ಆಪ್ತಮಿತ್ರ ಚಿತ್ರದ ಮುಂದಿನ ಭಾಗವಾದ ಆಪ್ತರಕ್ಷಕಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಡಾ॥ವಿಷ್ಣುವರ್ಧನ ಅವರ 200ನೇ ಹಾಗೂ ಕೊನೆಯ ಚಿತ್ರವಾಗಿರುವದು ದೌರ್ಭಾಗ್ಯ. ಇದರಲ್ಲಿನ ನಾಗವಲ್ಲಿ ಎಂಬ ಕಾಲ್ಪನಿಕ ಪಾತ್ರಕ್ಕೆ ಹೆದರಿ ರಜನಿಕಾಂತ್ ಈ ಚಿತ್ರದ ರಿಮೇಕ್ ಮಾಡಲು ಹಿಂಜರಿದಿದ್ದಾರೆ. ಆಪ್ತಮಿತ್ರ ಮುಗಿದಾಗ ಅದರ ನಾಯಕಿ ಸೌಂದರ್ಯ ಹಾಗೂ ಆಪ್ತರಕ್ಷಕ ಮುಗಿದಾಗ ಅದರ ನಾಯಕ ವಿಷ್ಣುವರ್ಧನ್ ವಿಧಿವಶರಾಗಿರುವದನ್ನು ಸ್ಮರಿಸಬಹುದು.

Re: ವಿಷ್ಣುವರ್ಧನ್ ಕೊನೆಯ ಚಿತ್ರ ಆಪ್ತರಕ್ಷಕಕ್ಕೆ ಭಾರಿ ಪ್ರತಿಕ್ರಿಯೆ
ಒಪ್ತೇನೆ ನಿಮ್ಮ ಮಾತನ್ನು ಕಟ್ಟಿಯವರೇ. ಸಿನಿಮಾವನ್ನು ಸಿನಿಮಾದ ತರವೇ ನೋಡಬೇಕು. ಈ ಮಾತು ನಿಮಗೂ ಅನ್ವಯಿಸುತ್ತೆ. ನೀವು ಸಹ ಪೂರ್ವಗ್ರಹಪೀಡಿತರಾಗದೆ ಸಿನಿಮಾವನ್ನು ಸಿನಿಮಾದ ತರ ನೋಡಿ. ಈ ಸಿನಿಮಾದಲ್ಲಿ ಏನು ಸರಿಯಿಲ್ಲ ಎಂದು ಹೇಳಿದರೆ ಅದಕ್ಕೆ ಸೂಕ್ತ ಉತ್ತರವನ್ನು ನಾನು ಕೊಡಬಲ್ಲೆ. ಯಾರು ಹೇಳಿದ್ದು ಇಲ್ಲಿ ರಾ..ರಾ ಇಲ್ಲ ಅಂತ. ರಾ..ರಾ ಹಾಡು ಇಲ್ಲಿ ಮೊದಲನೇ ಭಾಗಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ಬಹುಶಃ ನೀವು ಸಿನಿಮಾನೋಡದೇ ಪ್ರತಿಕ್ರಿಯಿಸುತ್ತೀದ್ದೀರಿ ಅನಿಸುತ್ತೆ. ದಯವಿಟ್ಟು ಅದೊಂದು ಕೆಲಸ ಮಾಡಬೇಡಿ. ಕನ್ನಡದ ಆಸ್ತಿ ನಮ್ಮ ವಿಷ್ಣು. ಸಂತನಂತೆ ಬದುಕಿಹೋದವರು ಅವರು. ಕೆಲವರು ಬಾಯಿಮಾತಿನಲ್ಲಿ ಆಡಿದ್ದನ್ನು ವಿಷ್ಣು ನಿಜಜೀವನದಲ್ಲಿ ಅಳವಡಿಸಿಕೊಂಡು ಬದುಕಿದರು. ಆದರೆ ಅವರು ಬದುಕಿದ್ದಾಗ ಅವರಿಗೆ ಏನು ಸಲ್ಲಬೇಕೋ ಅದು ಸಲ್ಲಲಿಲ್ಲ. ಈಗ ನಮಗೆ ಅವರಿಗೆ ಗೌರವ ಕೊಡಲು ಉಳಿದಿರುವುದು ಒಂದೇ ದಾರಿ ಅದು ಆಪ್ತರಕ್ಷಕವನ್ನು ನೋಡುವುದು. ಸಿನಿಮಾ ಖಂಡಿತವಾಗಿ ಆಪ್ತಮಿತ್ರಕ್ಕಿಂತ ಹತ್ತುಪಟ್ಟು ಚೆನ್ನಾಗಿದೆ. ಆದರೆ ಒಂದು ಸಣ್ಣ ಬದಲಾವಣೆ ಎಂದರೆ ಆಪ್ತಮಿತ್ರದ ಗೆಲುವಿನಲ್ಲಿ ಸೌಂದರ್ಯರವರ ಪಾಲು ಇತ್ತು. ಆದರೆ ಆಪ್ತರಕ್ಷಕದಲ್ಲಿ ಉದ್ದೇಶಪೂರ್ವಕವಾಗಿ ಅಂತಹದೊಂದು ಪಾತ್ರಪೋಷಣೆಯನ್ನು ಸಂಕುಚಿತಗೊಳಿಸಿದ್ದಾರೆ. ಯಾಕೆಂದರೆ ಇದು ಸಂಪೂರ್ಣವಾಗಿ ವಿಷ್ಣು ಸಿನಿಮಾವಾಗಬೇಕಿತ್ತು. Once agian ಯಾಕೆಂದರೆ ಇದು ಡಾ.ವಿಷ್ಣುವಿನ 200 ನೇ ಚಿತ್ರ. 200ನೇ ಚಿತ್ರದ ಸಂಪೂರ್ಣ ಗೆಲುವು ಡಾ.ವಿಷ್ಣುವಿನ ಹೆಸರಲ್ಲಿ ದಾಖಲಾಗಬೇಕಿತ್ತು. ಆ ಉದ್ದೇಶದಿಂದ ಮೂಡಿಬಂದಿರುವುದೇ ಆಪ್ತರಕ್ಷಕ.
ಈ ಚಿತ್ರದ ಬಗ್ಗೆ ರಜನಿಕಾಂತ್ ಒಂದು ಮಾತು ಹೇಳಿದ್ದಾರೆ. " ಇಡೀ ಜಗತ್ತಿನಲ್ಲಿ ತನ್ನ ಕೊನೆ ಸಿನಿಮಾದ, ಕೊನೆ ದೃಶ್ಯದಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡಿದ ಏಕೈಕ ನಟನೆಂದರೆ ಅದು ಡಾ.ವಿಷ್ಣು " ಅಂತ. ಹೌದು ವಿಷ್ಣು ಆ ಸಿನಿಮಾದಲ್ಲಿ ಅಂತಹ ತುಂಬಾ ಚಮತ್ಕಾರಗಳನ್ನು ಮಾಡಿಹೋಗಿದ್ದಾರೆ. ಸಾಯುವುದು ಗೊತ್ತಿದ್ದವರ ತರಹವೇ ಈ ಚಿತ್ರವನ್ನು ಮಾಡಿಮುಗಿಸಿದ್ದಾರೆ.
ರಾಜನ ಪಾತ್ರದಲ್ಲಿ ಅವರ ಅಭಿನಯ ಅಮೋಘವಾಗಿದೆ ಅಂದುಕೊಳ್ಳುವಷ್ಟರಲ್ಲೇ ಬರುತ್ತದೇ ನೋಡಿ 125 ವರ್ಷದ ಮುದುಕನ ಪಾತ್ರ .!! ಅಬ್ಬಾ... ನಂಬೋಕೆ ಸಾಧ್ಯವೇ ಇಲ್ಲ. ಅದು ವಿಷ್ಣೂನ ಅಂತ.! ಆ ಧ್ವನಿ, ದೇಹಭಾಷೆ, ಉದ್ದುದ್ದದ ಉಗುರು, ಕಣ್ಣಲ್ಲೇ ಬೆದರಿಸುವ ಪರಿ. ಬಿಡ್ರೀ ಒಂದ್ಸಲ ನೋಡಿ ಬನ್ನಿ ಆಮೇಲೆ ಮಾತನಡೋಣ.
Re: ವಿಷ್ಣುವರ್ಧನ್ ಕೊನೆಯ ಚಿತ್ರ ಆಪ್ತರಕ್ಷಕಕ್ಕೆ ಭಾರಿ ಪ್ರತಿಕ್ರಿಯೆ
ಸಿನಿಮಾವನ್ನು ಸಿನಿಮಾದಂತೆಯೇ ನೋಡಬೇಕು. ನಾಗವಲ್ಲಿಯ ಕಥೆ, ಅಡಗೂಲಜ್ಜಿಯ ಕತೆ. ಸೌಂದರ್ಯ ತೀರಿಕೊಂಡಿದ್ದು ಅಪಘಾತದಲ್ಲಿ, ವಿಷ್ಣು ಕಾಲವಶವಾಗಿದ್ದು ಅನಾರೋಗ್ಯದಿಂದ ! ನಾಗವಲ್ಲಿ ಎಂಬ ನೃತ್ಯಾಂಗನೆಯದು ದಂತಕಥೆ. ಇದೆಲ್ಲ "ಪಬ್ಲಿಸಿಟಿ" ಸ್ಟಂಟ್. ಆಪ್ತಮಿತ್ರ ಚೆನ್ನಾಗಿ ಓಡಿತು. ಅದರ ಲಾಭ ಪಡೆಯಲು "ಆಪ್ತರಕ್ಷಕ" ನಿರ್ಮಾಣವಾಯಿತು. ಪಿ. ವಾಸುಗೆ, ದ್ವಾರಕೀಶ್ ಗೆ, ಅವಿನಾಶ್ ಗೆ, ರಜನಿಕಾಂತ್ ಗೆ ಏನೂ ಆಗಲಿಲ್ಲ ! ಆಪ್ತರಕ್ಷಕ, ಆಪ್ತಮಿತ್ರನಷ್ಟು ಚೆನ್ನಾಗಿಲ್ಲ ! ಇದರಲ್ಲಿ "ರಾ ರಾ" ಇಲ್ಲವಲ್ಲ ! ಆದರೂ ವಿಷ್ಣು ಈ ಸಿನಿಮಾಕ್ಕೆ ಶ್ರೀರಕ್ಷೆ. ವಿಷ್ಣುವಿನ ಮರಣವೇ ಆಪ್ತರಕ್ಷಕನನ್ನು ರಕ್ಷಿಸಬೇಕು !
ನಿಮ್ಮ ಅನಿಸಿಕೆ ತಿಳಿಸಿ