Skip to main content

ಇದು ಸರಿ ಎಂಬದನ್ನು ಉತ್ತರಿಸಿ ಹೋಗು....!.

ಇಂದ ವಸಂತ್
ಬರೆದಿದ್ದುOctober 3, 2010
noಅನಿಸಿಕೆ

ಅಂದು ಹುಣ್ಣಿಮೆಯ ರಾತ್ರಿಯಲ್ಲಿ

ಮಂದವಾಗಿ ಬೆಳಕದೊರುತ್ತಿದ್ದ

ಚಂದ್ರನಮೇಲೆ ಆಣೆಮಾಡಿ !

"ನನ್ನಲ್ಲಿ ಒಂದು ಮಾತು ಹೇಳಿದ್ದೆ"

ನಿನಗೆ ನೆನಪಿದೆಯಾ ಗೆಳಿತಿ....

 

ಬಾನಲಿರುವ ಚಂದ್ರನ ಬೆಳಕಿನಂತೆ

ನಮ್ಮಿಬ್ಬರ ಹೃದಯಗಳು ಒಂದಾಗಿ....

ಮಧುಮಾಸದ ಸಂಜೆಯನ್ನು ನೆನಪಿಸುತ್ತ

ಬಾಳ ಪಯಣವನ್ನೇರಿ....

ಸ್ವಚ್ಛಂದವಾಗಿ ಸಾಗಿ ಹೋಗುವ ಎಂದು....

 

ಆದರೆ ಅದು ಹಾಗಾಗಲಿಲ್ಲ....

 

ನಿನ್ನ ಪ್ರೀತಿಸುವ ಭರದಲ್ಲಿ

ಹಗಲು ರಾತ್ರಿಗಳನ್ನು ಮರೆತಿದ್ದ ನನಗೆ.....

ನೀ ಮಾಡುವ ವಂಚನೆಯು ಸಹ ಮರೆತುಹೋಗಿತ್ತು....

ಕಾರಣ ನಮ್ಮ ಬಾಳು ಸದಾ
ಬೆಳಗುವ

ಬೆಳದಿಂಗಳಾಗುತ್ತದೆಂಬ
ಹುಚ್ಚು ಬಯಕೆ....

 

ಪಾಪ ಚಂದ್ರನನ್ನು ಬಿಡದೆ ಕಾಡುವ ಕಾರ್ಗತ್ತಲು

ನನ್ನನ್ನು ಸುಮ್ಮನೆ ಬಿಟ್ಟೀತ್ತೇ....

ಹುಣ್ಣಿಮೆಯನ್ನು ಕಾಣುವ ಹಂಬಲದಲ್ಲಿ

ಬೆಳಕನ್ನೇ ನುಂಗುವಂತ ಕತ್ತಲಿರುವುದನ್ನು ಮರೆತಿದ್ದೆ....

 

ನನ್ನ ಬಾಳಿನಲ್ಲೊಂದು ದೀಪವಾಗಿ

ಬೆಳಗಬೇಕಿದ್ದ ನೀನು....

ಅಮವಾಸ್ಯೆಯ ಕತ್ತಲಂತಾಗುವೆಯೆಂದು

ನಾನು ಕನಸ ಕಂಡಿರಲಿಲ್ಲ....

ಕನಸುಗಳೆ ಕಾಣದಿದ್ದ ನನಗೆ

ಎಲ್ಲೂವು ನೀನೆಯೆಂಬ 

ಮಾಯೆಯಲ್ಲಿ ಮುಳುಗಿಹೋಗಿದ್ದೆ....

 

ನನ್ನಲ್ಲಿದ್ದ ನಿನ್ನೆಲ್ಲವನ್ನು ತೆಗೆದುಕೊಂಡೋದೆ....

ಬೆಳಕಾಗಿದ್ದ ಬೆಳದಿಂಗಳನ್ನು ಸಹ ಬಿಡದೆ....

ಆದರೆ ನಿನಗಾಗಿ ಹಂಬಲಿಸುವ

"ಬರಡು ಹೃದಯವನ್ನು" ಮಾತ್ರ

ಯಾಕಾಗಿ ಹುಳಿಸಿಹೋದೆಯೋ ನನಗೆ ಅರ್ಥವಾಗಲಿಲ್ಲ....

 

ನೀನು ಮತ್ತೆ "ಬಾ" ಎಂದು ನಾ ಕೇಳಲಾರೆ,

ಆದರೆ ನೀ ಕೊಟ್ಟ ಮಾತನ್ನು
ಮುರಿದೆಯಲ್ಲ

ಇದು ಸರಿ ಎಂಬದಕ್ಕೆ ಉತ್ತರಿಸಿ
ಹೋಗು....!.

 

                                                    
             ವಸಂತ್ ಚಿತ್ರಕೃಪೆ.http://1.bp.blogspot.com

 

ಲೇಖಕರು

ವಸಂತ್

ವಸಂತ್

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.