ಆಕಾಂಕ್ಷೆ
ಮತ್ತೆ ನೋಡೊಆಸೆ ಚಿಗುರಿದೆ
ನನ್ನ ಪ್ರೀತಿಯ ಮನುಜಾಳನ್ನು
ಮನವು ಕಾದು ಸೋತು ಸೊರಗಿದೆ
ಸಿಹಿ ದನಿಯ ಕೇಳಬೇಕೆಂದು ॥ಪ॥
ನಯನ ಮನೋಹರ ಮುಗ್ದ ಬಾಲೆಯ
ನಗುವ ಸೆರೆಹಿಡಿಯಬೇಕೆಂದು
ಅವಳ ಕಣ್ಣ ನೋಟದೊಳಗಿನ
ಸಂದೇಶವ ತಿಳಿಯಬೇಕೆಂದು ॥೧॥
ಆದರೆ ಕೊಪವೆಕೋ ನನ್ನ ಮೇಲೆ
ಆ ಚಿನಕುರಳಿ ಹೆಣ್ಣಿಗೆ
ನಗು ನಗುತಲೆ ಭಗ್ನ ಮಾಡಿದ
ಮೂಕ ಪ್ರೇಮ ಯಾರ ಸಾಕ್ಷಿಗೆ ॥೨॥
ಮರೆಯಲಾಗದೆ ನನ್ನ ಮನಸು
ಮರಳಿ ಯತ್ನವ ಮಾದುತಿಹುದು
ಈ ಬಾರಿಯಾದರೂ ಗೆಲ್ಲುವೆನೆಂಬ
ಆಕಾಂಕ್ಷೆಯಲಿ............................ ॥॥॥
ಸಾಲುಗಳು
- 425 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ