Skip to main content

ಜನರು ಜ್ಯೋತಿಷ್ಯವನ್ನು ನಂಬಿ ಯಾಕೆ ಹಾಳಾಗ್ತಾ ಇದ್ದಾರೆ? ಸ್ವಂತ ಬುದ್ಧಿ ಇರಲ್ವಾ? ನಮ್ಮ ನಂಬಿಕೆ ಮೇಲೆ ಜೀವನ ಸಾಗಿಸಬೇಕು. ಜ್ಯೋತಿಷ್ಯ ಎಂಬುದು ಒಂದು ಮೂರ್ಖರು ಹೇಳುವ ಮೂರ್ಖರು ಕೇಳುವ ಕಾಮಿಡಿ ಅಷ್ಟೇ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

chethan kumar ಸೋಮ, 03/14/2011 - 09:08
Dr. K. Ramesh Babu ಭಾನು, 03/20/2011 - 11:42

ನಿಮ್ಮ ಅಭಿಪ್ರಾಯವನ್ನು ನಾನು ಪೂರ್ತಿಯಾಗಿ  ಒಪ್ಪುತ್ತೇನೆ. ಜ್ಯೋತಿಷ್ಯವನ್ನು ನಂಬುವುದರಲ್ಲಿರುವ ಒಂದು ಮಹಾ ದುರಂತವೆಂದರೆ, ಯಾವುದೇ ಯಶಸ್ಸಿಗೆ ಅಗತ್ಯವಾದ ಪುರುಷಪ್ರಯತ್ನವನ್ನು ಅದು ಕುಂಠಿತಗೊಳಿಸುವುದು. ಇದನ್ನು ನಾವು ಚೆನ್ನಾಗಿ ಅರಿತಷ್ಟೂ ನಮ್ಮ ಅಭ್ಯುದಯವೂ ಹೆಚ್ಚಾಗುವುದರಲ್ಲಿ  ಸಂದೇಹವೇ ಇಲ್ಲ !

ಉಮಾಶಂಕರ ಬಿ.ಎಸ್ ಮಂಗಳ, 04/12/2011 - 18:28

ಪ್ರಸ್ತುತ ವಿದ್ಯಮಾನಗಳಲ್ಲಿ ಹೇಳುವುದಾದರೆ ಜ್ಯೋತಿಷ್ಯವನ್ನು ನಂಬುವ ಪಿಡುಗು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ.ಸೂರ್ಯೋದಯ, ಚಂದ್ರೋದಯ ಆಕಾಶಕಾಯಗಳ ಚಲನವಲನಗಃಳಿಂದಾಗಿ ಭೂಮಿಗೆ ಅಥವಾ ಒಂದು ಪ್ರದೇಶಕ್ಕೆ ಒದಗಿ ಬರುವವಿಪತ್ತನ್ನು ಗುಣಿಸಿ, ಕೂಡಿಸಿ ನಿಖರವಾಗಿ ಹೇಳುವ ವಿದ್ಯೆ  ಪುರೋಹಿತ ಶಾಹಿ ಯಿಂದಾಗಿ ಜ್ಯೋತಿಷ್ಯದ ರೂಪಪಡೆದು ಪಿಡಿಗಾಗಿರುವುದು ಸತ್ಯ.ಇಂದು ಯಾವುದೇ ರಾಷ್ಟ್ರೀಯ, ಪ್ರಾಂತೀಯ ಟಿ.ವಿ ಚಾನಲ್ ಗಳನ್ನು ಬೆಳ್ಳಂಬೆಳಿಗ್ಗೆ ಒತ್ತಿದರೆ ಬರುವುದು, ನಿಮಗೆ ಆ ಕಾಟ ಈ ಕಾಟ ಅದಕ್ಕೆ ಈ ಶಾಂತಿ, ಆ ಶಾಂತಿ ಎಂದು ಹೆದರಿಸಿ ಜೀವನ ಜಿಗುಪ್ಸೆ ಹುಟ್ಟಿಸುವ ಅಸಹ್ಯ ಕಾರ್ಯಕ್ರಮಗಳೇ!!!!! 

Adarsh innovator ಧ, 04/13/2011 - 13:05

ನಿಮ್ಮದು ತಪ್ಪು ಗ್ರಹಿಕೆ.ಅದರ ಇರುವಿಕೆಯನ್ನು ಅಲ್ಲಗೆಲೆಯುದದಾರೆ,ಸರಿಯಾಗಿ ಪರಿಶಿಲಿಸಿ.

kmurthys ಶನಿ, 05/21/2011 - 18:54

ಜನರು ಹಾಳಾಗುತ್ತಿರುವುದು ಜ್ಯೋತಿಷ್ಯವನ್ನು ನಂಬಿ ಅಲ್ಲ, ಜ್ಯೋತಿಷಿಗಳನ್ನು ನಂಬಿ. ಇಂದು ಅನೇಕ ಅರೆಬೆಂದ ಜ್ಯೋತಿಷಿಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಜ್ಯೋತಿಷ್ಯ ವಿಜ್ಞಾನವೇ ತಪ್ಪು ಎನ್ನುವ ಅಭಿಪ್ರಾಯ ಸರಿಯಲ್ಲ. ಒಂದು ಕಟ್ಟಡ ಕುಸಿದರೆ Civil Engineering ವಿಜ್ಞಾನವಲ್ಲ ಎಂದು ಹೇಳುವುದು ಸರಿಯೇ? ಆಲೋಚಿಸಿ.

veeresh.a ಭಾನು, 02/24/2013 - 19:33

ಸ್ವಾಮಿ ಯಾವುದೆ ವಿಶಯವಾಗಲಿ ಅನುಭವ ಆಗೊತನಕ ಅರ್ಥ ಆಗೊಲ್ಲ 

ಸುರೇಶ ಬಿ ಪಡುಕೋಣೆ ಶುಕ್ರ, 10/09/2015 - 10:51

 ಜ್ಯೋತಿಷ್ಯ ಅನ್ನೋದು ದೀಪ ಇದ್ಹಾಂಗೆ . ಬಾಳಿಗೆ ಬೆಳಕಾಗಲು ಬಹುದು  ,ಬಾಳಿಗೆ ಕೊಳ್ಳಿಯಾಗಲು ಬಹುದು.

V ಜ್ಞಾನ  ವಾದರೆ ವಳಿತು

 Aಜ್ಞಾನ. ವಾದರೆ ಕೆಡುಕು.

  • 1728 views