ಹನಿಗವನಗಳ ಹಾವಳಿ
ನಯನದ ನಕಾರ ನಗು ಮೂಡುವ ತನಕ......
ಗಗನದ ವಿಕಾರ ಗ್ರಹಣ ಬಿಡುವ ತನಕ.......
***
ನುಡಿವ ಮುರುಳಿಗೆ, ನಾದದ ಅರಿವಿಲ್ಲ.....
ಪ್ರೀತಿಸುವ ಮನಕೆ ಲೋಕದ ಪರಿವಿಲ್ಲ.....
***
ಮರೆಯಲೆ೦ದೇ ಮನದ ನೋವು, ಮರಳಿ ನೆನಪಾದಾಗ ಮನಕೆ.....
ಅದೇ, ಮೊನಚು ಮುಳ್ಳಾಗಿ, ಮನವ ಚುಚ್ಚುವುದು, ಜೋಕೆ?.....
***
ವಿಧಿಯ ವ೦ಚನೆಗೆ, ವೇದನೆಯೇ ವಾಸ್ತವವಾಗಿದೆ....
ವಾಸಿಯಾಗದ ಒಡಕು ಒಡಲು, ವ೦ಚಿತ ವಸ್ತುವಾಗಿದೆ....
***
ರಾಗದ ರ೦ಗಿಗೆ, ಹೃದಯದ ಮಿಡಿತವೇ ಮಧುರವಾಗಿದೆ....
ಪ್ರೀತಿಯ ಗು೦ಗಿಗೆ, ಪ್ರೇಮಿಯ ನೆನಪೇ ಹಿತವಾಗಿದೆ.....
***
ಮುಗಿದ ಮಾತಿಗೆ ಮೌನವೇ ವಿರಾಮ
ಬಾಡಿದ ಬದುಕಿಗೆ ಕನಸೇ, ಸರಿಗಮ
***
ಮನದ ಮೌನದ ಮಾತನು ಮುದ್ದಿಸುವ ಮನಸೇ ಮಾಯವಾಯಿತಲ್ಲಾ?.....
ಮಾಯವಾದ ಮನಸ ಮರೆಯಲು ಮೌನವೇ ಮಾತಾಯಿತಲ್ಲಾ.....
***
ಮುಳುಗುವ ಮನಸಿಗೆ ಮೋಜಿನ ಮಾತು ಮೂಡೀತೇ?...
ಮನವೇ ಮರಯದ ಮರುಕವು, ಮರುಕಳಿಸದೇ ಮರಳೀತೇ?...
ಸಾಲುಗಳು
- Add new comment
- 790 views
ಅನಿಸಿಕೆಗಳು
Re: ಹನಿಗವನಗಳ ಹಾವಳಿ
excellent
Re: ಹನಿಗವನಗಳ ಹಾವಳಿ
thanks