Skip to main content

ನೆನಪುಗಳ ಕಂತೆಯಿಂದ ...ಅಮೇರಿಕಾ ಪಯಣ

ಬರೆದಿದ್ದುNovember 24, 2010
2ಅನಿಸಿಕೆಗಳು

ಮೇರಿಕದಲ್ಲಿ ಕಳೆದ ಅನುಭವ ಹಿತವಾಗಿತ್ತು.ಅವರ ಸಂಸ್ಕೃತಿ, ದಿನಚರಿ ಎಲ್ಲವೂ ಡಿಫರೆಂಟ್. ಒಟ್ಟಿನಲ್ಲಿ ಮನಸ್ಸಿನಲ್ಲಿ ಹಾಯಾಗಿ ಉಳಿಯೊ ಸಾಕಷ್ಟು ಸಿಹಿ ಕ್ಷಣಗಳನ್ನು ಹೊತ್ತುಕೊಂಡು ವಾಪಸ್ ಬಂದೆ. ಈಗ ಒಂದೊಂದಾಗಿ ಬಿಚ್ಚಿ ಆ ಗಳಿಗೆಗಳನ್ನು ಮೆಲಕುತ್ತ ಖುಷಿ ಪಡುತ್ತಿರುವೆ .
ಅಪ್ಪ, ಅಮ್ಮ ಅಣ್ಣ ಅನಿಲ್ ಗೆ ಟಾ ಟಾ ಹೇಳಿ ಬೆಂಗಳೂರು ಏರ್‌ಪೋರ್ಟ್ ಹೊಕ್ಕಾಗ ಸಮಯ ರಾತ್ರಿ 11 . ಫ್ಲೈಟ್  ಹೊರೊಡದಕ್ಕೆ ಇನ್ನೂ  2 ಗಂಟೆ ಸಮಯ ಬಾಕಿ. ನನ್ನ ಪಯಣ ಬೆಂಗಳೂರಿನಿಂದ ಪ್ರಾರಂಭವಾಗಿ ಜರ್ಮನಿ ಯ ಫ್ರ್ಯಾಂಕ್‌ಫರ್ಟ್ ವರೆಗೆ - ನಂತರ ಫ್ರ್ಯಾಂಕ್‌ಫರ್ಟ್ ನಿಂದ ಅಮೇರಿಕದ ಡೆಟ್ರಾಯಿಟ್ ಗೆ ನಿಗದಿಯಾಗಿತ್ತು. ಒಟ್ಟಿನಲ್ಲಿ 18 ಗಂಟೆಗಳ ಪಯಣ!.
ಬೆಂಗಳೂರಿನ ಏರ್‌ಪೋರ್ಟ್ ನಲ್ಲಿ ಅತ್ತಿತ್ತ ತಿರುಗಿ ಬಣ್ಣ ಬಣ್ಣದ ಶಾಪ್ ಗಳ ಮೇಲೆ ಕಣ್ಣು ಹಾಯಿಸುತ್ತಾ ಸಮಯ ಕಳೆದದ್ದಾಯ್ತು.ಕೊನೆಗೆ ಏರ್ ಹಾಸ್ಟೆಸ್ ಚಲುವೆ ಆಕರ್ಷಕ ಮುಗುಳ್ನಗೆ ಬೀರುತ್ತಾ ಪ್ಲೇನ್ ಲ್ಲಿ ಬರಮಾಡಿಕೊಂಡಾಗ ಸಮಯ ಸರಿಯಾಗಿ ಬೆಳಗಿನ 12:30. ನನ್ನದು ಮೊದಲ ವಿದೇಶ ಪ್ರವಾಸ. ಸೋ ಸಹಜವಾಗಿಯೇ ಪ್ರತಿ ಘಟ್ಟದಲ್ಲೂ  ಕುತೂಹಲ-ಜಾಗರೂಕತೆ-ಸಂತಸ ಮನೆ ಮಾಡಿತ್ತು. ಅಕ್ಕಪಕ್ಕದ ಟ್ರ್ಯಾವೆಲರ್ಸ್ ಜೊತೆ ಹೀ..ಹೌ ಆರ್ ಯು ಮಾತು ಬೆಳೆಯುವ ಹೊತ್ತಿಗೆ ಪ್ಲೇನ್ ಆಗಲೇ ಆಗಸ ಚುಂಬಿತ್ತು. ಹೊರಗೆಲ್ಲ ಕತ್ತಲು. ನಿದ್ರೆಗೆ ಜಾರಿದ್ದು ಅರಿವಿಗೆ ಬರಲಿಲ್ಲ. 
"ಗುಡ್ ಮಾರ್ನಿಂಗ್ ಸರ್ " ಪಕ್ಕದಲ್ಲಿ ಆಗಲೇ ನಿಂತಿದ್ದಳು ಅದೇ ಚಲುವೆ ಕೈಯಲ್ಲಿ ಬೆಚ್ಚನೆಯ ಟಿಶ್ಯೂ ಪೇಪರ್ ಹಿಡಿದುಕೊಂಡು . 
ಅವಳ ನಗು ನನಗೇನೋ ಆಪ್ತವಾಯಿತು.ಇಷ್ಟವೂ ಆದಳು .
"ಅಯ್ಯೋ ಮಂಕೆ ನಿನಗೊಬ್ಬನಿಗೆ ಅಲ್ಲ ಎಲ್ಲರಿಗೂ ಅವಳದು ಅದೇ ನಗು.ಅದೇ ಆಪ್ತತೆ. ಸುಮ್ಮನೇ ನಿನ್ನ ದಾರಿ ನೋಡ್ಕೋ" ಮನಸು ಹಾಗೆನೆ ಕಾಲೆಳೆಯುವುದೊನ್ದೆ ಅದಕ್ಕೆ ಗೊತ್ತಿರೋದು..
"ಥ್ಯಾಂಕ್ ಯು..ಹೀ " ನಾನೂ ನಕ್ಕೆ . ಬಹುಶಹ ಇಂಪ್ರೆಸ್ ಆದಳು ಅನ್ಸುತ್ತೆ. ಹೆ ಹೆ. ಏನೇ ಇರಲಿ ನಾಳೆ  ಲೈಫ್ ಲ್ಲಿ ಬರೋ  ನನ್ನ ಸಂಗಾತಿಯೂ ಇದೆ ತರಹ ಉಪಚರಿಸಿದರೆ ಸಾಕಪ್ಪ ಅಂತ ಮನದ ಬಯಕೆ ಆಗಲೇ ಬೇಡಿಕೊಂಡಿತ್ತು.
ಫ್ರ್ಯಾಂಕ್‌ಫರ್ಟ್ ಏರ್‌ಪೋರ್ಟ್ ರೀಚ್ ಆದಾಗ ಬೆಳಗ್ಗೆ ಸರಿಯಾಗಿ ಸಮಯ ಬೆಳಗ್ಗೆ 8 30. 
"ಥ್ಯಾಂಕ್ ಯು . ಹ್ಯಾವ್ ಅ ಗ್ರೇಟ್ ಡೇ" ಏರ್ ಹಾಸ್ಟೆಸ್ ಎಲ್ಲರಿಗಿಂತ ನಂಗೆನೆ ಹೆಚ್ಚು ಪ್ರೀತಿಯಿಂದ ಗ್ರೀಟ್ ಮಾಡಿದ್ಲು ಅಂತ ನಂಗಂತೂ ಖಾತ್ರಿಯಾಯ್ತು. ಹೋಗ್ಲಿ ಬಿಡಿ :)
ಫ್ರ್ಯಾಂಕ್‌ಫರ್ಟ್ ಏರ್ ಪೋರ್ಟ್ ತುಂಬಾ ದೊಡ್ಡದು. ಒಂದು ಟೆರ್ಮಿನಲ್ ನಿಂದ ಮತ್ತೊಂದು ಟರ್ಮಿನಲ್ ಗೆ ಹೋಗಲು ಮಿನಿ ಟ್ರೇನ್  ಸೌಲಬ್ಯವಿದೆ..ನಾನು ನನ್ನ ಸ್ಥಳ ವಿಚಾರಿಸಿ ಬೋರ್ಡಿಂಗ್ ಪಾಯಿಂಟ್ ಗೆ ಬಂದೆ. ನನ್ನ ಫ್ಲೈಟ್ ಗೆ ಇನ್ನೂ 4 ಗಂಟೆ ಸಮಯ.ಆಗಲೇ ನನ್ನ ದಿನಚರಿಯ ಮೊದಲ ರೂಢಿ ಮಿಸ್ ಮಾಡಿಕೊಳ್ಳುತ್ತಿದ್ದೆ. ಬೆಳಗ್ಗೆ ಎದ್ದು 1 ಲೀಟರ್ ನೀರು ಕುಡಿದಾಗಲೆ ನನಗೆ ಖುಷಿ.  ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ನೀರು ಕುಡಿಯೊ ಅಬ್ಯಾಸ ನನಗೆ ಅಮ್ಮನಿಂದ ಬಂದಿದ್ದು. ಅತ್ತ ಇತ್ತ ಗಮನ ಹರಿಸಿದ ಮೇಲೆ Drinking water ಟ್ಯಾಪ್ ಕಾಣಿಸಿತು.. ಆದರೆ ನನ್ನ ಬೋಟಲ್ ಪ್ಲೇನ್ ಲ್ಲೆ  ಮರೆತಿದ್ದೆ.. ಎಲ್ಲ ಆ ಏರ್ ಹಾಸ್ಟೆಸ್ ಪ್ರಭಾವ :(. 
"ಟ್ಯಾಪ್ ನ್ನೇ ಬಾಯಿಯಿಂದ ಕಚ್ಚಿ ಕುಡಿದರೆ ಹೆಂಗೆ" ಒಳ್ಳೇ ಐಡಿಯಾ ತಟ್ಟನೆ ಹೊಳೆದಿತ್ತು :)). 
ಆದರೆ ಏನೋ ..ಹೊಸ ಪ್ಲೇಸ್ ಲ್ಲಿ ದೈರ್ಯ ಬರಲಿಲ್ಲ.. ನೀರಿನ ಬೊತಲ್ ಕೊಂಡುಕೊಳ್ಳದೆ ಬೇರೆ ಮಾರ್ಗವಿರಲಿಲ್ಲ..
"ಎಕ್ಸ್‌ಕ್ಯೂಸ್ ಮಿ"
"ಎಸ್"
"ಶಲ್ ಆಯ್ ಪೇ ಇನ್ ಡಾಲರ್ಸ್" ಯೂರೋಪಲ್ಲಿ ಯೂರೋ ಕರೆನ್ಸೀ ಚಾಲ್ತಿಲಿ ಇರೋದು .
"ಎಸ್ ಯು ಕ್ಯಾನ್ "
"ಹೌ ಮಚ್ ಫಾರ್ ದಿಸ್ ವಾಟರ್ ಬಾಟಲ್"
""ಈಟ್ಸ್ 366 ಡಾಲರ್ಸ್"
"366 ಡಾಲರ್ಸ್ !!" ( 366 * 46 =  16470 Rs :-O $-) )
ಸರಿಯಾಗಿ ಕೇಳಿಸಿಲ್ವ. ಮತ್ತೆ ಕೇಳಿದ ಮೇಲೂ ಅದೇ ರೇಟು. ಚಂದ್ರನಿಂದ ನೀರು ತಂದಿರಬಹುದಾ . ಬೊತಲ್ ದಿಟ್ಟಿಸುತ್ತಾ ವಾಪಸ್ ಬಂದು ಕೂತೆ.
ಆ ಶಾಕ್ ದಿಂದ ಹೊರಗೆ ಬರೋದಕ್ಕೆ ಬಹಳ ಸಮಯವೇನೋ ಬೇಕಾಗಲಿಲ್ಲ.ಬಣ್ಣ ಬಣ್ಣದ ಡ್ರೆಸ್ ನಲ್ಲಿ ಥಳಕು ಬಳುಕಿನ ಸುಂದರ ಲಲನೆಯರು, ನಾವೇನೂ ಕಡಿಮೆಯಿಲ್ಲ ಅನ್ನೋ ತರಹ ಸುಂದರವಾಗಿ ಅಲಂಕರಿಸಿಕೊನ್ಡು ಠೀವಿಯಿಂದ ಸುತ್ತುತ್ತಿದ್ದ ಪುಟಾನಿಗಳು ಎಲ್ಲವೂ ಬಣ್ಣದ ಲೋಕ. ವಯ್ಯಾ ರದ ಪಾಕ :)... 
ನನ್ನ ಪಕ್ಕದಲ್ಲಿ ಕುಳಿತಿದ್ದ ಪುಟ್ಟ ಮುದ್ದು ಮಗು ನನ್ನ ಆಕರ್ಷಿಸಿತು. ನಾನೂ ಅದರ ಜೊತೆ ಮಗುವಾಗಿ ಕಣ್ಣಲ್ಲೇ ಸನ್ನೆ ಮಾಡುತ್ತಾ ಆಟವಾಡತೊಡಗಿದೆ. ಎಲ್ಲಿ ಎಡವಟ್ಟು ಮಾಡಿದೆನೊ!.ಮಗು ಇದ್ದಕ್ಕಿಂದಂತೆ ಮುಖ ಮುದುಡಿಕೊನ್ದು ಅಳತೊಡಗಿತು.. ಬಹುಶಹ ನನ ತರಲೆ ಜಾಸ್ತಿ ಆಯಿತೇನೋ.ನನ್ನ ಮುಖ ನೋಡಿ ಅದಕ್ಕೆ ಕಲ್ಪನೆಯ ಭೂತ ನೆನಪಿಗೆ ಬಂದಿರಲಿಕ್ಕೂ ಸಾಕು.ನಾನು ಮಾತ್ರ ಅಳೊದನ್ನು ನೋಡಿ ನಗುತ್ತಾ ಕೂತಿದ್ದೆ.  ಮಗುವಿನ ಅಮ್ಮ ಲಗುಬುಗನೆ ಬ್ಯಾಗ್ ನಿಂದ ಏನೋ ಕ್ಲಿಪ್ ತರಹ ಇರುವ ವಸ್ತು ಮಗುವಿನ ಬಾಯಿಗೆ ಲಗತ್ತಿಸಿದಳು.ಎರಡೂ ತುಟಿಗಳೂ ಅಪ್ಪಿಕೊಂಡವು.   ಎರಡೂ ತುಟಿಗಳೂ ಅಪ್ಪಿಕೊಂಡವು.ಪಾಪ ಮಗು ಸುಮ್ಮನಾಗಿ ನನ್ನ ನೋಡತೊಡಗಿತು. 
ಸಮಯ ಸರಿಯಾಗಿ 12.ಇನ್ನೂ ಒಂದು ಗಂಟೆ. ಹೊಟ್ಟೆಗೆ ನೀರಿಲ್ಲದೇ ಕುಳಿತಿದ್ದೆ. 16000 ಕೊಟ್ಟು ನೀರು ಕೊಳ್ಳೋ ಬದಲಿಗೆ ಕುಡಿಯದೇ ಕೂಡೊದು ಒಳಿತು ಅನಿಸಿತು.ಸುತ್ತ ಮುತ್ತ ಅಲೆದಾಡಿದ ಮೇಲೆ ಮತ್ತೊಂದು ತಾಯಿ ಮಗುವಿನ ಭೇಟಿಯಾಯಿತು. ಪುಟ್ಟ ಮಗುವನ್ನು ತಾಯಿ ಎಳೆದುಕೊಂಡು ಹೋಗೋ ಪರಿ ನೋಡುವಂತದ್ದು.  ಮಗುವನ್ನು ದಾರ ಕಟ್ಟಿ ಎಳೆಯುತ್ತಿದ್ದಳು..ಮಗುವಿಗೆ ಮುಂದೆ ಹೋಗಲು ಮನಸ್ಸಿರದಿದ್ದರೆ ಥಟ್ಟನೆ ಕೆಳಗೆ ಕುಳಿತು ಆಟದಲ್ಲಿ ಮಗ್ನವಾಗಿ ಬಿಡೊದು. ಹೆ ಹೆ :)
ಅತ್ತ ಇತ್ತ ಇಣುಕೋ ಹೊತ್ತಿಗೆ ಆಗಲೇ ನೆಕ್ಸ್ಟ್ ಫ್ಲೈಟ್ ಸಿಧ್ಧವಾಗಿತ್ತು. ಮಿನಿ ಡ್ರೆಸ್ ನಲಿ ಮುಗುಳ್ನಗುತ್ತಾ ಸುಂದರ ಯುವತಿ ಫ್ಲೈಟ್ ಗೆ ಬರಮಾಡಿಕೊಂಡಳು.
"ಥ್ಯಾಂಕ್ ಯೂ" ಹಲ್ಲು ಕಿರಿಯುತ್ತಾ ಒಳ ಹೊಕ್ಕೆ. ಅದೇ ಬೆಚ್ಚನೆಯ ಅನುಭವ .ಡೆಟ್ರಾಯಿಟ್ ತಲುಪಿದಾಗ ಸಂಜೆ 4. ತಿಳಿ ಬಿಸಿಲು ಬೆಂಗಳೂರಿನಂತೆ ಭಾಸವಾಯಿತು. 
ಓಹ್ ಅಂದ ಹಾಗೆ ಮರೆತಿದ್ದೆ.ಇಲ್ಲಿಗೆ ಬಂದಿಳಿದ ಮೇಲೆ ಗೊತ್ತಾಯ್ತು. 366ಡಾಲರ್ಸ್ ಅಂದ್ರೆ 3 ಡಾಲರ್ಸ್ 66 ಸೆಂಟ್!!.ಸಾಮಾನ್ಯವಾಗಿ ಎರಡನ್ನೂ ಕೂಡಿಸಿ ಹೇಳೋದು ರೂಢಿ ಅಂತೆ.ಆದ್ರೂ ನನ್ನಂತಹ ಅಮಾಯಕನಿಗೆ ಈ ರೀತಿ ಆ ಅಂಗಡಿಯವಳು ಬಕರಾ ಮಾಡಿದ್ದು ಸರೀನಾ .ನೆಕ್ಸ್ಟ್ ಟೈಮ್ ಅವಳನ್ನು ನೊಡ್ಕೊತಿನಿ ;) :P :D :-B  hisudhir007.blogspot.com

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 11/26/2010 - 14:02

ಸುಧೀರ್ ರವರೆ,
ಪ್ರವಾಸ ಕಥನ ಚೆನ್ನಾಗಿದೆ, ಆದರೆ ಒಂದೇ ಮಾಹಿತಿ ಎರಡು ಸಲ ಮುದ್ರಣವಾಗಿದೆ. ನಕಲನ್ನ ಅಳಸಿ ಹಾಕಿ... :)
-- ವಿನಯ್

ಸುಧೀರ ಸೊನ್ನದ ಮಂಗಳ, 11/30/2010 - 14:29

ಥ್ಯಾಂಕ್ಸ್ ವಿನಯ್ . . ನನಗೆ ಅರಿವಿಲ್ಲದೇ ಎರಡು ಸಲ ಮೂಡಿತ್ತು ಅನಿಸುತ್ತೆ. .  ಈಗ ಅಳಿಸಿರುವೆ.  :)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.