Skip to main content

ಕನ್ನಡದ ಬಗ್ಗೆ ಕನ್ನಡಿಗರಿಗಿರುವ ಕಾಳಜಿ ಕಡಿಮೆಯಾಗುತ್ತಿದೆಯೇ?????ಕನ್ನಡದ ಬಗ್ಗೆ ಕನ್ನಡಿಗರಿಗಿರುವ ಕಾಳಜಿ ಕಡಿಮೆಯಾಗುತ್ತಿದೆಯೇ?????

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಧ, 10/27/2010 - 22:42

ನನ್ನ ಪ್ರಕಾರ ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆ ಗಂಭೀರವಾದದ್ದು. ಅದೇ ಅಪ್ರಸ್ತುತತೆ. ಅದು ಆಧುನಿಕ ಸಾಧನಗಳೇ ಇರಬಹುದು ಅಥವಾ ವಿಜ್ಞಾನ, ಕಂಪ್ಯೂಟರ್, ಅರ್ಥ ಶಾಸ್ತ್ರ ಇತ್ಯಾದಿ ರಂಗದಲ್ಲಿ ಸೈ ಎನ್ನಿಸುವಷ್ಟು ಕನ್ನಡದಲ್ಲಿ ಆಳವಾದ ಜ್ಞಾನ ನೀಡುವ ಕೊರತೆ ಇರುವದು.
ಕನ್ನಡ ಭಾಷೆ ಹೊಟ್ಟೆಪಾಡಿಗೆ ಅಗತ್ಯ ಇರುವ ಮಾಹಿತಿಯನ್ನು ಕೊಡುವ ಭಾಷೆಯಾಗಿ ಬೆಳೆಯಬೇಕು. ಕನ್ನಡ ಭಾಷೆ ಉದ್ದಿಮೆಗೆ ಸಹಕಾರಿಯಾದ ಭಾಷೆಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ಆಗ ಕನ್ನಡಕ್ಕೆ ಯಾರೂ ಕಾಳಜಿ ಇಡಬೇಕಾದ ಪ್ರಶ್ನೆಯೇ ಉದ್ಭವಿಸದು.
ಇದೇ ಟ್ರೆಂಡ್ ಮುಂದುವರಿದರೆ ಇನ್ನು ನೂರೈವತ್ತು ವರ್ಷಗಳ ನಂತರ ಗ್ರಾಮಾಂತರ ಪ್ರದೇಶಗಳಲ್ಲಿ ಬರಿ ಮಾತನಾಡಲು ಬಳಸುವ ಭಾಷೆಯಾಗಿರುತ್ತೇನೋ. ಈ ಹಿಂದಿನ ಮಾತು ಉತ್ಪ್ರೆಕ್ಷೆ ಎನಿಸಿದರೂ ಹಳೆಯ ಕಾಲದ ವಿಚಾರಗಳಿಗೆ ಜೋತು ಬೀಳದೇ ಆಧುನಿಕ ಅಗತ್ಯಗಳಿಗೆ ತಕ್ಕಂತೆ ಕನ್ನಡ ಬದಲಾಗದಿದ್ದರೆ ನಿಜವಾದೀತು. ಮುಂದಿನ ಯುವ ಪೀಳಿಗೆಗೆ, ಮಕ್ಕಳಿಗೆ ಆಕರ್ಷಕ ಭಾಷೆಯಾಗಿ ಕನ್ನಡ ಬೆಳೆಯಬೇಕಿದೆ.
ಎಲ್ಲರೂ ಸಾಧ್ಯವಿರುವ ಕಡೆಯೆಲ್ಲ ಕನ್ನಡ ಲಿಪಿ, ಭಾಷೆ ಬಳಸಬೇಕಿದೆ. ಕನ್ನಡವನ್ನು ಬರಿ ಸಾಹಿತ್ಯಕಷ್ಟೇ ಅಲ್ಲ ಜೀವನಕ್ಕೆ ಅಗತ್ಯವಾದ ಬ್ಯಾಂಕಿಂಗ್, ಮೊಬೈಲ್, ಡಿಟಿಎಚ್, ವಿಡಿಯೋ ಗೇಮ್ಸ್, ಅಪ್ಲಿಕೇಶನ್ ಇತ್ಯಾದಿಗಳಲ್ಲಿ ಹಾಗೂ ಇಂಜನಿಯರಿಂಗ್, ವೈದ್ಯಕೀಯ, ಮ್ಯಾನೆಜ್ ಮೆಂಟ್ ಇತ್ಯಾದಿ ರಂಗದಲ್ಲೂ ಕನ್ನಡ ಮೆರೆಯಬೇಕು. ಆದರೆ ಈಗಿರುವದೊಂದೆ ಪ್ರಶ್ನೆ. ಇದಕ್ಕೆ ಲಕ್ಷಾಂತರ ಜನರ ದುಡಿಮೆ ಬೇಕು. ಇದು ಸಾಧ್ಯಾನಾ?
 

  • 645 views