ವಸೀಮನೂ ಅವನ 'ಖನಡ'ವೂ

ಬರೆದವರು: ಉಮಾಶಂಕರ ಬಿ.ಎಸ್ - ಕಳುಹಿಸಿದ ದಿನ 30 January 2010

ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.


"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ


"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ.


ಅವನ ಆ ಆತ್ಮವಿಶ್ವಾಸವೇ ಅವನನ್ನ ನಮ್ಮ ಕಂಪನಿಗೆ ಸೇರಿಸಿಕೊೞಲು ನನಗೆ ಪ್ರೇರೇಪಿಸಿ ಅವನನ್ನ ಆಯ್ಕೆಮಾಡಿದೆ. ಅದೂ ಅಲ್ಲದೆ ಕನ್ನಡಕ್ಕಿಂತ ನನಗೆ ವೈದ್ಯರಬಳಿ ನಮ್ಮ ಉತ್ಪನ್ನಗಳ ಬಗ್ಗೆ ಮಾತನಾಡಲು ಇಂಗ್ಲೀಷ್ ನ ಅವಶ್ಯಕತೆ ಸ್ವಲ್ಪ ಹೆಚ್ಚು, ಜೊತೆಗೆ ಅವನಿಗೂ ಕೂಡ ಕೆಲಸದ ಅನಿವಾರ್ಯತೆಯೂ ಇತ್ತು, ಅವನಿಗೂ ಕೆಲಸ ಕೊಟ್ಟರೆ ಅವನು ಮಾಡುತ್ತಾನೆ ಎಂಬ ನನ್ನ ನಂಬಿಕೆಯನ್ನು ಅವನು ಸಹ ಹುಸಿ ಮಾಡಲಿಲ್ಲ. ಇರಲಿ ಈಗ ವಿಷಯಕ್ಕೆ ಬರೋಣ.


        ವಸೀಮ ತುಂಬಾ ಒೞೆಯ ಹುಡುಗ, ಯಾವುದೇ ದುರಬ್ಯಾಸಗಳಾಗಲಿ, ಸುೞು ಹೇಳುವ ಚಟವಾಗಲಿ, ಅವನ ವಯೋಸಹಜಗುಣವಾದ ಹುಡುಗಿಯರನ್ನು ರೇಗಿಸುವ ಚಾಳಿಯಾಗಲಿ ಇರಲಿಲ್ಲ. ಆದರೆ ನನಗೆ ಕುತೂಹಲವಿದ್ದದ್ದು ಅವನ ಕನ್ನಡ ಪದಗಳ ಉಚ್ಚಾರದಲ್ಲಿ!!! ಅವನ 'ಖನಡ' ವು ನನಗೆ ಅವನೊಡನೆ ಕೆಲಸಕ್ಕೆ ಹೋದಾಗಲೆಲ್ಲ ಕುತೂಹಲಭರಿತ ಅವಾಂತರಗಳನ್ನು ಸೃಷ್ಟಿಸಿವೆಯಲ್ಲದೆ, ಆ ಘಟನೆಗಳನ್ನು ಯಾವಾಗ ಮೆಲುಕು ಹಾಕಿದರೂ ಮನದ ಮೂಲೆಯಲ್ಲಿ ಕಚಗುಳಿ ಬರುವುದು ಖಂಡಿತ.


     ಅಂತಹ ಈ ಒಂದು ಅನುಭವವನ್ನು ನೀವೇ ಓದಿ ನೋಡಿ..


       ಅವನಷ್ಟೇ ಅಲ್ಲ ಮೈಸೂರು ಮತ್ತು ಬೆಂಗಳೂರು ಭಾಗದ ಬಹುತೇಕ ಮುಸಲ್ಮಾನರ ಕನ್ನಡ ನಮ್ಮ ವಸೀಮನ 'ಖನಡ'ದ ಹಾಗೆಯೇ ಇರುತ್ತದೆ. ಅಂದಮಾತ್ರಕ್ಕೆ ಸ್ವಚ್ಚ ಕನ್ನಡ ಮಾತನಾಡುವವರು ಇಲ್ಲವೆಂದರೆ ನಮ್ಮ ನಾಡಿನ ಸಾರಸ್ವತಲೋಕದ ದಿಗ್ಗಜರಾದ ಶ್ರೀಮಾನ್ ನಿಸಾರ್ ಅಹಮದ್, ಜಾನಪದ ಕವಿ ಕರೀಮ್ ಖಾನ್ ರಂಥವರಿಗೆ ಅವಮಾನ ಮಾಡಿದಂತಾಗುತ್ತದೆ, ಎಲ್ಲೋ ಕೆಲವರ ಉಚ್ಚಾರದಲ್ಲಿ ವ್ಯತಾಸವಿರುತ್ತದೆ. ಹಾಗಾಗಿ ಒಮ್ಮೆ ವಸೀಮನನ್ನೇ ಕೇಳಿದೆ


"ವಸೀಮ್ ನಂಗೆ ಒಂದ್ವಿಷ್ಯ ಅರ್ಥ ಆಗ್ಲಿಲ್ಲ, ನೀನು ಹುಟ್ಟಿ ಬೆಳದದ್ದು ಎಲ್ಲಾ ಮೈಸೂರಿನಲ್ಲೇ, ಆದ್ರೂ ನಿನ್ನ ಕನ್ನಡ ಯಾಕೆ ಹೀಗೆ?"


''ಸಾರ್! ಹೇನ್ ಮಾಡಾದು ನಮ್ಗೆ ಬಚಪನ್ ದಿಂದ ಬಂದ್ಬಿಟ್ಟಿ ಇಂಗೆ ಹಾಗೋಯ್ತು" ಎಂದ.


"ಹಾಗಾದ್ರೆ ನೀನು ಸ್ಕೂಲು ಕಾಲೇಜ್ನಲ್ಲಿ ಕನ್ನಡ ಹ್ಯಾಗ್ ಪಾಸ್ಮಾಡ್ದೆ ಮತ್ತೆ?" ಎಂದು ಕುತೂಹಲದಿಂದ ಕೇಳಿದೆ.


"ಸಾರ್! ನಮ್ಗೆ ಕಿರಿಷ್ಣಮೂರ್ತಿ ಅಂತ ಮೇಸ್ಟಾರ್ರು ಒಬ್ಬ್ರು ಇದ್ದ್ರು, ಅವರ್ಗೆ ಚೀಟಿ ಕೊಟ್ಟಿ ಎಕ್ಸಾಂದಲ್ಲಿ ಬರಿಸ್ಬಿಟ್ಟಿ ಪಾಸ್ ಮಾಡ್ಸಿದ್ದು" ಅಂದ ಅಷ್ಟೇ ಮುಗ್ದತೆಯಿಂದ.


ಸಧ್ಯ! ಅವನಿಗೂ ಕನ್ನಡ ಓದಲು ಬರೆಯಲು ಬರುತ್ತದಲ್ಲ ಎಂದು ನನಗೆ ಬಹಳ ಖುಷಿಯಾಯ್ತು. ಅದನ್ನು ಹೊರ ತೋರಿಸದೆ, ಅವನು ಕನ್ನಡವನ್ನು ಹೇಗೆ ಓದುತ್ತಾನೆ ನೋಡೋಣವೆನ್ನಿಸಿ ಆ ತಕ್ಷಣಕ್ಕೆ ಎದುರು ಬಂದ ಆಟೋ ಹಿಂದೆ ಬರೆದಿದ್ದ ಒಂದು ಚಿತ್ರದ ಹೆಸರು ನೋಡಿ


 " ಸರಿ ವಸೀಮ್!! ಆ ಆಟೋ ಮೇಲಿರೋದ್ನ ಓದು ನೋಡೋಣ್" ಅಂದೆ


"ಹಷ್ಟೇನಾ ಸಾರ್! " ಎಂದು ಆಟೋ ಕಡೆ ಕಣ್ಣೊರಳಿಸಿ


" ಅಮ್ಮ ತಾಯಿಧೇರೇ" ಅಮ್ದು ಬಿಡೋದೇ!!!


ಆ ಕ್ಷಣದಲ್ಲಿ  ನಾನು ಮೂರ್ಚೆ ಬಂದು ಕೆಳಗೆ ಬೀಳುವಂತಾಗುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗು ವತ್ತರಿಸಿ ಬಂತು.


ಏಕೆಂದರೆ ಆಟೋ ಮೇಲಿದ್ದದ್ದು ನಾಗತೀಹೞಿ ಯವರು ನಿರ್ದೇಶಿಸಿರುವ "ಅಮೃತ ಧಾರೆ" ಚಿತ್ರದ ಹೆಸರು


ಅದೇ ಮೊದಲು ಅದೇ ಕೊನೆ ಇಂದಿಗೂ ನಮ್ಮ ವಸೀಮನ 'ಖನಡ" ನನಗೆ ಪ್ರಶ್ನಾತೀತ

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (7 ಓಟುಗಳು)
Manjunatha HT's picture
ಮಂಗಳ, 02/02/2010 - 13:20 ರಂದು Manjunatha HT ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಇಂಥ ಅನುಭವ ಸಾಕಷ್ಟು ಸಲ ನನಗೂ ಆಗಿದೆ, ಆದರೆ ಎಲ್ಲೋ ಕೆಲವರು ಮಾತ್ರ, ಉಳಿದ ಮುಸ್ಲಿಮರ ಕನ್ನಡ ನಮಗಿಂತ ಚೆನ್ನಾಗಿದೆ ಅನ್ನಬಹುದು.

ಉಮಾಶಂಕರ ಬಿ.ಎಸ್'s picture
ಶುಕ್ರ, 05/02/2010 - 21:27 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ನಿಮ್ಮ ಮಾತು ನಿಜ ಸರ್, ನನ್ನ ಸಾಕಷ್ಟು ಮುಸ್ಲೀಂ ಮಿತ್ರರು ಕನ್ನಡಿಗರನ್ನೂ ಮೀರಿಸುವ ಹಾಗೆ ಕನ್ನಡ ಮಾತನಾಡುತ್ತಾರೆ

ಕೆಎಲ್ಕೆ 's picture
ಸೋಮ, 01/02/2010 - 17:04 ರಂದು ಕೆಎಲ್ಕೆ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಪ್ರಿಯ ಉಮಾಶಂಕರ್ ಹಾಗೂ ಇತರೆ ಮಿತ್ರರೇ,

ಕನ್ನಡ ಯಾವ ಮುಸಲ್ಮಾನನ ಮಾತ್ರ ಭಾಷೆಯೂ ಅಲ್ಲ. ತಮ್ಮ ಮಾತ್ರ ಭಾಷೆಯಲ್ಲದ ಭಾಷೆಯಲ್ಲಿ ಪ್ರಭುತ್ವ ಪ್ರತಿಯೊಬ್ಬನಿಗೂ ಒಲಿಯಬೇಕೆಂದೇನಿಲ್ಲ ಅಲ್ಲವೇ?

ಆದಾಗ್ಯೂ, ಕನ್ನಡಕ್ಕೆ ಧಕ್ಕೆ ಇರುವುದು ಈ ಕನ್ನಡ ಬಾರದೆಯೂ ಕನ್ನಡ ಮಾತನಾಡಲು ಪ್ರಯತ್ನಿಸುವ ಜನರಿಂದ ಅಲ್ಲ. ಕನ್ನಡ ಮಾತ್ರಭಾಷೆಯಾಗಿದ್ದು, ಅದನ್ನು ಮಾತನಾಡಿದರೆ ಅವಮಾನ ಎಂದು ತಿಳಿಯುವ ಸಹಸ್ರಾರು ಮಮ್ಮಿ ಡ್ಯಾಡಿ ಯರು ಹಾಗೂ ಅವರ ಮುದ್ದಿನ ಕಾನ್ವೆಂಟ್ ಮಕ್ಕಳು. ಈ ನಿಟ್ಟಿನಲ್ಲಿ ನಿಮ್ಮ ವಸೀಮ ಅಭಿನಂದನಾರ್ಹ.

ನೀವು ತಮಾಷೆಯಾಗಿಯೇ ಲೇಖನ ಬರೆದಿದ್ದರೂ, ಅದಕ್ಕೆ ಬಂದ ಅಭಿಪ್ರಾಯಗಳು ವಸೀಮನನ್ನು ಆಡಿಕೊಂಡು, ಅಂತವರಿಂದಲೇ ಕನ್ನಡಕ್ಕೆ ಅಪಾಯ ಎಂಬ ಅರ್ಥ ನೀಡುತ್ತಿರುವುದು ವಿಷಾದಕರ !!

ಉಮಾಶಂಕರ ಬಿ.ಎಸ್'s picture
ಮಂಗಳ, 02/02/2010 - 06:40 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಪ್ರಿಯ ಕೆ. ಎಲ್ಕೆ ಸರ್, ಹಾಗು ರಾಜೇಶ್ ಸರ್,


ನೀವು ನನ್ನ ಲೇಖನ ಓದಿ ಅಭಿಪ್ರಾಯಿಕರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ನಿಮ್ಮ ಮೌಲ್ಯಭರಿತ ಅಭಿಪ್ರಾಯಗಳಿಗೆ ನನ್ನ ಒಪ್ಪಿಗೆಯಿದೆ. ಆದರೆ ಈ ಲೇಖನದಲ್ಲಿ ನನ್ನ ಚಿಂತನೆ ವಸೀಮನನ್ನು ಆಡಿಕೊೞುವುದಾಗಲಿ, ಅವನ ಮಾತೃ ಭಾಷೆಯ ಪ್ರಭಾವದಿಂದ ಅವನು ಉಚ್ಚಾರ ಮಾಡುವ ಕನ್ನಡವನ್ನು ಅಣಕಿಸಿ ಕನ್ನಡ ಕಲಿಯುವವರನ್ನು ಕಡಿಮೆ ಮಾಡುವ ಯಾವ ಅರ್ಥದಿಂದಲೂ ಈ ಲೇಖನವನ್ನು ನಾನು ಬರೆದಿಲ್ಲ. ಆ ರೀತಿ ಎಲ್ಲಾದರೂ, ಯಾರಿಗಾದರೂ ನೋವುಂಟುಮಾಡುವ ಉದ್ದೇಶ ನನಗಿಲ್ಲ, ಯಾರಿಗಾದರೂ ಹಾಗೆ ಅನ್ನಿಸಿದರೆ ದಯವಿಟ್ಟು ಕ್ಷಮೆಯಿರಲಿ.


        ಎಲ್ಲಿಂದಲೋ ನಿನ್ನಯೋ, ವರ್ಷದ ಕೆಳಗೋ ಕರ್ನಾಟಕ್ಕೆ ಬಂದಿದ್ದರೆ, ಅವರೂ ಈ ರೀತಿ ಕನ್ನಡ ಮಾತನಾಡಿದರೆ ನಾವು ಒಬ್ಬ ಕನ್ನಡ ಕಲಿಯುವವರನ್ನು ಕಳೆದು ಕೊಂಡತೆಯೇ ಸರಿ


   ಆದರೆ ನನ್ನನ್ನು ಕಾಡುತ್ತಿದ್ದ ಮತ್ತು ಈಗಲೂ ಕಾಡುತ್ತಿರುವ ಪ್ರಶ್ನೆಯೆಂದರೆ, ನಮ್ಮ ಹೞಿಗಳಲ್ಲಿ ವಾಸಿಸುತ್ತಿರುವ ಮುಸಲ್ಮಾನರು ಅಥವಾ ಉತ್ತರಕರ್ನಾಟಕದ ಮುಸಲ್ಮಾನರು ಯಾವತ್ತೂ ಈ ರೀತಿಯ ಕೆಟ್ಟ ಕನ್ನಡ ಮಾತನಾಡುವುದಿಲ್ಲ. ಆದರೆ ನಮ್ಮ ದಕ್ಷಿಣ ಕರ್ನಾಟದ ಕೆಲ ನಗರ ಮುಸ್ಲೀಂ ಜನಾಂಗದವರಲ್ಲಿ  ಮಾತ್ರ ಈ ರೀತಿಯ ಅಭಾಸಭರಿತ ಕನ್ನಡವನ್ನು ಕಾಣುತ್ತೇವೆ. ಏಕೆ ಹೀಗೆ? ಅವರ ಪೂರ್ವಜರ ಕಾಲದಿಂದಲೂ, ತಲತಲಾಂತರಗಳಿಂದಲೂ ಅವರೆಲ್ಲರೂ ಇಲ್ಲಿಯೇ ಕನ್ನಡ ನಾಡಿನಲ್ಲಿ ಹುಟ್ಟಿ, ಬದುಕು ಕಂಡು, ನೆಲೆಯೂರಿರುವಾಗ, ಅವರ ಮಾತೃಭಾಷೆ ಬೇರೆಯಾದರೂ ಕನ್ನಡಿಗರ ಜೊತೆ ಬೆರೆತಿರುವಾಗ ನಮ್ಮ ನಿಮ್ಮ ಹಾಗೆ ಕನ್ನಡ ಮಾತನಾಡಲು ಏನು ತೊಂದರೆ? ಎನ್ನುವುದು ನನ್ನನ್ನು ಕಾಡುತ್ತಿರುವ ಗತಕಾಲದ ಪ್ರಶ್ನೆ.


    ಹೌದು ಕೆ.ಎಲ್ಕೆ ಯವರೆ , ಕನ್ನಡಕ್ಕೆ ಧಕ್ಕೆ ಇರುವುದು ಈ ಕನ್ನಡ ಬಾರದೆಯೂ ಕನ್ನಡ ಮಾತನಾಡಲು ಪ್ರಯತ್ನಿಸುವ ಜನರಿಂದ ಅಲ್ಲ. ಕನ್ನಡ ಮಾತೃಭಾಷೆಯಾಗಿದ್ದು, ಅದನ್ನು ಮಾತನಾಡಿದರೆ ಅವಮಾನ ಎಂದು ತಿಳಿಯುವ ಸಹಸ್ರಾರು ಮಮ್ಮಿ ಡ್ಯಾಡಿ ಯರು ಹಾಗೂ ಅವರ ಮುದ್ದಿನ ಕಾನ್ವೆಂಟ್ ಮಕ್ಕಳುಗಳಿಂದ ಅನ್ನುವ ನಿಮ್ಮ ಮಾತಿಗೆ ಸಂಪೂರ್ಣ ಸಹಮತವಿದೆ.


    ಹೌದು ಅದೇ ರೀತಿ ವ್ಯಾಕರಣಬದ್ದವಾಗಿ ಮಾತನಾಡುವಂತಹ ಮಡಿವಂತಿಕೆ ಯಾವುದೇ ಭಾಷೆಯ ಅಸ್ಥಿತ್ವಕ್ಕೆ ಖಂಡಿತಾ ಧಕ್ಕೆ ತರುತ್ತದೆ, ಹಾಗು ಸಂಸ್ಕೃತಕ್ಕಿಂತಲೂ ಹೀನ ಸ್ಥಿತಿ ತಲುಪುವ ಸಾಧ್ಯತೆಯಿದೆ, ಆ ವಿಚಾರದಲ್ಲಿ ನಾವು ಪಕ್ಕದ ಆಂಧ್ರದವರಿಂದ ಬಹಳಷ್ಟು ಕಲಿಯಬೇಕಿದೆ. ಆ ಬಗ್ಗೆ ಆಂಧ್ರದಲ್ಲಿನ ನನ್ನ ಅನುಭವವನ್ನು ಮುಂದೊಮ್ಮೆ ಪ್ರಕಟಿಸುವೆ.


       ಆದರೆ ಮೇಲಿನ ನನ್ನ ಪ್ರಶ್ನೆ ನನಗೆ ಪ್ರಶ್ನೆಯಾಗಿಯೇ ಉಳಿದಿದೆ........

ರಾಜೇಶ ಹೆಗಡೆ's picture
ಸೋಮ, 01/02/2010 - 20:40 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಹಾಯ್ ಉಮಾಶಂಕರ್ ಅವರೇ,


ನಿಮ್ಮ ಲೇಖನ ಹಾಸ್ಯಭರಿತವಾಗಿದೆ.


ಹಾಗೆಯೇ ಕೆ ಎಲ್ಕೆ ಅವರ ಅನಿಸಿಕೆಗೆ ನನ್ನದೂ ಕೂಡಾ ಸಹಮತವಿದೆ. "ಎಲ್ಲರೂ ಕನ್ನಡ ಭಾಷೆ ಬಳಸುವದಿದ್ದರೆ ಸರಿಯಾಗೇ ಬಳಸಬೇಕು. ಒಂದು ಚೂರೂ ವ್ಯಾಕರಣ/ಶಬ್ದ ದೋಷ ಇರಬಾರದು. ಅದು ಕನ್ನಡದ ಕೊಲೆ ಎಂಬ ಭಾವನೆ ಖಂಡಿತ ತಪ್ಪು." ಹೀಗೆ ನಿರ್ಬಂಧಿಸಬಾರದು. ಹಾಗೆ ನಾವು ಕಟ್ಟುಪಾಡು ಹಾಕಿದಲ್ಲಿ ಸಂಸ್ಕೃತಕ್ಕೆ ಬಂದಿರುವ ಗತಿ ಕನ್ನಡಕ್ಕೂ ಬರುತ್ತದೆ. ಜನಸಾಮಾನ್ಯರ ಬಳಕೆಯಿಂದ ಮಾಯವಾಗಿ ವಿದ್ವಾಂಸರ ಮುಕುಟದಲ್ಲಿ ಮಾತ್ರ ಶೋಭಿಸುತ್ತದೆ.


ಇಂದು ಕನ್ನಡ ಭಾಷೆಯಲ್ಲಿ ಹಲವು ವೈವಿಧ್ಯಗಳಿವೆ. ಈ ರೀತಿ ಯಾವುದೇ ನಿರ್ಬಂಧ ಹಾಕದೇ ಮಾತನಾಡಿದ ಪರಿಣಾಮ ಅದು. ಬರೀ ನಮ್ಮ ಹವ್ಯಕ ಕನ್ನಡದಲ್ಲೇ ನನಗೆ ಗೊತ್ತಿರುವಂತೆ ನಾಲ್ಕಕ್ಕೂ ಹೆಚ್ಚು ವಿಧಗಳಿವೆ! ಇನ್ನು ಉಳಿದದ್ದು ಎಷ್ಟಿರಬೇಡಾ?


ನಿಜ ಘಟನೆ ಹೇಳುತ್ತೇನೆ ಕೇಳಿ. ಗುಜರಾತಿಯೊಬ್ಬ ಹೊಸತಾಗಿ ಬೆಂಗಳೂರಿಗೆ ಬಂದಿದ್ದ. ನಮ್ಮ ಜೊತೆ ಕನ್ನಡ ಮಾತನಾಡಲು ಪ್ರಯತ್ನಿಸುತ್ತಿದ್ದ. ನಿಜ ಆತ ಕನ್ನಡ ಮಾತನಾಡುವಾಗ ಸಹಜವಾಗಿ ಉಚ್ಚಾರ ತಪ್ಪುತ್ತಿತ್ತು. ಒಂದೆರಡು ಬಾರಿ ಅದನ್ನು ಕೇಳಿದ ನನ್ನ ಸ್ನೇಹಿತನೊಬ್ಬ ಆತನಿಗೆ ನಯವಾಗಿ ನೀನು ನಮ್ಮ ಕನ್ನಡ ಕೊಲೆ ಮಾಡಬೇಡ. ಹಿಂದಿಯಲ್ಲೇ ಮಾತನಾಡು ಎಂದ.  ಸರಿ ಆತ ಕನ್ನಡ ಮಾತನಾಡಲು ಪ್ರಯತ್ನಿಸಲಿಲ್ಲ.ಮುಂದೆ ಹಿಂದಿಯನ್ನೇ ಬಳಸಿದ. ಏನು ಸಾಧನೆಯಾಯ್ತು? ಕನ್ನಡ ಕಲಿಯುವನೊಬ್ಬ ಕಡಿಮೆ ಆದ ಅಷ್ಟೇ! ಇದರಿಂದ ಕನ್ನಡಕ್ಕೆ ನಷ್ಟ ಆಯ್ತು ಹೊರತು ಲಾಭ ಆಗಲಿಲ್ಲ. ಈ ಘಟನೆ


ಇನ್ನು ವಿಸ್ಮಯ ನಗರಿಯಲ್ಲೂ ಅನೇಕ ಸಲ ಹೇಳಿದ್ದೇನೆ. ಅನಿಸಿಕೆ ಹಾಕುವಾಗ, ಅಥವಾ ಲೇಖನ ಬರೆಯುವಾಗ ಹೆದರುವ ಅವಶ್ಯಕತೆ ಇಲ್ಲ. ನೀವು ಬೃಹಸ್ಪತಿಗಳೇ ಆಗಬೇಕೆಂದೆನಿಲ್ಲ. ಕನ್ನಡದಲ್ಲಿ ನಿಮ್ಮ ಅನುಭವ, ಕಥೆ ಇತ್ಯಾದಿ ಬರೆಯಲು ಪ್ರಯತ್ನಿಸಿ. ಮೊದ ಮೊದಲು ತಪ್ಪುಗಳಾಗುವದು ಸಹಜ. ಆದರೆ ನಂತರ ಖಂಡಿತ ಸುಧಾರಿಸುತ್ತೆ.


ಕನ್ನಡ ಬಳಸಿದಷ್ಟು ಕನ್ನಡ ಬೆಳೆಯುವದು. ತಪ್ಪಾಗುತ್ತೆ ಎಂದು ಕನ್ನಡ ಬಳಸದೇ ಬೇರೆ ಭಾಷೆ ಬಳಸಿದರೆ ಕನ್ನಡಕ್ಕೆ ನಷ್ಟವೇ ಹೊರತು ಲಾಭವಲ್ಲ.

ಎಚ್.ಎಸ್. ಪ್ರಭಾಕರ's picture
ಸೋಮ, 01/02/2010 - 15:16 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಉಮಾಶಂಕರ್, ಇಂಥಹವರ `ಮಹಾ ಪ್ರಾಣ, ಅಲ್ಪ ಪ್ರಾಣ' ಸರಿ ಮಾಡಿಕೊಳ್ಳುವಷ್ಟರಲ್ಲಿ ನಮ್ಮ ಪ್ರಾಣ ಹೋಗಿರುತ್ತದೆ ಅಲ್ಲವೆ?

ಉಮಾಶಂಕರ ಬಿ.ಎಸ್'s picture
ಸೋಮ, 01/02/2010 - 15:55 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಹೌದು ಸರ್! ಪ್ರಾಣ ಹೋದ್ರೆ ಪರ್ವಾಗಿಲ್ಲ, ಏನೂ ನೋವು ಗೊತ್ತಾಗೊಲ್ಲ, ಆದ್ರೆ ಹಾಫ್ ಮರ್ಡರ್ ಆಗ್ಬಿಡ್ತೀವಿ!!!!!!!

ಎಚ್.ಎಸ್. ಪ್ರಭಾಕರ's picture
ಸೋಮ, 01/02/2010 - 15:58 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಹ್ಹ...ಹ್ಹ ಹ್ಹ ಹ್ಹಾ...ಅದು ಸರಿಬಿಡಿ! ಆಸ್ಪತ್ರೆ ನರಕ ಅನುಭವಿಸುವುದು ಆ ದೇವರಿಗೂ ಬೇಡ!!

ವಿನಯ್_ಜಿ's picture
ಸೋಮ, 01/02/2010 - 11:59 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಉಮಾಶಂಕರ್ ರವರೆ, 


ನಿಮ್ಮ ಲೇಖನ ಸೊಗಸಾಗಿದೆ Smile ಹೌದು, ಅವರಲ್ಲಿ ಅನೇಕರು ಕನ್ನಡ ಮಾತನಾಡುವಾಗ ಸಲ್ಪ ತೊಂದರೆ ಅನುಭವಿಸುತ್ತಾರೆ... ಅದರೆ ನನ್ನ ಅನೇಕ ಮುಸ್ಲಿಮ್ ಗೆಳೆಯರು ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದರು...

ಉಮಾಶಂಕರ ಬಿ.ಎಸ್'s picture
ಮಂಗಳ, 02/02/2010 - 06:43 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಹೌದು ವಿನಯ್, ನನ್ನ ಹೞಿಯ ಮುಸಲ್ಮಾನರು, ನನ್ನ ಅನೇಕ ಮಿತ್ರರೂ, ಬಹಳಷ್ಟು ಜನ ಸ್ವಚ್ಚ ಕನ್ನಡವನ್ನೇ ಮಾತನಾಡುತ್ತಾರೆ, ನಾನು ಇಲ್ಲಿ ಹೇಳ ಹೊರಟಿರುವುದು, ಬೆಂಗಳೂರು ಮತ್ತಿತರ ನಗರದಲ್ಲಿ ವಾಸಿಸುವ ಮುಸಲ್ಮಾನರ ಕನ್ನಡದ ಬಗ್ಗೆ.

ರವಿವರ್ಮ್'s picture
ರವಿ, 31/01/2010 - 08:55 ರಂದು ರವಿವರ್ಮ್ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಎಲ್ಲಾ ನಮ್ಮ ಕನ್ನಡಿಗರ ಉದಾರ್ ಹೃದಯದ ಪ್ರಭಾವ, ನಮ್ಮ ಭಾಷೆಗೆ ನಮ್ಮ ನೆಲದಲ್ಲೇ ಪರಕೀಯ ಸ್ಥಿತಿ, ಇಲ್ಲಿ ಇದು ಹಾಸ್ಯಕ್ಕಿಂತ ಸದ್ಯದ ಪರಿಸ್ಥಿತಿಯ ವ್ಯಂಗ್ಯ

ಪ್ರಮೋದ್ j's picture
ರವಿ, 31/01/2010 - 08:40 ರಂದು ಪ್ರಮೋದ್ j (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಅದಕ್ಕೂ ಮೊದಲೇ ನಾವು ಅವರನ್ನು ಉರ್ದುವಿನಲ್ಲೇ ಮಾತನಾಡಿಸಲು ಪ್ರಯತ್ನಿಸುತ್ತೇವೆ ಅದಕ್ಕಾಗಿ ಅವರು ಕನ್ನಡ ಕಲಿಯಲು ಪ್ರಯತ್ನಿಸುವುದಿಲ್ಲವೇನೋ ಎಂದು ನನಗನ್ನಿಸುತ್ತದೆ.

ಉಮಾಶಂಕರ ಬಿ.ಎಸ್'s picture
ಮಂಗಳ, 02/02/2010 - 10:00 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಸರಿಯಾಗಿಯೇ ಹೇಳಿದ್ದೀರಿ ಪ್ರಮೋದ್, ನಾವು ನಮ್ಮದನ್ನು ಸರಿಯಾಗಿ ತಿಳಿದುಕೊೞಲು ಪ್ರಯತ್ನಿಸುವುದಕ್ಕಿಂತ ಬೇರೆಯರಂತೆ, ಬೇರೆಯವರಿಂದ 'ಶಹಬ್ಬಾಷ್' ಗಿರಿ ಪಡೆಯುವ ತವಕದಲ್ಲಿ 'ನಮ್ಮ ತನ' ವನ್ನು ಹರಾಜುಹಾಕಿರುತ್ತೇವೆ.

ಪಚ್ಚಿ's picture
ಶನಿ, 30/01/2010 - 23:16 ರಂದು ಪಚ್ಚಿ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಸೀಮನೂ ಅವನ 'ಖನಡ'ವೂ

ಹ್ಹಾ ಹ್ಹ್ಹಾಹ್ಹ್ಹ್ಹಹ್ಹ್ಹ್ಹ್ಹ್ಹ್ಹ್ಹ್ಹಹ್ಹ್ಹಹ್ಹ್ಹ್ಹಹ್ಹಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ .........ಹ್ಹಾಆಹಾ.. ಹೌದ್ರೀ ಇಂತಾ ಅನುಭವ ನಂಗೂ ಎಷ್ಟೋ ಸಾರಿ ಆಗಿದೇರೀ...


ನಿಮ್ಮ ಅನುಭವ ಸಕ್ಕತ್ ಐತ್ರೀ

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
2 + 9 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content