ಊಟಬಲ್ಲವನಿಗೆ...

ಬರೆದವರು: ಸಿರಿರಮಣ - ಕಳುಹಿಸಿದ ದಿನ 05 February 2010

ಹೌದು, ಈ ಪ್ರಾಣಿಗಳಲ್ಲಿ ರೋಗಗಳ ಸಂಖ್ಯೆ ಜಾಸ್ತಿಯಾಗಿಲ್ಲ, ಅಸಂಖ್ಯ ಸಸ್ಯಕೋಟಿಗಳಲ್ಲೂ ಹೊಸರೋಗಗಳ ಸುಳಿವಿಲ್ಲ, ಮನುಷ್ಯರಿಗೆ ಮಾತ್ರ ನಿತ್ಯ ನೂತನ ವ್ಯಾಧಿಗಳು, ಹೀಗೇಕೆ ? ! ನಾವು ಉತ್ತರಭಾರತೀಯರ ನಾನ್, ರೋಟಿ, ಕುಲ್ಚ, ದಾಲ್‌ಗಳನ್ನು ಮೆದ್ದು ರಾಷ್ಟ್ರೀಯ ವ್ಯಕ್ತಿ ಎನಿಸಿಕೊಳ್ಳಲು, ವಿಶೀಯ ಪಿಜ್ಜಾ ಬರ್ಗರ‍್ಗಳನ್ನು ತಿಂದು ಅಂತಾರಾಷ್ಟ್ರೀಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಒಟ್ಟಾರೆ ನಮ್ಮ ಜೀವನ ವಿಧಾನ ಮತ್ತು ಆಹಾರ ಪದ್ಧತಿಗಳು ತುಂಬಾ ಬದಲಾಗಿರುವುದು ಹೊಸಹೊಸ ಕಾಯಿಲೆಗಳಿಗೆ ನಿಮಂತ್ರಣ ನೀಡಿದಂತಾಗಿದೆ " ಆಹಾರಾರ್ಥಂ ಕರ್ಮಕುರ್ಯಾದನಿಂದ್ಯಂ, ಕುರ್ಯಾದಾಹಾರಂ ಪ್ರಾಣಸಂರಕ್ಷಣಾರ್ಥಮ್ || ಎಂಬ ಆರ್ಯೋಕ್ತಿಯನ್ನೇ ಧ್ಯೇಯವಾಕ್ಯವಾನ್ನಾಗಿಸಿಕೊಂಡ, ಊಟಬಲ್ಲವನಿಗೆ ರೋಗವಿಲ್ಲ ಎಂಬುದನ್ನು ಚೆನ್ನಾಗಿ ಅರಿತ, ಆಹಾರ ಕ್ರಮದಲ್ಲಿ ಅಲಿಖಿತ ಸಂವಿಧಾನವನ್ನೇ ಹೊಂದಿದ, ಅನ್ಯರಿಗೂ ಆದರ್ಶವಾದ ಅಡುಗೆ ಪರಂಪರೆಗೆ ಹೆಸರಾದ, ನಾವು ಭಾರತೀಯರೇ ಆಹಾರದ ವಿಷಯದಲ್ಲಿ ಎಡವುತ್ತಿರುವುದು ವಿಚಿತ್ರ  ವಿಪರ‍್ಯಾಸ.


            ದೂರದ ಆ ಪೆರ್ಡಾಲದಿಂದ ಮಧ್ಯ ವಯಸ್ಕ ಬಂಧುಗಳೊಬ್ಬರು ಬಹಳ ವ್ಯಥೆಯಿಂದ ಕಳಕಳಿಯಿಂದ ಪತ್ರ ಬರೆದಿದ್ದರು. ಊರಲ್ಲಿ ದೊಡ್ಡ ಹವ್ಯಕರೊಬ್ಬರ  ಮನೆಯಲ್ಲಿ ಮದುವೆ ಸಮಾರಂಭ. ಅರ್ಧಶತಕಷ್ಟು ಬಗೆ ಬಗೆಯ ಭಕ್ಷ್ಯ ಭೋಜ್ಯಗಳು.  ಬೇಡಿ ನೀಡಿ ಉಣ್ಣುವ, ಎತ್ರರದಲ್ಲಿ ಕುಳಿತು ಮೆಲ್ಲುವ, ಸಾಂಪ್ರದಾಯಿಕ ಶೈಲಿಯಲ್ಲಿ ಸ್ವೀಕರಿಸುವ ನಿಂತು ತಿನ್ನುವ ವ್ಯವಸ್ಥೆಗಳು ಇದ್ದವು.ಆದರೆ ತೊವ್ವೆ ತಂಬ್ಳಿ, ಹುಳಿ, ಮೆಣಸಿಕಾಯ್, ಸಾಂಬ್ರಾಣಿ ಮುಂತಾದ ನಮ್ಮ ಭೋಜನಾಮೃತಗಳಾವವೂ ಅಲ್ಲಿರಲಿಲ್ಲ. ನೋಡಿದರೇ ಬೇಡವೆನಿಸುವ ವ್ಯಂಜನಗಳನ್ನು ಮೆದ್ದೆದ್ದಮೇಲೆ ತಂಪನೆಯ ಕೆನೆಹಿಮಲೇಹ್ಯ (ಐಸ್‌ಕ್ರೀಮ್) ಆದರೆ ಭೋಜನ ದಕ್ಷಿಣೆ ಒಂದುರೂಪಾಯಿ ನಾಣ್ಯ ! ಸುಧಾರಣೆಯಲ್ಲದ ಈ ಬದಲಾವಣೆ ಹಳ್ಳಿಗಳನ್ನೂ ಆಕ್ರಮಿಸಿತಲ್ಲ ಎಂಬುದು ಅವರ ಕೊರಗು.


            ನನಗೂ ಈ ಮಹಾ ನಗರಿಯಲ್ಲಿ ಭೋಜನದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸುವ ಅನಿವಾರ್ಯತೆ ಬರುತ್ತಿರುತ್ತವೆ. ಸ್ನೇಹಿತರೊಂದಿಗೆ ಭಾರೀ ಭೋಜನ ಸವಿಯುವಾಗ ಅನೇಕ ಸಲ ಅನಿಸಿದೆ. ನಮ್ಮದಲ್ಲದ ನಮಗೊಗ್ಗದ ಈ ಭಕ್ಷ್ಯ ಭೋಜ್ಯಗಳನ್ನು ಯಾಕೆ ಮಾಡಿಸಿದಿರಿ ಎಂದು ಆತಿಥೇಯರನ್ನು ಕೇಳಿದ್ದೇನೆ ಕೂಡ. ಬಹಳ ಜನರಿಗೆ ಇದು ಘನತೆಯ (ಪ್ರೆಸ್ಟೀಜ್‌ಪ್ರಶ್ನೆ) ಸಂಕೇತವಂತೆ. ಬಹಳಷ್ಟು ಜನ ಹವ್ಯಕರಲ್ಲಿ... ನಿಮಗೆ ಹೋಳಿಗೆ ಸೇರ‍್ತ, ಗೆಣಸಲೆ ಇಷ್ಟವಾ, ಪತ್ರೊಡೆ ಮೆಚ್ಚತಾ, ತೊಡದೇವು ಬೇಕಾ, ಮಾವ್ನಕಾಯ್ ನೀರ‍್ಗೊಜ್ಜು ಆಗ್ತಾ ? ಅಂತ ಕೇಳಿದರೆ ಇಲ್ಲೆ ; ಬೇಡ ಅನ್ನುವ ಜನ ಇರಲಾರರು. ಶ್ರೀರಾಮಂದ್ರಾಪುರಮಠವು ಬೆಂಗಳೂರಿನಲ್ಲಿ ಎರಡ್ಮೂರುಬಾರಿ ಪಾಕೋತ್ಸವವನ್ನು ನಡೆಸಿದಾಗ ಸಾವಿರ ಸಾವಿರ ಶಾಕಾಹಾರಿಗಳು ಸಂತೋಷದಿಂದ ಭಾಗವಹಿಸಿದ್ದನ್ನು ಕಂಡರೆ ಅನ್ಯರಿಗೂ ಈ ಆಹಾರ ಬಲು ಇಷ್ಟ ಎಂಬುದು ದೃಢವಾಗುತ್ತದೆ. ಹಾಗಾದರೆ ಯಾರನ್ನು ಮೆಚ್ಚಿಸಲು ಉತ್ತರದ, ವಿಲಾಯತಿಯ, ದಾಕ್ಷಿಣಾತ್ಯರಿಗೆ ಜೀರ್ಣಿಸಲಾಗದ ಖಾದ್ಯ ಭೋಜ್ಯಗಳು. ಎಂಬುದೇ ನಿರುತ್ತರ ಪ್ರಶ್ನೆ. ವಾಯು ಜಲ ಇತ್ಯಾದಿ ಪರಿಸರಗಳ ಮಾಲಿನ್ಯದಲ್ಲಿ, ಮಾಧ್ಯಮಗಳಿಂದ ಮನೋಮಾಲಿನ್ಯದಿಂದ ಜೀವಿಸುವ ಜನತೆಯಲ್ಲಿ ಕಲ್ಲುನುಂಗಿ ಕರಗಿಸಬಲ್ಲ ಗಟ್ಟಿಗರಾರೂ ಈಗ ಇದ್ದಂತಿಲ್ಲ. ಮಹಾನಗರಿಗರ ಜೀವನ ಕ್ರಮದಲ್ಲಿ ಸಾಮಾನ್ಯ ಅನ್ನಸಾರು ಗೊಜ್ಜು ತಂಬ್ಳಿಗಳೇ ಅರಗುವುದು ಕಷ್ಟ.ವಾಗಿರುವಾಗ, ಎಳೆದಷ್ಟು ಉದ್ದವಾಗುವ ನಾನ್, ಅರೆಬೆಂದ ಫ್ರೈಡ್ರೈಸ್, ಅತಿ ಕ್ಯಾಲೊರಿಯ ಪುಲಾವ್, ಎಣ್ಣೆಮುಳುಕ ಸಮೋಸ, ವಿಷರಸಾಯನಯುಕ್ತ ಪೂರ್ಣಶಾಕವಲ್ಲದ ಗೋಬಿಮಂಚೂರಿ ಇವೆಲ್ಲವ ಮೆದ್ದು ನಿದ್ದೆಮಾಡುವವರಾರಿದ್ದಾರೆ. ಅಪ್ಪಿ ತಪ್ಪಿ ಕೆಲವರಿಗಾದರೂ ಜೀರ್ಣವಾಗಿ ಬಿಡಬಹುದು ಎಂದು ಜೀರ್ಣಕ್ರಿಯೆಗೆ ಆವಶ್ಯಕ ಉಷ್ಣತೆಯೂ ಹೊಟ್ಟೆಯಲ್ಲಿ ಇರಬಾರದೆಂದು ತಂಪನೆಯ ಐಸ್ಕ್ರೀಮ್ ಕೊಟ್ಟು ಬಂಧುಗಳ ಮೇಲೆ ಹಗೆಯನ್ನೇಕೆ ತೋರುವರೋ ನಾನರಿಯೆ.


            "ಆಹಾರಶುದ್ಧೌ ಸತ್ತ್ವಶುದ್ಧಿಃ " ಎಂಬುದನ್ನರಿತು ನಮ್ಮ ಸಾಂಪ್ರಯಾಯಿಕ ಆಹಾರಕ್ರಮವನ್ನು ಅನುಸರಿಸೋಣ. ಬಾಯಿರುಚಿಯನ್ನುಳಿಸಿ, ಪರಂಪರೆಯನ್ನು ರಕ್ಷಿಸಿ, ಸ್ವಸ್ಥ ಸಮಾಜವನ್ನು ಕಟ್ಟೋಣ.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 2 (3 ಓಟುಗಳು)
ಚೆನ್ನೈ ಕನ್ನಡಿಗ's picture
ಸೋಮ, 08/02/2010 - 17:24 ರಂದು ಚೆನ್ನೈ ಕನ್ನಡಿಗ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಸಿರಿರಮಣ,


ನಿಮ್ಮ ಈ 'ಊಟ ಬಲ್ಲವನಿಗೆ...' ಲೇಖನವನ್ನು ಓದಿದೆ. ನಿಮ್ಮ ಚಿಂತನೆ-ಬರಹ ಚೆನ್ನಗಿದೆ. ಇದರಿಂದಾಗಿ ನೀವೊಬ್ಬ ಉತ್ತಮ ವ್ಯಕ್ತಿಯೆಂದು ತಿಳಿದಿದ್ದೆ. ಆದರೆ, ನಿಮ್ಮ ಲೇಖನದ ಪ್ರತಿಕ್ರಿಯೆಗಳಿಗೆ ಅತ್ಯಂತ ಕೆಟ್ಟದಾಗಿ ನೀವು ಪ್ರತಿಕ್ರಿಯಿಸಿರುವುದನ್ನು ನೋಡಿದಮೇಲೆ ನನ್ನ ಪ್ರತಿಕ್ರಿಯೆ ಹೀಗಿದೆ.


೧. ನೀವು 'ನಿಮ್ಮ ಬಗ್ಗೆ' ತಿಳಿಸಿರುವಂತೆ ನೀವೊಬ್ಬ ಅಹಂಕಾರಸಹಿತ 'ಸಂಸ್ಕೃತ ಪ್ರೇಮಿ' ಎನಿಸುತ್ತದೆ. ಆದರೆ ನಿಮ್ಮ ವೇಶ-ಭೂಷಣವನ್ನು ನೋಡಿದರೆ ನೀವು ಖಂಡಿತವಾಗಿಯೂ 'ದೇಶೀಯತೆ ಹರಿಕಾರ' ಎಂದು ಯಾರಿಗೂ ಅನ್ನಿಸುವುದಿಲ್ಲ.


೨. ನಿಮ್ಮ ಲೇಖನವನ್ನು ಓದಿ ಪ್ರತಿಕ್ರಿಯಿಸಿರುವವರ ಬಗ್ಗೆ ಇಷ್ಟೊಂದು 'ಸಂಸ್ಕೃತಿ-ಸಂಸ್ಕೃತ' ರಹಿತ ನಡವಳಿಕೆಯೇಕೆ. ನೀವು ಬರೆದಿರುವುದೇ ವೇದ ವಾಕ್ಯವೆಂದು ಎಲ್ಲರೂ ತಿಳಿಯಬೇಕೆಂಬ ಹಟವೇ...?


ಈಗ್ಗೆ ಬಹುಷಃ ಇಷ್ಟು ಸಾಕೆನಿಸುತ್ತದೆ. ಮುಂದೆ ನಿಮ್ಮ ಬರಹಗಳನ್ನು ಮತ್ತೊಮ್ಮೆ ನೋಡೋಣ. 

ಸಿರಿರಮಣ's picture
ಮಂಗಳ, 09/02/2010 - 14:20 ರಂದು ಸಿರಿರಮಣ ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ನಮಸ್ಕಾರ ಚೆನ್ನೈ ಚಿನ್ನವೇ,


ಹಿರಿಯರು ಹೇಳುತ್ತಾರೆ " ಹುಳಿ ಹೆಂಡವನ್ನು ಬಂಗಾರದ ಕಲಶದಲ್ಲಿ ಇಡುವುದಿಲ್ಲ " ಎಂದು. ಅದಕ್ಕೆ ತಟ್ಟುಕೊಡವೇ ಆಗಬೇಕಂತೆ !!

ಚೆನ್ನೈ ಕನ್ನಡಿಗ's picture
ಮಂಗಳ, 09/02/2010 - 17:36 ರಂದು ಚೆನ್ನೈ ಕನ್ನಡಿಗ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಶ್ರೀಕಾಂತ ಹೆಡಗೆಯೇ...


ಹಿರಿಯರು ಹೇಳಿರುವ ಸತ್ಯವನ್ನು ಅದೆಷ್ಟು ಚೆನ್ನಗಿ ಅರಿತಿರುವೆಯೋ ಸಿವನೇ!!!.


ಏನೇ ಅದ್ರೂ ಇದರಿಂದ ಒಂದಂತೂ ತಿಳಿಯಿತು. ನೀನು ತಟ್ಟು ಕೊಡದ ಹುಳಿ ಹೆಂಡವನ್ನು ಬಹಳ ಅದ್ಭುತವಾಗಿ ಅನುಭವಿಸಿದವನಿರಬೇಕು. ಭಲೇ...! ಮೆಚ್ಚಿದೆ ನಿನ್ನ 'ದೇಶೀಯತೆ'ಯನ್ನು. KEEP IT UP.

ತೇಜಸ್ವಿನಿ ಹೆಗಡೆ's picture
ರವಿ, 07/02/2010 - 11:42 ರಂದು ತೇಜಸ್ವಿನಿ ಹೆಗಡೆ ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಮಾಹಿತಿಪೂರ್ಣ ಲೇಖನ. ಚಿಂತನಶೀಲವೂ ಆಗಿದೆ. ಇತ್ತೀಚಿಗೆ ಸತ್ಯನಾರಾಯಣ ಕಥೆ, ಪೂಜೆ, ಹವನಗಳಲ್ಲೂ ಈ ಕಟು ಮಸಾಲೆಯುಕ್ತ ಫಲಾವ್ ಗಳ ಹಾವಳಿ ಹೆಚ್ಚಾಗಿದೆ. ಪೂಜೆ ಪುನಸ್ಕಾರಗಳ ಉದ್ದೇಶ ಉತ್ತಮ ಭಾವನೆಗಳನ್ನು ಆಹ್ವಾನಿಸಿಕೊಳ್ಳುವುದು. ಅದಕ್ಕಾಗಿ ಆಹಾರಗಳಲ್ಲಿ ಆ ದಿನವಾದರೂ ಸಾತ್ವಿಕ ಗುಣ ನೀಡುವ ಪದಾರ್ಥಗಳನ್ನೇ ಬಳಸಬೇಕಿಂದೆ. ಆದರೆ ಒಳಗಿನ ಮರ್ಮವನ್ನರಿಯದ ಮೂಢರು, ಪೂಜೆಯ ನೆಪದಲ್ಲಿ ತಮ್ಮ ಬಾಯಿ ಚಪಲತೆಯನ್ನೂ ಮೆರೆಯುತ್ತಿದ್ದಾರೆ.


ಇಂಥವರೆಲ್ಲಾ ಬದುಕಲು ತಿನ್ನುವುದಿಲ್ಲ. ತಿನ್ನುವುದಕ್ಕಾಗಿಯೇ ಬದುಕುತ್ತಿದ್ದಾರೆ ಎಂದೆನಿಸುತ್ತದೆ.

ಸಿರಿರಮಣ's picture
ಸೋಮ, 08/02/2010 - 14:31 ರಂದು ಸಿರಿರಮಣ ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಸಮಾನವಯಸ್ಕರೋ ಗೊತ್ತಿಲ್ಲೆ, ಸಮಾನ ಮನಸ್ಕರಾಗಿದ್ದಕ್ಕೆ ಧನ್ಯವಾದ ಕೂಸೇ.

Manjunatha HT's picture
ಶನಿ, 06/02/2010 - 21:47 ರಂದು Manjunatha HT ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಒೞೆಯ ಲೇಖನ, ಊಟದ ಇತಿ ಮಿತಿಗಳನ್ನರಿಯದೆ ತಿನ್ನಬಾರದ್ದನ್ನೆಲ್ಲಾ ತಿಂದು ಬರಬಾರದ ರೋಗಗಳಿಗೆಲ್ಲಾ ತಮ್ಮನ್ನೊಡ್ಡಿಕೊೞುತ್ತಿರುವವರಿಗೆ ನಮ್ಮ ಸಂಸ್ಕೃತಿ ಮತ್ತು ಉತ್ತಮ ಭೋಜನ ನಡವಳಿಕೆ ಅರ್ಥವಾಗುವುದಿಲ್ಲದಿರುವುದು ಇಂದಿನ ಕುಚೋದ್ಯ.

ಭೋಜನಪ್ರಿಯ's picture
ಶನಿ, 06/02/2010 - 15:29 ರಂದು ಭೋಜನಪ್ರಿಯ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಹೊಟ್ಟೆ ಕರಗಿಸಲು ಹಾಳು 'diet' ಮಾಡಲು ಹೆಣಗುತ್ತಿರುವ ನನಗೆ 'ಪತ್ರೊಡೆ', 'ಹೋಳಿಗೆ', 'ಮಾವಿನ್ಕಾಯ್ ನೀರ್ಗೊಜ್ಜು' ಇತ್ತ್ಯಾದಿ ನೆನಪಿಸಿ ಬಾಯಲ್ಲಿ ನೀರೂರುವ ಹಾಗೆ ಮಾಡಿ ಬಿಟ್ರಿ!. ಅವನ್ನೆಲ್ಲ ನೆನೆಸಿಕೊಂಡ್ರೆನೆ ತೂಕ ೧೦ ಕೆ.ಜಿ. ಹೆಚ್ಚಾಗುತ್ತೆ ಸಾರ್!. ಒಲ್ಳೆಯ ಲೇಖನ.


- ಭೋಜನಪ್ರಿಯ

ಉಮಾಶಂಕರ ಬಿ.ಎಸ್'s picture
ಶುಕ್ರ, 05/02/2010 - 18:03 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಊಟ ಬಲ್ಲವನಿಗೆ ರೋಗವಿಲ್ಲ.. ನಿಜ ಸರ್! ಉಣ್ಣೋಕೆ ಅಂತಾನೆ ಬದುಕೋರಿಗೆ ಅದೆಲ್ಲಾ ತಿಳಿಯೊಲ್ಲಾ ಅಲ್ವ ಸರ್! ನಿಮ್ಮ ಲೇಖನ ಚೆನ್ನಾಗಿದೆ

ಅನಾಮಿಕನು's picture
ಶುಕ್ರ, 05/02/2010 - 15:07 ರಂದು ಅನಾಮಿಕನು ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ನೀವು ಹೇಳುವದು ಸತ್ಯಸ್ಯ ಸತ್ಯ. ಆದರೆ ಇದು ನಮ್ಮಲ್ಲಿ ಕೆಲವರ ನಿರ್ಲಜ್ಜತನವನ್ನು ಎತ್ತಿಕಾಣಿಸುತ್ತದಷ್ಟೇ. ವಿದೇಶಗಳಿಂದಲೇ ಕಲಿತ ಚೈನ್ ಲಿಂಕ್ ಮಾರ್ಕೆಟಿಂಗ್ ಮಾಡುವ ಕೆಲವರು  ಮಾರಲಾಗದೇ ಹೆಚ್ಚಾಗಿ ಉಳಿದ ವಿದೇಶಿಯರದ್ದೇ ಆದ ಸೂಟು ಹಾಕಿಕೊಂಡು, ಕಿಸೆಯಲ್ಲಿ ಜಪಾನಿಯರ ಪೈಲಟ್ಟ್ ಪೆನ್ನು ತುರುಕಿಕೊಂಡು,ಇಷ್ಟೂ ಸಾಕಾಗಲಿಲ್ಲವೆಂಬಂತೆ  ಸಾಫ್ಟವೇರು ಉದ್ಯೋಗಿಯೆಂಬಂತೆ ಪ್ರತಿಬಿಂಬಿಸಲು ಐಡೆಂಟಿಟಿ ಕಾರ್ಡಿನ ದಪ್ಪ ದಾರ ಕಾಣುವಂತೆ ನೇತು ಹಾಕಿಕೊಂಡು ತಿರುಗುತ್ತ ಇಂತಹ ಸಮಾರಂಭಗಳಲ್ಲಿ ಹೊಟ್ಟೆ ಬಿರಿ ತಿನ್ನುತ್ತ ಉಪನ್ಯಾಸ ಕೊಡುತ್ತ ತಿರುಗುತ್ತಿರುತ್ತಾರೆ. ಇಂತವರನ್ನು ನೋಡಿದ ಇತರೆ ಹುಲುಮಾನವರು ಅವರನ್ನು ಅನುಸರಿಸಿ ನೀವು ಹೇಳಿದ ಎಲ್ಲಾ ಅನಗತ್ಯಗಳನ್ನು ಮುಕ್ಕಿ ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆ. ನಿಮ್ಮ ತರಹದ ಆದರ್ಶ ಜೀವಿಗೆ ಇವೆಲ್ಲ ಅರ್ಥವಾಗುತ್ತವೆ. ಉಳಿದವರಿಗೆ ಆಗುವದಿಲ್ಲ.


 


ನಿಮ್ಮ ಆರ್ಯೋಕ್ತಿಯನ್ನು ಕೇಳಿ ಮೈ ನವಿರೆದ್ದಿತು. ಎಂಥ ಒಳ್ಳೆಯ ಉಕ್ತಿ. ಅದೇ ಹಾಳಾದ ಯಾಜ್ನವಲ್ಕರು ಶಥಪಥ ಬ್ರಾಹ್ಮಣದ ೩ನೇ ಖಂಡದ ೧ನೇ ಅಧ್ಯಾಯದ ೨೧ನೇ ಶ್ಲೋಕದಲ್ಲಿ "ನಾನು ಗೋಮಾಂಸ ಮೆತ್ತಗೂ ಸಾದಿಷ್ಟವೂ ಆಗಿರುವದರಿಂದ ಅದನ್ನು ತಿನ್ನುತ್ತೇನೆ ಎನ್ನುತ್ತಾರೆ" ಎಂತಹ ಅನಾರ್ಯ.ಹಾಳಾದ ಋಗ್ವೇದದ ೧೦ ನೇ ಖಂಡದ ೮೫ನೇ ಅಧ್ಯಾಯದ ೧೩ನೇ ಶ್ಲೋಕದಲ್ಲಿ ಹೆಣ್ಣುಮಕ್ಕಳ ಮದುವೆಯಲ್ಲಿ "ಎತ್ತು, ಆಕಳುಗಳನ್ನು ತಿನ್ನಲು ಕಡಿಯುತ್ತಾರೆ" ಎನ್ನುತ್ತಾರೆ. ಹುಚ್ಚರು .. ತೊಡದೇವಿನ ರುಚಿ ಗೊತ್ತಿದ್ದರೆ ಹೇಳುತ್ತಿದ್ದರೆ.


 


ನಮ್ಮ ಸಂಸ್ಕೃತಿಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಬರೆಯುತ್ತಿರಿ ಗುರುಗಳೆ.


-ಆರ್ಯ

ಸಿರಿರಮಣ's picture
ಸೋಮ, 08/02/2010 - 14:19 ರಂದು ಸಿರಿರಮಣ ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಆ(ಅನಾ!?)ರ್ಯರೇ, ಶುಭಾಶಯಗಳು


ಆಹಾರ ಸಂಸ್ಕೃತಿಯ ಬಗ್ಗೆ ಬರೆದಿದ್ದರ ಸ್ಪಂದನೆಯಲ್ಲಿ ನೆಟ್ ಮಾರ್ಕೆಟಿಂಗ್ ವ್ಯವಹಾರಸಂಸ್ಕೃತಿಯನ್ನು ಎಳೆದು ತುರುಕಿದ್ದೇಕೆ ಮಾರಾಯ, ಹೊಂದಿಕೆಯಾವು ಹೋಲಿಕೆ ಕೊಡಲು, ಸರಕಿನ ಕೊರತೆಯೇ ? ಮತ್ತೆ ಸ್ಪಂದನೆಗೆ ಮೊದಲು Idintity ತೋರಿಸಿಕೊಳ್ಳಬೇಕಯ್ಯ, ಅನಾಮಿಕನೂ ಅಬ್ಬೆಪಾರಿಯೂ ಆಗಿ ಬ್ಪಾಗ್ ಸಾರಸ್ವತಲೋಕದಲ್ಲಿ ಅಲೆದಾಡಬಾರದಪ್ಪ.

ರಾಪುಮದಮಾಣಿ 's picture
ಸೋಮ, 08/02/2010 - 14:51 ರಂದು ರಾಪುಮದಮಾಣಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ನಾಮಿಕರಾದ ಸಿರಿರಮಣರೆ;


ತಾವುಗಳು, ಅನಾಮಿಕರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೇ ವಿಷ್ಯದಿಂದ ವಿಮುಖರಾದುದೇಕೆ? ಅವರ identity ( ನೀವು ತಪ್ಪಾಗಿ Idintity ಎಂದು ಬರೆದಿದ್ದೀರಿ. ಹೋಗಲಿ ಬಿಡಿ,ಸಂಸ್ಕೃತ  ಮಾಸ್ತರಿಗೆ ಇಂಗ್ಲಿಷ್ ಬರಬೇಕು ಎಂದೇನಿಲ್ಲ !) ತೆಗೆದುಕೊಂಡು ನಮಗೇನು ಆಗಬೇಕು? ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರವಿಲ್ಲವೇ ಪ್ರಾಣೇಶಾಚಾರ್ಯರೆ??


 

ಚೆನ್ನೈ ಕನ್ನಡಿಗ's picture
ಮಂಗಳ, 09/02/2010 - 17:53 ರಂದು ಚೆನ್ನೈ ಕನ್ನಡಿಗ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ರಾಪುಮದಮಾಣಿ ಯವರೇ,


ಸಿರಿರಮಣ ರಂತಹ ಅನೇಕ ಅವಿವೇಕಿಗಳು ಪವಿತ್ರ ಚತುರ್ವೇದಗಳ ಅನೇಕ ವಿಷಯಗಳನ್ನು ತಪ್ಪಾಗಿ ಅರ್ಥೈಸಿ ಅದನ್ನು 'Deep Thoughts' ಎಂಬಂತೆ ಬಿಂಬಿಸುವ ಕಾರ್ಯವನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದನ್ನು ತಮ್ಮ ಬೇಳೆ ಬೇಯಿಸಿಕೊಳುವುದಕ್ಕಾಗಿ ಒಂದು ವರ್ಗದ ಜನ ಕಂಡುಕೊಂಡ ಮಾರ್ಗ. ನೀವೇನಾದರೂ 'ಆ Deep Thought' ಏನೆಂದು ವಿವರಿಸು ಎಂದು ಇವರನ್ನು ಕೇಳಿ. ಆಗ ಗೊತ್ತಾಗುತ್ತದೆ ಇಂತಹ ಆಷಾಢಭೂತಿಗಳ ಬಣ್ಣ.

ಸಿರಿರಮಣ's picture
ಮಂಗಳ, 09/02/2010 - 14:30 ರಂದು ಸಿರಿರಮಣ ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

Namste, Rapurada Maanigale, 


I appreciate your support to same boat sailor. But I don’t know why do you addressed me PRANESH ACHARYA !! ? our Guruji told that is the statement of person who can’t digest the deep thoughts of Vedas the divine literature.

ರಾಪುಮದಮಾಣಿ 's picture
ಮಂಗಳ, 09/02/2010 - 18:57 ರಂದು ರಾಪುಮದಮಾಣಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಊಟಬಲ್ಲವನಿಗೆ...

ಓ ಮಾಲಿಂಗು, ಇಂಗ್ಲಿಷ್ ಬರುತ್ತದೆ ಎಂದು ತೋರಿಸಲಿಕ್ಕೆ ಇಂಗ್ಲಿಷ್ನಲ್ಲಿ ಉತ್ತರ ಬರೆದಿದ್ದೋ?? ಭಲೆ ಭಲೆ !! ಆದರೆ; 'why do you addressed' ಎನ್ನುವ ವಾಕ್ಯ ಇಂಗ್ಲಿಷ್ ವ್ಯಾಕರಣದ ಪ್ರಕಾರ ತಪ್ಪಲ್ಲವೆ ಗುರುವರ್ಯ???(ಹೋಗಲಿ ಬಿಡಿ ,ಸಂಸ್ಕೃತ ಮಾಸ್ತರಿಗೆ ಇಂಗ್ಲಿಷ್ ಬರಬೇಕು ಎಂದೇನೂ ಇಲ್ಲ!)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
10 ಕೂಡಿಸು ಉತ್ತರ 11
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಶ್ರೀಕಾಂತ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಸಂಸ್ಕೃತ ಪ್ರೇಮಿ, ಹವ್ಯಾಸಿ ಬರಹಗಾರ, ಕಂಪ್ಯೂಟರ್‍ ಜತೆಗಾರ, ದೇಶೀಯತೆ ಹರಿಕಾರ.
ಇವರ ವಿಸ್ಮಯ ಪುಟ
ಇತ್ತೀಚಿನ ಪಿಸುಮಾತುಗಳು