Skip to main content

ಪ್ರೇಮಿಗಳ ದಿನಾಚರಣೆ..

ಇಂದ ವಸಂತ್
ಬರೆದಿದ್ದುFebruary 14, 2011
6ಅನಿಸಿಕೆಗಳು

[img_assist|nid=8480|title=|desc=|link=node|align=right|width=292|height=219]
ಪ್ರೀತು ಈವತ್ತು ನಂಗೇನಾದ್ರು ಕೊಡ್ತೀಯ ?..
ಯಾವತ್ತು ಏನೂ ಕೇಳಿದ್ದಿಲ್ಲ ಈವತ್ತಾಕೆ ?.
ಇಲ್ಲ ಕಣೋ ಈವತ್ತು ಪ್ರೇಮಿಗಳ ದಿನವಂತೆ…!.
ಏನೇ ಇದು ಪ್ರೇಮಿಗಳ ದಿನ ಅಂಥ ಬೇರೆ ಇರುತ್ತ ಯಾಕೆ ನಾನು ನಿನ್ನ ಯಾವತ್ತು ನಾ ಪ್ರೀತಿಸಲ್ಲ ಅಂತಾನ…?.
ಹಾಗೇನು ಇಲ್ಲಾ ಕಣೋ ಈವತ್ತು ಇಡೀ ಪ್ರಪಂಚನೇ ಹಬ್ಬ ತರ ಮಾಡುತ್ತೆ ಗೊತ್ತ…?,
ಅದೇನೋ ನಂಗೊತ್ತಿಲ್ಲ ಕಣೆ ಮೊದ್ಲೆ ನಾನು ಪೂರ್ ಅಂಥ ಗೊತ್ತು ತಾನೆ…?.
ಗೊತ್ತು ಕಣೋ ಅಷ್ಟು ದೊಡ್ಡದೇನು ಕೇಳೊದಿಲ್ಲ …..
ಮತ್ತೆ ?. ನೋಡೆ ನಿನ್ನಿಂದ ಈವತ್ತು ಆಪೀಸಿಗೂ ಹೋಗ್ದೆ ಬಂದಿದ್ದೀನಿ ಅರ್ಥ ಮಾಡ್ಕೊ …?.
ಸರಿ ಬಿಡು ಈವತ್ತು ಒಂದಿನ ತಾನೆ..?.
ಸರಿ ಬೇಗ ಕೇಳು ?..
ಏನಿಲ್ಲ ಒಂದು ರೆಡ್ ರೋಸ್ ಕೊಡ್ಸು ಸಾಕು !..
ಆ ಏನೇ ಇದು ಬರೀ ಒಂದು ರೆಡ್ ರೋಸ್ ಸಾಕ ?. ಬೇಡ ಬೇರೆ ಏನಾದ್ರು ಕೇಳು ಕೊಡ್ಸ್ತೀನಿ…
ಬೇಡ ಕಣೊ ಒಂದು ರೆಡ್ ರೋಸ್ ಮಾತ್ರ ಸಾಕು ?..
ಸರಿ ಕೊಡ್ಸೀನಿ ಬಿಡು…
ಮತ್ತೆ ನೀನು..?.
ಮತ್ತೆ ನೀನು ಅಂದ್ರೆ ?.
ಮತ್ತೆ ನೀನು ಏನು ಅನ್ಕೊಬಾರ್ದು…
ಹಾ ಸರಿ ಹೇಳು ?.
ನೋಡೊ ಈವತ್ತೆಲ್ಲ ನೀನು ನನ್ ಜೋತೆ ಇರ್ಬೇಕು…. ಇರ್ತಿಯ್ಯಲ್ಲ ??.
ಅಯ್ಯೋ ಈವತ್ತೆಲ್ಲಾ ನಾ ?.  ಕಷ್ಟ ಆಗುತ್ತೆ ಕಣೆ ಬಾಸ್ ಗೆ ಸುಳ್ಳೇಲಿ ಬಂದಿದ್ದೀನಿ….
ಅದೆಲ್ಲ ನಂಗೆ ಗೊತ್ತಿಲ್ಲ ಇರ್ತಿಲ್ಲ ಇಲ್ವ ಹೇಳು ?…
ಸರಿ ಆಯ್ತು ಬಿಡು ಇರ್ತೀನಿ …
ಮತ್ತೆ ?.
ಮತ್ತೆ ಮತ್ತೇನಾ ಏನೆ ಇದು…?.
ನೀ ಏನು ಅನ್ಕೊಂಡ್ದಿದ್ರೆ ಹೇಳ್ತಿನಿ …..
ಸರಿ ಹೇಳು…?.
ನನ್ನ ನಂದಿ ಹಿಲ್ಸ್ ಗೆ ಕರ್ಕೊಂಡೋಗ್ತಿಯ್ಯ …?. ಅಲ್ಲಿ ತುಂಬಾ ಚೆನ್ನಾಗಿರುತಂತೆ…
ನಂದಿ ಹಿಲ್ಸ ?. ಅಯ್ಯೋ ಅದು ಇಲ್ಲೆ ಇದ್ಯ 150 ಕಿ.ಮೀ ಹೋಗ್ಬೇಕು ಗೊತ್ತು ತಾನೆ ?….
ಕರ್ಕೊಂಡೋಗ್ತಿಯ್ಯ ಇಲ್ಲ ಹೇಳು ಅಷ್ಟೆ…?.
ಸರಿ ಮಾರಾಯ್ತಿ ಹೋಗೋಣ ಬಿಡು….
ನೋಡು ಈಗ ಬೆಳಗೆ 8 ಗಂಟೆ …
ಹೌದು ಕಣೆ ಯಾಕೆ ?..
ಮತ್ತೆ…
ಮತ್ತೆ ಮತ್ತೇನಾ ಏನು …?.
ಕೇಳ್ತಿಯ್ಯ ಇಲ್ಲ ಹೇಳು ಅಷ್ಟೆ…?.
ಸರಿ ಹೇಳಮ್ಮ ನಿನ್ನ ಇಷ್ಟ ಪಟ್ಟಿರೋ ತಪ್ಪಗೆ ಇದ್ನೆಲ್ಲ ಅನುಭವಿಸಬೇಕಲ್ಲ ??.
ನೋಡೋ ನೀನು ಕೋಪ ಮಾಡ್ಕೊಂಡ್ರೆ ಬೇಡ ಬಿಡು…
ಅಯ್ಯೋ ನಂಗೆಲ್ಲಿ ಕೋಪ ಬರುತ್ತೆ ಹೇಳು ನಿನ್ ಹೇಳ್ದಂಗೆ….
ಸರಿ ನನ್ನ ಸಂಜೆ 5 ಗಂಟೆಗೆಲ್ಲ ನಂದಿ ಬೆಟ್ಟ ಸುತ್ಸಿ ಮನೇಗ್ ಬಿಡಗಬೇಕು….
ಏನೇ ನೀನೇಳೊದು ಸಂಜೆ 5 ಕ್ಕೆ ಎಲ್ಲಾ ನೋಡಿ ಮನೆಗೆ ಬಿಡೋದಾ ??.
ಹೂ ಕಣೋ … ಇವತ್ತು ಒಂದಿನ ತಾನೆ….
ಸರಿ ಸರಿ ನನ್ನತ್ರ ಬೈಕ್ ಇಲ್ಲ. ಮತ್ತೆಂಗೆ ಹೋಗೋದು ?…
ಬಸ್ಸಿದ್ಯಲ್ಲ ??.
ಅಂಗ್ರಾದ್ರೆ ಒಂದು ದಿನಕ್ಕೆ ಬಾಡಿಗೇಗೆ ತಗೊಳ್ಳ..
ಸುಮ್ನಿರೋ ತಮಾಶೆ ಬೇಡ ಬಾಡಿಗೇನಂತೆ ಬಾಡಿಗೆ ಬೇಗ ನಡಿ ಬಸ್ಸಲ್ಲೆ ಹೋಗೋಣ….
ಸರಿ ನಡಿಯಮ್ಮ ನಂಗೆ ಯಾವುದೋ ಕರ್ಮ ..
                                                  ಮುಂದುವರೆಯುತ್ತೆ…
                                                     ವಸಂತ್

ಲೇಖಕರು

ವಸಂತ್

ವಸಂತ್

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಶುಕ್ರ, 02/18/2011 - 20:46

Smile ಏನ್ ವಸಂತಣ್ಣ ಲವ್ವಾ?

ವಸಂತ್ ಶನಿ, 02/19/2011 - 21:15

ಅಯ್ಯೋ ಆತರದ್ದೇನಿಲ್ಲ ಸುಮ್ನೆ ಬರ್ದೆ ಅಷ್ಟೆ ಉಮಾಶಂಕರ್ ರವರೆ ಪ್ರೀತಿ ಅಂದ್ರೆ ಎಂಥ ತೊಂದ್ರೆ ಅನ್ನೋದನ್ನಷ್ಟೆ ...............................

Arjun Gatti ಧ, 02/23/2011 - 15:13

              ಆಗ..... 
 ಈ ಪ್ರೀತಿ ಪ್ರೇಮಾ ಅದೆಲ್ಲ ಪುಸ್ತಕದ ಬದ್ನೆಕಾಯಿ.....
             ಈಗ......  
       ಪ್ರೀತಿ ಮಧುರ.....
           ತ್ಯಾಗ ಅಮರ.......

ವಸಂತ್ ಧ, 02/23/2011 - 18:10

ನಿಮ್ಮ ಮಾತಿನ ತಾತ್ಪರ್ಯ ನನಗೆ ಅರ್ಥವಾಗುತ್ತಿಲ್ಲ ಆರ್ಜುನ್ ರವರೆ ಧಯವಿಟ್ಟು ಸ್ವಲ್ಪ ಆರ್ಥವಾಗುವಂತೆ ತಿಳಿಸುತ್ತೀರ ?? ..............................

Arjun Gatti ಧ, 02/23/2011 - 15:13

              ಆಗ..... 
 ಈ ಪ್ರೀತಿ ಪ್ರೇಮಾ ಅದೆಲ್ಲ ಪುಸ್ತಕದ ಬದ್ನೆಕಾಯಿ.....
             ಈಗ......  
       ಪ್ರೀತಿ ಮಧುರ.....
           ತ್ಯಾಗ ಅಮರ.......

girish rambjapuri (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/26/2011 - 12:05

ಪ್ರೀತಿ ಹೇಳುವುದಕ್ಕೆ ನಿಗದಿಯಾದ ಸಮಯ ಬೇಕಾಗಿರುವುದಿಲ್ಲ, ಆ ಸಮಯದಲ್ಲಿ ಹೇಳಬೇಕು ಅಷ್ಟೆ.ಹೇಳಿದ ಮೇಲೆ ನಡೆಸಿಕೊ೦ಡು ಹೋಗಲೇಬೇಕು. ಪ್ರೀತಿ ಹೇಳಲು ದಿನ ನಿಗದಿ ಮಾಡುವುದು ಸರಿಯಲ್ಲ ಆದರೆ ಹೆದರಿಕೆ ಇರುತ್ತದೆ, ಮು೦ದುವರಿಯಲೇಬೇಕಲ್ಲವೆ. ಅದು ಹುಟ್ಟುವ ಸಮಯ ಒ೦ದು ಅದ್ಬುತ ಸಮಯ ಅದನ್ನು ಮು೦ದೂಡಬಾರದು ಮತ್ತು ಹೇಳಿಬಿಡಬೇಕು.ನಮ್ಮ ಪ್ರೀತಿ ಅವಳು ಒಪ್ಪಿಕೊಳ್ಲಬೇಕು ಎ೦ದರೆ ಅವಳು ಹೇಳಿದ೦ತೆ ಕೇಳಬೇಕು. ಆದರೆ ಇಬ್ಬರು ಪ್ರೀತಿಗೆ ಬೆಲೆ ಕೊಟ್ಟು ನಡೆಸಿಕೊ೦ದು ಹೋಗಬೇಕು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.