Skip to main content

ಕಾಮ'ಕೇಳಿ'.

ಬರೆದಿದ್ದುMarch 3, 2010
12ಅನಿಸಿಕೆಗಳು

ವರುಗಳು ನಡೆದು ಬರುತ್ತಿದ್ದರೆ ಸಾಕ್ಷಾತ್ ದೇವರು ಬಂದ ಹಾಗೆ ಅವರ ಭಕ್ತರಿಗೆ.! ಅವರಿಗಾಗಿ ಪ್ರಾಣಕೊಡಲು ಸಿದ್ಧರಾಗಿಬಿಡುತ್ತಾರೆ ಈ ಭಕ್ತರು . ಯಾರ ಮನೆಯಲ್ಲೂ ಅವರದೇ ಪೋಟೋ. ಮನದಲ್ಲೂ..! ಯಾವುದೇ ಸರ್ಕಾರ ಬರಲಿ ಅದು, ಸಂವಿಧಾನಕ್ಕೆ ಬಧ್ದವಾಗಿರುತ್ತದೋ ಇಲ್ಲವೋ ತಿಳಿಯದು ಆದರೆ ಅವರುಗಳಿಗೆ ಮಾತ್ರ ಪ್ರಥಮ ಆದ್ಯತೆ. ಅವರು ಅಂದ್ರೆ ಯಾರು.. ಅಂದ್ಕೋತಿದ್ದೀರಾ.? ಮತ್ತ್ಯಾರು ಅಲ್ಲ.. ನಮ್ಮ ನಿಮ್ಮ ನಡುವಿನ ನಡೆದಾಡುವ ದೇವರುಗಳು, ಮಠಾಧಿಪತಿಗಳು, ಸ್ವಾಮಿಜಿಗಳು, ಗುರೂಜಿಗಳು ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಯಃಕಶ್ಚಿತ್ ಮನುಷ್ಯಪ್ರಾಣಿಗಳು..!!

ಏನಾಗಿದೆ ಈ ಸ್ವಾಮಿಜಿಗಳಿಗೆ. ಸಮಾಜದಲ್ಲಿ ಅವರಿಗೆ ಎಷ್ಟೊಂದು ಗೌರವವಿದೆ. ಅಸಂಖ್ಯಾತ ಭಕ್ತರ ಪ್ರೀತಿಯಿದೆ. ಕೋಟಿ ಕೋಟಿ ಕೊಡುವ ಸರ್ಕಾರಗಳಿವೆ. ಎಲ್ಲವೂ ಇದ್ದು , ಲಜ್ಜೆಗೇಡಿತನವೇಕೆ. ತನ್ನ ಜವಾಬ್ದಾರಿ ಮತ್ತು ಉದ್ದೇಶವನ್ನು ಮರೆತು ಕಾಮಕೇಳಿಗೆ ಏಕೆ ಇಷ್ಟೊಂದು ಆಕರ್ಷಿತರಾಗುತ್ತಾರೆ..? ಸರ್ವೇಂದ್ರೀಯಗಳ ನಿಗ್ರಹವನ್ನು ಸಾಧಿಸಿದವರಿಗೆ, ಈ ಕಾಮ ಎನ್ನುವ ಕ್ಷಣಿಕ ಸುಖವನ್ನು ನಿಗ್ರಹಿಸಿಕೊಳ್ಳಲಾಗದೇ..?!! ಈ ಮಾತನ್ನು ನನ್ನ ಕೇಳಿದರೆ ನನ್ನ ಉತ್ತರ "ಆಗೋಲ್ಲ." ಅಂತೀನಿ. ಯಾಕೆಂದರೆ ವೈದ್ಯಶಾಸ್ತ್ರದ ಪ್ರಕಾರ "ಒಬ್ಬ ಮನುಷ್ಯನ ಜೀವಮಾನದಲ್ಲಿ ಅವನ ದೇಹದಲ್ಲಿ  ಅಂದಾಜು ಒಂದರ್ಧ ಬಕೆಟ್ ನಷ್ಟು ಜೀವದ್ರವ ಉತ್ಪತ್ತಿಯಾಗುತ್ತದೆ."  ಹೀಗೆ ಉತ್ಪತ್ತಿಯಾದ ಜೀವದ್ರವ ಯಾವುದೇ ಕಾರಣಕ್ಕೂ ದೇಹದಲ್ಲೇ ಇರುವುದಿಲ್ಲ ಅದು ಹೊರಹೋಗಲೇಬೇಕು. ಹೋಗುತ್ತದೆ ಕೂಡ. ಹೋಗುವ ವಿಧಾನಗಳು ಬೇರೆ ಬೇರೆ ಅಷ್ಟೆ.
 ಬಿಡದಿ ಆಶ್ರಮವನ್ನೊಮ್ಮೆ ನೀವು ಸುತ್ತಿ ಬರಬೇಕು. ಮುತ್ತಪ್ಪ ರೈ ಮನೆ ಪಕ್ಕವೇ ನೂರಾರು ಎಕರೆ ಪ್ರದೇಶದಲ್ಲಿ  ಹರಡಿಕೊಂಡಿರುವ ನಿತ್ಯಾನಂದನ ಆಶ್ರಮ, ವಿದೇಶಿ ಭಕ್ತರಿಂದ ತುಂಬಿಹೋಗಿದೆ. ಹುಡುಕಿದರೂ ಹತ್ತು ಜನ ಸ್ಥಳಿಯರು ಅಲ್ಲಿ ಕಾಣುವುದಿಲ್ಲ. ಅನೇಕ ಕಡೆ  'ಪ್ರವೇಶ ನಿರ್ಬಂಧಿಸಲಾಗಿದೆ' ಎಂಬ ತೂಗು ಫಲಕಗಳು ನಿಮ್ಮನ್ನು ಸ್ವಾಗತಿಸುತ್ತವೆ.!! ಎಲ್ಲಿ ನೋಡಿದರೂ ಸೆಕ್ಯೂರಿಟಿಯವರೇ ತುಂಬಿ ಹೋಗಿದ್ದಾರೆ. ಆಶ್ರಮಕ್ಕೆ ಸ್ವಯಂಸೇವಕರು ಬೇಕು ನಿಜ, ಆದರೆ ಇಷ್ಟೊಂದು ಸಂಖ್ಯೆಯ ಸೆಕ್ಯೂರಿಟಿಗಾರ್ಡಗಳು ಯಾಕೆ ಅಂತ ಅರ್ಥವೇ ಆಗುವುದಿಲ್ಲ. ಕಳೆದ ತಿಂಗಳು ನಾನು ನನ್ನ ಸ್ನೇಹಿತನೊಂದಿಗೆ ಅಲ್ಲಿಗೆ ಬೇಟಿಕೊಟ್ಟಾಗ ಇದೇ ಮಾತನ್ನು ಕೇಳಿದ್ದೆ. ಈಗ ಆ ಎಲ್ಲಾ ಅನುಮಾನಗಳಿಗೆ ಉತ್ತರ ಸಿಕ್ಕಾಂತಾಗಿದೆ.
  ಮೊದಲೇ ಹೇಳಿದ ಹಾಗೆ ಕಳೆದ ತಿಂಗಳು ನಾನು ಆ ಆಶ್ರಮಕ್ಕೆ ಹೋಗಿದ್ದೆ. ಆಗ ಅಲ್ಲಿ ಮಣಿವಣ್ಣನ್  ಎಂಬಾ ಆಶ್ರಮವಾಸಿಯನ್ನು ಮಾತನಾಡಿಸಿದೆ. ಅವನಿಗಿನ್ನು 21ಪ್ರಾಯ. 2ನೇ ವರ್ಷದ ಇಂಜನಿಯರ್ ಡಿಗ್ರಿ ಮಾಡುತ್ತಿರಬೇಕಾದರೆ, ಒಮ್ಮೆ ನಿತ್ಯಾನಂದನ ಪ್ರವಚನ ಕೇಳೋಕೆ ಹೋಗಿದ್ದನಂತೆ. ಪ್ರವಚನ ಮುಗಿದ ಮೇಲೆ ಮನೆಗೆ ಬಂದು ಮಲಗಿಕೊಂಡರೆ ರಾತ್ರಿ ಕನಸಿನಲ್ಲಿ 'ಒಂದು ದೊಡ್ಡಹಾವು ಅವನನ್ನು ಸುತ್ತುವರಿಯಿತಂತೆ. ಏನು ಮಾಡಬೇಕೋ ತಿಳಿಯದೆ ನಡುಗುತ್ತಿದ್ದಾಗ ಇದೇ ನಿತ್ಯಾನಂದ ಬಂದು ಅವನನ್ನು ಎತ್ತಿಕೊಂಡನಂತೆ. ಮಾರನೇ ದಿನ ಈ ಕನಸನ್ನು ತನ್ನ ಸ್ನೇಹಿತರಿಗೆ ಹೇಳಿದಾಗ ಅವರು ಅವನನ್ನು ಬಿಡದಿ ಬಳಿಯ ಆಶ್ರಮಕ್ಕೆ ಕರೆತಂದರಂತೆ. ಅಲ್ಲಿ ನೋಡಿದರೆ ಆಶ್ಛರ್ಯ "ರಾತ್ರಿ ತನ್ನ ಕನಸಿನಲ್ಲಿ ತನ್ನನ್ನು ಸುತ್ತಿಕೊಂಡಿದ್ದ ಹಾವೇ ಇಲ್ಲಿ ದೇವರನ್ನು ಸುತ್ತುವರಿದಂತೆ ಚಿತ್ರಿಸಿದ ಕಲಾಕೃತಿ ಇತ್ತಂತೆ" ಅಂದಿನಿಂದ ನಾನು ಮನೆಗೆ ಹೋಗಲೇ ಇಲ್ಲ. ನನ್ನ  ಅಪ್ಪ ಅಮ್ಮ ನಿಗೆ ನಾನೊಬ್ಬನೇ ಮಗ, ಅವರು ಬಂದು ತುಂಬಾ ಗೋಳಾಡಿದರು ಆದರೆ ನಾನು ಮತ್ತೆ ಮನೆಗೆ ಹೋಗಲಿಲ್ಲ. 
  ಈಗ ಆ ಹುಡುಗನನ್ನು ನೆನೆಸಿಕೊಂಡರೆ ನನಗೆ ಅಯ್ಯೋ ಎನಿಸುತ್ತದೆ. ಈಗ ಬಿಡದಿ ಆಶ್ರಮದಲ್ಲಿ ಯಾರೂ ಇಲ್ಲ. ಮೂರೊತ್ತು ನಿತ್ಯಾನಂದನ ಜಪ ಮಾಡುತ್ತಿದ್ದವರು ಈಗ ಊಟಕ್ಕಾದರೂ ಏನು ಮಾಡುತ್ತಿದ್ದಾರೋ ಅಂತ ವೇದನೆಯಾಗುತ್ತಿದೆ. ಯಾವ ಪಾಪಕ್ಕಾಗಿ ಇವರಿಗೆ ಈ ಶಿಕ್ಷೆ.  ಇನ್ನು ಮುಂದೆಯಾದರು ಇಂತಹ "ಅಂಧಭಕ್ತರು"  ಈ ನಿಟ್ಟಿನಲ್ಲಿ ಜಾಗರೂಕರಾಗಿರಬೇಕು ಇಲ್ಲವಾದರೆ ಬಿಡದಿ ಬಳಿಯ  ನಿತ್ಯಾನಂದ ಆಶ್ರಮದಲ್ಲಿನ ಭಕ್ತರಂತೆ ರಾತ್ರೋರಾತ್ರಿ ಓಡಿಹೋಗಬೇಕಾಗುತ್ತದೆ. ಏಕಾಏಕೀ ತಮ್ಮ ನೆಲೆಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಕ್ಷಣಿಕ  ಆಸೆಗಳನ್ನು ತಡೆಹಿಡಿಯಲಾಗದ ನಮ್ಮ ಸ್ವಾಮಿಜಿಗಳು "ನಾವು ಇಂದ್ರೀಯ ನಿಗ್ರಹ ಸಾಧಿಸಿಬಿಟ್ಟಿದ್ದೀವಿ" ಎಂದು ಹೇಳಿಕೊಳ್ಳುತ್ತಾರಲ್ಲ ಅದೆಷ್ಟು ಸರಿ.!! ಚಿಕ್ಕವಯಸ್ಸಿಗೆ ಮೈಮೇಲೆ ದೇವರು ಬಂದು ನನಗೆ ಅನುಗ್ರಹಮಾಡಿದ ಎಂದುಕೊಂಡು ಆಶ್ರಮ ಸೇರುವ ಇವರು ಅಲ್ಲಿ ಸಿಕ್ಕುವ, ಗೌರವಾಧರಗಳು, ಸಿರಿಸಂಪತ್ತಿಗೆ ಮೈಮರೆತು, ಉದ್ದೇಶವನ್ನೇ ಮರೆತು ವರ್ತಿಸಿದಾಗ, ಒಬ್ಬ ನಿತ್ಯಾನಂದ ಸ್ವಾಮಿ,ಅಂತಹ ಮತ್ತೊಬ್ಬ ಸ್ವಾಮಿ ಹುಟ್ಟಿಕೊಳ್ಳುತ್ತಾರೆ. ಹಾಗಾದ್ರೆ ಒಳ್ಳೆ ಸ್ವಾಮಿಜಿಗಳು ಇಲ್ಲವೇ ಇಲ್ಲವಾ..!!  ಖಂಡಿತಾ ಇದ್ದಾರೆ. ಹೇಳಿ ಕೇಳಿ ನಮ್ಮದು ಋಷಿ-ಮುನಿಗಳ, ಸಾಧು-ಸಂತರಿಗೆ ಹೆಸರಾದ ದೇಶ. ಅಷ್ಟೇಕೆ ಸ್ವಾಮಿ ವಿವೇಕಾನಂದ ಹುಟ್ಟಿದ್ದು ಈ ಮಣ್ಣಲೇ ಅಲ್ಲವೇ..? ಅಂತಹ ಮಹಾನುಭಾವನ ಆದರ್ಶ, ಬದ್ದತೆ, ಸೇವಾ ಮನೋಭಾವ ಈ ಅಂಡೆಪಿರ್ಕಿ ಸ್ವಾಮಿಜಿಗಳಿಗೆ  ಎಲ್ಲಿ ಅರ್ಥವಾಗುತ್ತದೆ ಹೇಳಿ..? ಈಗಲೂ ನಮ್ಮ ನಡುವೆ ಕೆಲವು ಆದರ್ಶಪ್ರಾಯರಾದಂತಹ ಸ್ವಾಮಿಜಿಗಳಿದ್ದಾರೆ ಅವರು ನಿಜಕ್ಕೂ ಸಮಾಜಸೇವೆ ಮಾಡುತ್ತಿದ್ದಾರೆ. ಅಂತಹವರನ್ನು ನಾವು ನಿಜಕ್ಕೂ ಗೌರವಿಸಬೇಕು.  
  ಸರ್ಕಾರ ಇಂತಹ ಸ್ವಾಮಿಜಿಗಳಿಗೆ ಕೋಟಿ ಕೋಟಿ ಅನುಧಾನ ಕೊಡುವುದನ್ನು ನಿಲ್ಲಿಸಬೇಕು. ಇಂತಹ ಕಾಮಾಂಧರನ್ನು ಕೂಡಲೇ ಜೈಲಿಗೆ ತಳ್ಳಿ, ಮಠಗಳ ಗೌರವವನ್ನು ಎತ್ತಿಹಿಡಿಯಬೇಕು. ಕೆಲವೇ ಕೆಲವು ಮಠಗಳನ್ನು ಹೊರತುಪಡಿಸಿ, ಇನ್ನುಳಿದ ಮಠಗಳ ನಡತೆ ಬಗ್ಗೆ ಹದ್ದಿನಕಣ್ಣು ಇಡಬೇಕು. ಲೋಕಾಯುಕ್ತರ ವ್ಯಾಪ್ತಿಗೆ ಮಠಗಳನ್ನು ಸೇರಿಸಬೇಕು. ಮಠಗಳ ನೆರಳಲ್ಲಿ ರಾಜಕಾರಣ ಮಾಡೋ ರಾಜಕಾರಣಿಗಳಿಂದ ಇದೆಲ್ಲವನ್ನು ನಿರೀಕ್ಷಿಸೋಕೆ ಸಾಧ್ಯಾನ..!!
 
 

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/03/2010 - 18:30

ಅಂದಹಾಗೆ ಈ ಲೇಖನ ಪುಸ್ತಕದಂಗಡಿಗಳ ಹಿಂದಿನ ಸಾಲಿನಲ್ಲಿ ತುಸುವೇ ಕಾಣುವಂತಿಟ್ಟಿರುವ ಪುಸ್ತಕದಲ್ಲಿ ಪ್ರಕಟವಾಗಿದ್ದರೆ ಚೆನ್ನಾಗಿತ್ತೇನೋ!!!!

ವಿ.ಎಂ.ಶ್ರೀನಿವಾಸ ಶುಕ್ರ, 03/05/2010 - 09:36

.ಧನ್ಯವಾದಗಳು ಸಾರ್.

ತೇಜಸ್ವಿನಿ ಹೆಗಡೆ ಶುಕ್ರ, 03/05/2010 - 11:21

ಚಿಂತನಶೀಲ ಲೇಖನ. ಜನ ಮರುಳೋ ಜಾತ್ರೆ ಮರುಳೋ ಎಂದು ಕೇಳಿದರೆ ಎರಡೂ ಎನ್ನಬೇಕಾಗುತ್ತದೆ ಈಗ! ಇಂತಹ ಕೆಲವು ಸ್ವಾಮಿಗಳಿಂದಾಗಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ನಿಸ್ವಾರ್ಥವಾಗಿ ಮಾಡುತ್ತಿರುವವರನ್ನೂ ಸಂಶಯದಿಂದ ನೋಡುವಂತಾಗುತ್ತದೆ. ಕೆಲವರ್ಷಗಳ ಹಿಂದೆ ಮಂಗಳೂರನ ಬಳಿಯೂ ಓರ್ವ ಇಂತಹದೇ ಜಗತ್ಪ್ರಸಿದ್ಧ(ಕುಖ್ಯಾತ) ಸ್ವಾಮಿ ಇದ್ದ "ಮರ್ಕಡ ಸ್ವಾಮೀಜಿ" ಎನ್ನುತ್ತಿದ್ದರು. ಅವನ ಕಥೆಯೂ ಇದೇ ಆಯಿತು ಮುಂದೆ.
ಇನ್ನು ಕಲ್ಕಿ ಭಗವಾನ್ ಕಥೆಯನ್ನು ಕೇಳಿದರೆ ನಾವು ನಮ್ಮ ಕೆಲಸಗಳನ್ನು ಬಿಟ್ಟು ಇಂತಹ ಒಂದು ಆಶ್ರಮ ತೆರೆಯುವುದೇ ಲೇಸು ಎಂದೆನಿಸುತ್ತದೆ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ.
 http://manasa-hegde.blogspot.com/2008/12/blog-post_20.html
ಲೇಖನ ಉತ್ತಮವಾಗಿದೆ. ಆದರೆ ಶೀರ್ಷಿಕೆ ನಿಮ್ಮ ಲೇಖನದ ಘನತೆಯನ್ನು ಕುಂದಿಸುವಂತಿದೆ ಎಂದೆನಿಸಿತು.

ವಿ.ಎಂ.ಶ್ರೀನಿವಾಸ ಶುಕ್ರ, 03/05/2010 - 15:09

ನಮಸ್ತೇ ಮೇಡಂ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಶೀರ್ಷಿಕೆ ಬದಲಾವಣೆ ಈಗ ಸಾಧ್ಯವಿಲ್ಲ. ಆದರೆ ಮುಂದಿನ ನನ್ನ ಬರಹಗಳಲ್ಲಿ ಖಂಡಿತ ಎಚ್ಚರಿಕೆವಹಿಸುತ್ತೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು.

ರಾಜೇಶ ಹೆಗಡೆ ಭಾನು, 03/14/2010 - 09:13

ಹಾಯ್ ಶ್ರೀನಿವಾಸ್ ಅವರೇ,
ಕೆಲವು ಮಠಾಧಿಪತಿಗಳು, ಸ್ವಾಮೀಜಿಗಳು ಜನಪರ ಕೆಲಸವನ್ನು ಮಾಡುತ್ತಿದ್ದರೂ ಇಂತಹ ಬಹುಸಂಖ್ಯಾತ ಸ್ವಾಮಿಗಳ ವೇಷಧಾರಿ ಸಂಸಾರಿಗಳಿಂದ ಅವರ ಕಾರ್ಯಗಳನ್ನೂ ನಾವು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.
ಖಂಡಿತ, ಜನಸಾಮಾನ್ಯರನ್ನು ಈ ರೀತಿ ಮರುಳುಗೊಳಿಸುವದನ್ನು ತಡೆ ಹಿಡಿಯಬೇಕು.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/03/2010 - 10:48

ಅಪ್ರಬುಧ್ಧ ಬರಹಗಾರರು ರೊಚಕ ಕಥೆಗಳನ್ನು ಬರೆದು ವೈಭವೀಕರಿಸುತ್ತಿದ್ದಾರೆ ಅನ್ನಿಸಿತು.ಮಹಿಳೆಯರೂ ಈ ಲೆಖನವನ್ನು ಒದುತ್ತಿರುವುದು, ಇದೆ ಹೆಚ್ಚು ಒದುಗರನ್ನು ಸೆಳೆದಿದ್ದು ನೋಡಿ  ಸಮಾಜದ ಅಭಿರುಚಿ ಅರ್ಥವಾಯಿತು. ತಲೆಬರಹವೆ ತಲೆಹರಟೆಯನ್ತಿದ್ದು , ಒದಿ ಆದಮೆಲೆ ತಲೆಬರಹ ಸರಿಯಿಲ್ಲ ಅನ್ದರೆ ಹೇಗೆ ಅಲ್ಲವೆ?
ಪುಸ್ತಕದಂಗಡಿಗಳ ಹಿಂದಿನ ಸಾಲಿನಲ್ಲಿ ತುಸುವೇ ಕಾಣುವಂತಿಟ್ಟಿರುವ ಪುಸ್ತಕ ಒದಿ ಸರಿ ಇಲ್ಲ ಅನ್ದಹಾಗೆ.
ಸಮಾಜದ ಸಮಸ್ಯೆಗಳ ಪರಿಹಾರದ, ಅಥವಾ ಯವುದೆ ಉಪಯುಕ್ತ ಮಾಹಿತಿಯ ಅಧ್ಯಯನ ಪೂರ್ಣ ಲೇಖನ ಇಶ್ಟು ಒದುಗರನ್ನು ಸೆಲೆಯದು ಅಲ್ಲವೆ? 
 
 

anista (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/03/2010 - 14:56

nimma matu nija shani yavare, e hinde e lekhana ettangadi agittu, matte pratisteya prashne embante matte bandide, intaha vishayagalannu  vaibavikarisuvudu,  adakke RJ antavaru sahakrisuvu , nanage E lekhanadalli illivaregu ondu vishya arthavagilla, yavudendare, idaralli tilidu kolluva vishaya en ide anta, ella kannada patrike galallu swalpa swalpa kadda malu raragisuttiveyaste. i petty about it.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/03/2010 - 16:28

hi anista,
this happens here frequently, the article, if written by certain persons. though goes out from here, will appear off automatically after some time.. (even though it has the same old stuff taken from some where...!). no idea why it happens only to few people!! - Loki

ಮೇಲಧಿಕಾರಿ ಶನಿ, 04/03/2010 - 17:48

ನಮಸ್ಕಾರಗಳು ಅನಾಮಿಕ ಹಾಗೂ ಲೋಕಿ ಅವರೇ,
ವಿಸ್ಮಯ ನಗರಿಯಲ್ಲಿ ಕೃತಿಚೌರ್ಯಕ್ಕೆ ಖಂಡಿತ ಅವಕಾಶವಿಲ್ಲ. ಬೇರೆಲ್ಲಿಂದಲೋ ಎತ್ತಿದ ಲೇಖನವಾಗಿದ್ದರೆ ಎಲ್ಲಿಂದ ಎಂಬುದನ್ನು ತಿಳಿಸಿ.  ಆಧಾರವಿಲ್ಲದೇ ವಿನಾಕಾರಣ ಆರೋಪ ಮಾಡುವದರಲ್ಲಿ ಅರ್ಥವೇ ಇಲ್ಲ.
ವಂದನೆಗಳೊಂದಿಗೆ
--ಮೇಲಧಿಕಾರಿ
 

anista (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/05/2010 - 11:07

sir, e artical na kade pyara , prajavaniyalli  yatavat prakatavagide, matte madyada onderedu pyara vijaya karnatakadalli, bekadare tave prikshisi, ivara aneka lekanagala abhimani nanu adare e lekhanadalli hegeke madidaro nanariye, i dont want to talk more about it. i am leaving this site for ever.
byeeeeeeeeee

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/05/2010 - 12:24

dear rajesh,
a part of article was taken from Vjaya karnataka... (here its not been quoted!!!). i had read this in online version, but dont remember the exact date.... - Loki

ವಿ.ಎಂ.ಶ್ರೀನಿವಾಸ ಸೋಮ, 04/05/2010 - 18:07

ಎಲ್ಲರಿಗೂ ನಮಸ್ಕಾರ.
ನೀವು ಈ ಲೇಖನವನ್ನು ಯಾವಾಗ ವಿಜಯಕರ್ನಾಟಕದಲ್ಲಿ ಮತ್ತು ಪ್ರಜಾವಾಣಿಯಲ್ಲಿ ಓದಿದ್ದೀರೋ ಗೊತ್ತಿಲ್ಲ. ನಾನಂತೂ ಈ ಲೇಖನವನ್ನು ಟಿವಿಮಾಧ್ಯಮದಲ್ಲಿ ನಿತ್ಯಾನಂದನ ಮುಖವನ್ನು ನೋಡಿದ ಕೂಡಲೇ ಬರೆದೆ. ಕದ್ದು ಲೇಖನ ಬರೆಯುವ ತುರ್ತು ನನಗಿಲ್ಲ ಅಥವಾ ನನಗೆ ಈ ಲೇಖನಗಳಿಗೆ ಯಾರೂ ಪ್ರಶಸ್ತಿ ಮತ್ತು ಸಂಭಾವನೆಯನ್ನು ಕೊಡುತ್ತಿಲ್ಲ. ವಿಷಯಗಳಿಲ್ಲದೇ ಇದ್ದಾಗ ಸುಮಾರು 6 ತಿಂಗಳುಗಳ ಕಾಲ ನಾನು ಯಾವುದೇ ಬರಹವನ್ನು ಇಲ್ಲಿ ಬರೆದಿರಲಿಲ್ಲ ಅದು ನಿಮಗಿಂತ ಚೆನ್ನಾಗಿ ಮೇಲಾಧಿಕಾರಿ ಮತ್ತು ನನ್ನ ಸ್ನೇಹಿತರಿಗೆ ಗೊತ್ತು.
ಆಮೇಲೆ ಇನ್ನೊಂದು ವಿಷಯ ನಿಮ್ಮ ಗಮನಕ್ಕೆ ತರಲು ಯತ್ನಿಸುತ್ತೇನೆ. ವಿಜಯಕರ್ನಾಟಕದಲ್ಲಿ ಅಥವಾ ಪ್ರಜಾವಾಣಿಯಲ್ಲಿ ಬಂದದ್ದು ಇಲ್ಲಿ ಬಂದಿದೆ ಅಂತ ಯಾಕೆ ಭಾವಿಸುತ್ತೀರಿ, ನಾನು ಬರೆದದ್ದನ್ನೇ ಅವರು ತಮ್ಮ ಪತ್ರಿಕೆಗಳಲ್ಲಿ ಬರೆದಿದ್ದಾರೆ ಎಂಬ ಭಿನ್ನ ದೃಷ್ಟಿಯಿಂದ ಯಾಕೆ ನೋಡಬಾರದು. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಆ ಪತ್ರಿಕೆಗಳ ಬರಹಗಾರರು ಮಾತ್ರ ಬುದ್ದಿವಂತರಲ್ಲ..! ಬೇರೆಯವರು ಸಹ ಅದೇ ರೀತಿ ಯೋಚಿಸಬಹುದಲ್ಲವಾ.. ಇಷ್ಟೊಂದು ಆತ್ಮವಿಶ್ವಾಸದಿಂದ ಯಾಕೆ ಹೇಳುತ್ತಿದ್ದೇನೆ ಎಂದರೆ ನಾನು ಸಹ ಆ ಪತ್ರಿಕೆಗಳಿಗೆ ಬರೆಯುತ್ತೇನೆ. ವಿಜಯಕರ್ನಾಟಕದಲ್ಲಿ ಮತ್ತು ಕನ್ನಡಪ್ರಭದಲ್ಲಿ ನನ್ನವು 20 ಕ್ಕೂ ಹೆಚ್ಚು ಬರಹಗಳು ಪ್ರಕಟವಾಗಿವೆ. ಪ್ರಜಾವಾಣಿಯನ್ನು ನಾನು ಓದುವುದಿರಲಿ ಅದನ್ನು ಸುಮ್ಮನೆ ಮುಟ್ಟಿ ಕೂಡ 5 ವರ್ಷವಾಗಿ ಹೋಯಿತು. ಅದು ನಿಮ್ಮಂತಹವರಿಗೆ ತಿಳಿಯದಿರಬಹುದು ಆದರೆ ನನ್ನ ಆತ್ಮಸಾಕ್ಷಿಗೆ ಮತ್ತು ನನ್ನ ಸ್ನೇಹಿತರಿಗೆ ಗೊತ್ತು ನಿಮಗೆ ಅವಶ್ಯಕತೆ ಎನಿಸಿದರೆ ನಾನು ಅವರ ಸಂಖ್ಯೆಗಳನ್ನು ಕೊಡುತ್ತೇನೆ. ನೀವು ಮಾತನಾಡಬಹುದು. ಸುಮ್ಮನೆ ಕಾಲೆಳೆಯುವ ಸಣ್ಣಬುದ್ದಿ ಬೇಡ.
ಕೊನೆಮಾತು: ವಿಸ್ಮಯನಗರಿ ಚಿಕ್ಕದು ಎಂಬ ಕಾರಣಕ್ಕೆ ಇಲ್ಲಿನ ಬರಹಗಾರರು ಕಳ್ಳರು ಎಂಬ ಧಾಟಿ ಬೇಡ. ಪ್ರತಿಭೆ ಎಲ್ಲರಲ್ಲೂ ಇರುತ್ತೆ ಆದರೆ ಕೆಲವರು ವೃತ್ತಿಪರ ಬರಹಗಾರರಾದರೆ ಮತ್ತೆ ಕೆಲವರು ಹವ್ಯಾಸಿ ಬರಹಗಾರರಾಗುತ್ತಾರೆ ಅಷ್ಟೆ. ಇಷ್ಟು ಮಾತ್ರದ ಸಣ್ಣವಿಷಯ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.