Skip to main content

ನನ್ನ ಬಳಿ ಉತ್ತರವಿಲ್ಲ ..!.

ಇಂದ ವಸಂತ್
ಬರೆದಿದ್ದುSeptember 22, 2010
1ಅನಿಸಿಕೆ

ನಾ ಅಳುವ  ಕಣ್ಣೀರಿಗೆ ನಿನ್ನ ಬಳಿ ಉತ್ತರವಿಲ್ಲ,ನಿನ್ನ ನಂಬಿದ ತಪ್ಪಿಗೆನಾ ಕಣ್ಣೀರಾಗಿ ಹೋದೆನಲ್ಲ,ನನಗೆ ಮಾಡಿದ ದ್ರೋಹಮತ್ಯಾರ ಬದುಕಲ್ಲು ಮಾಡದಿರು. ನಿನ್ನ ಯವ್ವನ ಕ್ಷಣಿಕ ಮಾತ್ರಅದು ಒಮ್ಮಗೆ ಮೇಣದಂತೆ ಉರಿದು ಹೋಗಬಲ್ಲದು, ನಂಬಿಕೆಗೆ ಬಹುದೊಡ್ಡ ಸ್ಥಾನವಿದೆಆ ನಂಬಿಕೆಯನ್ನುಆಸೆಯನ್ನಾಗಿಸಿ ಮಾರಿಬಿಟ್ಟೆಯಲ್ಲ. ನಿನ್ನ ಬರುವಿಕೆಗಾಗಿ ನಾ ಪ್ರತಿದಿನವು ಕಾಯುತ್ತಿದ್ದೆ ,ನಮ್ಮ ಮುಂದಿನ ಬದುಕನ್ನು ಕಟ್ಟಲುಕನಸುಗಳ ಬೆಳೆಯುತ್ತಿದ್ದೆ,ನೀ ಮಾಯೆಯೆಂದು ನನಗೆ ತಿಳಿದಿರಲಿಲ್ಲ !.ತಿಳಿಯುವ ಮುಂಚೆಯೆ ನೀ ಮಾಯೆಯಾಗಿ ಹೋಗಿಬಿಟ್ಟೆಯಲ್ಲ. ಈಗಲು ನಿನ್ನ ಮೇಲಿನ ಪ್ರೀತಿ ಸ್ವಲ್ಪವು ಕರಗಿಲ್ಲ,ನೀನೊಪ್ಪಿ ಬಂದರೂನಾ ಒಪ್ಪಲು ಸಾಧ್ಯವಿಲ್ಲ, ನಿನ್ನ ದಾರಿಗೆ ನೀನೆ ಒಡತಿಯಾಗಿರುವೆ ನೀ ಕೇಳುವ ಕ್ಷಮೆಗೆ ನನ್ನ ಬಳಿ ಉತ್ತರವಿಲ್ಲ.                                                       ವಸಂತ್ಚಿತ್ರಕೃಪೆ. http://i59.photobucket.com

ಲೇಖಕರು

ವಸಂತ್

ವಸಂತ್

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಅನಿಸಿಕೆಗಳು

VAIJUNATH ಸೋಮ, 10/04/2010 - 18:14

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.