಾತು ಎನ್ನಿಸುತ್ತದೆ. ನಿಮ್ಮ ತಂದೆ ನಿಜವಾಗಿಯು ಅದ್ರುಸ್ಸ್ಟವನಂತರು , ಈ ಲೇಖನವನ್ನು ಅವ್ರಿಗೆ ಓದಲು ಕೊಡಿ.

ಚಂದ್ರಶೇಖರ ಜಿ.ಬಿ ಮಂಗಳ, 08/23/2011 - 17:47

ತುಂಬಾ ಒಳ್ಳೆಯ ಬರಹ ಬಾಲಚಂದ್ರ. ಇದು ಎಲ್ಲರ ಜೀವನದ ಸಂಕ್ಷಿಪ್ತ ರೂಪದಂತಿದೆ. ನಿಮ್ಮ ಬರಹಕ್ಕೆ ಧನ್ಯವಾದಗಳು

Naveenkumar s ಸೋಮ, 08/29/2011 - 17:15

B.C.....TUMBA CHENNAGIDE,

Naveenkumar s ಸೋಮ, 08/29/2011 - 17:24

NIJAVAAGLOO...... HEART TOUCHING STORY.....
APPA - APPA ANNODU KEVAL 2 AKSHARA GALE ADRU, ADARA HINDE DODDA MAHATVAVIDE.
ADANNELLA TILISIKOTTA NIMAGE, MATTE NIMMANTHAHA FRIENDS NA "VISMAYA NAGARIGE" KOTTA NIMMA APPA AMMAANIGE 101 THANKS....  

Naveenkumar s ಸೋಮ, 08/29/2011 - 17:25

PHOTO UPDATE MAADIDRE INNU CHENDA IRTITTU ,,,ENANTEERA  B.C?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.