ಮದುವೆಗೆ ಸಲಹೆ ಬೇಕು ಸಾರ್ .!!
ಹಾಯ್ ರಾಜೇಶ್ ಸಾರ್ & ಪ್ರೀತಿಯ ವಿಸ್ಮಯ ಸ್ನೇಹಿತರೇ.
ತುಂಬಾ ದಿನಗಳ ನಂತರ ವಿಸ್ಮಯದಲ್ಲಿ ಬರೆಯುತ್ತಿರುವುದಕ್ಕೆ ವಿಷಾದದಿಂದ ಕೂಡಿದ ಸಂತೋಷ ನನ್ನಲ್ಲಾಗುತ್ತಿದೆ, ಅದೂ ನನ್ನ ಮದುವೆಗೆ ನಿಮ್ಮ ಸಲಹೆ ಕೇಳಲು..!!
ವಿಸ್ಮಯವನ್ನು ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ದಯವಿಟ್ಟು ನೀವೆಲ್ಲರೂ ನನ್ನ ಕ್ಷಮಿಸಬೇಕು. ನನಗೆ ಇದಕ್ಕಿಂತ ಬೇರೆ ಯಾವುದೇ ದಾರಿ ಹೊಳೆಯಲಿಲ್ಲವಾದ್ದರಿಂದ ಇಲ್ಲಿ ನನ್ನ ಮನದ ಇಂಗಿತವನ್ನು ದಾಖಲಿಸುವುದು ಅನಿವಾರ್ಯವಾಯಿತು. ತಾವುಗಳು ಖಂಡಿತವಾಗಿ ನನಗೆ ಸಲಹೆ ಮತ್ತು ಸಹಕಾರ ಕೊಡುವಿರೆಂಬ ನಿರೀಕ್ಷೆಯಲ್ಲಿದ್ದೇನೆ.
ವಿಷಯ ಏನಪ್ಪಾ ಅಂದ್ರೆ.!!
ನಾನು ದಿನಾಂಕ ೧೦.೧೨.೨೦೧೦ ರಂದು ಶೋಭಾ ಎಂಬ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ವಿವಾಹವಾಗುತ್ತಿದ್ದೇನೆ. ಈ ಸಂದರ್ಭ ನನ್ನ ಜೀವನದಲ್ಲಿ, ಬರೀ ಮದುವೆ ಎಂಬ ಕಾರಣಕ್ಕಲ್ಲದೇ ಇನ್ನೂ ಹಲವಾರು ಕಾರಣಗಳಿಗೆ ಚಿರಸ್ಮರಣೀಯವಾಗಬೇಕೆಂಬುದು ಹತ್ತನೇ ತರಗತಿಯಿಂದ ನನ್ನ ಒಂದು ಅಂಶದ ಕಾರ್ಯಕ್ರಮವಾಗಿಹೋಗಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಕೊನೆಗೂ ನಮ್ಮ ಮನೆಯವರು ನಾನು ವಯಸ್ಸಿಗೆ ಬಂದಿರುವುದನ್ನು ಗಮನಿಸಿ ಮದುವೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಆದ್ದರಿಂದಲೇ ಈ ಕೆಳಕಂಡ ಚಿರಸ್ಮರಣೀಯ(ನನಗೆ) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಚಿಸುತ್ತಿದ್ದೇನೆ.
೧. ಪುಸ್ತಕ ಪ್ರೀತಿ ಮೂಡಿಸಲು- ಮದುವೆಗೆ ಬರುವ ಪ್ರತಿಯೊಬ್ಬರಿಗೂ ಪುಸ್ತಕ ವಿತರಣೆ.(ತಾಂಬೂಲದ ಬದಲು).
೨. ಪರಿಸರ ಪ್ರೇಮ ಮೂಡಿಸಲು- ಪ್ರತಿಯೊಬ್ಬರಿಗೂ ಸಸಿ ವಿತರಣೆ.
೩. ರಕ್ತದಾನದ ಬಗ್ಗೆ ಅರಿವು ಮೂಡಿಸಲು-ರಕ್ತದಾನ ಶಿಬಿರ.
೪. ಆರ್ಕೇಷ್ಟ್ರಾದ ಬದಲು ನಮ್ಮ ಡೊಳ್ಳು ಕುಣಿತ ಮತ್ತು ವೀರಗಾಸೆ ನೃತ್ಯ.
ಮೊದಲಾದವುಗಳನ್ನು ಕೋಲಾರದ ಪೂಜಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ಯೋಚಿಸುತ್ತಿದ್ದೇನೆ.
ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯರವರನ್ನು ಆಹ್ವಾನಿಸುವುದು.
ರಕ್ತದಾನ ಶಿಬಿರಕ್ಕೆ ಕಸಾಪದ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ರವರನ್ನು ಆಹ್ವಾನಿಸುವುದು.
ಸಸಿ ವಿತರಣಾ ಕಾರ್ಯಕ್ರಮಕ್ಕೆ ಹಿರಿಯ ನಟ ಎಸ್. ಶಿವರಾಮ್ ರವರನ್ನು ಆಹ್ವಾನಿಸುವುದು ಎಂಬ ಯೋಚನೆಯಲ್ಲಿದ್ದೇನೆ.
ಸ್ನೇಹಿತರೇ.. ನಾನು ಮತ್ತು ನನ್ನ ಯೋಚನೆ ಎಷ್ಟು ಸರಿ ಎಂಬುದು ನನಗೆ ತಿಳಿಯದು. ಈ ಯೋಚನೆ ನನಗೆ ಹತ್ತನೇ ತರಗತಿಯಲ್ಲಿದ್ದಾಗಲೇ ಬಂದಿತ್ತೆಂದರೆ ನೀವು ನಂಬಲೇಬೇಕು. ಈ ಕನಸಿನ ಗರ್ಭಕ್ಕೆ ಈಗ ಹೆರಿಗೆ ಸಮಯಬಂದಿದೆ. ಆದ್ದರಿಂದ ದಯವಿಟ್ಟು ನನ್ನ ಯೋಚನೆ ಎಷ್ಟರಮಟ್ಟಿಗೆ ಸರಿ, ಹಾಗೇ ಇದರ ಸಾಧಕ, ಬಾಧಕಗಳ ಬಗ್ಗೆ ದಯವಿಟ್ಟು ನನಗೆ ತಿಳಿಸಿಕೊಡಿ.
ಯಾವುದೇ ರೀತಿಯ ಸಲಹೆಗಳಾದರೂ ಪರವಾಗಿಲ್ಲ ಮುಜುಗರವಿಲ್ಲದೇ ಹೇಳಿ. ಹಾಗೂ ಈ ಮದುವೆಗೆ ನಿಮ್ಮೆಲ್ಲರ ಸಹಕಾರ ನನಗೆ ತುಂಬಾ ಇರುವುದರಿಂದ ದಯವಿಟ್ಟು ಕೈಜೋಡಿಸಬೇಕೆಂದು ವಿನಂತಿ.
ನಿಮ್ಮವ.
ವಿ.ಎಂ.ಶ್ರೀನಿವಾಸ.
ಸಾಲುಗಳು
- Add new comment
- 6191 views
ಅನಿಸಿಕೆಗಳು
Re: ಮದುವೆಗೆ ಸಲಹೆ ಬೇಕು ಸಾರ್ .!!
ಹಾಯ್ ಶ್ರೀನಿವಾಸ್ ಅವರೇ,
ನಿಮ್ಮ ಪಟ್ಟಿಯಲ್ಲಿ ನನಗೆ ಇಷ್ಟವಾದ ಕಾರ್ಯಕ್ರಮ ಎಂದರೆ ನಮ್ಮ ಮಣ್ಣಿನ ನೃತ್ಯ. ಪುಸ್ತಕ ಅದನ್ನು ಓದುವ ಮತ್ತು ಸಸಿಯನ್ನು ಆರೈಕೆ ಮಾಡುವವರ ಕೈಗೆ ಕೊಡುವದು ಉತ್ತಮ.
ಮೊದಲು ನಿಮಗೆ ಹಾರ್ದಿಕ ಅಭಿನಂದನೆಗಳು. ಅಂತೂ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದೀರಾ.
ಅಷ್ಟು ವರ್ಷದಿಂದ ಕನಸು ಕಾಣುತ್ತಿದ್ದೇನೆ ಅನ್ನುತ್ತಿದ್ದೀರಾ ಇನ್ನು ಸಾಧಕ ಬಾಧಕದ ವಿಚಾರ ಯಾಕೆ. ಕನಸನ್ನು ಕಾರ್ಯರೂಪಕ್ಕೆ ತನ್ನಿ. :)
ಎಲ್ಲವೂ ಶುಭವಾಗಲಿ.
Re: ಮದುವೆಗೆ ಸಲಹೆ ಬೇಕು ಸಾರ್ .!!
ನಿಮ್ಮ ಸಲಹೆ ಮತ್ತು ಅಭಿನಂದನೆಗಳಿಗೆ ಧನ್ಯವಾದಗಳು. ರಾಜೇಶ್ ಸಾರ್.
ನನಗೆ ಈ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರೋಕೆ ಭಯವಿಲ್ಲ ಬದಲಾಗಿ ಆಯೋಸಿವುದರ ಬಗ್ಗೆಯೇ ಸ್ವಲ್ಪ ಭಯ ಅದಕ್ಕೇ ಸಲಹೆ ಕೇಳಿದ್ದು .ಆದ್ರೆ ನನ್ನ ಲೇಖನದ ಉದ್ದೇಶ ತಪ್ಪಾಗಿ ಬಿಂಬಿತವಾಗಿದೆ ಅಥವಾ ನಾನೇ ತಪ್ಪಾಗಿ ಅಕ್ಷರಿಸಿದ್ದೇನೆ.
ಮದುವೆಗೆ ಕರೀತೀನಿ ದಂಪತಿಗಳು ತಪ್ಪದೇ ಬರಬೇಕು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಶ್ರೀನಿವಾಸ್ ಸರ್ ಮೊದಲಿಗೆ ನಿಮಗೆ ನನ್ನ ಹಾರ್ದಿಕ ಅಭಿನಂದನೆಗಳು, ಹಾಗು ನಿಮ್ಮ ವೈವಾಹಿಕ ದಾಂಪತ್ಯ ಜೀವನ ಸುಖಮಯವಾಗಿರಲೆಂದು ಹಾರೈಸುತ್ತೇನೆ. ನೀವು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನಿಮ್ಮ ವಿವಾಹದ ದಿನವನ್ನು ಖಂಡಿತಾ ಸದಾನೆನಪಿನಲ್ಲಿಡುವಂತೆ ಮಾಡುವುದರಲ್ಲಿ ಸಂಶಯವಿಲ್ಲ ಎನ್ನುವುದು ನನ್ನ ಭಾವನೆ, ಹಾಗಾಗಿ ನಿಮ್ಮ ಕನಸನ್ನು ನನಸುಮಾಡಿಕೊಳ್ಳುವುದರಲ್ಲಿ ಸಾರ್ಥಕತೆ ಇದೆಯೆನಿಸುತ್ತದೆ. :) ;)
Re: ಮದುವೆಗೆ ಸಲಹೆ ಬೇಕು ಸಾರ್ .!!
ಶ್ರೀನಿವಾಸ್ ಸರ್ ಮೊದಲಿಗೆ ನಿಮಗೆ ನನ್ನ ಹಾರ್ದಿಕ ಅಭಿನಂದನೆಗಳು, ಹಾಗು ನಿಮ್ಮ ವೈವಾಹಿಕ ದಾಂಪತ್ಯ ಜೀವನ ಸುಖಮಯವಾಗಿರಲೆಂದು ಹಾರೈಸುತ್ತೇನೆ. ನೀವು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನಿಮ್ಮ ವಿವಾಹದ ದಿನವನ್ನು ಖಂಡಿತಾ ಸದಾನೆನಪಿನಲ್ಲಿಡುವಂತೆ ಮಾಡುವುದರಲ್ಲಿ ಸಂಶಯವಿಲ್ಲ ಎನ್ನುವುದು ನನ್ನ ಭಾವನೆ, ಹಾಗಾಗಿ ನಿಮ್ಮ ಕನಸನ್ನು ನನಸುಮಾಡಿಕೊಳ್ಳುವುದರಲ್ಲಿ ಸಾರ್ಥಕತೆ ಇದೆಯೆನಿಸುತ್ತದೆ. :) ;)
Re: ಮದುವೆಗೆ ಸಲಹೆ ಬೇಕು ಸಾರ್ .!!
ತುಂಬಾ ಧನ್ಯವಾದಗಳು ಉಮಾಶಂಕರ್ ಸಾರ್.
ಖಂಡಿತವಾಗಿ ನೀವು ಹೇಳಿದ ಹಾಗೆಯೇ ನನ್ನ ಮದುವೆದಿನ ಸದಾ ನೆನಪಿನಲ್ಲಿರಬೇಕು. ಮದುವೆಯೆಂಬ ಕಾರಣಕ್ಕಲ್ಲದೇ ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳಿಗೋಸ್ಕರವಾದರೂ ಈ ದಿನ ನೆನಪಿನಲ್ಲಿರಬೇಕು ಎಂಬುದೇ ನನ್ನ ಉದ್ದೇಶ ಕೂಡ. ನೀವೂ ಅದನ್ನೇ ಹೇಳಿದಿರಿ ತುಂಬಾ ಧನ್ಯವಾದಗಳು.
ಮದುವೆಗೆ ಕರೀತಿನಿ ತಪ್ಪದೇ ಬರಬೇಕು ಸಾರ್.
Re: ಮದುವೆಗೆ ಸಲಹೆ ಬೇಕು ಸಾರ್ .!!
ಒಂದು ರೀತಿಯಲ್ಲಿ ನೋಡಿದರೆ ಇದು ಸರಳ ಮದುವೆಯ ಹೆಸರಿನಲ್ಲಿ ನಡೆಯುವ, ಪಡೆದುಕೊಳ್ಳುವ ಪ್ರಚಾರದ ಮದುವೆ. ಆದರೂ ಆ ಪ್ರಚಾರದಲ್ಲಾದರೂ ಒಂದು ಸಂದೇಶ ರವಾನೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ಮರದಡಿಯಲ್ಲಿ ಮಂಗಳೂರಿನ ವಕೀಲ ಉಳೇಪಾಡಿ ಎಂಬವರು ಮದುವೆಯಾಗಿದ್ದರು.
ನಿಮ್ಮ ವಿಚಾರವನ್ನೇ ನನ್ನ ದೃಷ್ಟಿಕೋನದಲ್ಲಿ ಹೇಳುವುದಾದರೆ ಪುಸ್ತಕ ಮತ್ತು ಸಸಿ ವಿತರಣೆಗಿಂತ ರಕ್ತದಾನ ಶಿಬಿರ ಹೆಚ್ಚು ಫಲಪ್ರದ. ಆರ್ಕೆಷ್ಟ್ರಾದ ಬದಲು ಏರ್ಪಡಿಸುವ ಡೊಳ್ಳು ಕುಣಿತ ಮತ್ತು ವೀರಗಾಸೆಯೂ ಉತ್ತಮವಾದದ್ದೆ.
ಪುಸ್ತಕ ಪ್ರೀತಿ ಮೂಡಿಸಲು ಉಚಿತ ಪುಸ್ತಕ ವಿತರಣೆ ಸಹಾಯವಾಗಬಹುದು ಎಂದು ನನಗನ್ನಿಸುತ್ತಿಲ್ಲ.
ಇದೆಲ್ಲಕ್ಕಿಂತ ನೀವೊಂದು ಸರಳ ಮದುವೆಯನ್ನು ಮಾಡಿಕೊಂಡರೆ, ಅದ್ಧೂರಿತನವಿಲ್ಲದೆ ಮದುವೆಯಾದರೆ ಸಮಾಜಕ್ಕೊಂದು ಮಾದರಿಯಾಗಬಹುದು, ಏನಂತೀರಿ?
(ನಾನು ಮಾಡಿರುವುದು ಟೀಕೆ ಎಂದು ಪರಿಗಣಿಸಬೇಕಾಗಿಲ್ಲ)
Re: ಮದುವೆಗೆ ಸಲಹೆ ಬೇಕು ಸಾರ್ .!!
ನಿಮ್ಮ ಸಲಹೆಗೆ ಧನ್ಯವಾದಗಳು ಭುವನ ಮೇಡಂ.
ಇದು ಖಂಡಿತ ಪ್ರಚಾರದ ಮದುವೆಯಲ್ಲ. ನೀವು ಹೇಳಿದ ಹಾಗೆ ಸಮಾಜಕ್ಕೆ ಸಂದೇಶಕೊಡುವಂತಹ ಮದುವೆ. ನನ್ನ ಮದುವೆಗೆ ಯಾವುದೇ ಮಾಧ್ಯಮದವರನ್ನು ಆಹ್ವಾನಿಸಲ್ಲ, ಆದ್ದರಿಂದ ಪ್ರಚಾರವೂ ಸಿಗುವುದಿಲ್ಲ. ಖಂಡಿತವಾಗಿ ನಾನು ಸರಳ ಮದುವೆಯನ್ನೇ ಆಗುತ್ತಿರುವುದು ನಿಮಗೆ ಿನ್ನೂ ಅನುಮಾನವಿದ್ದರೆ, ಅದು ಮದುವೆ ದಿನ ನೀವು ಬಂದಾಗ ಪರಿಹಾರವಾಗಲಿದೆ.
ಮದುವೆಗೆ ಕರೀತೀನಿ ತಪ್ಪದೇ ಬನ್ನಿ.
Re: ಮದುವೆಗೆ ಸಲಹೆ ಬೇಕು ಸಾರ್ .!!
ಕ್ಷಮಿಸಿ ಸರ್, ಒಂದು ಸಣ್ಣ ಕರೆಕ್ಷನ್. ನಾನು ಮೇಡಂ ಅಲ್ಲ. ಮಿಸ್ಟರ್. ನನ್ನ ಪೂರ್ತಿ ಹೆಸರು ಭುವನ್ ಪುದುವೆಟ್ಟು. ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿ.
Re: ಮದುವೆಗೆ ಸಲಹೆ ಬೇಕು ಸಾರ್ .!!
ಶ್ರಿನಿವಾಸ್ರವರೆ ನಿಮ್ಮ ಮದವೆ ಸಂಭ್ರಮದ ೪ ಅಂಶಗಳನ್ನು ಅದರಲ್ಲಿ, ಮೂರನೆ ಅಂಶ ನನಗೆ ಸರಿ ಎನಿಸಲಿಲ್ಲ. ವಿಶ್ವದ ಜನ ಸಂಖ್ಯೆ ಮಿತಿಮೀರಿ ಸ್ಫೋಟಕವಾಗಿ ಬೆಳೆಯುತ್ತಿದೆ. ೧೯೪೭ ರಲ್ಲಿ ಇದ್ದ ಭಾರತದ ಜನಸಂಖ್ಯೆ ೨೩ ಕೋಟಿ, ಈಗ ಅದು ೧೨೩ ಕೋಟಿ. ರಕ್ತದಾನ, ಮೂತ್ರಪಿಂಡದಾನ, ಪಿತ್ತಜನಾಂಗದಾನ ಇತ್ಯಾದಿ ಯಾಕೆ? ಇದರ ಬದಲು ಅಂದರೆ ನಿಮ್ಮ ೩ ಅಂಶಕ್ಕೆ ಪರ್ಯಾಯವಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಲೇಖನಗಳನ್ನು ಹಂಚಿ. ನಾನು ಹೇಳುತ್ತಿರುವುದು ಬಹು ಮಂದಿಗೆ ಅಪತ್ಯ ಅನಿಸಬಹುದು, ಆದರೆ ಮುಂದಿನ ಪೀಳಿಗೆಯವರಿಗೆ ಬಿಟ್ಟು ಹೋಗುತ್ತಿರುವುದು ಏನನ್ನು? ರಕ್ತದಾನ, ಮೂತ್ರಪಿಂಡದಾನ, ಪಿತ್ತಜನಾಂಗದಾನ ಇತ್ಯಾದಿಗಳನ್ನಲ್ಲ. ಮುಂದಿನ ಪೀಳಿಗೆ ಬದುಕುಳಿಯಬೇಕಾದ ನಿಸರ್ಗವನ್ನು ಹಾಗೂ ಪ್ರಕೃತಿಯನ್ನು- ನಿಮಗೆ ನಿಮ್ಮ ವಿವಾಹದ ಶುಭಾshaayaಗಳು. ನನ್ನ ಅನಿಸಿಕೆ ಅಪತ್ಯವೆನಿಸಿದರೆ ಮನ್ನಿಸಿ.
Re: ಮದುವೆಗೆ ಸಲಹೆ ಬೇಕು ಸಾರ್ .!!
ನಿಮ್ಮ ಸಲಹೆಗೆ ಧನ್ಯವಾದಗಳು ಬಸವರಾಜ್ ಸಾರ್.
ರಕ್ತದಾನದ ಬಗ್ಗೆ ನಿಮ್ಮ ಆಕ್ಷೇಪಕ್ಕೆ ನಾನು ಉತ್ತರಿಸಲಾರೆ. ಆದ್ರೆ ನನಗೆ ಅದು ಹೇಗೆ ಪ್ರಸ್ತುತ ಎಂದರೆ, ಯಾವುದೋ ಒಂದು ಪರಿಸ್ಥಿತಿಯಲ್ಲಿ ನಾನು ರಕ್ತಕ್ಕೋಸ್ಕರ ತುಂಬಾ ಕಷ್ಟಪಟ್ಟಿದ್ದೇನೆ. ಏನೇನೋ ಪ್ರಯತ್ನಗಳು, ಆಮಿಷಗಳು ಫಲಕಾರಿಯಾಗದೇ ಪಡಬಾರದಪಾಡು ಪಟ್ಟಿದ್ದೇನೆ. ಈ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾರಣಕ್ಕೆ ಸುಮಾರು 6 ವರ್ಷಗಳಿಂದ ವರ್ಷಕ್ಕೆ 3 ಸಲ ತಪ್ಪದೇ ರಕ್ತದಾನ ಮಾಡುತ್ತೇನೆ, ಮತ್ತು ಈ ಬಗ್ಗೆ ನನ್ನ ಸುತ್ತಲಿನ ಪ್ರಪಂಚಕ್ಕೆ ಅರಿವು ಮೂಡಿಸುವಲ್ಲಿ ಯಶಶ್ವಿಯಾಗಿದ್ದೇನೆ. ಈಗ ನನ್ನ ವ್ಯಾಪ್ತಿಯಲ್ಲಿ ಯಾರಿಗೇ ರಕ್ತ ಬೇಕಾದರೂ ಮೊದಲು ಸಂಪರ್ಕಿಸುವುದು ನನ್ನನ್ನೇ ಎಂದರೆ ನೀವು ನಂಬಲೇಬೇಕು. ತಿಂಗಳಿಗೆ ಕನಿಷ್ಠ ಇಬ್ಬರಾದರೂ ನನ್ನನ್ನು ರಕ್ತಕ್ಕೋಸ್ಕರ ಸಂಪರ್ಕಿಸುತ್ತಾರೆ ಮತ್ತು ನನ್ನಿಂದ ಖಂಡಿತ ಪಡೆಯುತ್ತಾರೆ. ಇಂತಹ ನಾನು ರಕ್ತದಾನ ಮಾಡಲೇಬೇಕು ಅಂತ ನಿರ್ಧರಿಸಿದ್ದೇನೆ ನಿಮಗೆ ನೋವಾಗಿದ್ದರೆ ಕ್ಷಮಿಸಿ ಆದ್ರೆ ನನ್ನ ಪ್ರೋತ್ಸಾಹಿಸಿ.
ಜನಸಂಖ್ಯೆ ನಿಯಂತ್ರಣದ ಬಗ್ಗೆ ನಿಮ್ಮ ಸಲಹೆ ಸೂಕ್ತವಾಗಿದೆ, ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ.
ತಪ್ಪದೇ ಮದುವೆಗೆ ಬನ್ನಿ ಸಾರ್.ಆಹ್ವಾನ ಪತ್ರಿಕೆ ಮರೆಯದೇ ನೀಡುತ್ತೇನೆ.
Re: ಮದುವೆಗೆ ಸಲಹೆ ಬೇಕು ಸಾರ್ .!!
ಶ್ರೀನಿವಾಸ್ ರವರೇ ನಿಮಗೆ ಶುಭಾಷಯಗಳು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಧನ್ಯವಾದಗಳು ನಾಗೇಂದ್ರ ಸಾರ್, ಆದ್ರೆ ತಪ್ಪದೇ ಮದುವೆಗೆ ಬರಬೇಕು. ನಾನಂತೂ ತಪ್ಪದೇ ಕರೀತೀನಿ.
Re: ಮದುವೆಗೆ ಸಲಹೆ ಬೇಕು ಸಾರ್ .!!
ಸುಮ್ನೇ ಒಂದು ಕತೆ...
ಒಂದ್ಸರ್ತಿ ಒಂದೂರಿಂದ ಅಪ್ಪ ಮಗ ಇಬ್ರೂ ಒಂದು ಕುದ್ರೆ ಮರಿ ಕೊಂಡ್ಕೊಳ್ಳೋಣ ಅಂತಾ ಪೇಟೆಗೆ ಬರ್ತಾರೆ. ಒಂದೊಳ್ಳೆ ಕುದ್ರೆ ಮರಿ ಖರೀದಿ ಮಾಡ್ಕಂಡು ಅಪ್ಪ ಮಗನ್ನ ಅದರ ಮೇಲೆ ಕೂರಿಸ್ಕೊಂಡು ನಡೆಸಿಕೊಂಡು ವಾಪಸ್ಸು ಊರಿಗೆ ಹೋಗ್ತಾ ಇರ್ತಾನೆ. ನಡುದಾರಿಯಲ್ಲಿ ಸಿಕ್ಕ ಮೊದಲ್ನೇ ಊರೋವ್ರು ಇವ್ರಿಬ್ರನ್ನ ನೋಡಿ ಆಡ್ಕೋತಾರೆ 'ಏನ್ ಗಡವನಂತಾ ಮಗಾ ನೋಡು, ವಯಸ್ಸಾಗಿರೋ ಅಪ್ಪನ್ನ ನಡೆಸ್ಕೊಂಡು ತಾನು ಜಮ್ಮಂತಾ ಕುದ್ರೆ ಸವಾರಿ ಮಾಡ್ಕಂಡ್ ಬರ್ತಾ ಅವ್ನೆ" ಜನರ ಮಾತುಕೇಳಿ ನಾಚಿಕೆಯಿಂದ ಮಗ ಕುದ್ರೆ ಇಳ್ದು ಅಪ್ಪನ್ನ ಕೂರಿಸ್ಕಂಡು ಮುಂದೆ ಹೋಗ್ತಾನೆ. ಮುಂದಿನೂರಲ್ಲಿ ಇವ್ರುನ್ನ ನೋಡಿದ ಜನ, "ಯಪ್ಪಾ, ಈ ಉರಿ ಬಿಸಿಲ್ನಾಗೆ ಆ ಎಳೇ ಮಗೀನ್ ನಡೆಸ್ಕಂಡು ತಾನ್ ಮಾತ್ರ ಜಮ್ಮಂತಾ ಕುದ್ರೆ ಸವಾರಿ ಮಾಡ್ಕಂಡ್ ಬರ್ತಾ ಅವ್ನೆ, ಅದ್ಕೇ ಮಕ್ಳೀಗ್ ತಾಯಿ ಇರ್ಬೇಕು ಅನ್ನೋದು" ಅಂದ್ರು. ಅಪ್ಪನಿಗೆ ನಾಚಿಕೆಯಾಗಿ ನೀನೂ ಕೂತ್ಕೋ ಬಾ ಮಗ ಅಂತಾ ಮಗನನ್ನೂ ಕೂರಿಸ್ಕೊಂಡು ಮುಂದುವರೆದ್ರು. ನಂತರದ ಹಳ್ಳೀಲಿ ಜನ ಇವ್ರುನ್ನ ನೋಡಿ "ಅಯ್ಯೋ ಇವ್ರ್! ಇಂತಾ ಕುದ್ರೆ ಮರೀ ಮೇಲೇ ಇಬ್ರೂ ಸವಾರಿ ಮಾಡ್ತವ್ರಲ್ಲ, ಮನುಷ್ಯ್ರೋ,
ರಾಕ್ಷಸ್ರೋ" ಅಂತಾ ಬೈದ್ರು. ಅಪ್ಪ ಮಗ ಇಬ್ರೂ ಕುದುರೆ ಇಳಿದು ನಡ್ಕೊಂಡ್ ಮುಂದಿನ್ ಹಳ್ಳಿಗ್ ಬಂದ್ರು.
ಅಲ್ಲೀ ಜನ ಇವ್ರನ್ನ ನೋಡಿ, "ಏನು ಮಡ್ಡೀ ಅಪ್ಪಾ ಮಕ್ಕಳ ಜೋಡಿಯಪ್ಪಾ... ಇಂತಾ ಚಂದುಳ್ಳಿ ಕುದುರೆ ಇದ್ದೂ ಈ ಉರಿಬಿಸಿಲ್ನಾಗೆ ನಡ್ಕಂಡೇ ಹೊಂಟವ್ರೇ" ಅಂತಾ ನಕ್ಕರು...
ಬೇರೆಯವರಿಗೆ ತೊಂದರೆಯಾಗದಿದ್ರೆ, ನಿಮಗೆ ಸರೀ ಅನ್ಸಿದ್ದನ್ನ ಮಾಡೋಕೆ ಸಲಹೆ, ಪ್ರಚಾರ ಯಾಕ್ಬೇಕು ಸಾರ್?!
Re: ಮದುವೆಗೆ ಸಲಹೆ ಬೇಕು ಸಾರ್ .!!
ನಿಮ್ಮ ಸಲಹೆಗೆ ಧನ್ಯವಾದಗಳು ಸಾರ್ .
ನಾನು ಸಲಹೆ ಕೇಳಿದ್ದು, ರಕ್ತದಾನ, ಸಸಿ ವಿತರಣೆ, ಪುಸ್ತಕವಿತರಣೆಗೆ ಸಂಬಂಧಿಸಿದಂತೆಯೇ ಹೊರತು ಮಾಡಬೇಕೋ ಬೇಡವೋ ಎಂಬುದಕ್ಕಲ್ಲ. ನಿಮ್ಮಲ್ಲಿ ಯಾರಿಗಾದರೂ ಈ ಕುರಿತಾಗಿ ಏನಾದರೂ ಅನುಭವಗಳಾಗಿದ್ದರೆ ಅಥವಾ ಅವುಗಳನ್ನುಆಯೋಜಿಸುವಾಗ ಆಗುವ ತೊಂದರೆಗಳ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಅಂತ. ಉದಾಹರಣೆಗೆ ಪುಸ್ತಕ ವಿತರಣೆಗೆ ಸಂಬಂಧಿಸಿದಂತೆ, ಯಾವ ಪುಸ್ತಕ ವಿತರಿಸಿದರೆ ಸೂಕ್ತ ಎನ್ನುವಂತಹುದ್ದು, ರಕ್ತದಾನ ಶಿಬಿರವನ್ನು ಯಾವ ಸಂಸ್ಥೆಯವರು ಸರಿಯಾಗಿ ನಿರ್ವಹಿಸುತ್ತಾರೆ, ಯಾವ ಸಸಿ ವಿತರಣೆ ಸೂಕ್ತ , ಹಾಗೂ ಡೊಳ್ಳುಕುಣಿತಕ್ಕಿಂತ ಉತ್ತಮವಾದದ್ದು ಏನಾದರೂ ಇದೆಯಾ ಎನ್ನುವಂತಹುದ್ದು. ನನ್ನ ಜೀವನದಲ್ಲಿ ಮತ್ತೆಂದೂ ನಡೆಯದ ಈ ಒಂದು ವಿವಾಹ ಕಾರ್ಯಕ್ರಮ, ಕೇವಲ ಮದುವೆಯಾದೆ ಎಂಬ ಕಾರಣಕ್ಕಲ್ಲದೇ, ಕೆಲವು ಅರ್ಥಪೂರ್ಣ ಕಾರ್ಯಕ್ರಮಗಳಿಂದ ನನ್ನ ಜೀವನದಲ್ಲಿ ಚಿರಸ್ಥಾಯಿಯಾಗಿ ಉಳಿದಹೋಗಲಿ ಎಂಬ ಸಣ್ಣ ಸ್ವಾರ್ಥದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆಯೋ ಹೊರತು ಪ್ರಚಾರಕ್ಕೋಸ್ಕರ ಅಂತಲ್ಲ.
ಕೇವಲ ಪ್ರಚಾರ ಪ್ರಿಯರನ್ನು ನೋಡಿ ನೋಡಿ ನಿಮಗೆ ಹಾಗನ್ನಿಸಿರಬಹುದು, ಆದ್ರೆ ನಾನು ಆ ತರದ ವ್ಯಕ್ತಿಯಲ್ಲ. I promise u ನನ್ನ ಮದುವೆಗೆ ಯಾವುದೇ ಮಾಧ್ಯಮದವರಿಗೂ ಆಹ್ವಾನ ಕೊಡಲ್ಲ.
ಮದುವೆಗೆ ಕರೀತೀನಿ ತಪ್ಪದೇ ಬರಬೇಕು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಇಷ್ಟೆಲ್ಲಾ ಮಾಡ್ತೀರಿ ಅಂದ್ಮೇಲೆ "ವರದಕ್ಷಿಣೆ" ತುಂಬಾ ತಗೊಂಡಿರಬೇಕು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಹೌದು ಹುಡುಗಿಯನ್ನು ವರನಿಗೆ ದಕ್ಷಿಣೆಯಾಗಿ ಕೊಡುತ್ತಿದ್ದಾರೆ, ಅವಳಿಗಿಂತ ಬೆಲೆಬಾಳುವ ದಕ್ಷಿಣೆ ನನಗೆ ಯಾರೂ ಕೊಡಲಾರರು ಎಂಬುದು ನನ್ನ ಭಾವನೆ.
Re: ಮದುವೆಗೆ ಸಲಹೆ ಬೇಕು ಸಾರ್ .!!
ನನಗೆ ಇದು ಮದುವೆ ತರ ಕಾಣಿಸ್ತ ಇಲ್ಲ, ಬದಲಾಗಿ ಇದು ಜಾತ್ರೆ ತರ ಇದೆ. ಆದರೂ ಸರಿ ನಿಮ್ಮ ಮದುವೆಯನ್ನು ಬ೦ದ ಪ್ರತಿಯೊಬ್ಬ ಮನುಶ್ಯನು ಮರೆಯಬಾರದು. ಆ ರೀತಿ ನೆನಪಿಟ್ಟುಕೊಳ್ಳುವ೦ತೆ ಮಾಡ್ತ ಇದ್ದೀರ. best of luck sir happy married life in advaancely........
Re: ಮದುವೆಗೆ ಸಲಹೆ ಬೇಕು ಸಾರ್ .!!
ನಿಮ್ಮ ಮದುವೆ ನಿಮ್ಮ ಇಷ್ಟ. ಅದಕ್ಕೆ ಮೂರನೆಯವರ ಸಲಹೆಯ ಅಗತ್ಯ ಇಲ್ಲ. ಇದು ನಿಮಗೆ, ನಿಮ್ಮ ಮನಸ್ಸಿಗೆ ಮುದ ನಿದುವ೦ತೆಯೂ, ತೃಪ್ತಿಧಾಯಕವೂ ಆಗಿದ್ದರೆ ಆಯಿತು. ನಿಮಗೆ, ನಿಮ್ಮ ಹೊಸ ಯೋಚನೆಗೆ ನನ್ನ ಹಾರ್ದಿಕ ಶುಭಾಶಯಗಳು. ಸಲಹೆಗಳಿಲ್ಲ. ಸಹಾಯಕ್ಕೆ ಕರೆಯಿರಿ. ಖ೦ದಿತ ಸಿಧ್ಧ.
Re: ಮದುವೆಗೆ ಸಲಹೆ ಬೇಕು ಸಾರ್ .!!
ಹಾಯ್ ಸಂತೋಷ್ ರವರೇ, ಸಲಹೆ ನೀಡದೇ, ಸಹಾಯಕ್ಕೆ ಬರ್ತೀನಿ ಎಂದ ನಿಮ್ಮ ಆಪ್ತಮನಸ್ಸಿಗೆ ನನ್ನ ನೂರು ಧನ್ಯವಾದಗಳ.
ಮದುವೆಗೆ ತಪ್ಪದೇ ಕರೀತೀನಿ, ನೀವು ಬರಬೇಕು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಪ್ರೀತಿಯ ಶ್ರೀನಿವಾಸರವರೆ
ನಿಮ್ಮ ವೈವಾಹಿಕ ಜೀವನ ಸುಂದರವಾಗಿರಲೆಂದು ಆಶಿಸುತ್ತೇನೆ. ನಿಜಕ್ಕೂ ನಿಮ್ಮಲ್ಲಿನ ಸಾಮಜಿಕ ಆಲೋಚನೆಗೆ ಧನ್ಯವಾದಗಳು , ನೀವು ವಿಶಿಷ್ವತೆಯಲ್ಲಿ ವಿಶೇಷವಾಗಲು ಹೋರಟಿದ್ದಿರಿ ಅದು ವಿ-ಶೇಷವಾಗದಂತೆ ಕಾಪಾಡಿಕೊೞ್. ನಿಮ್ಮ ವಿವಾಹದ ಈ ಸಾಮಾಜಿಕ ಕಾರ್ಯಕ್ರಮಗಳು ನಿಜಕ್ಕೂ ಪ್ರಶಂಸನಿಯ.
ಆದರೆ ತಾವು ಮಾತು ಮಾತಿಗೂ ಮಾದ್ಯಮದವರಿಗೆ ಆಹ್ವಾನವಿಲ್ಲ ಎಂದು ಒತ್ತಿ ಹೇಳುತ್ತಿದ್ದೀರಲ್ಲ ಅದರ ಅರ್ಥ ಇದು ಪ್ರಚಾರಕ್ಕಲ್ಲ ಎಂಬುದನ್ನ ನಾವು ನಂಬಲು ಅಸಾಧ್ಯವಾದ ಮಾತು ಉದಾಃ- ರಾಜಕಾರಣಿಗಳು ಮಾದ್ಯಮದವರ ಮುಂದೆ ಅವರು ಮಾಡುವ ಮಾತಾಡುವ ಕೆಲಸವೆಲ್ಲ ಪ್ರಚಾರಕ್ಕಲ್ಲ ಎಂದು ಹೇಳುವಂತಿದೆ ನಿಮ್ಮ ಈ ಉತ್ತರ. ವಿಸ್ಮಯನಗರಿಯು ಒಂದು ಮಾದ್ಯಮವೆಂಬುದನ್ನು ಮರೆತಿರುವಂತಿದೆ. ನಿಜವಾಗಿಯು ನಿಮ್ಮ ಈ ಕಾರ್ಯಕ್ರಮ ಪ್ರಚಾರಕ್ಕಲ್ಲದೆ ಜನಜಾಗ್ರುತಿಗಾದಲ್ಲಿ ನನ್ನದೊಂದು ಸಲಹೆ ನಿಮ್ಮ ಆಹ್ವಾನ ಪತ್ರಿಕೆಯಲ್ಲಿ " ಉಡುಗೊರೆಗೆ ಬದಲಿಗೆ ರಕ್ತದಾನ ಅಥವಾ ಪುಸ್ತಕ ಕೊೞ"ಬೇಕೆಂಬುದನ್ನು ಮುದ್ರಿಸಿ ಹಂಚಿ ಆಗ ಜಾಗ್ರುತಿಯ ಜೊತೆಗೆ ನಿಮ್ಮ ಪ್ರಯತ್ನಕ್ಕೆ ಒಂದು ಬೆಲೆ ಹಾಗೂ ಅರ್ಥಸಿಗುತ್ತದೆ. ಒಂದು ವೇಳೆ ತಪ್ಪಾಗಿ ಹೆಳಿದ್ದರೆ ತಿದ್ದುಪಡಿ ಮಾಡಿ.
ಇತಿ ನಿಮ್ಮ ಗೆಳೆಯ
Re: ಮದುವೆಗೆ ಸಲಹೆ ಬೇಕು ಸಾರ್ .!!
ಛೇ ಛೇ... ನನ್ನನ್ನು ರಾಜಕಾರಣಿಗೆ ಹೋಲಿಸಿಬಿಟ್ಟಿರಲ್ಲ ರಂಗನಾಥರವರೇ..!!
ಅರೇ... ವಿಸ್ಮಯದಲ್ಲಿ ಬರೆದರೆ ಪ್ರಚಾರ ಹ್ಯಾಗಾಗುತ್ತೆ.? ಇದು ನಮ್ಮದೇ ಕುಟುಂಬ ಇಲ್ಲಿ ನಾನು ಚರ್ಚೆಗೆ ಇಳಿದಿದ್ದೇನೆಯೇ ಹೊರತು ಪ್ರಚಾರಕ್ಕಲ್ಲ. ವಿಸ್ಮಯದಲ್ಲಿ ನಾನು ಸುಮಾರ 2ವರ್ಷಗಳಿಂದ ಬರೆಯುತ್ತಿದ್ದೇನೆ, ಆದ್ರೆ ನನಗೆ ಯಾವತ್ತೂ ಇಲ್ಲಿಂದ ಯಾವುದೇ ಪ್ರಚಾರ ಸಿಕ್ಕಿಲ್ಲ. ಈಗ ಮಾತ್ರ ಪ್ರಚಾರ ಸಿಕ್ಕಿಬಿಡುತ್ತಾ..!! ಎಲ್ಲವೂ ನಾವು ನೋಡುವು ದೃಷ್ಠಿಯಲ್ಲಿ ಅಡಕವಾಗಿರುತ್ತೆ ಅಲ್ವಾ ರಂಗನಾಥರವರೇ.?
ಏನೋ ಬಿಡಿ ನಿಮ್ಮ ಊಹೆಗೆ ನಿಲುಕಿದ್ದನ್ನು ನೀವು ಹೇಳಿದಿರಿ ಆದ್ರೂ ನಿಮ್ಮ ಸಲಹೆಗೆ ಧನ್ಯವಾದಗಳು.
ಖಂಡಿತವಾಗಿ ಆಹ್ವಾನ ಪತ್ರಿಕೆಯಲ್ಲಿ ನೀವು ಹೇಳಿದ ಹಾಗೇಯೇ ಮುದ್ರಿಸುತ್ತೇನೆ. ನೀವು ಹೇಳಿದಿರಿ ಅಂತಲ್ಲ ನನ್ನ ಆಲೋಚನೆಯೂ ಇದೇ ಆಗಿತ್ತು. ನನ್ನ ಆಲೋಚನೆಗೆ ನಿಮ್ಮ ಸಾಥ್ ಸಿಕ್ಕಿದ್ದು ತುಂಬಾ ಸಂತೋಷದ ವಿಷಯ.
ಮದುವೆಗೆ ಕರೀತಿನಿ ತಪ್ಪದೇ ಬನ್ನಿ.
Re: ಮದುವೆಗೆ ಸಲಹೆ ಬೇಕು ಸಾರ್ .!!
ಎನ್.... ಸರ್........ ಅಭಿಪ್ರಾಯವನ್ನು ಊಹೆ ಅನ್ನುತ್ತಿರಲ್ಲ, ಇಲ್ಲಿ ನಿಜ ಹೇಳಬೇಕೆಂದ್ರೆ
ನಿಮಗಿದ್ದಿದ್ದು ಊಹೆ ಅದನ್ನು ನಿಜ ಮಾಡುವ ಪ್ರಯತ್ನದಲ್ಲಿ ಅಭಿಪ್ರಾಯ ಕೇಳಿದಿರಿ, ನಮಗೆ
ಇಂದಿನ ಸಮಾಜದಲ್ಲಿ ವ್ಯೆಕ್ತಿಗಳು ನಡೆದುಕೋೞುತ್ತಿರುವ ರೀತಿಯಿಂದ ನಂಬಿಕೆ ಬರೊದು ಸ್ವಲ್ಪ ಕಷ್ಟವೆ ಅಲ್ವ. ಅದಕ್ಕೆ ಹಾಗೆ ಹೇಳಿದ್ದೇನೆ ಎರಡನೆ ಮಾತಿಲ್ಲ ಅ
ವಿಷಯದಲ್ಲಿ ಅಭಿಪ್ರಾಯ ತಿಳಿಸಿದೆ ವಿನಾ ಖಂಡಿತಾ ಇದು ಕಲ್ಪನೆಯಲ್ಲ.ನೀವು ಅಂತಹ
ರಾಜಕಾರಣಿಗಳಂತಲ್ಲದ್ದಿದ್ದರೆ ನಮಗೆ ತುಂಬಾ ಸಂತೊಷ, ನಿಮ್ಮಈ ಪ್ರಯತ್ನಕ್ಕೆ ನಮ್ಮ ಸಹಕಾರ
ಇರುತ್ತದೆ. ಕಾರಣ ಸಮಾಜದಲ್ಲಿ ಸದಾ ಹೊಸತನ್ನು ಬಯಸುವ ನಮ್ಮಂತಹವರಿಗೆ
ಹೆಮ್ಮೆಯಾಗುತ್ತದೆ. ಇದರಿಂದಲಾದರು ಇಂದಿನ ಯುವ ಪಿಳಿಗೆ ಹಾಗು ಬ್ರಷ್ಟ ರಾಜಕಾರಣಿಗಳು
ಎಚ್ಚರಗೊಂಡರೆ ಚೆನ್ನಾಗಿರುತ್ತೆ. ನಿಮ್ಮ ಈ ರೀತಿ ಸರ್ವರಿಗೂ ಮಾರ್ಗದರ್ಶನವಾಗಲೆಂದು
ಆಶಿಸುತ್ತಾ. ಮತ್ತೋಮ್ಮೆ ನಿಮಗೆ ವಿವಾಹದ ಶುಭಾಶಯಗಳು.
Re: ಮದುವೆಗೆ ಸಲಹೆ ಬೇಕು ಸಾರ್ .!!
ರಕ್ತದಾನ ಉತ್ತಮ ವಿಚಾರ. ಸಸಿ ಹಾಗು ಪುಸ್ತಕಗಳು ಉಪಯೊಗಿಸುವವರಿಗೆ ಮಾತ್ರ ಹಂಚಿ. ಅವು ಕಸ ಅಥವಾ ರದ್ದಿ ಆಗದಿರಲಿ. ಯಾವುದೆ ನಟ, ರಾಜಕಾರಣಿ ಅಥವಾ ಗಣ್ಯರನ್ನು ಆಹ್ವಾನಿಸಿದರೆ ಅದೊಂದು ಪ್ರಚಾರಪ್ರೀಯ ಕಾರ್ಯಕ್ರಮವಾಗಿ ಬಿಡಬಹುದು. ನಿಮಗೆ ಬೆಡವಾಗಿದ್ದರೂ ಅವರು ಉದ್ದನೆಯ ಭಾಷಣ ಮಾಡಿ ಮದುವೆಗೆ ಬೆರೊಂದು ತಿರುವು ಕೊಡುವ ಸಾಧ್ಯತೆ ಇದೆ. ವಿವಾಹದ ಶುಭಾಶಯಗಳು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಪುಸ್ತಕ ಹಂಚೊದಾದ್ರೆ ಹೇಗೂ ಮದುವೆ ಬೇರೆ ಆಗ್ತಾ ಇದ್ದಿರಾ !!!
ಅಡುಗೆ ಮನೆ, ನಳಪಾಕ, ಈ ರೀತಿಯ ಪುಸ್ತಕಗಳನ್ನ ಹಂಚಿ.
ಶ್ರೀಮತಿಯವರಿಗೂ ಖುಶಿಯಾಗಬಹುದು.
Re: ಮದುವೆಗೆ ಸಲಹೆ ಬೇಕು ಸಾರ್ .!!
ಎಂಥಾ ಮಾತು ಅಲ್ಲಲ್ಲ ಇದು "ಮುತ್ತು"..?? (ಹತ್ತಿರದವರಲ್ವಾ..!!)
Re: ಮದುವೆಗೆ ಸಲಹೆ ಬೇಕು ಸಾರ್ .!!
ಶ್ರೀನಿವಾಸ್, ನಿಮ್ಮ ಬಹು ವರ್ಷಗಳ ಕನಸು ನನಸಾಗುತ್ತಿದೆ, ನೀವು ಹಾಕಿಕೊ೦ಡಿರುವ ಕಾರ್ಯಕ್ರಮಗಳೂ ಚೆನ್ನಾಗಿವೆ, ನಿಮ್ಮ ಮದುವೆ ಅರ್ಥಪೂರ್ಣವಾಗಲಿ, ನಿಮ್ಮ ಎಲ್ಲ ಕನಸುಗಳು ನನಸಾಗಲಿ, ಬಾಳ ಹಾದಿ ಸು೦ದರವಾಗಲಿ ಎ೦ದು ಹಾರೈಕೆಗಳು.
shrinivas nimma
shrinivas nimma karyakramagalige abhinandhanegalu. idhu ellarigu maadariyagali.wish u all the best.
shrinivas nimma
shrinivas nimma karyakramagalige abhinandhanegalu. idhu ellarigu maadariyagali.wish u all the best.