Skip to main content
Forums

"ಹಳ್ಳಿ ಹೈದಾ, ಪ್ಯಾಟೆಗೆ ಬಂದ ರಿಯಾಲಿಟಿ ಶೋ"ದಲ್ಲಿ ಪ್ಯಾಟೆ ಹುಡುಗಿರು ಹಳ್ಳಿ ಹುಡಗರ ಜೋತೆ ಶೋನಲ್ಲಿ ಭಾಗವಹಿಸಬೆಕಾದರೆ ತುಂಡು ಉಡುಗೆ ದರಿಸಿರತಾರೆ ಸರಿನಾ? ಇದು ಆ ಹುಡುಗರ ಮೇಲೆ ಪಬ್ಲಿಕ್ ಮೇಲೆ ಪರಿಣಾಮ ಬಿರೋದಿಲ್ವಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಶನಿ, 09/11/2010 - 11:00

ಇತ್ತೀಚೆಗೆ ನೋಡಿದ ಒಂದು ಶೋ ನಲ್ಲಂತೂ ಇಂಗ್ಲೀಷ್ ಗೊತ್ತಿಲ್ಲ ಕನ್ನಡ ಮಾತ್ರ ಗೊತ್ತು ಎಂಬುದನ್ನು ಹೀಯಾಳಿಸುವ ಹಾಗೆ ಒಬ್ಬಾತನನ್ನು ಗುರಿ ಮಾಡಿದ್ದರು. ಇಂತಹ ಅರ್ಥವಿಲ್ಲದ ಕಾರ್ಯಕ್ರಮ ನೋಡದಿರುವದು ಲೇಸು. ಹಳ್ಳಿ ಜನರ ಮುಗ್ದತೆಯನ್ನು ದುರುಪಯೋಗ ಮಾಡುವದರ ಜೊತೆಗೆ ಅವರನ್ನು ಬಿಕ್ಷುಕರಂತೆ ಬಿಂಬಿಸಿ ಕನ್ನಡ ಮಾತ್ರ ಗೊತ್ತಿರುವವರು ದಡ್ಡರು ಎಂಬರ್ಥ ಬರುವಂತೆ ತೋರಿಸುವ ಇಂತಹ ಕಾರ್ಯಕ್ರಮವನ್ನು ಖಂಡಿಸಲೇಬೇಕು.

ಉಮಾಶಂಕರ ಬಿ.ಎಸ್ ಶನಿ, 09/11/2010 - 20:21

ಎಲ್ಲವೂ ಪೂರ್ವ ನಿರ್ಧಾರಿತ ನಾಟಕವೇ!! ಚಾನೆಲ್ ಗಳಿಗೆ 'ನ್ಯೂಸೆನ್ಸ್' ಮುಖ್ಯವೇ ಹೊರತು, 'Sense' ಅಂತೂ ಅಲ್ಲವೇ ಅಲ್ಲ. ಅದೊಂದು ಶುದ್ಧ 'Non - sense' ಕಾರ್ಯಕ್ರಮವಷ್ಟೇ.

Basavaraj G ಶನಿ, 09/11/2010 - 22:35

ಉಮಾಶಂಕರರವರೆ ಯಾವುದು ಪೂರ್ವನಿರ್ಧಾರಿತವಲ್ಲ?. ನಮ್ಮ ಜೀವನದ ಪ್ರತಿ ಒಂದು ಕಾರ್ಯ ಪೂರ್ವ
ನಿರ್ಧಾರಿತ. ಮಾನವ ಸಾಮಾಜಿಕ ಜೀವನ ಪ್ರಾರಂಭಿಸಿದ ನಂತರ, ಅಂದರೆ ತನ್ನದೆ ಸಮಾಜದ, ನೀತಿ,
ಕಾನೂನು ಕಟ್ಟಳೆಗಳನ್ನು ಕ್ರೋಢಿಕರಿಸಿದ ನಂತರ ಪ್ರತಿಯೊಬ್ಬ ನ್ಯಕ್ತಿ ಪೂರ್ವನಿರ್ಧಾರಿತ
ಕಾರ್ಯಕ್ಕೆ ಒಪ್ಪಲೆ ಬೇಕು. ನೀವು ನಿಮ್ಮ ದಿನಚರಿಯನ್ನು ತೆಗೆದುಕೊಳ್ಳಿ, ಬೆಳೆಗ್ಗೆ
೬.೦೦ ಗಂಟೆಗೆ ಎದ್ದು ಸ್ವಚ್ಚತಾ ಕಾರ್ಯ ಪ್ರಾರಂಭಿಸಿ ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ
ತೆರಳುವುದು, ಮದ್ಯಾಹ್ನದ ಊಟ, ಮರಳಿ ಮನೆಗೆ ಬರುವುದು ಇದೆಲ್ಲ ನಾವು ನಿರ್ಮಿಸಿಕೊಂಡಿರುವ
ಪೂರ್ವನಿರ್ಧಾರಿತ ಕಾರ್ಯಕ್ರಮಗಳು. ವೈಯುಕ್ತಿಕ ಜೀವನದಫಲ್ಲಿಯೇ ನಾವು ಪೂರ್ವ
ನಿರ್ಧಾರಿತವಾಗಿರುವಾಗ, ವಾಜಣಿಜ್ಯ ಕಂಪನಿಗಳಿಂದ ಲೈವ್ ನಿರೀಕ್ಷಣೆ ಸಾಧ್ಯವಿಲ್ಲ.
ದೂರದರ್ಶನ,ಆಕಾಶವಾಣಿ ಮಾನವ ನಿರ್ಮಿತವಾದ ಸಂತೋಷಕ್ಕಾಗಿ ನಿರ್ಮಿಸಿಕೊಂಡಿರುವ ಸಾಧನಗಳು.
ಇವುಗಳಿಂದ ಹೆಚ್ಚಿನ ಮಟ್ಟದಲ್ಲಿ ದಿಟವನ್ನು ನಿರೀಕ್ಷಿಸುವುದು ತಪ್ಪು. ಆದರೂ ಮಾನವ
ಆಶಾವಾದಿ. ಎಲ್ಲದರಲ್ಲಿಯೂ ದಿಟವನ್ನೇ ನಿರೀಕ್ಷಿಸುತ್ತಾನೆ. ನಾಗರೀಕರು
ಎಚ್ಚುತ್ತುಕೊಂಡಾಗ ವ್ಯವಸ್ಥೆ ಸುಪ್ತಾವಸ್ಥೆಯಿಂದ ಎಚ್ಚರ ಸ್ಥಿತಿಗೆ ಬರುಬಹುದು. ಇದು
ಭಾರತದಲ್ಲಿ ಎಂದಿಗೂ ಸಾಧ್ಯವಿಲ್ಲ. ನೇರ ಕಾರ್ಯಕ್ರಮದಲ್ಲಿ (live) ಇಂದಿನ ರಾಜಕರಣಿ, ನಟ
ಮತ್ತು ಬುದ್ಧಿಜೀವಿಗಳು ನಾನು ಆ ರೀತಿ ಹೇಳಿಲ್ಲ ಎನ್ನುವಂತಹ ವ್ಯಕ್ತಿಗಳಿರುವಾಗ 
ಭಾರತದನ ನೇರ ಪ್ರಸಾರಕ್ಕೆ ಆದ್ಯೆತೆ ಉಂಟೆ.  ಕೈಲಾಗದ ನಮ್ಮ ನಿಮ್ಮಂತಹ ಮದ್ಯಮ ವರ್ಗದ ಜನ
ಮಾದ್ಯಮಲ್ಲಿ (ಹೆಚ್ಚಾಗಿ ವೆಬ್ ತಾಣಗಳಲ್ಲಿ, ಇತರೆ ಮಾದ್ಯಮಗಳಲ್ಲಿ ಅವಕಾಶವಿಲ್ಲ)
ಕೊಗಿಕೊಳ್ಳುವುದಷ್ಟೆ ಕೆಲಸ. ಅದರ ಪಾಡಿಗೆ ಲೋಕ ಕಾರ್ಯ ನಡೆಯುತ್ತಿರುತ್ತದೆ.
ಬಾಯಿಚಟಕ್ಕೆ ಎರಡ ಅಕ್ಷರ ಕೊರೆಯುವುದಷ್ಟೆ ನಮ್ಮ ನಿಮ್ಮಂತಹವರ ಕೆಲಸ, ಇದರಿಂದ ಕ್ರಾಂತಿ ಏನು ಸಾಧ್ಯವಿಲ್ಲ, ಆಕಸ್ಮಕವಾಗಿ ಬದಲಾವಣೆ ಆದರೆ, ಅದೊಂದು ಗೆಲವು. ಇಂದಿನ ಸಮಾಜದ ಎಲ್ಲಾ ಸ್ತರದ ಜನರು
ಬಯಸಿರುವುದನ್ನು ವಿರೋದಿಸುವುದು ಬೋರ್ಗಲ್ಲಮೇಲೆ ಮಳೆಸುರಿದಂತೆ -ವಂದನೆಗಳು

ಉಮಾಶಂಕರ ಬಿ.ಎಸ್ ಮಂಗಳ, 09/14/2010 - 07:28

ಶ್ರೀಮಾನ್ ಬಸವರಾಜು ರವರೆ,
ಹೌದು ನಮ್ಮ ಜೀವನದಲ್ಲಿ ಎಲ್ಲವೂ ಪೂರ್ವನಿರ್ಧಾರಿತವೆ, ಅದೇ ರೀತಿ ನಾವೇ ನಿರ್ಮಿಸಿದ ಈ ಮಾಧ್ಯಮಗಳಿಂದ ನಮಗೆ ಒಳ್ಳೆಯದಾಗುವಂತಹ ಪಲಿತಾಂಶವನ್ನು ನಿರೀಕ್ಷಿಸುವುದು ಸಹ ಪೂರ್ವನಿರ್ಧಾರಿತವೇ ಆಗಿರುವಾಗ ಈ ರೀತಿ ನ್ಯೂಸೆನ್ಸ್ ಏಕೆ ಬೇಕು ಅಲ್ಲವೇ ಸರ್?

vinaykumarkp ಸೋಮ, 09/13/2010 - 08:55

ಸರಿ. ಸಾರ್ ನೀವು ನಾವು ಹೇಳಿದ ಮಾತ್ರಕ್ಕೆ ಅವರ ತುಂಡುಡುಗೆ ದೊಡ್ಡ ಲಂಗ ಆಗಿಬಿಡುತ್ತಾ. ಮಾಡಲ್ಲಿ ಬಿಡಿ ನಾವು ನೋಡದೆ ಇದ್ದರೆ ಸರಿ

nagiso manassu nandu ಗುರು, 10/28/2010 - 18:44

ನಿಜವಾಗ್ಲು ಪರಿಣಾಮ ಬೀರುತ್ತೆ..ಇಂತಹ ಕಾರ್ಯಕ್ರಮಗಳನ್ನು ನೋಡದಿರುವುದೇ ಒಳ್ಳೆಯದು ಅಂತ ನನ್ನ ಅಭಿಪ್ರಾಯ

M S Bharathi ಗುರು, 03/31/2011 - 13:36

halli hyeda pyatege banda

e karyakramve alla ella riyaliti show galu nijakku eegina swardigalige,pratibavantirige olleya vedikeyagide,
halli hyeda pyatege banda e karyakramadalli swardigala abhiprayavanne kelida nantarave avarige avakaasha koduvudu
so ella swardigala oppige aadharadha mele nidharavaagiruttade.

ನಾಗರಾಜ್ ವಾಗಾ ಶುಕ್ರ, 04/01/2011 - 16:25

ಹಳ್ಳಿ ಹೈದಾ ಪ್ಯಾಟೆಗೆ ಬಂದಾ ರಿಯಾಲಿಟಿ ಶೋ ಒಂದು ಕೆಟ್ಟದಾದ್ ಶೋ

  • 1738 views