Skip to main content

ಒಲವೇ ಮಂದಾರ : ಕನ್ನಡ ಚಿತ್ರ ವಿಮರ್ಶೆ

ಬರೆದಿದ್ದುFebruary 21, 2011
6ಅನಿಸಿಕೆಗಳು

[img_assist|nid=8512|title=olave mandara|desc=|link=node|align=left|width=200|height=97]
ತುಂಬಾ ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡಿದೆ. ಬರೀ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲೂ ಇತ್ತೀಚೆಗೆ ನಾನು ನೋಡಿದ ಸಿನಿಮಾಗಳಲ್ಲಿ ಒಲವೇ ಮಂದಾರ ದಿ ಬೆಸ್ಟ್.
ಸಿನಿಮಾ ನೋಡಿ ಬಂದು ತ್ರಿವೇಣೀ ಥೀಯೇಟರ್ ಮ್ಯಾನೇಜರ್ ಹತ್ತಿರ ವಿಚಾರಿಸಿದೆ, ಸಾರ್ ಹೇಗಿದೆ ಕಲೆಕ್ಷನ್ ಅಂತ.? ತುಂಬಾ ದಿನಗಳ ನಂತರ ಒಂದೊಳ್ಳೆ ಸಿನಿಮಾ ಬಂದಿದೆ ಸಾರ್, ಆದ್ರೆ ಜನ ಯಾಕೋ ಈ ಕಡೆ ಬರುತ್ತಿಲ್ಲ, ಆದ್ರೆ ಈ ಶುಕ್ರವಾರದಿಂದ ಗಳಿಕೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಆದರೆ ಅಷ್ಟರಲ್ಲಿಯೇ ಈ ಹಾಳು ಕ್ರಿಕೆಟ್ ಬಂದುಬಿಟ್ಟಿದೆ. ನನಗೆ ಸಿನಿಮಾ ಸೋತು ಹೋಗಿ ನಿರ್ಮಾಪಕ ನಷ್ಟದಲ್ಲಿ ಸಿಕ್ಕಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಬೇಸರವಿಲ್ಲ, ಆದ್ರೆ ಎಲ್ಲಿ ಕನ್ನಡಿಗರು ಈ ತರಹದೊಂದು ಹೆಮ್ಮೆಯ ಸಿನಿಮಾವನ್ನು ಮಿಸ್ ಮಾಡ್ಕೋತಾರೋ ಅಂತ ಬೇಸರವಾಗ್ತಿದೆ ಎಂದಾಗ ನನಗೆ ತುಂಬಾ ನಿರಾಶೆಯಾಯಿತು.
     ಯಾವುದೇ ಮುಚ್ಚು-ಮರೆಯಿಲ್ಲದೇ ಹೇಳುತ್ತೇನೆ. ವಾರಕ್ಕೆ ಎರಡಾದರೂ ಸಿನಿಮಾಗಳನ್ನು ಥಿಯೇಟರ್ ನಲ್ಲಿ ನೋಡುವ 'ಚಟ'ವಿರುವ ನಾನು, ಒಲವೇ ಮಂದಾರದ ವಾಲ್ ಪೋಸ್ಟರ್ ಗಳನ್ನು ನೋಡಿ,  ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಹತ್ತರಲ್ಲಿ ಹನ್ನೊಂದು ಎಂಬಂತಹ ಸಿನಿಮಾ ಇರಬೇಕು ಅಂತ ಅಂದ್ಕೊಂಡು ಅದನ್ನು ನೋಡುವ ಮನಸ್ಸನ್ನು ಮಾಡಿರಲಿಲ್ಲ. ಬಹುಶಃ ಅದಕ್ಕೆ ಹೀರೋ ಕೂಡ ಕಾರಣವಾಗಿರಬಹುದು. ಆದರೆ ಯಾವಾಗ ನನ್ನ ಗೆಳತಿ ಈ ಸಿನಿಮಾವನ್ನು ನೋಡಲು ಹೇಳಿದಳೋ ಆಗ ಕುತೂಹಲಕ್ಕಾದರೂ ನೋಡದೇ ಇರಲಾಗಲಿಲ್ಲ.
       ಕುತೂಹಲದಿಂದಲೇ ಥಿಯೇಟರ್ ಪ್ರವೇಶಿಸಿದ ನನಗೆ ಸಿನಿಮಾದ ಮೊದಲ ದೃಶ್ಯದಿಂದ, ಕೊನೇ ದೃಶ್ಯದ ತನಕ ಒಂದೇ ಒಂದು ಕಡೆ ಬೋರ್ ಎನಿಸಲಿಲ್ಲ. ಮದ್ಯಂತರ ವಿರಾಮ ಬಂದಿದ್ದೇ ಗೊತ್ತಾಗಲಿಲ್ಲ.
     ನಾಯಕಿಯ ಸ್ನಿಗ್ಧ ಸೌಂದರ್ಯ, ನಾಯಕನ ಪರವಾಗಿಲ್ಲವೆನಿಸುವ ನಟನೆ ನಮ್ಮನ್ನು ಎಲ್ಲೂ ಬೇಸರಿಸುವುದಿಲ್ಲ.  ಏಳು ರಾಜ್ಯಗಳ ನಡುವೆ ಛಾಯಾಗ್ರಾಹಕರು ನಮಗೆ ತೋರಿಸಿರುವ  ಅದ್ಬುತ ದೃಶ್ಯಾವಳಿಗಳು, ಅಮರ ಪ್ರೇಮಿಯಾಗಿ ರಂಗಾಯಣ ರಘುವಿನ ಮನಮಿಡಿಯುವ ನಟನೆ ಮತ್ತು ತನ್ನ ಹೆಂಡತಿಯನ್ನು ಕೊಂದಿತು ಎಂಬ ಕಾರಣಕ್ಕೆ ಇಡೀ ಬೆಟ್ಟವನ್ನು ಸುಮಾರು 22 ವರ್ಷಗಳ ಕಾಲ ಕಡೆದು ನೆಲಸಮ ಮಾಡುವ ಬಿಹಾರದ ಧಶರಥ ಮಾಂಜಿಯ ಅದ್ಬುತ ಕಥೆ ಕನಿಷ್ಠ ನಿಮ್ಮನ್ನು ಒಂದೆರೆಡು ದಿನವಾದರೂ ಕಾಡದಿದ್ದರೆ ಕೇಳಿ. ದಶರಥ ಮಾಂಜಿಯ ನಿಜವಾದ ಕಥೆ ನೋಡಿದ ಮೇಲೆ, ಪ್ರೀತಿಗೆ ಅನ್ವರ್ಥವಾಗಿ ಪ್ರಸಿದ್ದಿ ಪಡೆದಿರುವ ತಾಜ್ ಮಹಲ್ ನ್ನು ನೀವು ಒಂದು ಕ್ಷಣದ ಮಟ್ಟಿಗಾದರೂ ತುಚ್ಚವಾಗಿ ನೋಡ್ತೀರಿ.!!
     ಪ್ರೀತಿಯ ರಾಣಗೋಸ್ಕರ , ಸಪ್ತ ಸಾಗರ ಮತ್ತು ಸಪ್ತ ಶಿಖರಗಳನ್ನು ದಾಟಿದ  ರಾಜನಕಥೆಯನ್ನು ಕೇಳುವ ನಾಯಕ, ರಾಜನಂತೆ ತಾನು ಸಹ ಅಸ್ಸಾಂನಲ್ಲಿರುವ ತನ್ನ ಪ್ರೇಯಿಸಿಗೋಸ್ಕರ ಕರ್ನಾಟಕ ಮತ್ತು ಅಸ್ಸಾಂ ನಡುವೆ ಬರುವೆ ಏಳು ರಾಜ್ಯಗಳನ್ನು ಕಾಲ್ನಡಿಗೆಯಲ್ಲಿ ದಾಟಿ ಪ್ರೀತಿಯನ್ನು ಪಡೆಯಲು ನಿರ್ಧರಿಸುತ್ತಾನೆ. ದಾರಿ ಮದ್ಯೆ ಅವನಿಗೆ ಎದುರಾಗುವ ವ್ಯಕ್ತಿಗಳು, ಅವರ ಪ್ರೀತಿಯ ರೀತಿಗಳು ಅವನ ಮನಸ್ಸಿನಲ್ಲಿ ಪ್ರೀತಿಯ ದೈವಿಕತೆಯನ್ನು ಮೂಡಿಸುತ್ತವೆ. ಅನೇಕ ಕಷ್ಟಗಳನ್ನು ಎದುರಿಸಿ, ಹೇಗೋ ನಾಯಕಿಯ ಮನೆ ತಲುಪುವ ನಾಯಕ ಅಲ್ಲಿ ಕಂಡದ್ದೇನು..? ಕಾಲಿಲ್ಲದ-ಮಾತು ಬಾರದ ಹೆಂಡತಿಗೆ ಕಾಶಿಯನ್ನು ತೋರಿಸುತ್ತೇನೆ ಅಂತ ಆಕೆಯನ್ನು ತಳ್ಳುವ ಗಾಡಿಯಲ್ಲಿ ಕೂರಿಸಿಕೊಂಡು, ಕಾಶಿಗೆ ಹೊರಡುವ ರಂಗಾಯಣ ರಘು, ಕಾಶಿ ತಲುಪಿದನೇ..? ಈ ಎರಡು ಕುತೂಹಲಗಳನ್ನು ಕೊನೇವರೆಗೂ ಪ್ರೇಕ್ಷಕರಿಗೆ ಕಾಡುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
      ಈ ಜಯತೀರ್ಥ ಎಂಬ ನಿರ್ದೇಶಕ ಇಷ್ಟುದಿನ ಎಲ್ಲಿದ್ದನೋ..!! ಅದೆಷ್ಟು ಚೆಂದವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾನಂದರೆ,  ಪ್ರೀತಿಯಾಕೆ ಭೂಮಿ ಮೇಲಿದೆ ಅಂತ ಅನ್ವೇಷಿಸಲು ಹೊರಡುವ ಕೆಲವು ಗಿಮಿಕ್ ನಿರ್ದೇಶಕರನ್ನು  ತಂದು ಇವರ ಮುಂದೆ ನಿಲ್ಲಿಸಿ, ನಿರ್ದೇಶನದ ಎಬಿಸಿಡಿ ಕಲಿಸಬೇಕು ಎನಿಸದೇ ಇರದು.
       ನನ್ನ ಮುಖಸ್ತುತಿ ಮತ್ತು ಬರಹ ನಿಮಗೆ ಬೋರಾಗಿರಬಹುದು, ಆದ್ರೆ ಖಂಡಿತ ಸಿನಿಮಾ ಬೋರಾಗುವುದಿಲ್ಲ. ದಯವಿಟ್ಟು ಒಮ್ಮೆ ಈ ಸಿನಿಮಾವನ್ನು ನೋಡ್ಕೊಂದು ಬಂದು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. ನೂರು ಕೆಟ್ಟ ಚಿತ್ರಗಳು ಸೋಲಲಿ, ಅದರ ನಿರ್ಮಾಪಕರಿಗೆ ನಷ್ಟವಾಗಲಿ ಪರವಾಗಿಲ್ಲ ಆದರೆ ಖಂಡಿತ ಒಂದು ಒಳ್ಳೆ ಚಿತ್ರ ಸೋಲಬರಾದು, ಒಂದು ವೇಳೆ ಸೋತರೆ ಅದು ಆ ಚಿತ್ರದ ಸೋಲಲ್ಲ, ನಮ್ಮದೇ ಸೋಲು.! 

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಸೋಮ, 02/21/2011 - 15:58

ಈ ವಾರ ಈ ಚಿತ್ರ ನೋಡಲು ಖಂಡಿತಾ ಹೋಗುತ್ತೇನೆ ಸರ್ Smile

venkatb83 ಶುಕ್ರ, 02/25/2011 - 17:56

ನೀವ್ ಬರೆದಿದ್ರಲ್ ಬಹು ಪಾಲು ಸತ್ಯ .....ಅದ್ರಲ್ಲಿ ಈ ಕೆಲವೊಂದು...
೧. ತುಂಬಾ ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡಿದೆ. ಬರೀ ಕನ್ನಡದಲ್ಲಿ ಮಾತ್ರವಲ್ಲ
ಬೇರೆ ಭಾಷೆಯಲ್ಲೂ ಇತ್ತೀಚೆಗೆ ನಾನು ನೋಡಿದ ಸಿನಿಮಾಗಳಲ್ಲಿ ಒಲವೇ ಮಂದಾರ ದಿ ಬೆಸ್ಟ್.
೨.ಸಿನಿಮಾ ನೋಡಿ ಬಂದು ತ್ರಿವೇಣೀ ಥೀಯೇಟರ್ ಮ್ಯಾನೇಜರ್ ಹತ್ತಿರ ವಿಚಾರಿಸಿದೆ, ಸಾರ್
ಹೇಗಿದೆ ಕಲೆಕ್ಷನ್ ಅಂತ.? ತುಂಬಾ ದಿನಗಳ ನಂತರ ಒಂದೊಳ್ಳೆ ಸಿನಿಮಾ ಬಂದಿದೆ ಸಾರ್,
ಆದ್ರೆ ಜನ ಯಾಕೋ ಈ ಕಡೆ ಬರುತ್ತಿಲ್ಲ, ಆದ್ರೆ ಈ ಶುಕ್ರವಾರದಿಂದ ಗಳಿಕೆಯಲ್ಲಿ ಸ್ವಲ್ಪ
ಚೇತರಿಕೆ ಕಂಡುಬಂದಿದೆ ಆದರೆ ಅಷ್ಟರಲ್ಲಿಯೇ ಈ ಹಾಳು ಕ್ರಿಕೆಟ್ ಬಂದುಬಿಟ್ಟಿದೆ. ನನಗೆ
ಸಿನಿಮಾ ಸೋತು ಹೋಗಿ ನಿರ್ಮಾಪಕ ನಷ್ಟದಲ್ಲಿ ಸಿಕ್ಕಿಕೊಳ್ಳುತ್ತಾನೆ ಎಂಬ ಕಾರಣಕ್ಕೆ
ಬೇಸರವಿಲ್ಲ, ಆದ್ರೆ ಎಲ್ಲಿ ಕನ್ನಡಿಗರು ಈ ತರಹದೊಂದು ಹೆಮ್ಮೆಯ ಸಿನಿಮಾವನ್ನು ಮಿಸ್
ಮಾಡ್ಕೋತಾರೋ ಅಂತ ಬೇಸರವಾಗ್ತಿದೆ ಎಂದಾಗ ನನಗೆ ತುಂಬಾ ನಿರಾಶೆಯಾಯಿತು.
೩.ಯಾವುದೇ ಮುಚ್ಚು-ಮರೆಯಿಲ್ಲದೇ ಹೇಳುತ್ತೇನೆ. ವಾರಕ್ಕೆ ಎರಡಾದರೂ ಸಿನಿಮಾಗಳನ್ನು
ಥಿಯೇಟರ್ ನಲ್ಲಿ ನೋಡುವ 'ಚಟ'ವಿರುವ ನಾನು, ಒಲವೇ ಮಂದಾರದ ವಾಲ್ ಪೋಸ್ಟರ್ ಗಳನ್ನು
ನೋಡಿ,  ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಹತ್ತರಲ್ಲಿ ಹನ್ನೊಂದು ಎಂಬಂತಹ ಸಿನಿಮಾ
ಇರಬೇಕು ಅಂತ ಅಂದ್ಕೊಂಡು ಅದನ್ನು ನೋಡುವ ಮನಸ್ಸನ್ನು ಮಾಡಿರಲಿಲ್ಲ. ಬಹುಶಃ ಅದಕ್ಕೆ
ಹೀರೋ ಕೂಡ ಕಾರಣವಾಗಿರಬಹುದು. ಆದರೆ ಯಾವಾಗ ನನ್ನ ಗೆಳತಿ ಈ ಸಿನಿಮಾವನ್ನು ನೋಡಲು
ಹೇಳಿದಳೋ ಆಗ ಕುತೂಹಲಕ್ಕಾದರೂ ನೋಡದೇ ಇರಲಾಗಲಿಲ್ಲ.
೪.ಕುತೂಹಲದಿಂದಲೇ ಥಿಯೇಟರ್ ಪ್ರವೇಶಿಸಿದ ನನಗೆ ಸಿನಿಮಾದ ಮೊದಲ ದೃಶ್ಯದಿಂದ, ಕೊನೇ
ದೃಶ್ಯದ ತನಕ ಒಂದೇ ಒಂದು ಕಡೆ ಬೋರ್ ಎನಿಸಲಿಲ್ಲ. ಮದ್ಯಂತರ ವಿರಾಮ ಬಂದಿದ್ದೇ
ಗೊತ್ತಾಗಲಿಲ್ಲ.
೫.ಈ ಜಯತೀರ್ಥ ಎಂಬ ನಿರ್ದೇಶಕ ಇಷ್ಟುದಿನ ಎಲ್ಲಿದ್ದನೋ..!! ಅದೆಷ್ಟು ಚೆಂದವಾಗಿ
ಕಥೆಯನ್ನು ಕಟ್ಟಿಕೊಟ್ಟಿದ್ದಾನಂದರೆ,  ಪ್ರೀತಿಯಾಕೆ ಭೂಮಿ ಮೇಲಿದೆ ಅಂತ ಅನ್ವೇಷಿಸಲು
ಹೊರಡುವ ಕೆಲವು ಗಿಮಿಕ್ ನಿರ್ದೇಶಕರನ್ನು  ತಂದು ಇವರ ಮುಂದೆ ನಿಲ್ಲಿಸಿ, ನಿರ್ದೇಶನದ
ಎಬಿಸಿಡಿ ಕಲಿಸಬೇಕು ಎನಿಸದೇ ಇರದು
೬. ನನ್ನ ಮುಖಸ್ತುತಿ ಮತ್ತು ಬರಹ ನಿಮಗೆ ಬೋರಾಗಿರಬಹುದು, ಆದ್ರೆ ಖಂಡಿತ ಸಿನಿಮಾ
ಬೋರಾಗುವುದಿಲ್ಲ. ದಯವಿಟ್ಟು ಒಮ್ಮೆ ಈ ಸಿನಿಮಾವನ್ನು ನೋಡ್ಕೊಂದು ಬಂದು ತಮ್ಮ
ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ. ನೂರು ಕೆಟ್ಟ ಚಿತ್ರಗಳು ಸೋಲಲಿ, ಅದರ
ನಿರ್ಮಾಪಕರಿಗೆ ನಷ್ಟವಾಗಲಿ ಪರವಾಗಿಲ್ಲ ಆದರೆ ಖಂಡಿತ ಒಂದು ಒಳ್ಳೆ ಚಿತ್ರ ಸೋಲಬರಾದು,
ಒಂದು ವೇಳೆ ಸೋತರೆ ಅದು ಆ ಚಿತ್ರದ ಸೋಲಲ್ಲ, ನಮ್ಮದೇ ಸೋಲು.!

ಹೋದ ವಾರ ನಾ  ಅದ್ನ ನೋಡಲು ಹೋದಾಗ ಸಿಕ್ಕಾಪಟ್ಟೆ ಜನ ಆಲ್ ನೆರೆದಿದ್ರು. ಇದಕ್ಕೆ ಕಾರಣ
ಜನರ ಬಾಯ್  ಪ್ರಚಾರ ಮತ್ತು ಪತ್ರಿಕೆಯವರ  ವಿಮರ್ಶೆ. ನಿಮ್ಮ ಮಾತು ಸತ್ಯ  ಆ ಪೋಸ್ಟರ್
ನೋಡಿದಾಗ ಆ ಸಿನಿಮಾ ನೋಡಬೇಕು ಎಂದೆನಿಸುವುದೇ ಇಲ್ಲ, ಅದಕ ಕಾರಣ ಆ ಪೋಸ್ಟರ್ ನಲ್
ಮಾಮೂಲು ಪ್ರೇಕ್ಷಕರನ್ನ ಸೆಳೆಯುವ ಯಾವುದೇ ಅಂಶಗಳಿಲ್ಲ. ಆದರೂ ಚಿತ್ರ ಸೊಗಸಾಗಿದೆ ಅಂತ
ಗೊತ್ತಾಗೋದು ನೋಡಿದ ಮೇಲೆಯೇ.. ಒಳ್ಳೆಯ ಚಿತ್ರಗಳು  ಖಂಡಿತ ಸೋಲಬಾರದು  ಕನ್ನಡಿಗರೇ
ನೋಡಿ ನಿಮ್ಮ ಅಭಿಪ್ರಾಯ ಬರೆಯಿರಿ..

kmurthys ಶನಿ, 03/05/2011 - 14:20

ನಿಮ್ಮ ವಿಮರ್ಶೆ ಓದಿದ ಮೇಲೆಈ ಚಿತ್ರ ನೋಡ ಬೇಕೆನಿಸಿ ನಿನ್ನೆ ನೋಡಿ ಬಂದೆ. ಇದು ಒಂದು ಒೞೆಯ ಚಿತ್ರ ಎನ್ನುವುದರಲ್ಲಿ ಈರಡು ಮಾತಿಲ್ಲ. ಕಥೆ, ನಿರ್ದೇಶನ ಮತ್ತು ಅಭಿನಯ ಎಲ್ಲವೂ ಸೊಗಸಾಗಿವೆ. ನುರಿತ ಕಲಾವಿದರಿದ್ದಿದ್ದರೆ ಚಿತ್ರಕ್ಕೆ ಇನ್ನೂ ಹೆಚ್ಚಿನ ಮೆರುಗು ಬರುತ್ತಿತ್ತೇನೋ. ಆದರೆ ಹೊಸ ಕಲಾವಿದರು ಒೞೆಯ ಪ್ರಯತ್ನ ಮಾಡಿರುವುದಂತೂ ಖಂಡಿತ. ಚಿತ್ರದ ಹಾಡುಗಳಾವುವೂ ಅಷ್ಟು ಮನ ಸೆಳೆಯಲಿಲ್ಲ. ಒಟ್ಟಿನಲ್ಲಿ ಚಿತ್ರ ನೋಡಿ ಹೊರಬಂದಾಗ ಒಂದು ಒೞೆಯ ಚಿತ್ರ ನೋಡಿದ ಸಮಾಧಾನವಿತ್ತು.

 ೧೦೦ ದಿನ ಪೂರೈಸಿದ ಚಿತ್ರ ತಂಡಕ್ಕೆ ಅಭಿನಂದನೆಗಳು,ಕುಟುಂಬ ಸಮೇತ್ ಸಿನಿಮಾ ನೋಡುವ ಕಾಲ ದೂರ ಹೋಯಿತು ಎನ್ನುವ ಸಮಯದಲ್ಲಿ ಇಂತಹ ಸಿನಿಮಾ ನೀಡಿದ ಒಲವೇ ಮಂದಾರ್ ತಂಡಕ್ಕೆ ತುಂಬಾ ದನ್ಯವಾದಗಳು. ಯಾವುದೇ ಅನವಶ್ಯಕ, ಹಾಗೂ ಅಶ್ಲೀಲತೆ ಇಲ್ಲದೆ ಒಂದು ಸುಂದರ ನವಿರಾದ ಪ್ರೇಮಕಥೆಯನ್ನು ಕನ್ನಡಿಗರಿಗೆ ನೀಡಿದ ನಿರ್ದೇಶಕರಿಗೆ ಧನ್ಯವಾದಗಳು, ಹಾಗೆ ಅರ್ಥಪೂರ್ಣ ಸಾಹಿತ್ಯ ನೀಡಿದ ಸಾಹಿತ್ಯ, ಕಣ್ಮನ ಸೆಳೆಯುವ  ಛಾಯಾಗ್ರಹಣ, ಸಂಗೀತ ಎಲ್ಲವನ್ನು ಸೇರಿಸಿ ಒಂದು ಮೃಷ್ಟಾನ್ನವನ್ನು ಉಣಬಡಿಸಿದಂತಾಗಿದೆ. ನಿಮ್ಮಿಂದ್ ಇನ್ನ್ಫು ಹೆಚ್ಚು ಇಂತಹ ಚಿತ್ರಗಳು ಬರಲಿ ಧನ್ಯವಾದಗಳುkutumba sameta

paramesha.EY (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 09/29/2011 - 11:26

ಕನ್ನಡದ ಒಂದು ಒಳ್ಳೆಯ ಅತ್ಯುತ್ತಮ ಸಿನಿಮಾ ಅಂತಾ ಹೇಳಬಹುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.