ಸತ್ತ ನಂತರ
ತಿಂಗಳು ಕಳೆದಾಗಲೆ ಬರುತ್ತವೆ
ಪ್ರಾಣವಿರದ ವಸ್ತುಗಳು
ದಿನಸಿ ಅಂಗಡಿಯ ಪದಾರ್ಥಗಳು
ಅರಿವಿರದ ವಿಶಾರಗಳು
ಹೊಸ ಹೊಸ ಆವಿಷ್ಕಾರಗಳು.
ಒಂದು ಕೊಂಡರೆ
ಮತ್ತೂಂದು ಉಚಿತ
ಒಂದು ಹಣಕ್ಕೆ
ಎರಡು ಹೆಣಗಳು.
ಎಷ್ಟು ಕೊಂಡು ತುಂಬಿದರು
ಅಸಿವರಗದ ಅರಹೊಟ್ಟೆ.
ಆದರೂ ತುಂಬುವ ಪ್ರಯತ್ನ
ಮರಳಿ ಅದೇ ಯತ್ನ.
ಎಂದು ತುಂಬುತ್ತದೆ
ನಮ್ಮ ಮೂಳೆ ಹಂದರ.
ಇದಕ್ಕೆ ನಿಗಧಿತ ಪ್ರಮಾಣದ
ಊಟವಿಲ್ಲವೆ?
ಇದು ತುಂಬುವುದೇ ಇಲ್ಲವೆ?
ನೂರೆಂಟು ಪ್ರೆಶ್ನೆಗಳು
ಉತ್ತರವಿಲ್ಲದ ಉತ್ತರಗಳು.
ಮಾನವ ತರಕಾರಿಯಲ್ಲ
ಒಂದೆಡೆ ಕುಳಿತ ಕಲ್ಲಲ್ಲ
ಇದು ಜೀವ ಕುಂಡಲ
ಈ ಪ್ರೆಶ್ನೆಗೆ ಉತ್ತರ
ನಾವು ಸತ್ತ ನಂತರ...
ವಸಂತ್ ಕೋಡಿಹಳ್ಳಿ
ಸಾಲುಗಳು
- Add new comment
- 771 views
ಅನಿಸಿಕೆಗಳು
Re: ಸತ್ತ ನಂತರ
ಒಳ್ಳೆಯ ಪ್ರಯತ್ನ. ಇನ್ನು ನಿಮ್ಮಲ್ಲಿ ಹುದುಗಿರುವ ಶಬ್ದಕೊಶಕ್ಕೆ, ಭಾವನೆಗಳಿಗೆ ಮೂರ್ತರೂಪ ನೀಡಲು ಪ್ರಯತ್ನಿಸಿ.
ಅನ್ನಿಸಿದ್ದನ್ನು ಬರೆದಿರುವೆ.
ನಟರಾಜ್ ಬಾಬು.