Skip to main content

ಸ್ವಾನುಭವ

ಇಂದ HEMA
ಬರೆದಿದ್ದುFebruary 28, 2011
noಅನಿಸಿಕೆ

ಬೇಸಿಗೆ ಕಾಲದ ಆರಂಭಕ್ಕೆ ಮುನ್ನ ಚುಮುಚುಮು ಚಳಿಗೆ ಕೊರೆಯುವ ಮೈ ಮನ ಸೂರ್ಯನ ಎಳೆರಶ್ಮಿಗಾಗಿ ಹಾತೊರೆಯುತ್ತಿರುತ್ತವೆ. ಎಲ್ಲರ ಬಯಕೆ ಏನೊ ಎಂಬಂತೆ ಸೂರ್ಯ ರಥವೇರಿ ಬಂದು ರಥಸಪ್ತಮಿಯ ದಿನ ಎಲ್ಲೆಲ್ಲೂ ತನ್ನ ಪ್ರತಾಪ ಬೀರುತ್ತಾನೆ. ಇದಕ್ಕೆ ಸಾಥ್ ನೀಡಲು ಮರಗಳು ತನ್ನ ಹಳೆಯ ಎಲೆಯನ್ನು ಉದುರಿಸಿ ಹೂಮುಡಿದು, ಹೊಸವಸ್ತ್ರ ತೊಡುವ ಹೆಂಗಳೆಯಂತೆ ತೆನೆಬಿರಿದು, ತಿಳಿಹಸಿರಿನ ಹೊಸಎಲೆಗಳೊಂದಿಗೆ ಅಲಂಕಾರಗೊೞುತ್ತವೆ .

ನಿಜವಾಗಿ ಈ ಬೇಸಿಗೆಯ ಆರಂಭ ಎಂಬುದು ಜೀವನದ ಒಂದು ಅಧ್ಭುತ ಅನುಭವ. ಎಂತೆಂತ ನೆನಪುಗಳು ಮರುಕಳಿಸುತ್ತವೆ. ಬಾಲ್ಯದಲ್ಲಿ ಬೇಸಿಗೆ ರಜೆ ಕಳೆಯಲು ಅತ್ತೆ, ಮಾವ, ಅಜ್ಜಿ ಮತ್ತು ಚಿಕ್ಪಪ್ಪನ ಊರಿಗೆ ಪ್ರಯಾಣ. ಮರಕೋತಿ ಆಟ ಆಡುವಾಗ ಖುಷಿಯಲ್ಲಿ ಎತ್ತರದ ಹೊನ್ಗೆ ಮರ ಏರಿ ಬಿದ್ದದ್ದು ಈಗಲೂ ಮೈ ಜುಮ್ ಎನ್ನುತ್ತದೆ.

ಗದ್ದೆ ಬಯಲಲ್ಲಿ ಗುಂಪು ಹಾಕಿಕೊಂಡು ಗೆಳೆಯರೂಡನೆ ಕಲೆಯುತ್ತಾ ಈಚಲ ಮರದಲ್ಲಿ ನೇತಾಡುತ್ತಿದ್ದ ಗೀಜಗನ ಗೂಡನ್ನು ಕಿತ್ತು ಅದರ ಮನೆ ಕಟ್ಟುವ ತಂತ್ರಗಾರಿಕೆಗೆ ಮಾರು ಹೋಗಿ ಆಶ್ಚರ್ಯಪಟ್ಟೆ. ಒಂದೆ ಎರಡೇ ಎಷ್ಟು ಹೇಳಿದರೂ ಸಮಾಧಾನವಾಗುವುದಿಲ್ಲ. ಆ ತುಂಟ ನೆನಪುಗಳು.ಮರಳಿ ಬರಬಾರದೆ ಆ ಮುಗ್ದತೆಯ ಬಾಲ್ಯ?

ಲೇಖಕರು

HEMA

nanu vivahite haagu udyogasthe nanage sahityadalli bahala aasakthi sampadavannu kaleda 20 dinagalinda odutiddene idu nanage thumba ishtavaaithu. yuva barahagaararige illi uttama avakasha kalpisiddare dhanyavaadagalu

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.