Skip to main content

ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದಂದಿನಿಂದಲೆ ನನ್ನಲ್ಲಿ ಹಿಂದೂ ಧರ್ಮದ, ಇತಿಹಾಸದ ಹಾಗೂ ಅದರ ಸಂಸ್ಕೃತಿಯ ಬಗ್ಗೆ ಗೌರವ ಭಾವನೆಗಳು ಬೆಳೆಯಲಾರಂಬಿಸಿದವು.ಇದರಿಂದಾಗಿಯೆ ಹಿಂದುತ್ವದ ಬಗ್ಗೆ ಅಪಾರ ಹೆಮ್ಮೆಪಡುವಂತಾಯಿತು.ನಾನು ಬೆಳೆದಂತೆಲ್ಲಾ ಯಾವುದೇ ಸಿದ್ದಾಂತ, ರಾಜಕೀಯ ಹಾಗು ಧರ್ಮಗಳ ಕಟ್ಟುಪಾಡುಗಳಿಗೆ ಒಳಗಾಗದೆ ಸ್ವತಂತ್ರವಾಗಿ ಯೋಚಿಸಲಾರಂಬಿಸಿದೆನು. ಮುಂದೆ ಇದೇ ನನ್ನನ್ನು ಹುಟ್ಟಿನಿಂದ ಜಾತೀಯತೆ, ಮುಟ್ಟಿಸಿಕೊಳ್ಳದಿರುವಿಕೆ ಮುಂತಾದ ಅನಿಷ್ಟ ಪದ್ದತಿಗಳ ವಿರುದ್ದ ಸಕ್ರಿಯವಾಗಿ ಹೊರಾಡುವಂತೆ ಪ್ರೇರೇಪಿಸಿತು. ಹಾಗಾಗಿ ನಾನು ಜಾತೀಯತೆಯ ವಿರುದ್ದ ಹೋರಾಡುತ್ತಿದ್ದ ಆರ್ ಎಸ್ ಎಸ್ ಸಂಘಟನೆಯ ವಿಭಾಗವನ್ನು ಮನಃ ಪೂರ್ವಕವಾಗಿ ಸೇರಿ ಮುಂದೆ ಸಮಸ್ತ ಹಿಂದೂಗಳ ಏಕತೆ ಮತ್ತು ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಿದೆನು. ಮೇಲು ಕೀಳೆಂಬುದು ಯಾವಾಗಲೂ ಹೊಂದಿರುವ ಶಿಕ್ಷಣ ಪ್ರೌಡಿಮೆಗಳಿಂದ ಬರಬೇಕೆ ಹೊರತು ಆಕಸ್ಮಿಕವಾದ ಹುಟ್ಟುವ ಜಾತಿಯಿಂದಲ್ಲ, ಮಾಡುವ ವೃತ್ತಿಯಿಂದಲ್ಲ.
 
ನಾನು ಸಾರ್ವಜನಿಕವಾಗಿ ಜರುಗುತ್ತಿದ್ದ ಜಾತ್ಯಾತೀತ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆ, ಅಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದುಗಳು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಚಾಮರರು ಹಾಗು ಭಂಗಿಗಳು ಭಾಗವಹಿಸುತ್ತಿದ್ದರು.ನಾವು ಅಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದರೊಂದಿಗೆ ಜಾತೀಯತೆಯನ್ನು ಮುರಿಯಲು ಪ್ರಯತ್ನಿಸುತ್ತಿದ್ದೆವು. ನಾನು ರಾವಣ,ವಿವೇಕಾನಂದ, ದಾದಾಭಾಯಿ ನವರೋಜಿ, ಗೋಖಲೆ, ತಿಲಕರ ಪುಸ್ತಕಗಳೊಂದಿಗೆ ಪ್ರಾಚೀನ ಹಾಗು ಆಧುನಿಕ ಭಾರತದ ಇತಿಹಾಸವನ್ನು ತಿಳಿಸುವ ಪುಸ್ತಕಗಳನ್ನೂ ಜೊತೆಗೆ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಮತ್ತು ರಷ್ಯ ಇವೇ ಮೊದಲಾದ ಪ್ರಮುಖ ದೇಶಗಳ ಇತಿಹಾಸ ಪುಸ್ತಕಗಳನ್ನೂ ಓದುತ್ತಿದ್ದೆನು. ಜೊತೆ ಜೊತೆಗೆ ಸಮಾಜವಾದ ಹಾಗೂ ಮಾರ್ಕ್ಸ್ ವಾದದ ಸಿದ್ದಾಂತಗಳನ್ನೂ ಓದಿಕೊಳ್ಳತೊಡಗಿದೆನು. ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ನಾನು ತುಂಬ ಹತ್ತಿರದಿಂದ ವೀರ್ ಸಾವರ್ಕರ್ ಹಾಗು ಗಾಂಧೀಜಿ ಬರೆದಿದ್ದಂತಹ ಪುಸ್ತಕಗಳನ್ನೂ ಅವರ ಭಾಷಣಗಳನ್ನೂ ಅಭ್ಯಸಿಸತೊಡಗಿದೆನು. ಉಳಿದೆಲ್ಲವುಗಳಿಗಿಂತ ಇವೇ ನನ್ನ ಆಲೋಚನೆಯ ಮೇಲೆ ಗಾಢವಾದ ಪರಿಣಾಮಗಳನ್ನು ಬೀರಿದವು. ಇವೇ ವಿಷಯಗಳು ಅಂದಿನ ಭಾರತೀಯರ ಕಳೆದ ಮೂವತ್ತು ವರ್ಷಗಳ ಯೋಚನೆ ಹಾಗೂ ಕಾರ್ಯಗಳ ಮೇಲೆ ಗಾಢ ಪ್ರಭಾವವನ್ನು ಬೀರಿದ್ದವೆಂದರೆ  ತಪ್ಪಾಗಲಾರದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 1211 views