Skip to main content

ಜಾಕಿ-- ಜಸ್ಟ್ ಜಾಕೀಯಿಂಗ್

ಬರೆದಿದ್ದುOctober 18, 2010
4ಅನಿಸಿಕೆಗಳು

ಪೀಠಿಕೆಃ-    ಕನ್ನಡ ಚಿತ್ರ ನೋಡಲು ನಮಗಿರುವ ಕೆಲವೇ ಕಾರಣಗಳಲ್ಲಿ ಪುನೀತ್ ಮತ್ತು ಸೂರಿ ಕೂಡ  ಒಂದು. ಇನ್ನು ಇವರಿಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಬಂದರೆ ಹೇಗಿರಬಹುದು? ತುಂಬಾ ತಿಂಗಳಿಂದ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರ ಜಾಕಿ ತೆರೆ ಕಂಡಿದೆ. ಅದರ ವಿವರಗಳು ಇಂತಿವೆ.
ವಿವರಣೆಃ-
ನಿರ್ಮಾಣಃ- ಪಾರ್ವತಮ್ಮ ರಾಜ್ ಕುಮಾರ್
ಕಥೆ,ಚಿತ್ರಕಥೆ,ಸಂಭಾಷಣೆ, ನಿರ್ದೇಶನಃ- ಸೂರಿ
ಸಾಹಿತ್ಯಃ- ಯೋಗರಾಜ್ ಭಟ್
ಸಂಗೀತಃ- ಹರಿಕೃಷ್ಣ
ತಾರಗಣಃ- ಪುನೀತ್ ರಾಜ್ ಕುಮಾರ್, ಭಾವನಾ, ರವಿಕಾಳೆ,ರಂಗಾಯಣ ರಘು, ರಾಜು ತಾಳಿಕೋಟೆ
ಶಾರ್ಟ್ ಸ್ಟೋರಿಃ-
ಇನ್ನು ಚಿತ್ರ ಕೂಡ ಸಾಮಾನ್ಯ ಸೂರಿ ಚಿತ್ರಗಳಂತೆ ಶುರುವಾಗುತ್ತದೆ. ಚಿತ್ರದ ನಾಯಕನ ಹೆಸರು ಜಾನಕಿರಾಮ. ಊರಿನವರ ಪಾಲಿಗೆ ಆತ ಮುದ್ದಿನ ಜಾಕಿ. ಕೆಲಸ ಏನು ಇಲ್ಲದಿದ್ದರೂ  ರಿಯಲ ಎಸ್ಟೇಟ್ ಉದ್ಯಮಿಯ ಫೋಸು. ಟೈಟಲ್ ಸಾಂಗಿನಲ್ಲಿ ಬರುವಂತೆ ಆತ ಅರವತ್ನಾಲ್ಕು ವಿದ್ಯಾ ಪರಿಣಿತ ಆದರಲ್ಲಿ ದ್ಯೂತವೂ ಒಂದು (ಜೂಜು/ ಅಂದರ್-ಬಾಹರ್)
ಇಂತಿಪ್ಪ ಜಾಕಿಯ ಗೆಳೆಯ ನೆರೆಮನೆಯ ಹುಡುಗಿಯನ್ನು ಪ್ರೀತಿಸಿ ಓಡಿಸಿಕೊಂಡು ಹೋಗುತ್ತಾನೆ.ಅದು ಜಾಕಿಯ ತಲೆಗೆ ಬಂದು ಜಾಕಿ ಅವಳನ್ನು ಹುಡುಕುತ್ತ ಹೋಗುವಾಗ ಸಿಕ್ಕುವುದೇ ವಿಸ್ತಾರ ವೇಶ್ಯಾವಾಟಿಕಾ ಜಾಲ.ಅಲ್ಲಿಂದ ನೆರೆಮನೆಯ ಹುಡುಗಿಯನ್ನು ಪಾರು ಮಾಡಿ, ಖಳನಾಯಕರ ಬೆನ್ನು ಮುರಿದು ಜೊತೆಗೆ ನಾಯಕಿಯೊಬ್ಬಳೊಂದಿಗೆ ಕುಣಿದು ಕುಪ್ಪಳಿಸುವುದೇ ಇದರ ಸಂಕ್ಷಿಪ್ತ ಕಥಾ ಹಂದರ.
ಕೆಲವು ಕಾಂಪ್ಲೆಮೆಂಟುಗಳುಃ-
೧) ದೃಶ್ಯ ವೈಭವವಂತೂ ಚೆಂದಕ್ಕಿಂತಾ ಚೆಂದ ಕಣ್ರೀ. ಅರೆಬೆಳಕು,ಅರೆಕತ್ತಲೆ ವಿಚಿತ್ರ ವಿಚಿತ್ರ ವಿನ್ಯಾಸ, ಸಂಜೆ ಮಬ್ಬು ಮುಂಜಾನೆಗಳನ್ನು ಹಿಡಿದಿಟ್ಟಿರುವಂತಾ ರೀತಿ ಸೂಪರ್. ಹ್ಯಾಟ್ಸ್ ಆಫ್ ಟು ಸತ್ಯ ಹೆಗಡೆ
೨) ಪುನೀತ್ ಅಭಿನಯದ ಬಗ್ಗೆಯಂತೂ ಕೇಳೋದೇ ಬೇಡ. ಫೈಟಿಂಗ್ನಲ್ಲಿ ಕನ್ನಡದ ಜಾಕೀ- ಚಾನ್. ಡ್ಯಾನ್ಸ್ ಕಣ್ಣಿಗೆ ಹಬ್ಬ
೩)ಹರಿಕೃಷ್ಣ ಸಂಗೀತದಲ್ಲಿ ಟೈಟಲ್ ಸಾಂಗು ಮತ್ತು "ಎರಡೂ ಜಡೆಯನ್ನು" ಎರಡು ಹಾಡಿಗೇ ಫಿಲಂಗೆ ಕೊಟ್ಟ ಕಾಸು ವಸೂಲಿ ಕಣ್ರೀ. ಅಷ್ಟು ಇಷ್ಟ ಆಗೋಯ್ತು.
೪) ರಂಗಾಯಣ ರಘು ಪಾತ್ರ ಏಕತಾನತೆಯಿಂದ ಬಳಲುತ್ತಿದ್ದರೂ ನಗು ತರಿಸುವ ಡೈಲಾಗ್ ಗಳಿಗೇನೂ ಕಮ್ಮಿಯಿಲ್ಲ. ಊಟದ ಜೊತೆ ಉಪ್ಪಿನಕಾಯಿಯಂತೆ ರಾಜು ತಾಳಿಕೋಟೆ ಪಾತ್ರ ಕೂಡ ಇದೆ
 
ಕೆಲವು ಕಂಪ್ಲೇಟುಗಳುಃ-
೧) ದುನಿಯಾ, ಜಂಗ್ಲೀ ಚಿತ್ರಗಳನ್ನು  ಲೆಕ್ಕ ಇಲ್ಲದಷ್ಟು ಸಾರಿ ನೋಡಿ ( ಇಂತಿ ನಿನ್ನ ಪ್ರೀತಿಯ, ಉದ್ದೇಶ ಪೂರ್ವಕವಾಗಿ ಹೆಸರಿಸಿಲ್ಲ) ಜಾಕಿಗೆ ಲಗ್ಗೆ ಹಾಕುವ ಸೂರಿ ಅಭಿಮಾನಿಗಳಿಗೆ ನಿರಾಸೆ ಖಂಡಿತಾ.
೨)ಕೆಲವೊಂದು ಪಾತ್ರಗಳು ಅಥವಾ ಸನ್ನಿವೇಶಗಳು ಸೂರಿ ಚಿತ್ರದಲ್ಲಿ( ದುನಿಯಾ, ಜಂಗ್ಲೀ, ಜಾಕಿ) ಕಾಮನ್ನು. ಉದಾಹರಣೆಗೆ
* ಹಳ್ಳಿಯಿಂದ ಕಾರಣಾಂತರಗಳಿಂದ ಬರುವ ನಾಯಕ ಸಿಟಿಯಲ್ಲಿ ಅನಿವಾರ್ಯವಾಗಿ ರೌಡಿಯಾಗುವುದು.
* ನಾಯಕಿ ಯಾವಾಗಲೂ ವೆಜಿಟೇರಿಯನ್ನು. ಆದರೆ ನಾಯಕ ಮಾತ್ರ ಪಕ್ಕಾ ನಾನ್ ವೆಜ್ಜು (ಓತಿಕೇತಾನೂ ಬಿಡಲ್ಲ, ನಾಯಿನೂ ಬಿಡಲ್ಲ)
*ಹೀರೋಯಿನ್ನು ಯಾವಗಲೂ ಅನಾಥೆ ಅಥವಾ ತಬ್ಬಲಿ.
*ಎಲ್ಲಾ ಚಿತ್ರಗಳಲ್ಲೂ ನಿಷ್ಟಾವಂತ ಖಡಕ್ ಪೋಲಿಸ್ ಅಧಿಕಾರಿಯ ಪಾತ್ರವೊಂದು ಗ್ಯಾರಂಟಿ. ಆತ ಎನ್ಕೌಂಟರ್ ಸ್ಪೆಷಲಿಸ್ಟ ಬೇರೆ. ನಾಯಕನಿಗೆ ವಿಲನ್ ಜೊತೆ ಈ ಪುಣ್ಯಾತ್ಮನ ಕಾಟ ಬೇರೆ. ಕೊನೆಯಲ್ಲಿ ನಾಯಕನ ಒಳ್ಳೇತನಕ್ಕೆ ಖಡಕ್ ಪೋಲಿಸ್ ಅಧಿಕಾರಿ ಮಾರು ಹೋಗಿ, ಕಣ್ಣೀರು ಹಾಕಿ/ ಕ್ಷಮಿಸಿ/  ಇತ್ಯಾದಿ ಇತ್ಯಾದಿ
* ಸೂರಿಗೆ  ಕೆಳ ಮಧ್ಯಮ ವರ್ಗದ ಜೀವನ ಅಂದ್ರೆ ಭಾಳ ಲವ್ವು. ಪಕ್ಕಾ ಅವರ ಮನೆಯ ಸ್ಠಿತಿಗತಿಗಳು. ಅವರ ಆಡು ಭಾಷೆ. ಅವರ ಆರ್ಥಿಕ ತೊಂದರೆಗಳು.
ಜೊತೆ ಜೊತೆಗೆ ಭೂಗತವನ್ನು ಕೂಡ ಹಸಿಹಸಿಯಾಗಿ ತೋರಿಸುವ ತವಕ. ಇದಕ್ಕೆ ಯಾವಾಗಲೂ ರಂಗಾಯಣ ರಘು ಅವರ ಡಬ್ಬಲ್ ಮೀನಿಂಗ್ ಡೈಲಾಗ್ ಒಗ್ಗರಣೆ
* ಯೋಗರಾಜ್ ಭಟ್ ಸಾಹಿತ್ಯದ ಕೆಲವು ಸ್ಯಾಂಪಲ್ಲುಗಳು(ದಯವಿಟ್ಟು ಕಣಗಾಲ್ ಪ್ರಭಾಕರ್ ಶಾಸ್ತ್ರಿ, ಹಂಸಲೇಖ, ಚಿ.ಉದಯ ಶಂಕರ್, ಮುಂತಾದವರನ್ನು ನೆನಪಿಸಿಕೊಕೊಳ್ಳಬೇಡಿ)
  ಎಡವಟ್ಟಾಯ್ತು, ತಲೆಕೆಟ್ಟೋಯ್ತು
  ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ ಹಿಡಿ ಮಣ್ಣು ನಿನ್ನ ಬಾಯೊಳಗೆ
  ಶಿವಾ ಅಂತಾ ಹೋಗುತ್ತಿದೆ ರೋಡಿನಲ್ಲಿ, ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲ್ಲಿ
  ( ಸಿರಿಗನ್ನಡಂ ಗೆಲ್ಗೆ- ಸಿರಿಗನ್ನಡಂ ಬಾಳ್ಗೆ )
 
ಇಂತಿಷ್ಟು  ಗುಣ ದೋಷಗಳೊಂದಿಗೆ ಜಾಕಿ ಒಮ್ಮೆಯಂತೂ ನೋಡಲು ಖಂಡಿತಾ ಅರ್ಹ. ಒಮ್ಮೆ ನೋಡಿಬನ್ನಿ.
ರೇಟಿಂಗುಃ ***
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

nimma hattaradavane (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/19/2010 - 18:28

ಆ ಪುನೀತನೂ, ಈ ಸೂರಿ ಮದ್ಯೆ ಸಿನಿಮಾ ನೋಡಿಬನ್ನಿ ಎಂಬ ನಿಮ್ಮ ಹಿತೋಪದೇಶ..!! ಬೇಡವೋ ಶಿವಾ... ಆ ಸಿನಿಮಾಗೆ ಕೊಡುವ ದುಡ್ಡನ್ನು ಬೇಕಾದರೆ ರಾಜ್ ಕುಮಾರ್ ಸಮಾಧಿ ಬಳಿ ಇಟ್ಟುಬನ್ನಿ  ಆದ್ರೆ, ಯಾರೂ ಆ ಸಿನಿಮಾಗೆ ಮಾತ್ರ ಹೋಗ್ ಬೇಡಿ. ಅಷ್ಟು ಕೆಟ್ಟದ್ದಾಗಿದೆ.

Nagendra Kumar K S ಮಂಗಳ, 10/19/2010 - 20:02

ಈ ಚಲನಚಿತ್ರ ನೋಡಿ ನಿಮಗೇನು ಸಿಕ್ಕಿತು ನೀವೇ ಪ್ರಶ್ನಿಸಿಕೊಳ್ಳಿ. ಚಿತ್ರ ಮಾಡಿದೋರು ಕೋಟಿಗಟ್ಟಲೆ ದುಡ್ಡು ಮಾಡಿ ಆರಾಮಾಗಿರ್ತಾರೆ. ಹೊಟ್ಟೆ ಬಟ್ಟೆ ಕಟ್ಟಿ ನೋಡೋ ಜನರಿಗೆ ಏನು ಸಿಗತ್ತೆ? ಚಲನಚಿತ್ರಗಳ ಬಗ್ಗೆ ಬರೆಯೋದು ನಿಲ್ಲಿಸಿ ಬೇರೇ ಅನೇಕ ವಿಷಯಗಳಿವೆ ನಾವು ಕಾಣದ್ದು. ನಾವು ಚಲನಚಿತ್ರದ ಬಗ್ಗೆ ಚರ್ಚೆಮಾಡಿ ನಮ್ಮ ಸಮಯ ಹಾಳುಮಾಡಿಕೋಳ್ಳೋದು ಬರೀ ವ್ಯರ್ಥ.

Lava (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/22/2010 - 15:18

ರಾಜಕುಮಾರ್ ಎಷ್ಟು ಕನ್ನಡ ಸಾಹಿತ್ಯವನ್ನು ಜನಕ್ಕೆ ಹತ್ತಿರ ತಂದಿತ್ತು ಹೋಗಿದ್ದರೋ ಅದಕ್ಕೆ ತದ್ವಿರುದ್ಧವಾಗಿ ಅವನ ಹೆಂಡತಿ ಹಾಗು ಮಕ್ಕಳು ಅತ್ಯಂತ ನೀಚ ಸಾಹಿತ್ಯ ಬಳಸಿ ಕನ್ನಡದ ಬಗ್ಗೆ ಬೇಸರ ಮೂಡಿಸುತ್ತಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ನಿಷ್ಟುರವಾಗಿ ಬರೆಯಿರಿ. ಅದು ಕನ್ನಡಕ್ಕೆ ಒಳ್ಳೆಯದು.

Dhruva ಶನಿ, 11/06/2010 - 18:01

ಮಡಿವಂತಿಕೆ ಏಕೆ ಸ್ವಾಮಿ? ಕನ್ನಡ ಚಲನಚಿತ್ರವೂ ಕೂಡ ಚರ್ಚಾ ವಿಷಯವೇ? ಹಾಗೆ ನೊಡಿದ್ರೆ ನಮ್ಮನಿಮ್ಮೆಲ್ಲರ ಲೇಖನಗಳನ್ನೋದಿ ನಮಗೇನು ಸಿಕ್ಕೀತು ನೀವೇ ಹೇಳಿ? ವಿಚಾರ ವಿನಿಮಯಗಳಷ್ಟೇ ತಾನೆ? ಕ್ಷಮಿಸಿ ಈ ಮಾತನ್ನು ಯಾರೊಬ್ಬರನ್ನು ಗುರಿಮಾಡಿ ಹೇಳುತ್ತಿಲ್ಲ. ಚರ್ಚೆಗೆ, ಮಾತಿಗೆ ಮಿತಿಯಿಲ್ಲ ಎಂದು ಹೇಳಲು ಹೊರಟಿದ್ದೇನೆ ಅಷ್ಟೇ... ಮುಂದುವರೆಸಿ ಬಾಲಚಂದ್ರ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.