ಅತಿಥಿ ತುಮ್ ಕಬ್ ಜಾವೋಗೆ ಹಿಂದಿ ಚಿತ್ರ ವಿಮರ್ಶೆ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 20 March 2010

ಲಂಬೋದರ್ ಚಾಚಾ (ಪರೇಶ್ ರಾವೆಲ್) ತನ್ನ ಬಂಧು ಪಪ್ಪುವನ್ನು ಹುಡುಕಿಕೊಂಡು ಮುಂಬೈಗೆ ಬರುತ್ತಾನೆ. ಆದರೆ ಅಲ್ಲಿ ಅಜಯ್ ದೇವಗನ್ ಅನ್ನೆ ಪಪ್ಪು ಎಂದು ತಪ್ಪಾಗಿ ಅರ್ಥೈಸಿ ಅವರ ಮನೆಯಲ್ಲಿ ಉಳಿಯುತ್ತಾನೆ. ಆಗ ಪುನೀತ್ (ಅಜಯ್ ದೇವಗನ್) ಹಾಗೂ ಮುನ್ಮುನ್ (ಕೊಂಕಣ ಸೇನ) ಅನುಭವಿಸುವ ಪಡಿಪಾಟಲುಗಳು, ಅವರು ಈ ಅತಿಥಿಯನ್ನು ಹೊರ ಹಾಕಲು ಪಟ್ಟ ಪ್ರಯತ್ನ. ಕೊನೆಗೆ ಲಂಬೋದರ್ ಚಾಚಾ ಮನೆಯಿಂದ ಹೊರ ಹೋದನೆ? ಏನಾಯ್ತು ಅನ್ನುವದೇ ಈ ಚಿತ್ರದ ತಿರುಳು.


ಈ ಚಿತ್ರದ ಹೆಗ್ಗಳಿಕೆ ಏನೆಂದರೆ ಎಲ್ಲಿಯೂ ನಿಮ್ಮನ್ನು ವೃಥಾ ನಗಿಸಲು ಪ್ರಯತ್ನಿಸದಿರುವದು. ಆದರೆ ಕೆಟ್ಟ ಹಾಡುಗಳು, ಕೆಲವೊಮ್ಮೆ ಸ್ವಲ್ಪ ಅತಿಯಾಯ್ತು ಅನ್ನುವ ಸನ್ನಿವೇಶಗಳು ಸಹ ಇವೆ. ಇವೆಲ್ಲ ಬೋರ್ ಹೊಡೆಸುತ್ತದೆ. ಪರೇಶ್ ರಾವೆಲ್ ಅವರ ಅಭಿನಯ ತುಂಬಾ ಚೆನ್ನಾಗಿದೆ. ಅಜಯ್ ದೇವಗನ್ ಸಹ ಪರವಾಗಿಲ್ಲ.


ಇದು ಕುಟುಂಬ ಸಮೇತ ಮಜುಗರವಿಲ್ಲದೇ ನೋಡಿ ನಲಿಯಬಹುದಾದ ಚಿತ್ರ. ಐಟಂ ಸಾಂಗ್ ಪ್ರಿಯರಿಗೆ ಹಾಗೂ ಹೊಡೆದಾಟ ನೋಡ ಬಯಸುವವರಿಗೆ ಇಲ್ಲಿ ನಿರಾಶೆ ಕಾದಿದೆ!


ಸಿನಿಮಾ ಎಂದರೆ ಬರೀ ಲವ್ ಸ್ಟೋರಿ, ಮಚ್ಚು ಲಾಂಗು ಬೀಸಾಟ ರಕ್ತ ಓಕುಳಿಯಾಟ ಎಂದು ಭಾವಿಸಿರುವ ಕನ್ನಡ ಚಿತ್ರರಂಗದವರು ಬಾಲಿವುಡ್ ನಲ್ಲಿ ಬರುವ ಈ ತರಹದ ಚಿತ್ರಗಳಿಂದ ಕಲಿಯುವದು ಬೇಕಾದಷ್ಟಿದೆ. ಅರೆರೆ ತಡೀರಿ ಹಾಗಂತ ಇದನ್ನ ರೀಮೇಕ್ ಮಾಡಬ್ಯಾಡ್ರಿ.


ಈ ಚಿತ್ರದ ಪ್ಲಸ್ ಪಾಯಿಂಟ್



  • ಪರೇಶ್ ರಾವಲ್ ಅವರ ಅಭಿನಯ

  • ಉತ್ತಮ ಚಿತ್ರ ಕಥೆ

  • ನಕ್ಕು ನಲಿಸುವ ಹಾಸ್ಯಗಳು

ಈ ಚಿತ್ರದ ಮೈನಸ್ ಪಾಯಿಂಟ್



  • ಸಾಧಾರಣ ಕಥೆ

  • ಕೆಟ್ಟ ಹಾಡುಗಳು

  • ಕೆಲವೊಮ್ಮೆ ಸ್ವಲ್ಪ ಅತಿ ಅನ್ನಿಸುವ ಸನ್ನಿವೇಶಗಳು

ವಿಸ್ಮಯ ರೇಟಿಂಗ್ಃ 3/5


 

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3 (3 ಓಟುಗಳು)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
8 ಕೂಡಿಸು 9 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ