Skip to main content

ಯಶಸ್ಸು ಗಳಿಸಬೇಕೇ?

ಇಂದ HEMA
ಬರೆದಿದ್ದುMarch 11, 2011
4ಅನಿಸಿಕೆಗಳು

ನಾವೆಲ್ಲರೂ ಯಶಸ್ಸು ಬೇಕೆಂದು ಬಯಸುತ್ತೇವಲ್ಲವೇ, ಅದರಲ್ಲೂ ಬಿಸಿನೆಸ್ ಮನ್ ಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾ ಮುಂದು, ನಾ ಮುಂದು ಎಂದು ಮುಗಿಬೀಳುತ್ತಾರೆ. ಆದರೆ, ಇದರಲ್ಲಿ ಕನಿಷ್ಟ ಮಂದಿ ಮಾತ್ರ ಯಶಸ್ಸು ಕಂಡಿದ್ದಾರೆ. ಈ ಯಶಸ್ಸಿಗಾಗಿ ನಮಗೆ ಬೇರೆಯವರ ಸಹಾಯ ಬೇಕೆಂದರೆ ನಂಬುವಿರಾ?
ಹೌದು, ನಾವು ನಮ್ಮ ಅಹಂಕಾರ ಮುಂದಿಟ್ಟುಕೊಂಡು ಬೇರೆಯವರನ್ನು ಹೇಗೆ ಸಹಾಯ ಕೇಳುವುದು, ಕೇಳಿದರೆ ಅದು ಅವಮಾನ ಎಂಬಂತೆ ತಿಳಿದುಕೊೞುತ್ತೇವೆ ಇದು ನಮಗೆ ನಮ್ಮ ಹಿರಿಯರಿಂದ ಬಳುವಳಿಯಾಗೆ ಬಂದಿದ್ದು.
ನಮಗೆ ತಿಳಿಯದ / ತಿಳಿದ ವಿಷಯವನ್ನು ಮತ್ತೊಬ್ಬರ ಜೊತೆ ಚರ್ಚಿಸುವುದರಿಂದ ಎಷ್ಟೋ ಹೊಸ ವಿಚಾರಗಳು ಹೊಳೆಯುತ್ತವೆ. ಇದರಿಂದ ನಮ್ಮ ಕಾರ್ಯಕ್ಷಮತೆಯೂ ಹೆಚುತ್ತದೆ.
ಮನುಷ್ಯ ಸಂಘ ಜೀವಿ ಅವನು ಒಬ್ಬಂಟಿಯಾಗಿ ಬದುಕಲಾರ ಮತ್ತು ನಾವು ಸಹಾಯ ಕೋರಿದಾಗ ಅವರು ಕೂಡ ಸಂತೋಷದಿಂದ ಕೈ ಜೋಡಿಸುತ್ತಾರೆ.
ಕೆಲವರಿರುತ್ತಾರೆ ಏನಾದರೂ ಕೇಳಿದರೆ ಹಿಂದೆ ಮುಂದೆ ನೋಡುತ್ತಾರೆ ಆದರೆ ಗಮನಿಸಿ ಅವರೆಷ್ಟು ದಿನ ಹೀಗೆ ಇರುತ್ತಾರೆ , ಯಾಕೆಂದರೆ ಒಬ್ಬ ಮನುಷ್ಯ ಬೇರೊಬ್ಬರಿಗೆ ಸಹಾಯ ಮಾಡಿದಾಗ ಆಗುವ ಸಂತೋಷವೇ ಬೇರೆ.
ಮಾನವನ ಜೀವನಧರ್ಮಗಳನ್ನು ಅರ್ಥಮಾಡಿಕೊಂಡಾಗ ನಾವು ನಿಜವಾಗಿಯೂ ಯಶಸ್ಸಿನ ತುತ್ತತುದಿಗೇರಲು ಸಾಧ್ಯ.
ಉದಾಹರಣೆಗೆಃ ಬಿಲ್ ಗೇಟ್ಸ್ ತನ್ನ ಸಾಫ್ಟ್ ವೇರ್ ಕಂಪನಿಯನ್ನು ಬೆಳೆಸಿದ್ದು ಬೇರೆಯವರ ಸಹಾಯದಿಂದಲೇ ಅಲ್ಲವೇ? ಯಾವುದೇ ಒಂದು ವಿಚಾರ ಎಲ್ಲರ ಚರ್ಚೆಯಿಂದ ಬೆಳವಣಿಗೆ ಪಡೆದು ಅವಿಷ್ಕಾರವಾಗುತ್ತದೆ.
ನಿಜವಾಗಿ ಸಹಾಯಮಾಡುವುದು, ತೆಗೆದುಕೊೞುವುದು ಮನುಷ್ಯ- ಮನುಷ್ಯರ ನಡುವಿನ ಸಂಬಂಧಗಳನ್ನು ಗಟ್ಟಿಯಾಗಿ ಬೆಸೆಯುತ್ತದೆ.

ಲೇಖಕರು

HEMA

nanu vivahite haagu udyogasthe nanage sahityadalli bahala aasakthi sampadavannu kaleda 20 dinagalinda odutiddene idu nanage thumba ishtavaaithu. yuva barahagaararige illi uttama avakasha kalpisiddare dhanyavaadagalu

ಅನಿಸಿಕೆಗಳು

Nagaraj BG (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/23/2011 - 13:05

ಚೆನ್ನಾಗಿದೆ ಆದರೆ ವಿಶಯ ಇನ್ನೂ ಬಹಳ ಇದೆ. ವಿಶಯದ ೧ ಮಗ್ಗಲನ್ನು ಮಾತ್ರ ಪರಿಚಯಿಸಿದ್ದಿ.

KARIBASAIAH (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/02/2011 - 06:10

very good guide to a success of a life

Nanjunda Raju Raju ಸೋಮ, 07/25/2011 - 17:13

ಶ್ರೀಮತಿ ಹೇಮಾರವರೇ, ಹೊಸದಾಗಿ ಯಾವುದೇ ವ್ಯಾಪಾರ ವ್ಯವಹಾರ ಮಾಡುವವರಿಗೆ ಹಿರಿಯರ ಅಥವಾ ಅನುಭವಿಗಳ ಮಾರ್ಗಧರ್ಶನ ತುಂಬಾ ಮುಖ್ಯ. ಆದರೆ, ಈಗ ಎಲ್ಲರೂ ಕಮಿಷನ್ ಕೇಳುತ್ತಾರೆ. ಇಲ್ಲವೇ ಪಾಲುದಾರರಾಗಲು ಇಚ್ಚಿಸುತ್ತಾರೆ. ಮುಕ್ತವಾಗಿ ಒಬ್ಬ ಬದುಕಲಿ ಎನ್ನುವವರು ಯಾರು ಇಲ್ಲ. ಎಲ್ಲಾ ಕಾಲೆಳೆಯುವವರೇ ಹೊರತು. ಸಹಾಯಮಾಡುವವರು ಯಾರು ಎಂಬ ಆತಂಕವಿರುತ್ತದೆ. ಇದರೊಂದಿಗೆ ಅವರ ಅದ್ರುಷ್ಟವೂ ಚೆನ್ನಾಗಿದ್ದರೆ. ಗೊಬ್ಬರ ಮಾರಾಟ ಮಾಡುವವನು ಶ್ರೀಮಂತನಾಗುತ್ತಾನೆ. ಅದೃಷ್ಟ ಕೈಕೊಟ್ಟರೆ ಚಿನ್ನಮಾರುವವನು ದಿವಾಳಿಯಾಗುತ್ತಾನೆ. ಮೊದಲು ಯಾವ ಬಿಸಿನೆಸ್ ಗೆ ಪೈಪೋಟಿ ಇರಲಿಲ್ಲ. ಈಗ ಹಪ್ಪಳ ಉಪ್ಪಿನಕಾಯಿಗೂ ಪೈಪೋಟಿ ಇದೆ ಅಲ್ಲವೇ?

chidanand g. wali ಮಂಗಳ, 11/15/2011 - 14:49

ನಿವು ಹೇಳಿದ್ದೇನೊ ಚನ್ನಾಗಿದೆ ಆದರೆ ಮನುಷ್ಯನ ವ್ಯಕ್ತಿತ್ವವನ್ನು ದುಡ್ಡಿನಿಂದ ಅಳತೆ ಮಾಡುತ್ತಿರುವ ಈಗಿನ ದಿನ ಮಾನಗಳಲ್ಲಿ ಸಹಾಯ ಕೇಳಿದರೆ ಕಾಲೆಳೆಯುತ್ತಾರೆ. ಹಾಗಂತ ಯಲ್ಲರೂ ಹಾಗಿರಲ್ಲ. ಒಳ್ಳೇಯ ಸಹಾಯಕನನ್ನು ಹುಡುಕುವ ಸಾಮರ್ಥ್ಯ್ ನಮ್ಮಲ್ಲಿರಬೇಕು. ಅಸಾಯಕರನ್ನು ತುಳಿಯುವ ವ್ಯೆಕ್ತಿಗಳಿಂದ ನಾವು ಹುಶಾರಾಗಿರಬೇಕು. ಉದ್ಯೋಗದಲ್ಲಿ ನೊಂದ ನನಗೆ ನಿಮ್ಮ ಬರಹ ಸಮಾದಾನ ನೀಡಿದೆ. ಧನ್ಯವಾದಗಳು ತಮಗೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.